ಸೋದರಿ ಪ್ರೀತಿಸಿದ ಯುವಕನಿಗೆ ಚಾಕುವಿನಿಂದ ಇರಿದ ಸಹೋದರ!
Brother stabbed a young man who was loved by his sister ಶಿರಾಳಕೊಪ್ಪ ಪೊಲೀಸ್ ಸ್ಟೇಷನ್ , Shiralakoppa Police Station
Shivamogga Mar 8, 2024 ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದಲ್ಲಿ ನಿನ್ನೆ ರಾತ್ರಿ ಒಬ್ಬ ಯುವಕನಿಗೆ ಚಾಕುವಿನಿಂದ ಇರಿಯಲಾಗಿದೆ. ಈ ಸಂಬಂಧ ಶಿರಾಳಕೊಪ್ಪ ಪೊಲೀಸ್ ಸ್ಟೇಷನ್ ನಲ್ಲಿ ಕೇಸ್ ಸಹ ದಾಖಲಾಗಿದೆ.
ಶಿರಾಳಕೊಪ್ಪ ಪೊಲೀಸ್ ಸ್ಟೇಷನ್
ಇಲ್ಲಿನ ನಿವಾಸಿಗಳಾದ ಯುವಕ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಈ ಸಂಬಂಧ ನಿಶ್ಚಿತಾರ್ಥವೂ ನಿಕ್ಕಿಯಾಗಿತ್ತು. ಆದರೆ ಯುವತಿಯ ಸಹೋದರನಿಗೆ ಆಕೆ ಪ್ರೀತಿಸಿದವನನ್ನ ಮದುವೆಯಾಗುವುದು ಇಷ್ಟವಿರಲಿಲ್ಲ. ಈ ಕಾರಣಕ್ಕೆ ವಿರೋಧಿಸಿದ್ದ. ಅಲ್ಲದೆ ಇದೇ ಕಾರಣಕ್ಕೆ ಯುವಕನಿಗೆ ಯುವತಿಯ ಸಹೋದರನೇ ಚಾಕು ಇರಿದು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಕೇಸ್ ದಾಖಲಿಸಿರುವ ಪೊಲೀಸರು ಕೇಸ್ನ ತನಿಖೆ ನಡೆಸ್ತಿದ್ದಾರೆ