ಶಿವಮೊಗ್ಗ- shivamogga ವಿಶೇಷ ಏನು ಗೊತ್ತ?

ಮಲೆನಾಡು ಹಾಗೂ ಬಯಲು ಪ್ರದೇಶಗಳನ್ನು ಎರಡನ್ನು ಹೊಂದಿರುವ ಜಿಲ್ಲೆ ಶಿವಮೊಗ್ಗ ಅತಿಹೆಚ್ಚು ಮಳೆ ಬೀಳುವ ಪ್ರದೇಶಗಳನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಮಳೆ ದಾಖಲೆಗಳಲ್ಲಿ ಶಿವಮೊಗ್ಗ ಜಿಲ್ಲೆಯ ಆಗುಂಬೆ, ಹುಲಿಕಲ್, ಮಾಸ್ತಿಕಟ್ಟೆ ಸೇರಿದಂತೆ ವಿವಿಧ ಪ್ರದೇಶಗಳು ದಾಖಲೆಗಳನ್ನು ಬರೆದಿವೆ.

ಶಿವಮೊಗ್ಗ- shivamogga  ವಿಶೇಷ ಏನು ಗೊತ್ತ?
Do you know what's special about Shivamogga-Shivamogga?

ಶಿವಮೊಗ್ಗ, (Shivamogga) ಶೀಮೊಗೆ ಅಥವಾ ಸೀಮೊಗೆ ಎಂಬಿತ್ಯಾದಿ ಹೆಸರನ್ನು ಹೊಂದಿರುವ ಶಿವಮೊಗ್ಗ ಜಿಲ್ಲೆಯು ಸಾಕಷ್ಟು ವಿಶೇಷಗಳನ್ನು ಹೊಂದಿದೆ. ಕರ್ನಾಟಕ ರಾಜ್ಯ ಗಜೆಟಿಯರ್​ನಲ್ಲಿರುವ ಮಾಹಿತಿಯನ್ನೇ ಗಮನಿಸುವುದಾದರೆ,

ಮಲೆನಾಡು ಟುಡೆ

ಮಲೆನಾಡು ಹಾಗೂ ಬಯಲು ಪ್ರದೇಶಗಳನ್ನು ಎರಡನ್ನು ಹೊಂದಿರುವ ಜಿಲ್ಲೆ ಶಿವಮೊಗ್ಗ ಅತಿಹೆಚ್ಚು ಮಳೆ ಬೀಳುವ ಪ್ರದೇಶಗಳನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಮಳೆ ದಾಖಲೆಗಳಲ್ಲಿ ಶಿವಮೊಗ್ಗ ಜಿಲ್ಲೆಯ ಆಗುಂಬೆ, ಹುಲಿಕಲ್, ಮಾಸ್ತಿಕಟ್ಟೆ ಸೇರಿದಂತೆ ವಿವಿಧ ಪ್ರದೇಶಗಳು ದಾಖಲೆಗಳನ್ನು ಬರೆದಿವೆ.

ಶಿವಮೊಗ್ಗ ಇತಿಹಾಸ

ಶಿವ ಮುಖ Shiva-mukha (the face of Shiva) ಶಿವನ ಮೂಗು  'Shivana moogu' (the nose of Shiva) and  ಶಿವನ ಮೊಗ್ಗೆ  Shivana-mogge (buds of flowers meant for Shiva) ಎಂಬ ಹೆಸರುಗಳ ಮೂಲಕ ಶಿವಮೊಗ್ಗ ವಾಯಿತು ಎಂಬ ವಾಡಿಕೆಯಿದೆ.

ಶಿವಮೊಗ್ಗ ಹೆಸರು

ಆಧ್ಯಾತ್ಮಿಕವಾಗಿ ಇಲ್ಲಿಯ ದೇವಾಲಯಗಳ ಪೈಕಿ ಪುರಾತನ ದೇವಾಲಯಗಳು ಶಿವನ ದೇಗುಲಗಳಾಗಿವೆ. ಪುರಾತನವಾಗಿ ಈ ಕ್ಷೇತ್ರವನ್ನು ದೂರ್ವಾಸ ಕ್ಷೇತ್ರ ಎಂದು ನಂಬಲಾಗಿದೆ. ಒಮ್ಮೆ ವಿವಿಧ ಗಿಡಮೂಲಿಕೆಗಳನ್ನು ದೂರ್ವಾಸ ಮುನಿಗಳು ಮಡಿಕೆಯೊಂದರಲ್ಲಿ ಇಟ್ಟು ಒಲೆ ಮೇಲೆ ಬೇಯಿಸುತ್ತಿದ್ದಾಗ, ದನಗಾಹಿಗಳು ಅದರ ರುಚಿ ನೋಡಿ ಸಿಹಿ ಮೊಗೆ  Sihi-moge (sweet pot) ಎಂದು ಕರೆದರಂತೆ ಆನಂತರ ಈ ಹೆಸರು 1671 ರ ಹೊತ್ತಿಗೆ ಶಿವಮೊಗ್ಗವಾಗಿ ಮೌಖಿಕ ಹಾಗೂ ಲಿಖಿತ ರೂಪದಲ್ಲಿ ಕಾಣಿಸಿಕೊಂಡಿತು ಎಂದು ಹೇಳಲಾಗಿದೆ.