unde kadubu recipe/ ಮಲೆನಾಡ Exclusive ತಿಂಡಿ ವಿಶೇಷವೇನು?/ ಅಕ್ಕಿ ಉಂಡೆ ಕಡುಬಿಗೇಕೆ ಇಷ್ಟೊಂದು ಪ್ರಖ್ಯಾತಿ?

unde kadubu recipe/ What is special about Malnad Exclusive snack?/ Why is rice balls so famous?

unde kadubu recipe/ ಮಲೆನಾಡ Exclusive ತಿಂಡಿ ವಿಶೇಷವೇನು?/ ಅಕ್ಕಿ ಉಂಡೆ ಕಡುಬಿಗೇಕೆ ಇಷ್ಟೊಂದು ಪ್ರಖ್ಯಾತಿ?
unde kadubu recipe

unde kadubu recipe  Shivamogga/ ಶಿವಮೊಗ್ಗ /  ಉಂಡೆ ಕಡಬು ಪಶ್ಚಿಮ ಘಟ್ಟದಲ್ಲಿನ ಮಲೆನಾಡಿನ ಕೆಲ ಪ್ರದೇಶದಲ್ಲಿ ಈ ಪರಿ ಖ್ಯಾತಿ ಪಡೆಯಲು ಕಾರಣ ಏನಿರಬಹುದು?

 ತಾವು ಬೆಳೆಯುವ ಅಕ್ಕಿ ಕಾರಣವಾ? ಇಡ್ಲಿ, ದೊಸೆ ಮತ್ತು ರೊಟ್ಟಿಯಷ್ಟು ಶ್ರಮ ಇಲ್ಲವ೦ತನಾ? ಚಟ್ನಿ, ಸಾರು, ಮೀನು ಮತ್ತು ಮಾಂಸದ ಅಡುಗೆಗೆ ಒಳ್ಳೆ ಕಾಂಬಿನೇಷನ್ ಅಂತಾನಾ? ಹೀಗೆ ಹಲವು ಪ್ರಶ್ನೆಗಳಿದೆ.

ಮಲೆನಾಡು ವೈರಲ್​ ತಿಂಡಿ

ಮಲ್ನಾಡು_ಕಾರ್ಟೂನ್ ನಲ್ಲಿ "ಅಮ್ಮಾ ... ಇವತ್ತೇನೆ ?" ಅನ್ನೋ ಉಂಡೆ ಕಡಬು ಪ್ರಸಂಗ ಬಾರೀ ವೈರಲ್ಲೂ ಆಗಿತ್ತು.

ಈಶಾನ್ಯ ಭಾರತ, ಗುಜರಾತ್ ಮತ್ತು ಪಂಜಾಬ್ ಅಡುಗೆಯಲ್ಲಿ ಅಕ್ಕಿಯ ಬೇರೆ ರೀತಿ ಕಡಬು ಇದೆ ಆದರೆ ನಮ್ಮ ಪಶ್ಚಿಮ ಘಟ್ಟ ಪ್ರದೇಶದ ಮಲೆನಾಡಿನ ಶಿವಮೊಗ್ - ಚಿಕ್ಕ ಮಗಳೂರು - ಕೊಡಗು ಭಾಗದ ಈ ಉಂಡೆ ಕಡಬು ಕಾಣಬರುವುದಿಲ್ಲ ಹಾಗಾಗಿ ಇದು ಈ ಭಾಗದ exclusive ತಿಂಡಿಯೇ ಸರಿ.

ಮಲೆನಾಡಿನ ಕೃಷಿಕರ ಮನೆಯಲ್ಲಿ ನಿತ್ಯ ಉಪಹಾರ ಅಕ್ಕಿ ಉಂಡೆ ಕಡಬು ಇದಕ್ಕೆ ನಂಜಿಕೊಳ್ಳುವ ವ್ಯಂಜನ ಮಾತ್ರ ಬದಲಾಗುತ್ತದೆ.

unde kadubu / ಉಂಡೆ ಕಡುಬು ಮತ್ತೆ ಮಲೆನಾಡು

ಈ ಕಾರಣಕ್ಕೆ ಈ ಭಾಗದ ಮಕ್ಕಳು ಉಂಡೆ ಕಡಬು ಅಂದರೆ ಉರಿದು ಬೀಳುತ್ತಾರೆ,  ಅಕ್ಕಿ ತುರಿ ಉಪ್ಪಿನೊಂದಿಗೆ ಬೇಯಿಸಿ ಉಂಡೆ ಕಟ್ಟಿ ಇಡ್ಲಿ ಪಾತ್ರೆಯಲ್ಲಿಟ್ಟರೆ ಆಯಿತು

ಅದಾಗೆ ಬೆಂದು ಉಂಡೆ ಕಡಬು ಆಗುವ ಸುಲಭ ಅಡಿಗೆಗೆ ಗೃಹಿಣಿಯರು ಅವಲಂಬಿಸಿರುವುದರಿಂದ ಬೇರೆ ಉಪಹಾರ ತಯಾರಿಸುವ ಶ್ರಮ ಅವರಿಗೆ ಇಷ್ಟ ಇರುವುದಿಲ್ಲ.

ಮಡಿಕೇರಿ, ಚಿಕ್ಕಮಗಳೂರು ಭಾಗದ ಹೊಂ ಸ್ಟೇ ಗೆ ಬರುವ ಪ್ರವಾಸಿಗಳಿಂದ ಈ ಮಲೆನಾಡ ಕ್ಯೂಸಿನ್ ಉಂಡೆ ಕಡಬು ಪಂದಿ ಕರಿ, ಉಂಡೆ ಕಡಬು ಚಿಕನ್, ಉಂಡೆ ಕಡಬು ಕಳಲೆ ಪಲ್ಯಕ್ಕೆ ಹೆಚ್ಚು ಬೇಡಿಕೆ ಉಂಟಂತೆ.ಇದೊಂದು ರೀತಿ ಬ್ರೆಡ್ ರೀತಿ ಎಲ್ಲಾ ರೀತಿ ಆಹಾರಕ್ಕೂ ಹೊಂದುತ್ತದೆ.    

ಈ ಅಂಕಣ ಬರಹ ಹಾಗೂ ಮೂಲ : ಅರುಣ್​ ಪ್ರಸಾದ್​ ಮತ್ತು ಅವರ ಬ್ಲಾಗ್​ (ವರದಿಯ ಸಂಪೂರ್ಣ ಹಕ್ಕುಸ್ವಾಮ್ಯ ಅರುಣ್​ಪ್ರಸಾದ್​ರವರದ್ದೇ ಆಗಿರುತ್ತದೆ. ಅವರ ಸಮ್ಮತಿಯೊಂದಿಗೆ ಬರಹವನ್ನು ವರದಿ ಮಾಡುತ್ತಿದ್ದೇವೆ)