meter auto | ಶಿವಮೊಗ್ಗ ಸಿಟಿಯಲ್ಲಿ ಆಟೋಗಳಿಗೆ ಮೀಟರ್​ ಕಡ್ಡಾಯ! ಪೊಲೀಸ್ ಇಲಾಖೆಯ ಲಾಸ್ಟ್ ವಾರ್ನಿಂಗ್​!

 MALENADUTODAY.COM | SHIVAMOGGA  | #KANNADANEWSWEB

meter auto | ಶಿವಮೊಗ್ಗ ನಗರದಲ್ಲಿ ಆಟೋಗಳಿಗೆ ಮೀಟರ್ ಕಡ್ಢಾಯ (meter auto) ಎಂದು ಈಗಾಗಲೇ ಶಿವಮೊಗ್ಗ ಪೊಲೀಸ್​ ಇಲಾಖೆ (shivamogga police) ಸ್ಪಷ್ಟಪಡಿಸಿತ್ತು. ಈ ಸಂಬಂಧ ಜಿಲ್ಲಾಡಳಿತ ಹಾಗೂ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಆಟೋಚಾಲಕರ ಹಾಗೂ ಮಾಲೀಕರ ಸಭೆ ಕರೆದು ದರ ಪರಿಷ್ಕರಣೆ ಮತ್ತು ಮೀಟರ್ ಅಳವಡಿಕೆಯ ಬಗ್ಗೆ ಸ್ಪಷ್ಟ ನಿರ್ಧಾರಗಳಿಗೆ ಬಂದು ಆ ನಿಯಮಗಳನ್ನು ಜಾರಿಗೆ ತರಲು ಕಾಲಮಿತಿಯನ್ನು ನೀಡಿತ್ತು. 

READ | ರಾಜ್ಸ ಸರ್ಕಾರಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕಂದಾಯ ಇಲಾಖೆ ನೌಕರರ ಸಂಘ ಬೆಂಬಲ

ಇದರ ಮುಂದುವರಿದ ಭಾಗವಾಗಿ ಇದೀಗ  ಶಿವಮೊಗ್ಗ ನಗರ ಸಂಚಾರ ವೃತ್ತ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ (Shivamogga traffic circle police station) ಮೀಟರ್​ ಅಳವಡಿಕೆಗೆ ಕೊನೆಯ ಎಚ್ಚರಿಕೆಯನ್ನು ನೀಡಲಾಗಿದೆ. ಈ ಸಂಬಂಧ ನಿನ್ನೆ   ಶಿವಮೊಗ್ಗ ಸಂಚಾರ ವೃತ್ತ ಸಿಪಿಐ  ಜಯಶ್ರೀ ಎಸ್ ಮಾನೆ  ಶಿವಮೊಗ್ಗ ನಗರದ  ಆಟೋ ಸಂಘದ ಅಧ್ಯಕ್ಷರು/ ಪದಾಧಿಕಾರಿಗಳು ಮತ್ತು ಆಟೋ ಮಾಲೀಕರು  / ಚಾಲಕರುಗಳ ಸಭೆಯನ್ನು ನಡೆಸಿದ್ದಾರೆ. 

Malenadu Today

READ | ಹುಟ್ಟಿನಿಂದಾದ ಕಿವುಡುತನಕ್ಕೆ ಶಾಶ್ವತ ಪರಿಹಾರ ನೀಡಿದೆ ಈ ಚಿಕಿತ್ಸೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ

ಈ ವೇಳೆ ಪ್ಯಾಸೆಂಜರ್ ಆಟೋ ಗಳಿಗೆ   ಕಡ್ಡಾಯವಾಗಿ  ಆಟೋ ಮೀಟರ್ ಗಳನ್ನು ಅಳವಡಿಸುವಂತೆ  ಸೂಚನೆಯನ್ನು ನೀಡಿದ್ದು, ಒಂದು ವೇಳೆ  ಮುಂದಿನ ದಿನಗಳಲ್ಲಿಯೂ ಸಹ ಆಟೋಗಳಿಗೆ ಮೀಟರ್ ಗಳನ್ನು ಅಳವಡಿಸಿಕೊಳ್ಳದೆ  ಚಾಲನೆ ಮಾಡುತ್ತಿರುವುದು ಕಂಡು ಬಂದಲ್ಲಿ  ಅಂತಹ ಆಟೋಗಳನ್ನು ತಡೆದು ಪೊಲೀಸ್ ವಶಕ್ಕೆ ಪಡೆದು ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ. 

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga 

ಈದಿನ CPIಶಿವಮೊಗ್ಗ ಸಂಚಾರವೃತ್ತ ರವರು ಆಟೋ ಸಂಘದ ಅಧ್ಯಕ್ಷರು/ಪದಾಧಿಕಾರಿಗಳ/ಮಾಲೀಕರ/ಚಾಲಕರ ಸಭೆ ನಡೆಸಿ ಆಟೋ ಮೀಟರ್ ಅಳವಡಿಸುವಂತೆ ಸೂಚನೆ ನೀಡಿ, ಮೀಟರ್ ಅಳವಡಿಸದೆ ಚಾಲನೆ ಮಾಡುತ್ತಿರುವುದು ಕಂಡು ಬಂದಲ್ಲಿ ತಡೆದು ಪೊಲೀಸ್ ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿರುತ್ತಾರೆ @alokkumar6994 @DgpKarnataka pic.twitter.com/FTAcWf8Jy0

— SP Shivamogga (@Shivamogga_SP) February 28, 2023

Leave a Comment