ಶಿವಮೊಗ್ಗದಲ್ಲಿ ಸ್ಫೋಟ.. ಏನಾಯ್ತು..? ಹೇಗಾಯ್ತು..? ಕಂಪ್ಲೀಟ್ ಡಿಟೇಲ್ಸ್.

ಸಮಯ ರಾತ್ರಿ 10.30.. ನಿಗೂಢವಾದ ಶಬ್ದ ಕಿವಿಗೆ ಅಪ್ಪಳಿಸಿತು. ಮುಚ್ಚಿದ ಕಿಡಕಿ ಬಾಗಿಲುಗಳು ಸಹ ಸದ್ದು ಮಾಡಿದವು.. ನೋಡ ನೋಡುತ್ತಿದ್ದಂತೆ ಇಡೀ ಏರಿಯಾದ ಜನ್ರು ರೋಡಿಗೆ ಬಂದು ನಿಂತಿದ್ರು. ಏನಾಯ್ತು..

ಶಿವಮೊಗ್ಗದಲ್ಲಿ ಸ್ಫೋಟ.. ಏನಾಯ್ತು..? ಹೇಗಾಯ್ತು..? ಕಂಪ್ಲೀಟ್ ಡಿಟೇಲ್ಸ್.
Hunsodu blast Shivamogga updates

ಸಮಯ ರಾತ್ರಿ 10.30.. ನಿಗೂಢವಾದ ಶಬ್ದ ಕಿವಿಗೆ ಅಪ್ಪಳಿಸಿತು. ಮುಚ್ಚಿದ ಕಿಡಕಿ ಬಾಗಿಲುಗಳು ಸಹ ಸದ್ದು ಮಾಡಿದವು.. ನೋಡ ನೋಡುತ್ತಿದ್ದಂತೆ ಇಡೀ ಏರಿಯಾದ ಜನ್ರು ರೋಡಿಗೆ ಬಂದು ನಿಂತಿದ್ರು. ಏನಾಯ್ತು.. ಭೂಕಂಪನ ಏನಾದ್ರೂ ಆಗುತ್ತಾ..? ಅನ್ನೋ ಭಯದಲ್ಲಿ ಲಕ್ಷಾಂತರ ಜನರು ಮನೆಯಿಂದ ಓಡಿ ಬಂದಿದ್ರು. ಭಯದಲ್ಲಿಯೇ ಗಂಟೆಗಳನ್ನು ಕಳೆದರು.. ಕೆಲ ಸಮಯದ ನಂತರ ಅಸಲಿ ವಿಷ್ಯ ಬಯಲಿಗೆ ಬಂತು. ಅದೇನಪ್ಪ ಅಂದ್ರೆ ಕಲ್ಲು ಕ್ವಾರಿಯಲ್ಲಿನ ಸ್ಫೋಟ. ಹೌದು, ಸ್ಫೋಟದಿಂದ ಅನಾಹುತವೊಂದು ಸಂಭವಿಸಿದೆ. ಡೈನಮೈಟ್ ಮತ್ತು ಜೆಲಟಿನ್ ಕಡ್ಡಿ ತಂಬಿದ್ದ ಲಾರಿ ಸ್ಫೋಟ ಗೊಂಡಿದ್ದು 10 ಕ್ಕೂ ಹೆಚ್ಚು ಕನ ಕಾರ್ಮಿಕರು ಸಾವನ್ನಪ್ಪಿರು ಶಂಕೆ ವ್ಯಕ್ತವಾಗಿದೆ

ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ ಬಳಿಯಿರುವ ಹುಣಸೋಡು ಎಂಬಲ್ಲಿ ದೊಡ್ಡ ಸ್ಪೋಟ ಸಂಭವಿಸಿದೆ. ಇಲ್ಲಿರುವ ಕಲ್ಲುಕ್ವಾರೆಯಲ್ಲಿ ಸ್ಪೋಟ ಸಂಭವಿಸಿದ ಸ್ಫೋಟದಲ್ಲಿ ಹಲವರು ಮೃತಪಟ್ಟಿದ್ದಾರೆ .ಈಗಾಗಲೇ ೬ ಶವಗಳು ಪತ್ತೆಯಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಸ್ಫೋಟದ ರಭಸಕ್ಕೆ ಶವಗಳು ಛಿದ್ರ ಛಿದ್ರವಾಗಿವೆ. ಕಾರ್ಮಿಕರು ಬಿಹಾರದ ಮೂಲದವರು ಎನ್ನಲಾಗುತ್ತಿದೆ ಸುತ್ತಮುತ್ತ ೫೦೦ ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹಲವು ಮರಗಳು ಉರುಳಿ ಬಿದ್ದಿವೆ. ಕರೆಂಟ್ ಕಂಬಗಳು ಉರುಳಿ ಬಿದ್ದಿವೆ. ಸುತ್ತಮುತ್ತಲ ಪ್ರದೇಶದಲ್ಲಿ ರಾತ್ರಿ ವಿದ್ಯುತ್ ಕಡಿತಗೊಂಡಿತ್ತು

ಅಕ್ರಮ ಗಣಿಗಾರಿಕೆ ನಡೀತಾ ಇದೆಯಾ.. Hunsodu blast Shivamogga updates

ಹುಣಸೋಡು ಬಳಿ ನಡೆಯುತ್ತಿರುವ ಕ್ರಶರ್ ಇದಾಗಿದ್ದು ಅಧಿಕೃತವೇ ಎನ್ನುವುದು ಇನ್ನು ತಿಳಿದುಬಂದಿಲ್ಲ. ಘಟನೆ ಬೆನ್ನಲ್ಲೇ ಸ್ಥಳಕ್ಕೆ ಎಸ್ ಪಿ ಶಾಂತರಾಜ್, ಡಿಸಿ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಡಿಸಿ ೧೦-೩೦ ರ ಸಂದರ್ಭದಲ್ಲಿ ಕೇಳಿ ಬಂದ ಶಬ್ಧದ ನಡುವೆ ಹುಣಸೋಡಿನಲ್ಲಿ ಸ್ಫೋಟಗೊಂಡಿದೆ. ಈ ಸ್ಪೋಟದಲ್ಲಿ ಸಾವು ನೋವುಗಳು ಉಂಟಾಗಿವೆ. ನಿಗೂಢ ಶಬ್ದಕ್ಕೂ ಹಾಗೂ ಇಲ್ಲಿನ ಸ್ಪೋಟದ ಕುರಿತು ಅಧ್ಯಯನ ನಡೆಸಲು ಬೆಂಗಳೂರಿನಿಂದ ತನಿಖಾ ತಂಡ ಬರಲಿದೆ.

ಅವರು ಪರಶೀಲನೆ ನಡೆಸಿದ ನಂತರ ಯಾವುದಕ್ಕೂ ಸ್ಪಷ್ಟವಾಗಿ ತಿಳಿಯಲಿದೆ ಎಂದಿದ್ದಾರೆ. ಜಿಲೆಟಿನ್ ತುಂಬಿದ ಲಾರಿಯಿಂದಾಗಿ ಸ್ಫೋಟಗೊಂಡಿದೆ. ಬೆಳಗ್ಗೆ ವಿಶೇಷ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು, ಪೊಲೀಸರು ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ. ಈ ಮದ್ಯೆ ಘಟನೆಗೆ ಅಕ್ರಮ ಕ್ವಾರಿಗಳೆ ಕಾರಣ.ಈ ಭಾಗದಲ್ಲಿ ಸುಮಾರು ೫೦ ಕ್ಕೂ ಹೆಚ್ಚು ಕ್ವಾರಿಗಳಿದ್ದು ಅಕ್ರಮವಾಗಿ ಎಗ್ಗಿಲ್ಲದೆ ನಡೆಯುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮಾಹಿತು ಕೊಟ್ಟರು ಕ್ರಮ ಯಾವ ಇಲಾಖೆಯ ಅಧಿಕಾರಿಗಳು ಕೈಗೊಂಡಿಲ್ಲ. ಸ್ಥಳಿಯರನ್ನು ಕೂಡ ಕ್ವಾರಿ ಹತ್ತಿರಕ್ಕೂ ಬಿಡದಂತೆ ಅಕ್ರಮವೆ ಎಸಗುತ್ತಿದ್ದರು . ಈಗಲಾದರೂ ಕ್ವಾರಿಗಳ ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿದ್ದಾರೆ

ನಿಗೂಢ ಶಬ್ದ ನಿಜಕ್ಕೂ ಆತಂಕ ಸೃಷ್ಟಿಸಿದೆ. ಅಲ್ಲದೆ ಘಟನೆ ಸಂದರ್ಭದಲ್ಲಿಯೇ ಕೇಳಿ ಬಂದ ನಿಗೂಢ ಶಬ್ಧವೂ ಜಿಲ್ಲೆಯ ಜನರಲ್ಲಿ ಭೀತಿ ಉಂಟು ಮಾಡಿದೆ. ಸ್ಫೋಟದಿಂದಲೇ ಈ ಶಬ್ದ ಕೇಳಿ ಬಂದಿದೆಯಾ ಅಥವಾ ನಿಗೂಢ ಶಬ್ಧಕ್ಕೆ ಭೂಕಂಪನ ಅಥವಾ ಬೇರೆ ಯಾವುದಾದರೂ ಕಾರಣ ಇದೆಯೇ ಎನ್ನುವುದು ತನಿಖೆಯಿಂದ ಬಯಲಿಗೆ ಬರಬೇಕಿದೆ. ಅದೇನೆ ಇದ್ರು ಅಕ್ರಮ ಗಣಿಕಾರಿಕೆಯ ಹೊಡೆತಕ್ಕೆ ಮಲೆನಾಡಿನ ಪ್ರಕೃತಿಯೇ ನಲುಗಿ ಹೋಗಿದೆ.. ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ, ಮೃತ ಕಾರ್ಮಿರಿಗೆ ಸಂತಾಪ ಸೂಚಿಸಿದ್ದಾರೆ. ಈಗಲಾದರೂ ಸರಕಾರಗಳು ಎಚ್ಚೆತ್ತುಕೊಂಡು ಅಕ್ರಮ ಗಣಿಗಾರಿಕೆಗೆ ಬ್ರೇಕ್ ಹಾಕಬೇಕಾಗಿದೆ