ಹುಣಸೋಡು ಸ್ಫೋಟ ಸೆಟಲೈಟ್ ರೇಡಾರ್ ನಲ್ಲಿ ಸೆರೆ ಹೇಗೆ ಗೊತ್ತಾ?

Hunsodu Shivamogga blast analysis

ಹುಣಸೋಡು ಸ್ಫೋಟ ಸೆಟಲೈಟ್ ರೇಡಾರ್ ನಲ್ಲಿ ಸೆರೆ ಹೇಗೆ ಗೊತ್ತಾ?
Hunsodu Shivamogga blast analysis

malenadutoday.com 23-01-2021 Hunsodu Shivamogga blast analysis / ಶಿವಮೊಗ್ಗ ಹೊರವಲಯದ ಹುಣಸೋಡು ಗ್ರಾಮದ ಎಸ್.ಎಸ್ ಕ್ರಷರ್ ನಲ್ಲಿ ಸಂಭವಿಸಿದ ಸ್ಟೋಟ ಸೆಟಲೈಟ್ ರೆಡಾರ್ ನಲ್ಲಿ ದಾಖಲಾಗಿದೆ.ಸೀಸ್ಮಾಲಜಿ ಮಿನಿಸ್ಟ್ರಿ ಆಫ್ ಅರ್ಥ್ ಸೈನ್ಸ್ ಗವರ್ನ್ ಮೆಂಚ್ (Seismology earth sciences govt of India) ಇದರ ಅಡಿಯಲ್ಲಿ ಬರುವ ನ್ಯಾಷನಲ್ ಸೆಂಟರ್ ಆಪ್ ಸೀಸ್ಮಾಲಜಿ(National centre of seismology) ವಿಭಾಗವು ಹುಣಸೋಡಿನಲ್ಲಿ ಸಂಭವಿಸಿದ ಸ್ಪೋಟಕ್ಕೆ Man made explosion detected ಎಂದು ದಾಖಲಿಸಿದೆ

ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿಯು ಭೂಕಂಪನ,ಪ್ರಕೃತಿ ವಿಕೋಪ,ವಾಲ್ಕೆನೋ,ಮಾಗ್ಮಾ ಮೂಮೆಂಟ್,ಲಾರ್ಜ್ ಲ್ಯಾಂಡ್ ಸ್ನೈಡ್ ,ಮ್ಯಾನ್ ಮೇಡ್ ಎಕ್ಸ್ ಪ್ಲೋಷನ್ ಗಳಾದಾಗ ಅಥವಾ ಆಗುವ ಮುನ್ನ ಮುನ್ನೆಚ್ಚರಿಕೆ ನೀಡಲು ದಿನದ 24 ಗಂಟೆ ಸೆಟಲೈಟ್ ರೆಡಾರ್ ಮೂಲಕ ಹದ್ದಿನ ಕಣ್ಣಿಟ್ಟಿರುತ್ತದೆ.

ಸಾಮಾನ್ಯ ಅವಘಡಗಳಾದಾಗ ಸೀಸ್ಮಾಲಜಿ ಮಿನಿಸ್ಟ್ರಿ ಮದ್ಯ ಪ್ರವೇಶಿಸುವುದಿಲ್ಲ.ರಾಷ್ಟ್ರೀಯ ವಿಪತ್ತಿಗೆ ಸರಿಸಮಾನವಾದಂತ ಅವಘಡಗಳಾದ ರೆಡಾರ್ ಇಂತಹ ಘಟನಾವಳಿಗಳನ್ನು ತಕ್ಷಣ ದಾಖಲಿಸಿಕೊಂಡು,ಘಟನೆಗೆ ಕಾರಣವನ್ನು ಪತ್ತೆ ಮಾಡುವ ಕಾರ್ಯ ಮಾಡುತ್ತೆ.ನೆನ್ನೆ ನಡೆದ ಘಟನೆಯನ್ನು ಭೂಕಂಪ ಎಂದು ಬಣ್ಣಿಸದೆ..ಅದೊಂದು ಮ್ಯಾನ್ ಮೇಡ್ ಎಕ್ಸ್ ಪ್ಲೋಷನ್ ಡಿಕೆಕ್ಟೆಡ್ ಎಂದು ದಾಖಲಿಸಿದೆ.

ಸ್ಪೋಟದ ತೀವ್ರತೆ.

21.01.2021 ರಂದು ರಾತ್ರಿ 10.30 ಕ್ಕೆ ಹುಣಸೋಡಿನ ಕಲ್ಲುಕ್ವಾರಿನಲ್ಲಿ ಲಾರಿಯಲ್ಲಿದ್ದ ಸ್ಪೋಟಕ ವಸ್ತುಗಳು ಸ್ಪೋಟಿಸಿದ ಪರಿ,ಮಲೆನಾಡಿನ ಜನರು ಎಂದೂ ಮರೆಯದಂತಾಗಿದೆ.ಸ್ಪೋಟದ ತೀವೃತೆ ಹೆಚ್ಚು ಕಡಿಮೆ ನೂರು ಕಿಲೋಮೀಟರ್ ವರೆಗೆ ವಿಸ್ತರಿಸಿದೆ.ಮಷ್ರೂಮ್ ಮಾದರಿಯ ಸ್ಟೋಟದಂತೆ ಸದ್ದು ಪ್ರತಿ ಮನೆಯ ಬಾಗಿಲು ತಟ್ಟಿದೆ.ಸ್ಟೋಟದ ತೀವೃತೆಯು ಸಾಮಾನ್ಯವಾಗಿರದ ಕಾರಣ,ಇದು ಅಟೋಮ್ಯಾಟಿಕ್ ಆಗಿ ಸೆಟಲೈಟ್ ರೆಡಾರ್ ನಲ್ಲಿ ದಾಖಲಾಗಿದೆ.ಈಗ ಹುಣಸೋಡಿನಲ್ಲಿ ಸಂಭವಿಸಿದ್ದು ಭೂಕಂಪನವಲ್ಲ ಎಂಬುದು ಸ್ಪಷ್ಟವಾಗಿದ್ದರೂ,ಸ್ಟೋಟಕ್ಕೆ ಕಾರಣ ಸ್ಟೋಟದಲ್ಲಿ ಬಳಕೆಯಾದ ವಸ್ತುಗಳ ಬಗ್ಗೆ ತನಿಖೆ ನಡೆಯುತ್ತಿದ್ದು,ಘಟನಾ ಸ್ಥಳದಲ್ಲಿ ಡಿಟೋನೇಟರ್,ಅಮೋನಿಯಂ ನೈಟ್ರೇಟ್ ಜೆಲ್ ಮತ್ತು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದೆ.