ಶಿವಮೊಗ್ಗದಲ್ಲಿ ಮೊಬೈಲ್​ಗಳ ಕಳ್ಳತನ! ಮೂವರನ್ನ ಬಂಧಿಸಿದ ಪೊಲೀಸರು!

Mobile theft case in Shimoga Three arrested by police /shivamogga police

ಶಿವಮೊಗ್ಗದಲ್ಲಿ ಮೊಬೈಲ್​ಗಳ ಕಳ್ಳತನ! ಮೂವರನ್ನ ಬಂಧಿಸಿದ ಪೊಲೀಸರು!

KARNATAKA NEWS/ ONLINE / Malenadu today/ Jun 2, 2023 SHIVAMOGGA NEWS

ಶಿವಮೊಗ್ಗ/  ನಗರದಲ್ಲಿ ದಾಖಲಾಗುತ್ತಿರುದ ಮೊಬೈಲ್ ಕಳ್ಳತನ (mobile theft) ಪ್ರಕರಣಗಳ ಸಂಬಂಧ ಶಿವಮೊಗ್ಗ ಪೊಲೀಸರು ಮೂವರು ಅಪ್ರಾಪ್ತರನ್ನ ಬಂಧಿಸಿದ್ಧಾರೆ. ಈ ಮೂಲಕ ನಗರದಲ್ಲಿ ಮೊಬೈಲ್ ಕಳವು ಮಾಡುತ್ತಿದ್ದ ಜಾಲವನ್ನು ಪೊಲೀಸರು ಬೇಧಿಸಿದ್ಧಾರೆ.  

ಬಂಧಿತರ ಪೈಕಿ ಓರ್ವನ ವಿರುದ್ಧ ಈ ಹಿಂದೆಯು ಮೊಬೈಲ್ ಕಳವು ಪ್ರಕರಣ ದಾಖಲಾಗಿದೆ. ಇನ್ನಿಬ್ಬರ ವಿರುದ್ಧ ಯಾವುದೇ ಪ್ರಕರಣಗಳಿಲ್ಲ. ಇನ್ನು ಬಂಧಿತರಿಂಧ  23 ಮೊಬೈಲ್ ಗಳು, 1 ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ರಸ್ತೆಯಲ್ಲಿ ಹೋಗುತ್ತಿದ್ದವರ ಮೊಬೈಲ್‌ಗಳನ್ನು ಬೈಕ್‌ನಲ್ಲಿ ಬರುವ ಈ ಗುಂಪು ಕಸಿದು ಪರಾರಿಯಾಗುತ್ತಿತ್ತು. ಕದ್ದ  ಮೊಬೈಲ್‌ಗಳನ್ನು ತಾವೇ ಬಳಸುತ್ತಿದ್ದರು. ಬಳಿಕ ಸ್ನೇಹಿತರಿಗೆ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದರು . 

ಕಳೆದ 15 ದಿನಗಳಲ್ಲಿ ಶಿವಮೊಗ್ಗದಲ್ಲಿ ಮೊಬೈಲ್​ ಕಳ್ಳತನದ ಸಂಬಂಧ ಮೂರು ಪ್ರಕರಣಗಳು ದಾಖಲಾಗಿದ್ದವು. ತಡವಾಗಿ ದಾಖಲಾಗಿದ್ದ ದೂರಿನಡಿಯಲ್ಲಿ ಪೊಲೀಸರು ಮೊಬೈಲ್​ ಕಳ್ಳರ ಗುಂಪನ್ನ ಹಿಡಿದಿದ್ದಾರೆ. 

ಅಡಕೆ ದರ ಹೆಚ್ಚುತ್ತಿದೆ! ಕ್ವಿಂಟಾಲ್​ 50 ಸಾವಿರ ದಾಟಿದ ಧಾರಣೆ!

ಶಿವಮೊಗ್ಗ ಅಡಕೆ ಧಾರಣೆಯಲ್ಲಿ ಉತ್ತಮ ಏರಿಕೆ ಕಾಣಿಸಿದೆ. ರಾಶಿ ಇಡಿ ಮಾದರಿ ಅಡಕೆ ಧಾರಣೆಯು ಗುರುವಾರ ಪ್ರತಿ ಕ್ವಿಂಟಾಲ್‌ಗೆ 50 ಸಾವಿರ ರೂಪಾಯಿ ದಾಟಿದೆ. 

ಕಳೆದ 2022ರ ಅಕ್ಟೋಬರ್ ವೇಳೆಯಲ್ಲಿ ರಾಶಿಇಡಿ ಅಡಕೆ ಧಾರಣೆಯು ಪ್ರತಿ ಕ್ವಿಂಟಾಲ್‌ಗೆ 55 ಸಾವಿರ ರೂಪಾಯಿ ತಲುಪಿತ್ತು, ಇದು 60 ಸಾವಿರ ರೂಪಾಯಿ ಮುಟ್ಟುತ್ತದೆ ಎಂದೇ ಊಹಿಸಲಾಗಿತ್ತು. ಇದರಿಂದ ರೈತರು ತಮ್ಮಲ್ಲಿನ ಅಡಕೆ ಹಾಗೆಯೇ ಉಳಿಸಿಕೊ೦ಡಿದ್ದರು. 

ಇದನ್ನು ಸಹ ಓದಿ :  ಚೀಲೂರು ಡಬ್ಬಲ್​ ಅಟ್ಯಾಕ್! ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲಿನ ದಾಳಿಯಲ್ಲಿ ಯಾರೆಲ್ಲಾ ಆರೋಪಿಗಳು ಗೊತ್ತಾ? ಫಿಟ್ ಆದನಾ ಹೆಬ್ಬೆಟ್ಟು ಮಂಜಾ?

ಆದರೆ ದರ ಕುಸಿದಿದ್ದರಿಂದ 42-45 ಸಾವಿರ ರೂಪಾಯಿಗೆ ಅಡಕೆ ಮಾರಿದ್ದರು. ಇದೀಗ ಕಳೆದ ಐದಾರು ದಿನದಿಂದ ರಾಶಿಇಡಿ ಮಾದರಿಯ ಅಡಕೆ ಬೆಲೆ ಏರುತ್ತಿದ್ದು ಗುರುವಾರ 50 ಸಾವಿರ ರೂಪಾಯಿ .ದಾಟಿದೆ. 

ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಮಾದರಿಯ ಅಡಕೆ ಪ್ರತಿಕ್ವಿಂಟಾಲ್‌ ಗೆ50,000–82,503 ರೂಪಾಯಿ, ಬೆಟ್ಟೆ ಮಾದರಿಯ ಅಡಕೆ 46000 ದಿಂದ 54699 ರೂಪಾಯಿ ರಾಶಿಇಡಿ ಮಾದರಿಯ ಅಡಕೆ 33419-50,099 ರೂಪಾಯಿನಷ್ಟಿದೆ ಮತ್ತು ಗೊರಬಲು 18000 -36300 ರೂಪಾಯಿನಷ್ಟು ದಾಖಲಾಗಿತ್ತು. 

ಮೊಬೈಲ್​ ಕಳೆದುಕೊಂಡ ಬೆನ್ನಲ್ಲೆ ಅಕೌಂಟ್​ನಲ್ಲಿದ್ದ ಲಕ್ಷ ರೂಪಾಯಿನೂ ಮಾಯವಾಯ್ತು! ಹೀಗೂ ಮಾಡ್ತಾರೆ ಎಚ್ಚರ!

ಸೀದಾ ಕೆರೆಗೆ ಉರುಳಿದ ಬಿದ್ದ ನಾಟಾ ಸಾಗಿಸುತ್ತಿದ್ದ ಲಾರಿ

ನಾಟಾ ತುಂಬಿದ ಲಾರಿಯೊಂದು ಕೆರೆಗೆ ಉರುಳಿಬಿದ್ದ ಘಟನೆ ಸೊರಬ ತಾಲ್ಲೂಕಿನ ದೂಗೂರು ಸಮೀಪ ಸಂಭವಿಸಿದೆ.  ಘಟನೆಯಲ್ಲಿ ಚಾಲಕನಿಗೆ ಗಾಯಗಳಾಗಿವೆ. ನಿನ್ನೆ ಸಂಜೆ ಈ ಘಟನೆ ಸಂಭವಿಸಿದ್ದು, ದೂಗೂರು ರಸ್ತೆಯಲ್ಲಿ ಓಡಾಡುತ್ತಿದ್ದವರು, ಘಟನೆ ಬೆನ್ನಲ್ಲೆ ಚಾಲಕನನ್ನ ರಕ್ಷಿಸಿದ್ದಾರೆ. ಆತನನ್ನ ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ನಡೆದಿದ್ದೇಗೆ ಘಟನೆ? 

ಸೊರಬ ಕಡೆಯಿಂದ ಸಾಗರದತ್ತ ನಾಟಾ ತುಂಬಿಕೊಂಡು ಲಾರಿ ಸಾಗುತ್ತಿತ್ತು. ಉಳುವಿ- ದೂಗೂರು ನಡುವೆ ಇರುವ ಕೆರೆಯ ಬಳಿಯಲ್ಲಿ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದೆ. ಸ್ಥಳಕ್ಕೆ ಸೊರಬ ಠಾಣೆ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.