ಒಂದು ತುಂಡಿನ ಕಥೆ ! ಜೈಲಿಗೆ ಕಳುಹಿಸಿದ ಅದಿಕಾರಿಯನ್ನೇ ಜೈಲಿಗಟ್ಟಿದ ಮರಗಳ್ಳ! ಮಲೆನಾಡ ನಿಜ…ನಿಜ.. ಸ್ಟೋರಿ!

Malenadu today story / SHIVAMOGGA ಒಂದು ತುಂಡಿನ ಕಥೆ ! ಜೈಲಿಗೆ ಕಳುಹಿಸಿದ ಅದಿಕಾರಿಯನ್ನೇ ಜೈಲಿಗಟ್ಟಿದ ಮರಗಳ್ಳ! ಮಲೆನಾಡ ನಿಜ…ನಿಜ.. ಸ್ಟೋರಿ! ಮಲೆನಾಡ ಒಡಲಲ್ಲಿ ಅದೆಷ್ಟೊ ಕಥೆಗಳು ನಿತ್ಯವೂ ಹುಟ್ಟಿಕೊಳ್ಳುತ್ತವೆ. ಕೆಲ ಕಥೆಗಳು ಅಕ್ಷರ ರೂಪದಲ್ಲಿ ಕಾಣಿಸಿಕೊಂಡು ಮಲೆನಾಡಿನ ಜೀವಂತ ಸಾಹಿತ್ಯಗಳಾಗಿ ಹೊರಕ್ಕೆ ಬಂದಿವೆ.

ಇನ್ನೂ ಅಸಂಖ್ಯಾತ ಕಥೆಗಳು, ಕಾಡಿನ ಕಥೆಗಳಂತೆ, ಅಲ್ಲೆ ಹುಟ್ಟಿ, ಒಂಟಿಮನೆಗಳ ಹೊಸ್ತಿಲಲ್ಲಿಯೇ ಹುಟ್ಟಿ ಅಲ್ಲೆ ಸಾವನ್ನಪ್ಪಿವೆ. ಅಂತಹ ರೋಚಕ ನಿಜ ಕಥೆಗಳ ಸರಣಿಯನ್ನು ಮಲೆನಾಡ ಟುಇಡೇ ನಿಮ್ಮ ಮುಂದಿಡುತ್ತಿದೆ.

ಅಂದಹಾಗೆ, ಈ ಕಥೆ ಅಲ್ಲಲ್ಲ ಘಟನೆಯು ನಡೆದಿದ್ದು ಶಿವಮೊಗ್ಗದ ಸೊರಬದಲ್ಲಿ,. ಮರಗಳ್ಳ ಎಂಬ ಆರೋಪ ಹೊತ್ತಿರುವ ವ್ಯಕ್ತಿಯೊಬ್ಬನ ಸೇಡು ಯಾವ ಮಟ್ಟಿಗಿತ್ತು ಅಂದರೆ, ತನ್ನನ್ನ ಜೈಲಿಗಟ್ಟಿದ ಅಧಿಕಾರಿಯನ್ನೇ, ಭಯಂಕರ ಪ್ಲಾನ್​ ನೊಂದಿಗೆ ಜೈಲಿಗಟ್ಟಿದ್ಧಾನೆ.

ಆತನ ಹುಟ್ಟುಗುಣದಂತಾಗಿತ್ತು ಮರಗಳ್ಳನ. ಅದನ್ನ ಗೊತ್ತಿದ್ದ ಫಾರೆಸ್ಟ್​ರ್​ ಆಗಾಗ ಮರಗಳನ್ನನ್ನು ವಿಚಾರಿಸಿಕೊಳ್ಳುತ್ತಿದ್ದ. ಅಕ್ರಮದ ವಿಚಾರಣೆಯಲ್ಲಿ ಲಂಚವೂ ಮಾತನಾಡುತ್ತಿತ್ತು ಎಂದು ಹೇಳಲೇಬೇಕಾದ ಅವಶ್ಯಕತೆಯಿಲ್ಲ.

ಲಂಚ ತಗೊಂಡು ಜೈಲಿಗಟ್ಟಿದ ಅಧಿಕಾರಿ?

ಅಧಿಕಾರಿ ಹಾಗೂ ಆ ಮರಗಳ್ಳನ ಅಡ್ಜೆಸ್ಟ್​ಮೆಂಟ್​ನಲ್ಲಿಬೀಟೆ, ಸಾಗುವಾನಿ ತುಂಡುಗಳು ಮಾತ್ರ ಖಾಲಿಯಾಗುತ್ತಿದ್ದವು. ಹೀಗಿರುವಾಗಲೇ ಸತ್ತ ಮರಗಳ ಶಾಪವೋ ಏನೋ? ಅಡ್ಜೆಸ್ಟೆಮೆಂಟ್​ ಕಳ್ಳಾಟದಲ್ಲಿ ಭಿನ್ನಾಭಿಪ್ರಾಯಗಳು ಮೂಡಿದವು. ಅದಕ್ಕೆ ಕಾರಣವಾಗಿದ್ದು ದುಡ್ಡು ತೆಗೆದುಕೊಂಡರೂ ಸಹ, ಕೇಸು ಹಾಕಿ ಮರಗಳ್ಳನನ್ನ ಒಳಕ್ಕೆ ಹಾಕಿಸಿದ ಅಧಿಕಾರಿಯ ನಡೆ.

ತನ್ನ ಮೇಲೆ ರೇಡ್ ಮಾಡಿದ ಅಧಿಕಾರಿಯು, ಮರಗಳ್ಳನನ್ನ ಮಾಲು ಸಮೇತ ಹಿಡಿದು ಕೇಸು ಹಾಕಿಸುತ್ತಾರೆ. ಅಲ್ಲದೆ ಆತನನ್ನ ಶಿವಮೊಗ್ಗ ಕೇಂದ್ರ ಕಾರಾಗೃಹ  ಕಳಿಸುತ್ತಾರೆ. ದುಡ್ಡು ತೆಗೆದುಕೊಂಡು ಕೂಡ, ಹೀಗೆ ಮಾಡಿದ್ದನ್ನಲ್ಲ ಅಧಿಕಾರಿ ಅನ್ನೋದು ಮರಗಳ್ಳನ ಸಿಟ್ಟಿಗೆ ಕಾರಣವಾಗಿತ್ತು.

ಮೂರು ದಿನ ಜೈಲಿನಲ್ಲಿ ಸಿಟ್ಟಿಗೆ, ಸೇಡು ಎನ್ನುವ ಮದ್ದು ಅರೆದ ಮರಗಳ್ಳ ಜಾಮೀನಿನ ಮೇಲೆ ಹೊರಕ್ಕೆ ಬಂದು ಮಾಸ್ಟರ್​ ಪ್ಲಾನ್​ ಮಾಡುತ್ತಾನೆ. ಆ ಕಡೆ ಫಾರೆಸ್ಟರ್​ ತನ್ನ ಪಾಡಿಗೆ ಡ್ಯೂಟಿ ಮಾಡ್ತಿದ್ದ. ಆತನಿಗೆ ಮರಗಳ್ಳನೊಳಗಿನ ದ್ವೇಷದ ಐಡಿಯಾದ ಸಣ್ಣ ಸುಳಿವು ಕೂಡ ಸಿಕ್ಕಿರಲಿಲ್ಲ.

ಏಕೆಂದರೆ, ಕಳ್ಳ ಹಾಗೂ ಅಧಿಕಾರಿಗಳ ಸಂಬಂಧ ಎಂದಿಗೂ ಮುರಿಯದ ಹಾಗೂ ಹಳಸದ ಸಂಬಂಧವಾಗಿರುತ್ತದೆ. ಸೊರಬದ ಆ ಮರಗಳ್ಳನ ವಿಷಯದಲ್ಲೂ ಅದೇ ಆಗಿತ್ತು. ಆತ ಕೇಂದ್ರ ಕಾರಾಗೃಹದಿಂದ ಹೊರಕ್ಕೆ ಬಂದು ಮತ್ತೆ ಅದೇ ಫಾರೆಸ್ಟ್​ರನ ಸ್ನೇಹ ಬೆಳೆಸುತ್ತಾನೆ. ಆತನನ್ನ ಅನುಮಾನದಿಂದ ನೋಡಿದರೂ ವಿಶ್ವಾಸ ಮೂಡಿಸುತ್ತಾನೆ.

ಹೇಗಿದ್ದರೂ ಕೇಸು ಗೀಸು ಅಂತಾ ಆಗಿದೆ. ಇನ್ನೊಂದಿಷ್ಟು ಕೊಟ್ಟು ಸೆಟ್ಲ್​ ಮಾಡುತ್ತೇನೆ. ಖರ್ಚು ಹೊಂದಿಸಲು ಒಂದಿಷ್ಟು ಮರ ಕಡಿಬೇಕು ಅವಕಾಶ ಕೊಡಿ ಅಂತಾ ಪುಸಲಾಯಿಸುತ್ತಾನೆ.

ಮೊದಮೊದಲು ಮರಗಳ್ಳನ ಆಫರ್​ಗೆ ಒಪ್ಪದ ಅಧಿಕಾರಿ, ಕೊನೆಗೆ 10 ಸಾವಿರ ಸೆಟ್ಲ್​​ಮೆಂಟ್​ಗೆ ಒಪ್ಪುತ್ತಾನೆ. ಇದೇ ಸಮಯವನ್ನು ಕಾಯುತ್ತಿದ್ದ ಮರಗಳ್ಳ ಮತ್ತೊಂದು ಪ್ಲಾನ್​ಗೆ ಸಿದ್ಧವಾಗಿದ್ದ. ಎಸಿಬಿ ಆಫೀಸ್​ಗೆ ಹೋದವನೇ ಹೀಗೀಗೆ.. ಈ ಥರಕ್ಕೆ ಈಥರ ಎಂದು ತಿಳಿಸುತ್ತಾನೆ. ಎಸಿಬಿ ರೇಡ್​ಗೆ ಸಿದ್ಧವಾಗಿ ಹೊರಡುತ್ತೆ.

ಈ ಪ್ಲಾನ್​ ಪ್ರಕಾರ, ಮರಗಳ್ಳ ಆ ಫಾರೆಸ್ಟ್​​ರನ್ನ ಭೇಟಿಯಾಗಿ ಫಿಕ್ಸ್​ ಮಾಡಿದ ಹಾಗೆ, 10 ಸಾವಿರ ರೂಪಾಯಿಯಲ್ಲಿ, ಏಳು ಸಾವಿರವನ್ನ ಕೊಡುತ್ತಾನೆ. ಅದೇ ಹೊತ್ತಿಗೆ ಎಸಿಬಿ ಕೂಡ ದಾಳಿ ಮಾಡುತ್ತೆ. ಫಾರೆಸ್ಟ್​ರನ್ನ ವಿಚಾರಣೆಗೊಳಪಡಿಸುತ್ತೆ. ಆದರೆ, ಇಲ್ಲೊಂದು ಸಮಸ್ಯೆ ಎದುರಾಗುತ್ತೆ.

ಮರದ ಲಂಚ ಇಡೋದಕ್ಕೆ ಮರದ ಬುಡವೇ ತಿಜೋರಿ

ಎಷ್ಟೆ ಆಗಲಿ ಅಧಿಕಾರಿ ಅಧಿಕಾರಿಯೇ! ಎಸಿಬಿ ರೇಡ್​ ಮಾಡಿದ ಹೊತ್ತಿನಲ್ಲಿ ಮರಗಳ್ಳ ಮಾಡಿದ ಆರೋಪ ಸಾಬೀತು ಪಡಿಸೋಕೆ ಇದ್ದಿದ್ದು ಆತ ಪಡೆದ ಹಣ. ಅದರಲ್ಲಿ ಇಂಕ್​ ಸೇರಿಸಿ, ಸಾಕ್ಷ್ಯ ಸಮೇತ ಹಿಡಿಯೋದು ಎಸಿಬಿ ಐಡಿಯಾ ಆಗಿತ್ತು. ಆದರೆ ರೇಡ್ ಆದ ಸಂದರ್ಭದಲ್ಲಿ ಮರಗಳ್ಳನಿಂದ ಪಡೆದಿದ್ದ ಹಣವೂ, ಅಧಿಕಾರಿ ಬೇರೆ ಕಡೆಯಲ್ಲಿ ಇಟ್ಟಿದ್ದ. ಹಾಗಾಗಿ ದಾಳಿ ಮಾಡಿದ ಎಸಿಬಿ ಅಧಿಕಾರಿಗಳಿಗೆ ಏನ್​ ಮಾಡಬೇಕು ಅನ್ನೋದು ಗೊತ್ತಾಗಲಿಲ್ಲ

ಹಾಗಾಗಿ, ಹಣ ಹುಡುಕೋದಕ್ಕಾಗಿಯೇ ಎಸಿಬಿ ಅಧಿಕಾರಿಗಳು ಕೂಂಬಿಂಗ್​ ನಡೆಸುತ್ತಾರೆ. ಈ ವೇಳೆ ಮುರಿದು ಬಿದ್ದಿದ್ದ ಮರದ ತುಂಡೊಂದರ ಮೇಲೆ ಸೊಪ್ಪು ಹಾಕಿರುವುದು ಕಾಣುತ್ತೆ. ಇದು ಅನುಮಾನಕ್ಕೆ ಎಡೆಮಾಡಿಕೊಡುತ್ತೆ. ಡೌಟ್​ ಬರುತ್ತಲೇ, ಸೊಪ್ಪು ಸರಿಸಿ ಪರಿಶೀಲಿಸಿದ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದರು.

ಮೇಲಕ್ಕೆ ಹಾಕಿದ್ದ ಸೊಪ್ಪನ್ನು ಸರಿಸಿ ನೋಡಿದಾಗ, ಬೀಟೆ ಮರದ ತುಂಡಿನ ನಡುವೆ ಹಣಹಾಕುವುದಕ್ಕೆ ಜಾಗವೊಂದನ್ನ ಮಾಡಲಾಗಿತ್ತು. ಅದರಲ್ಲಿ ಆ ಅಧಿಕಾರಿ ತನಗೆ ಬರುವ ಅಕ್ರಮದ ದುಡ್ಡನ್ನೆಲ್ಲಾ ಹಾಕಿಡುತ್ತಿದ್ದನ್ನಂತೆ. ಅವಶ್ಯ ಬಿದ್ದಾಗ ಮಾತ್ರ ಅದನ್ನ ತೆಗೆದುಕೊಂಡು ಹೋಗುತ್ತಿದ್ದನಂತೆ.

ಅಂತೂ ಹಾಗೂ ಹೀಗೂ ಎಸಿಬಿ ತಂಡ, ಬೀಟೆ ತುಂಡಿನಿಂದ, ಆತ ತೆಗೆದುಕೊಂಡಿದ್ದ ಲಂಚವನ್ನು ಜಪ್ತಿ ಮಾಡಿ, ಕೇಸ್​ ದಾಖಲಿಸಿ, ಅರೆಸ್ಟ್​ ಮಾಡಿ, ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿಕೊಡುತ್ತದೆ.

ಮರವನ್ನು ಕದ್ದ ಮರಗಳ್ಳನಿಗೆ ಮೂರೇ ದಿನದಲ್ಲಿ ಜಾಮೀನು ಸಿಗುತ್ತದೆ. ಆದರೆ, ಲಂಚ ತೆಗೆದುಕೊಂಡ ಕೇಸ್​ನಲ್ಲಿ ಅಂದರ್​ ಆದ ಅಧಿಕಾರಿಗೆ 15 ದಿನವಾದರೂ ಬೇಲ್​ ಸಿಗೋದಿಲ್ಲ.

ವಿಶೇಷ ಅಂದರೆ, ಮರಗಳ್ಳ ತನ್ನನ್ನ ಅಂದರ್ ಮಾಡಿದ ಅಧಿಕಾರಿಯನ್ನೆ ಜೈಲಿಗಟ್ಟಿ ತನ್ನ ಸೇಡನ್ನ ತೀರಿಸಿಕೊಳ್ಳುತ್ತಾನೆ. ಕಥೆಯ ಸಾರಾಂಶ ಎಂದರೆ, ಪ್ರಾಮಾಣಿಕವಾಗಿ ಇದ್ದಿದ್ದರೇ ಆ ಅಧಿಕಾರಿಗೇ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಕಳ್ಳನಿಂದಲೇ ದುಡ್ಡು ತಿಂದು ಆತನ ವಿರುದ್ಧವೇ ಕೇಸು ಹಾಕಿದ್ದು ಮರಗಳ್ಳನ ಇಗೋಗೆ ಹರ್ಟ್​ ಮಾಡಿದ್ದಂತಾಗಿತ್ತು. ಆ ಕಾರಣಕ್ಕೆ ಕಳ್ಳ, ಅಧಿಕಾರಿಯನ್ನ ಕಳ್ಳತನದಿಂದಲೇ ಜೈಲಿಗಟ್ಟಿಸಿ, ಸೇಡು ತೀರಿಸಿಕೊಂಡಿದ್ದ.

Leave a Comment