'4E'| ಹೊನ್ನಾಳಿ ಚಂದ್ರು ಸಾವಿಗೆ ಕಾರಣವಾಯ್ತಾ ‘4E’ | ವೈಜ್ಞಾನಿಕ ತನಿಖಾ ಸಾರಾಂಶದಲ್ಲಿ ಘಟನೆಗೆ ಸಿಗುತ್ತಿದೆಯಾ ಸಾಕ್ಷ್ಯ!

Is '4E' Responsible For Honnali Chandru's Death

'4E'| ಹೊನ್ನಾಳಿ ಚಂದ್ರು ಸಾವಿಗೆ ಕಾರಣವಾಯ್ತಾ ‘4E’ | ವೈಜ್ಞಾನಿಕ ತನಿಖಾ ಸಾರಾಂಶದಲ್ಲಿ ಘಟನೆಗೆ ಸಿಗುತ್ತಿದೆಯಾ ಸಾಕ್ಷ್ಯ!
Is '4E' Responsible For Honnali Chandru's Death

'4E'| ತುಂಗಾಕಾಲುವೆಯಲ್ಲಿ ಸಾವನ್ನಪ್ಪಿದ ರೇಣುಕಾಚಾರ್ಯರವರ ಸಹೋದರನ ಮಗ ಚಂದ್ರುರವರ ಸಾವಿನ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಇದು ಕೊಲೆಯೋ? ಅಪಘಾತವೋ ಎಂಬ ಚರ್ಚೆಗೆ ಬಿದ್ದ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಮಾತ್ರ ವೈಜ್ಞಾನಿಕ ತನಿಖಾ ತಳಹದಿಯಲ್ಲಿಯೇ ಪ್ರಕರಣವನ್ನು ಭೇದಿಸಲು ಮುಂದಾಗಿದೆ.

ಇದಕ್ಕೆ ಪೂರಕವಾಗಿ ಮಲೆನಾಡು ಟುಡೆ ತಂಡಕ್ಕೆ ಪೊಲೀಸ್ ತನಿಖಾ ಹಾದಿಯಲ್ಲಿ ಪರಿಗಣಿಸಲಾಗುವ ಒಂದು ಅಂಶದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಈ ಹಿಂದೆ ನಡೆದ ಘಟನೆಗಳು ಮತ್ತದರ ತನಿಖೆಗಳ ಸಂದರ್ಭದಲ್ಲಿ ಕಂಡು ಬಂದಿದ್ದ ಅಂಶಗಳು ಹಾಗೂ ಈ ಸಂಬಂಧ ತನಿಖಾ ರೆಕಾರ್ಡ್​ಗಳಲ್ಲಿ ಉಲ್ಲೇಖವಾಗಿರುವ ಅಂಶಗಳ ಪ್ರಕಾರ, ಪೊಲೀಸ್ ಇಲಾಖೆ 4E ಆ್ಯಂಗಲ್​ನಲ್ಲಿ ಪ್ರಕರಣವನ್ನು ಗಮನಿಸ್ತಿದ್ದಾರೆ. ಅದರ ವಿವರ ಇಲ್ಲಿದೆ ಓದಿ

ಹೊನ್ನಾಳಿ ಚಂದ್ರು ಸಾವಿಗೆ ಕಾರಣವಾಯ್ತಾ ‘4E’

ಪ್ರಕರಣವನ್ನು ಕೈಗೊತ್ತಿಕೊಂಡು ಸಮರ್ಪಕ ರಿಪೋರ್ಟ್​ ಕೊಡಲು ಮುಂದಾಗಿರುವ ವಿಧಿವಿಜ್ಞಾನ ಇಲಾಖೆಯು ಈ ನಿಟ್ಟಿನಲ್ಲಿ ಘಟನೆಯನ್ನು ನಾಲ್ಕು ಎನರ್ಜಿಗಳಲ್ಲಿ ಪರಿಶೀಲಿಸುತ್ತದೆ. acceleration energy, vibrational energy , Gravitational energy ,viscous energy ಗಳೇ ಆ ನಾಲ್ಕು ಎನರ್ಜಿಗಳು.. ಇವುಗಳನ್ನು ಫೋರ್ಸ್​ ಅಥವಾ ಒತ್ತಡ ಎಂಬರ್ಥದಲ್ಲಿಯು ಬಳಸಿಕೊಳ್ಳಬಹುದಾಗಿದೆ

ಏನಿವು?

ಆಗ್ಸಿಲೇಸರ್​ ಎನರ್ಜಿ ಎಂದರೆ ಸ್ಪೀಡ್, ಚಂದ್ರುರವರ ಗಾಡಿ ಆಕ್ಸಿಡೆಂಟ್ ಆಗುತ್ತಲೇ ಅದರ ಸ್ಪೀಡ್​ ಬೇರೆಯದ್ದೆ ಫೋರ್ಸ್​ ತೆಗೆದುಕೊಳ್ಳುತ್ತದೆ. ಚಂದ್ರುರವರ ನಿಯಂತ್ರಣದಲ್ಲಿದ್ದ ಸ್ಪೀಡ್​ ಮಿಸ್ ಆಗಿದೆ.

ಆನಂತರ, ವೈಬ್ರೇಷನ್​ ಎನರ್ಜಿ ಎಂದರೆ, ಆಕ್ಸಿಡೆಂಟ್ ಆದ ಬೆನ್ನಲ್ಲೆ, ಇಡೀ ಗಾಡಿ ವೈಬ್ರೇಟ್ ಆಗಿ ಮತ್ತೊಂದು ಫೋರ್ಸ್​ ತೆಗೆದುಕೊಳ್ಳುತ್ತದೆ. ಆಗ್ಸಿಲೇಸರ್​ ಎನರ್ಜಿ ಹಾಗೂ ವೈಬ್ರೇಷನ್​ ಎನರ್ಜಿಯಿಂದಾಗಿ ಗಾಡಿ ನೀರಿಗೆ ಬಿದ್ದು ಮೂವ್ ಆಗಿದೆ.

ಇದರ ಜೊತೆಯಲ್ಲಿ ಗ್ರಾವಿಟೇಷನಲ್​ ಎನರ್ಜಿ ಇಲ್ಲಿ ಕೆಲಸ ಮಾಡಿದೆ. ಅಂದರೆ ಗುರುತ್ವಾಕರ್ಷಣೆ ಫೋರ್ಸ್​, ಗಾಡಿಯಲ್ಲಿ ನೀರು ತುಂಬಿಕೊಳ್ಳುತ್ತಲೇ , ವಾಹನ ನೀರಿನೊಳಕ್ಕೆ ಇಳಿಯುತ್ತಾ ಹೋಗುತ್ತದೆ.

ಇಲ್ಲಿಯವರೆಗೂ ಚಂದ್ರು ತನ್ನೆಲ್ಲಾ ಶಕ್ತಿಯನ್ನು ಬಳಿಸಿ ವಾಹನದಿಂದ ಹೊರಕ್ಕೆ ಬರುವ ಪ್ರಯತ್ನ ನಡೆಸಿದ್ದರೂ ನಡೆಸಿರಬಹುದು. ಆದರೆ, ಮೇಲಿನ ಮೂರು ಎನರ್ಜಿಗಳ ನಡುವೆ, ನೀರಿನ ಫೋರ್ಸ್​ ​viscous energy ಎರ್ನರ್ಜಿಯಾಗಿ ಕನ್​ವರ್ಟ್ ಆಗುತ್ತದೆ.ಅಂದರೆ ವಾಹನದಲ್ಲಿ ತುಂಬುವ ನೀರಿನ ಒತ್ತಡ, ಅದರಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಒಂದು ಕಡೆ ತಳ್ಳುತ್ತದೆ.ಈ ಸನ್ನಿವೇಶದಲ್ಲಿ ಆತ ಭಯ ಪಟ್ಟು ತನ್ನೆಲ್ಲಾ ಶಕ್ತಿಯನ್ನು ಕಳೆದುಕೊಂಡು ಆತ ಸಾವಿಗೆ ಶರಣಾಗುತ್ತಾನೆ ಎನ್ನುತ್ತದೆ ವಿಧಿವಿಜ್ಞಾನದ ಮಾಹಿತಿ.

ಚಂದ್ರು ಸಾವಿನ ಘಟನೆ ಮತ್ತು 4E

ಚಂದ್ರು ಸಹ ಸ್ಪೀಡ್​ ಆಗಿ ಬರುತ್ತಿದ್ದ ವೇಳೆ ಮೈಲುಗಲ್ಲಿಗೆ ಗುದ್ದಿ, ತನ್ನ ಕಾರಿನ ನಿಯಂತ್ರಣವನ್ನು ಕಳೆದುಕೊಂಡಿರಬಹುದು.ಆ ಸಂದರ್ಭದಲ್ಲಿ ಅಪಘಾತದ ರಭಸ ಹಾಗೂ ಅದಕ್ಕೂ ಮೊದಲು ಇದ್ದ ವಾಹನದ ವೇಗದಿಂದ, ಕ್ರೆಟಾ ಕಾರು ನಿಯಂತ್ರಣ ಕಳೇದುಕೊಂಡು ಚಾನಲ್​ಗೆ ನುಗ್ಗಿರಬಹುದು.ನೀರಿಗೆ ಬಿದ್ದ ಫೋರ್ಸ್​ನಿಂದಲೇ ನೀರು ರಭಸವಾಗಿ ಒಳಕ್ಕೆ ನುಗ್ಗಿರುವ ಸಾಧ್ಯತೆ ಇದೆ.ಅದರ ರಭಸ ಹಾಗೂ ಗ್ರಾವಿಟೇಷನ್​ ಪವರ್​ನ ನಡುವೆ ಚಂದ್ರು ಹೊರಕ್ಕೆ ಬರಲಾಗದೇ ಉಸಿರು ಚೆಲ್ಲಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ವಿಧಿವಿಜ್ಞಾನದ ತನಿಖಾ ಹಂತದಲ್ಲಿ ಸಿಗುವ ಮಾಹಿತಿಯು ಒಂದು ಕಡೆಯಾಗಿದ್ದು, ಡಯಾಟಮ್​ ಟೆಸ್ಟ್​ನಲ್ಲಿಯು ಚಂದ್ರುರವರ ಸಾವಿಗೆ ಕಾರಣವಾದ ಘಟನೆಯ ಬಗ್ಗೆ ಮಾಹಿತಿಯು ಲಭ್ಯವಾಗುತ್ತದೆ.ಒಟ್ಟಾರೆ, ಈ ಹೈಟೆಕ್ನಾಲಿಜಿ ವಿಧಿವಿಜ್ಞಾನದ ಅಂಶಗಳು ಹಾಗೂ ಕ್ರಿಮಿನಾಲಿಜಿಯ ಅಡಿಯಲ್ಲಿ ಪೊಲೀಸರು ಪ್ರಕರಣವನ್ನು ಭೇದಿಸುತ್ತಿದ್ದು, ಸದ್ಯದಲ್ಲಿಯೇ ಘಟನೆ ಬಗ್ಗೆ ಒಂದು ತಾರ್ಕಿಕ ಅಂತ್ಯಕ್ಕೆ ಬರುವ ಸಾಧ್ಯತೆ ಇದೆ.