100 ಕಿಲೋಮೀಟರ್ ಗಡಿ ದಾಟಿ ಅಪ್ಪಳಿಸಿದ ಸ್ಪೋಟದ ಸದ್ದು,ಡ್ಯಾಂ ಗಳಿಗೆ ಹಾನಿಯನ್ನುಂಟು ಮಾಡಲಿಲ್ಲ ಏಕೆ ಗೊತ್ತಾ?

100 ಕಿಲೋಮೀಟರ್ ಗಡಿ ದಾಟಿ ಅಪ್ಪಳಿಸಿದ ಸ್ಪೋಟದ ಸದ್ದು,ಡ್ಯಾಂ ಗಳಿಗೆ ಹಾನಿಯನ್ನುಂಟು ಮಾಡಲಿಲ್ಲ ಏಕೆ ಗೊತ್ತಾ?

100 ಕಿಲೋಮೀಟರ್ ಗಡಿ ದಾಟಿ ಅಪ್ಪಳಿಸಿದ ಸ್ಪೋಟದ ಸದ್ದು,ಡ್ಯಾಂ ಗಳಿಗೆ ಹಾನಿಯನ್ನುಂಟು ಮಾಡಲಿಲ್ಲ ಏಕೆ ಗೊತ್ತಾ?
Hunsodu Shivamogga incident timeline

malenadutoday.com 23-01-2021 /Hunsodu Shivamogga incident timeline
21-01-2021 ರ ರಾತ್ರಿ 1020 ರ ವೇಳೆ ಶಿವಮೊಗ್ಗ ಹೊರವಲಯದ ಹುಣಸೋಡು ಎಸ್,ಎಸ್ ಕ್ರಷರ್ ನಲ್ಲಿ ಸಂಭವಿಸಿದ ಸ್ಟೋಟ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.ಸುಮಾರು 130 ಕಿಲೋಮೀಟರ್ ರೇಡಿಯಸ್ ವ್ಯಾಪ್ತಿ ಪ್ರದೇಶದಲ್ಲಿ ಬಡಿದಪ್ಪಳಿಸಿದ ಶಬ್ದದಿಂದಾಗಿ ಅಂದು ರಾತ್ರಿ ಜನರ ಜೀವಭಯದಿಂದ ಮನೆಯಿಂದ ಹೊರಬಂದರು.ಸ್ಪೋಟದ ಆರಂಭಟಕ್ಕೆ ಮನೆಯ ಗೋಡೆ,ಕಿಟಕಿ ಗಾಜುಗಳು ಪುಡಿಯಾಗಿ ಹೋದವು.ಕ್ಷಣಾರ್ದದಲ್ಲಿ ನಡೆದ ಈ ಘಟನೆಯಿಂದಾಗಿ ಎಲ್ಲರೂ ಭಯಭೀತರಾದರು

ಸುತ್ತಮುತ್ತಲ ಐದು ಜಿಲ್ಲೆಗಳಲ್ಲಿ ಸ್ಪೋಟದ ಸದ್ದು ಮಾರ್ದನಿಸಿದೆ.ಹೀಗಾಗಿ ಈ ಸಪ್ಪಳವನ್ನು ಎಲ್ಲರೂ ಭೂಕಂಪನವೇ ಇರಬೇಕು ಎಂದು ನಂಬಿದರು.ಆದರೆ ಅಷ್ಟರಲ್ಲಾಗಲೇ ಹುಣಸೋಡು ಎಸ್.ಎಸ್ ಕ್ರಷರ್ ನಲ್ಲಿ ಸ್ಪೋಟ ಸಂಭವಿಸಿರುವ ಸುದ್ದಿ ದೊಡ್ಡ ಸದ್ದು ಮಾಡಿತು.ಸ್ಪೋಟದ ತೀವೃತೆಗೆ ಸ್ಥಳದಲ್ಲಿದ್ದ ಆರು ಮಂದಿ ಕಾರ್ಮಿಕರ ದೇಹ ಛಿದ್ರಗೊಂಡಿತು.ಸ್ಪೋಟದ ತೀವೃತೆ ಸೆಟಲೈಟ್ ನಲ್ಲಿ ಕೂಡ ದಾಖಲಾಯಿತು.ಆಗಸಕ್ಕೆ ಚಿಮ್ಮಿ 130 ಕಿಲೋಮೀಟರ್ ರೇಡಿಯಸ್ ನಲ್ಲಿ ಅಪ್ಪಳಿಸಿದ ಸ್ಪೋಟದ ತೀವೃತೆ ಅಣತಿ ದೂರದಲ್ಲಿದ್ದ ಹುಣಸೋಡು ಗ್ರಾಮವನ್ನು ನಾಶ ಮಾಡಬೇಕಿತ್ತು.ನೂರಾರು ಜೀವಗಳನ್ನು ಬಲಿಪಡೆಯಬೇಕಿತ್ತು.ಆದರೆ ಸ್ಪೋಟಗೊಂಡ ಸ್ಥಳಕ್ಕೆ ತಜ್ಞರ ತಂಡ ಭೇಟಿ ನೀಡಿದಾಗ ಮಹತ್ವದ ಅಂಶಗಳನ್ನು ಕಲೆಹಾಕಿರುವುದು ಮೂಲಗಳಿಂದ ತಿಳಿದು ಬಂದಿದೆ.

ಭೂಮಿ ಮೇಲೆ ನೇರವಾಗಿ ಬೀಳಬೇಕಾದ ಒತ್ತಡದ ತೀವೃತೆ ಬಂಡೆಗಳ ಪ್ರಪಾತಕ್ಕೆ ಬಿದ್ದಿದೆ ಹೇಳಿಕೇಳಿ ದೇವಕಾತಿಕೊಪ್ಪ ಜಕಾತಿಕೊಪ್ಪ ಕೋಟೆಗಂಗೂರು ಕಲ್ಲುಗಂಗೂರು ಗೆಜ್ಜೆನಹಳ್ಳಿ,ಬಸವನಗಂಗೂರು,ಹುಣಸೋಡು ವ್ಯಾಪ್ತಿಯಲ್ಲಿ ಕೋರೆಗಾಗಿ ಅಗೆದ ಬಂಡೆಗಳು ಈಗ ದೊಡ್ಡ ಪ್ರಪಾತಗಳನ್ನೇ ಸೃಷ್ಟಿಸಿದೆ.ಅದು ಎಷ್ಟರ ಮಟ್ಟಿಗೆ ಎಂದರೆ ಅಕ್ರಮ ಕ್ವಾರಿ ಮಾಡುವ ಮಾಲೀಕರು ಭೂತಾಯಿಯ ಒಡಲನ್ನು 200 ಅಡಿಗಳೆಂದ 600 ಅಡಿಗಳವರೆಗೆ ಕೊರೆದು ಪ್ರಪಾತವನ್ನೇ ಸೃಷ್ಟಿಸಿದ್ದಾರೆ.ಅಲ್ಲಲ್ಲಿ ಸೃಷ್ಟಿಯಾದ ಕೃತಕ ಪ್ರಪಾತಗಳೇ ಶಿವಮೊಗ್ಗ ಜನತೆಯನ್ನು ಕಾಪಾಡಿದೆ.ಅದರಲ್ಲೂ ಮುಖ್ಯವಾಗಿ ಸ್ಪೋಟ ಸಂಭವಿಸಿದ ಹುಣಸೋಡು ಗ್ರಾಮ ಅಬ್ಬಲಿಗೆರೆ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಹೀಗಾಗಿ ಡ್ಯಾಂ ಗಳು ಕೂಡ ಸುರಕ್ಷಿತವಾಗಿದೆ ಎನ್ನಲಾಗಿದೆ


ಸ್ಪೋಟದ ಒತ್ತಡ ತಡೆಯುವಲ್ಲಿ ಪ್ರಪಾತಗಳು ಪಾತ್ರ ವಹಿಸಿವೆ.


ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟಿಸಿದಾಗ ಸ್ಪೋಟದ ಒತ್ತಡ ಭೂಮಿಯಿಂದ ಆಗಸಕ್ಕೆ ಚಿಮ್ಮುತ್ತದೆ.ಹೀಗೆ ವಿಸ್ತಾರವಾಗಿ ಅಪ್ಪಳಿಸುವ ಸ್ಪೋಟದ ತೀವೃತೆ ಸನಿಹದಲ್ಲಿದ್ದ ಪ್ರಪಾತಗಳನ್ನು ಸೇರಿದೆ.ಪ್ರಪಾತಗಳಲ್ಲಿ ಬಿದ್ದ ಒತ್ತಡ ಆಗಸಕ್ಕೆ ಚಿಮ್ಮುವಾಗ ಸನಿಹವಿದ್ದ ಗ್ರಾಮಗಳಿಗೆ ಹಾಗು ಶಿವಮೊಗ್ಗದ ಜನತೆಗೆ ಪ್ರಾಣಹಾನಿಯನ್ನುಂಟು ಮಾಡಿಲ್ಲ.ಆದರೆ ಸ್ಪೋಟದ ಸ್ಥಳದಿಂದ ಎರಡು ಕಿಲೋಮೀಟರ್ ದೂರದಿಂದ ಬಂದ ಸದ್ದು 130 ಕಿಲೋಮೀಟರ್ ವರೆಗೆ ವಿಸ್ತರಿಸಿದಾಗಲೂ ಅಪಾಯವನ್ನುಂಟುಮಾಡುವ ಒತ್ತಡವನ್ನು ಸೃಷ್ಟಿಸಲು ಸಾಧ್ಯವಾಗಲಿಲ್ಲ.ಬದಲಾಗಿ ಸ್ಪೋಟದ ಶಬ್ದವನ್ನು ಆಗಸದಲ್ಲಿ 100 ಕಿಲೋಮೀಟರ್ ಗೂ ಅಧಿಕ ವೇಗದಲ್ಲಿ ಸಾಗುವಂತೆ ಮಾಡಿರಬಹುದು ಎಂದು ಹೆಸರು ಹೇಳಲಿಚ್ಚಸದ ತಜ್ಞರು ಹೇಳಿದ್ದಾರೆ

ಪ್ರಪಾತಗಳಿಗೆ ಸ್ಪೋಟದ ತೀವೃತೆ ಬೀಳದಿದ್ದಲ್ಲಿ ಭಾರಿ ಅನಾಹುತವಾಗುತ್ತಿತ್ತು.


ಸಧ್ಯಕ್ಕೆ ಸ್ಪೋಟಗೊಂಡ ಪ್ರದೇಶಗಳಲ್ಲಿದ್ದ ಕೃತಕ ಪ್ರಪಾತಗಳು ಜನರ ಜೀವರಕ್ಷಣೆ ಮಾಡಿದೆ.ಇಲ್ಲವಾದಲ್ಲಿ ಪ್ರಪಾತಕ್ಕೆ ಬಿದ್ದ ಸದ್ದು ನೇರವಾಗಿ ಭೂಮಿಯ ಮೇಲೆ ಬಿದ್ದಿದ್ದರೆ..ಶಿವಮೊಗ್ಗ ನಗರಕ್ಕೆ ಅದ್ಯಾವ ಗಂಡಾಂತರ ಕಾದಿತ್ತೋ ಗೊತ್ತಿಲ್ಲ.ಪ್ರಪಾತಗಳು ಸ್ಪೋಟದ ಒತ್ತಡವನ್ನು ಮಡಿಲಿಗೆ ಹಾಕಿಕೊಂಡಿದ್ದರಿಂದಲೇ ಕ್ಷಣಾರ್ದದಲ್ಲಿ ನಡೆದ ಅವಘಡದಿಂದ ದೇವರು ಪಾರು ಮಾಡಿದ್ದಾನೆ ಅಷ್ಟೆ.