Snake kiran shivamogga/15 ಸಾವಿರಕ್ಕೂ ಹೆಚ್ಚು ಹಾವು ಹಿಡಿದ ಈತನಿಗೆ ಗೊತ್ತಿದ್ಯಾ ನಾಗರ ಭಾಷೆ? ಸ್ನೇಕ್​ ಕಿರಣ್​ ಬಗ್ಗೆ ಇಲ್ಲಿದೆ ವಿಶೇಷ ಸ್ಟೋರಿ

snake kiran shimoga phone number

Snake kiran shivamogga/15 ಸಾವಿರಕ್ಕೂ ಹೆಚ್ಚು ಹಾವು ಹಿಡಿದ ಈತನಿಗೆ ಗೊತ್ತಿದ್ಯಾ ನಾಗರ ಭಾಷೆ?  ಸ್ನೇಕ್​ ಕಿರಣ್​ ಬಗ್ಗೆ ಇಲ್ಲಿದೆ ವಿಶೇಷ ಸ್ಟೋರಿ
snake kiran shimoga phone number

snake kiran shimoga phone number ಉತ್ತಮ ಬದುಕನ್ನು ಅರಸಿಕೊಳ್ಳುವ ಎಲ್ಲಾ ಅವಕಾಶಗಳು ಆತನಿಗಿತ್ತು. ಆದರೆ ಆತ ಸಾವಿನೊಂದಿಗೆ ಚೆಲ್ಲಾಟವಾಡೋ ಆ ಕಲೆಯನ್ನು ಮೈಗೂಡಿಸಿಕೊಂಡಿದ್ದ. ಇದು  ನಿಜಕ್ಕೂ ರೋಮಾಂಚಕ.ಕಿರಿ ವಯಸ್ಸಿನಲ್ಲಿ ಆತನ ಕೈಯಲ್ಲಿ ಸೆರೆಯಾಗಿದ್ದು ಬರೋಬ್ಬರಿ ಹದಿನೈದು ಸಾವಿರಕ್ಕೂ ಅಧಿಕ ಹಾವುಗಳು.ಸಾವಿರ ಹಾವುಗಳ ಸರದಾರನಿಗೆ ಹಾವುಗಳು ಮೂರು ಬಾರಿ ಕಚ್ಚಿದರೂ ಆತ ವಿಷಕಂಠನಾಗಿಯೇ ಬದುಕುಳಿದಿದ್ದ.ಶಿವಮೊಗ್ಗದ ಜನರ ಪಾಲಿಗೆ ನಿರ್ಭಯನಾಗಿರೋ ಆ ಯುವಕ ಯಾರು ಅಂತಿರಾ ಇದೇ ಈ ಇವತ್ತಿನ ವಿಶೇಷ ಸ್ನೇಕ್  ಕಿರಣ್.

ಹಾವುಗಳು ಕಚ್ಚಿದರೂ ಬದುಕಿಸಿತ್ತು ಆತನ ಪ್ರಾಣ.

ಸ್ನೇಕ್ ಕಿರಣ್..,ಶಿವಮೊಗ್ಗ ಜಿಲ್ಲೆಯ ಸುತ್ತಮುತ್ತ ಮನೆ ಮಾತಾಗಿರುವ ಹೆಸರು.ಯಾವುದೇ ಸರ್ಕಾರಿ ಕಛೇರಿಗಳಿರಲಿ…ಕಾಡಿನಂಚಿನ ಮನೆಗಳಿರಲಿ..ಆತನ ಫೋನ್ ನಂಬರ್ ಮೊಬೈಲ್ ನಲ್ಲಿ ಸೇವ್ ಆಗಿರುತ್ತೆಇದಕ್ಕೆ ಕಾರಣ..ಹಾವುಗಳನ್ನು ಹಿಡಿಯುವ ಕಲೆಯಲ್ಲಿ ಕಿರಣ್ ಪ್ರವೀಣನಾಗಿರುವುದು.ಹೌದು ಸ್ನೇಕ್ ಕಿರಣ್ ವಿಷಪೂರಿತ ಹಾವುಗಳನ್ನು ಹಿಡಿಯುವುದರಲ್ಲಿ ನಿಷ್ಣಾತ ಚಾಣಾಕ್ಷ.ಕೇವಲ ಹತ್ತು ವರ್ಷಗಳ ಅವಧಿಯಲ್ಲಿ ಕಿರಣ್ ಸೆರೆಹಿಡಿದ ಹಾವುಗಳು ಬರೋಬ್ಬರಿ ಆರು ಸಾವಿರಕ್ಕೂ ಅಧಿಕ ಎಂದರೆ ನಿಮಗೆ ಅಚ್ಚರಿಯಾಗಬಹುದು. ಕಾಳಿಂಗ ಸರ್ಪ,ನಾಗರಹಾವು, ಕನ್ನಡಿಹಾವು, ಮಿಡಿನಾಗರ, ಬಿಳಿನಾಗರ, ಕೆರೆಬಡಕದಂತ ಸಾವಿರಾರು ಹಾವುಗಳನ್ನು ಹಿಡಿದ ಹೆಗ್ಗಳಿಕೆ ಈತನಿಗಿದೆ.ಸಾವಿರಾರು ಹಾವುಗಳನ್ನು ಹಿಡಿದ ಸರದಾರನಿಗೂ  ಸಾವಿನ ಮನೆ ಕದತಟ್ಟುವಂತೆ ಮಾಡಿದೆ ಸೆರೆಹಿಡಿಯಲ್ಪಟ್ಟ ಹಾವುಗಳು. ಕಿರಣ್ ಹಾವುಗಳನ್ನು ಹಿಡಿಯುವಾಗ ಎಷ್ಟೇ ಎಚ್ಚರ ವಹಿಸಿದ್ರೂ ಮೂರು ಬಾರಿ ಹಾವಿನ ಕಡಿತಕ್ಕೆ ಒಳಗಾಗಿ ಸಾವನ್ನು ಗೆದ್ದು ಬಂದಿದ್ದಾನೆ.

ಮೂರು ಬಾರಿ ಕಚ್ಚಿದ ನಾಗರಹಾವು

ಸಾವಿರಾರು ಹಾವುಗಳನ್ನು ಹಿಡಿದಿರುವ ಸ್ನೇಕ್ ಕಿರಣ್ ಗೆ  ಮೂರು ಬಾರಿ ನಾಗರಹಾವುಗಳೇ ಕಚ್ಚಿ ಸಾವಿನಂಚಿಗೆ ದೂಡಿದ್ದವು.ಶಿವಮೊಗ್ಗದ ಜೈನ್ ಭವನದಲ್ಲಿ ಹಾವು ಹಿಡಿಯಲು ಹೋದಾಗ ಮಿಡಿನಾಗರ ಕಚ್ಚಿತ್ತು. ಈ ಸಂದರ್ಭದಲ್ಲಿ ಕಿರಣ್ ಸಾವಿನಿಂದ ಪಾರಾಗಿದ್ದ.ನಂತರ ಹರಿಗೆ ಬಳಿ ಬಿಳಿನಾಗರ ಹಾವನ್ನು ಹಿಡಿದಾಗ ಅದೇ ಹಾವು ಕಿರಣ್ ಕೈ ಕಚ್ಚಿ ಘಾಸಿಗೊಳಿಸಿತ್ತು.ಅಂದು ಹೆಚ್ಚು ವಿಷವೇರಿದ್ದರಿಂದ ಕಿರಣ್ ಬದುಕುವುದೇ ದುಸ್ತರ ಎಂದು ವೈದ್ಯರು ಕೂಡ ಭಾವಿಸಿದ್ದರು.ಎರಡು ಬಾರಿ ಹಾವಿನಿಂದ ಕಚ್ಚಿಸಿಕೊಂಡ ಕಿರಣ್ ಹಾವು ಹಿಡಿಯುವುದನ್ನು ಬಿಡುತ್ತಾನೆಂದೇ ಎಲ್ಲರೂ ಭಾವಿಸಿದ್ದರು.ಎರಡು ಬಾರಿ ಹಾವುಗಳಿಂದ ಕಚ್ಚಿಸಿಕೊಂಡ ನಂತರವೂ ಕಿರಣ್, ನೂರಾರು ವಿಷಪೂರಿತ ಹಾವುಗಳನ್ನು ಸೆರೆಹಿಡಿದು ಅರಣ್ಯ ಇಲಾಖೆಯ ಸಮ್ಮುಖದಲ್ಲಿ ಕಾಡಿಗೆ ಬಿಟ್ಟಿದ್ದ

ಮೂರನೇ ಭಾರೀ ಆಘಾತ ಮೂಡಿಸಿದ್ದು ಸ್ನೇಕ್ ಅಟ್ಯಾಕ್​

ಆದರೆ ಮೂರನೇ ಬಾರಿ ಶಿವಮೊಗ್ಗದ ಕೋಟೆ ರಸ್ತೆಯ ಮನೆಯೊಂದರಲ್ಲಿ  ನಾಗರಹಾವು ಇದೆ ಎಂದು ಗೊತ್ತಾದ ಜಾಗದಲ್ಲಿ ಕಿರಣ್ ಸಹಜವಾಗಿಯೇ ತಗಡಿನ ಶೀಟ್ ಕೆಳಗೆ ಕೈಹಾಕಿದ್ದಾನೆ ಅಷ್ಟೆ.ಆ ಸಂದರ್ಭದಲ್ಲಿ ಬಾಲ ಮಾತ್ರ ಸಿಕ್ಕಿದೆ. ಆದರೆ ಅಷ್ಟರೊಳಗೆ ತಗಡಿನ ಶೀಟ್ ನಲ್ಲಿದ್ದ ನಾಗರಹಾವಿನ ಮುಖ ಮೇಲ್ಬಾಗಕ್ಕೆ ಬಂದಿತ್ತು.ಕಿರಣ್ ಗೆ ಯಮನೆ ಎದುರಾದಂತೆ ನಾಗರಹಾವು ಆತನನ್ನು ತಪ್ಪಿಸಿಕೊಳ್ಳದಂತೆ ಆವರಿಸಿತ್ತು. ಬಾಲ ಹಿಡಿದುಕೊಂಡಿದ್ದವನ ಕೈಗೆ ಅದು ಬಲವಾಗಿ ಕಚ್ಚಿತು ಅಷ್ಟೆ.ಮೂರನೇ ಬಾರಿ ನಾಗಹಾವಿನಿಂದ ಕಚ್ಚಿಸಿಕೊಂಡ ಕಿರಣ್ ಸೀದಾ ಆಸ್ಪತ್ರೆಗೆ ಸೇರಿ ಸಾವಿನ ದವಡೆಯಿಂದ ಪಾರಾಗಿದ್ದ.ಆದ್ರೆ ಇಷ್ಟೊತ್ತಿಗಾಗಲೇ ಕೆಲ ಕಿಡಿಗೇಡಿಗಳು ವಾಟ್ಸಾಪ್ ಪೇಸ್ ಬುಕ್ ಗಳಲ್ಲಿ ಕಿರಣ್ ಸಾವನ್ನಪ್ಪಿದ ಎಂದು ಸುಳ್ಳು ಸುದ್ದಿ ಹರಡಿಸಿದ್ದರು.ಆದ್ರೆ ಸುಳ್ಳು ಸುದ್ದಿಯೇ ಕಿರಣ್ ಗೆ ಬದುಕುಳಿಯಲು ಆಮ್ಲಜನಕವಾಯಿತಷ್ಟೆ. ಕಿರಣ್ ನಂತರ ದೇವರ ದಯೆದಿಂದ ಬದುಕುಳಿದ.

Snake kiran shivamogga /ಗ್ಯಾರೇಜ್ ನಲ್ಲಿದ್ದವನ ಬದುಕು ಬದಲಿಸಿತು.

ಹೌದು ಕಿರಣ್ ವೃತ್ತಿಯಲ್ಲಿ ಮುಂದುವರೆದಿದ್ದರೆ ಇಂದು ಗ್ಯಾರೇಜ್ ನಲ್ಲಿ ಕೆಲಸ ಮಾಡುವ ಮೆಕ್ಯಾನಿಕ್ ಆಗಿರುತ್ತಿದ್ದ.ಆದರೆ ಆತ ಬಯಸಿ ಆರಸಿಕೊಂಡ ವೃತ್ತಿ ಹಾವು ಹಿಡಿಯುವ ಕೆಲಸ,ಸಣ್ಣ ವಯಸ್ಸಿನಲ್ಲಿಯೇ ಸಣ್ಣಪುಟ್ಟ ಹಾವುಗಳನ್ನು ಹಿಡಿಯುತ್ತಿದ್ದ ಕಿರಣ್ ಹಾವು ಹಿಡಿಯುತ್ತಿದ್ದ ಪರಿ ಎಲ್ಲರನ್ನು ಆಕರ್ಷಿಸುವಂತೆ ಮಾಡಿತು.ಈ ಸಂದರ್ಭದಲ್ಲಿ ಸ್ಪಾನರ್ ಕೆಳಗಿಟ್ಟ ಕಿರಣ್,ಹಾವುಗಳನ್ನು ಹಿಡಿಯುವ ವೃತ್ತಿಯನ್ನೇ ಆಯ್ಕೆ ಮಾಡಿಕೊಂಡ.ಶಿವಮೊಗ್ಗ ಹೇಳಿ ಕೇಳಿ..ಅರಣ್ಯ ಪ್ರದೇಶವನ್ನು ಹೊಂದಿಕೊಂಡಿರುವ ನಗರ. ಇಲ್ಲಿ ಸಿಟಿ ಬಿಟ್ಟು ಐದು ಕಿಲೋಮೀಟರ್ ದಾಟಿದರೂ ಕಾಡು ಸಿಗುತ್ತದೆ.ಹೀಗಾಗಿ ಇಲ್ಲಿ ಹಾವುಗಳು ಸಹಜವಾಗಿಯೇ ಹೆಚ್ಚಿದೆ. ಅದರಲ್ಲೂ ಕಾಳಿಂಗ ಸರ್ಪಗಳು ಮಲೆನಾಡನ್ನು ಕಾರಿಡಾರ್ ನಂತೆ ಮಾಡಿಕೊಂಡಿದೆ .ಆಹಾರ ಹುಡುಕುತ್ತಲೋ ಅಥವಾ ಸಂತಾನೋತ್ಪತ್ತಿಗೆ ಜಾಗ ಹುಡುಕಿಕೊಂಡು ಬರುವ ಕಾಳಿಂಗ ಸರ್ಪಗಳು ಮನೆ ಇಲ್ಲವೇ ಕೊಟ್ಟಿಗೆಯನ್ನು ಪ್ರವೇಶಿಸಿಬಿಡುತ್ತವೆ.ಇಂತಹ ಸಂದರ್ಭದಲ್ಲಿ ಹಾವನ್ನು ಹಿಡಿಯಲು ಕಿರಣ್ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ಸ್ನೇಕ್​ ಕಿರಣ್​ಗೆ ವೈಜ್ಞಾನಿಕವಾಗಿ ಹಾವು ಹಿಡಿಯಲು ಹೇಳಿಕೊಟ್ಟಿದ್ದು ಯಾರು ಗೊತ್ತಾ?

ಕಿರಣ್ ಹಾವನ್ನು ಇನ್ನು ವೈಜ್ಞಾನಿಕವಾಗಿ ಸೆರೆ ಹಿಡಿಯಲು , ಆಗುಂಬೆ ಮಳೆಕಾಡು ಸಂಶೋಧನೆ ಮತ್ತು ಅಧ್ಯಯನ ಕೇಂದ್ರದಲ್ಲಿದ್ದ ಉರಗ ತಜ್ಞ ಗೌರಿ ಶಂಕರ್ ನೆರವು ಪಡೆದ.ಗೌರಿ ಶಂಕರ್ ಕಾಳಿಂಗ ಸರ್ಪ ಹಿಡಿಯುವ ಕಲೆಯನ್ನು ಈತನಿಗೆ ಕರಗತ ಮಾಡಿಕೊಟ್ಟರು .ನಂತರ ಅಧಿಕೃತವಾಗಿ ಫಿಲ್ಡ್ ಗೆ ಎಂಟ್ರಿಯಾದ ಕಿರಣ್ ಮತ್ತೆಂದು ವೃತ್ತಿಗೆ ಬೆನ್ನು ತೋರಿಸಿ ಹೋಗಲೇ ಇಲ್ಲ.ಸ್ನೇಕ್ ಕಿರಣ್ ಹಾವುಗಳನ್ನು ಹಿಡಿಯುವುದನ್ನು ವೃತ್ತಿಯನ್ನಾಗಿ ಸ್ವೀಕರಿಸಿದ್ದಕ್ಕಿಂತ ಆತ ಆ ಕಲೆಯನ್ನು ಪ್ರೀತಿಸಿದ್ದೇ ಹೆಚ್ಚು.ಆತ ಎಂತಹ ವಿಷಪೂರಿತ ಹಾವುಗಳೇ ಇರಲಿ, ಅವುಗಳಿಗೆ ತೊಂದರೆ ಕೊಡದಂತೆ ತಾಳ್ಮೆಯಿಂದ ಅವುಗಳ ಚಲವ ವಲನವನ್ನು ಅವಲೋಕಿಸುತ್ತಾನೆ.ಹಾವು ಹಸಿದಿದೆಯಾ, ಅಥವಾ ಹೊಟ್ಟೆ ತುಂಬಿ ಆರಾಮಾಗಿ ಮಲಗಿದೆಯಾ,ಅಥವಾ ಅದು ಹೆದರಿದೆಯಾ..,ಆಕ್ರಮಣಶಾಲಿಯಾಗಿದೆಯಾ ಎಂಬುದನ್ನು ಕಿರಣ್ ಸ್ಥಳದಲ್ಲೇ ಅವಲೋಕಿಸಬಲ್ಲ ಚಾಣಾಕ್ಷ.ಯಾವುದೇ ಹಾವು ಅನಾಯಾಸವಾಗಿ ಹಿಡಿಯುವ ಸಂದರ್ಭವಿದ್ದರೂ ಆತ ಹಿಡಿಯಲು ಆತುರ ತೋರುವುದಿಲ್ಲ.

ಹಾವನ್ನು ಪ್ರೀತಿಯಿಂದಲೇ ಅದನ್ನು ದಿಟ್ಟಿಸಿ ನೋಡುತ್ತಾ, ಕೈಯನ್ನು ಬೇರೆಡೆ ಸನ್ನೆ ಮಾಡುತ್ತಾ ,ಅದರ ನಿಗಾವನ್ನು ಬೇರೆಡೆ ಸೆಳೆಯುತ್ತಾನೆ..ಆತ ಇದೇ ರೀತಿ ನೂರಾರು ಕಾಳಿಂಗ ಸರ್ಪಗಳನ್ನು ಹಿಡಿದಿದ್ದಾನೆ. ಕಿರಣ್ ಯಾವುದೇ ಹಾವುಗಳನ್ನು ಘಾಸಿ ಗೊಳಿಸಿ, ಅವುಗಳನ್ನು ಸುಸ್ತು ಮಾಡಿ ಹಿಡಿಯುವುದಿಲ್ಲ.ಹಾವುಗಳನ್ನು ಅತ್ಯಂತ ಪ್ರೀತಿಸುವ ಕಿರಣ್ ,ತಾನು ಕಾರ್ಯಾಚರಣೆಗಿಳಿದಾಗ ಜನರು ತೊಂದರೆ ಕೊಟ್ಟರೆ ಅವರಿಗೆ ಬುದ್ದಿಹೇಳಿದ ಉದಾಹರಣೆಗಳುಂಟು.ಕಿರಣ್ ಕಾಳಿಂಗ ಸರ್ಪ ಹಿಡಿಯಲು ಹೊರಟರೆ ಅವನ ಅಭಿಮಾನಿಗಳ ದಂಡೇ ಅಲ್ಲಿ ನೆರೆದಿರುತ್ತದೆ.ಮರದ ಮೇಲಿರುವ ಕಾಳಿಂಗ ಸರ್ಪಗಳನ್ನು ಹಿಡಿಯುವ ನಿಪುಣ.ಕಾಳಿಂಗ ಸರ್ಪಗಳು ಅನಾಯಾಸವಾಗಿ ಮರವೇರುತ್ತವೆ. ಇಂತಹ ಸಂದರ್ಭದಲ್ಲಿ ಅವುಗಳನ್ನು ಹಿಡಿಯುವುದು ಒಂದು ದೊಡ್ಡ ಸವಾಲೇ ಸರಿ.ಇಂತಹ ಕ್ಲಿಷ್ಟ ಸಂದರ್ಭದಲ್ಲೂ ಕಿರಣ್ ಸಾವಿಗೆ ಅಂಜದೆ ಹಾವು ಮರದ ಕೆಳಗೆ ಬರಲು ಕೊಂಬೆಗಳನ್ನು ಕಡಿದು, ಅದು ಸರಾಗವಾಗಿ ನೆಲ ಸೇರುವಂತೆ ಮಾಡಿ, ಆನಂತರ ಅವುಗಳನ್ನ ಹಿಡಿಯುತ್ತಾನೆ.ಇಂತಹ ಸಂದರ್ಭದಲ್ಲಿ ಕಿರಣ್ ದಿನಗಟ್ಟಲೆ ಕಾದ ಉದಾಹರಣೆಗಳಿವೆ. ಸ್ನೇಕ್ ಕಿರಣ್ ಇಂದು ಎಂತಹದ್ದೆ ಹಾವುಗಳನ್ನು ಹಿಡಿದರೂ ಆ ಹಾವುಗಳ ಬಗ್ಗೆ ವೈಜ್ಞಾನಿಕವಾಗಿ ಮಾಹಿತಿ ಕಲೆ ಹಾಕಿದ್ದಾನೆ.

ಓದಿದ್ದು ಆರನೇ ಕ್ಲಾಸ್​, ಆದರೆ ಹಾವಿನ ವಿಷಯದಲ್ಲಿ ವಿಶ್ವಕೋಶ

ಹಾಗಂತ ಆತ ಡಿಗ್ರಿಯನ್ನು ಓದಿದ ಬುದ್ದಿವಂತನೇನು ಅಲ್ಲ. ಕೇವಲ ಆರನೇ ತರಗತಿಯವರೆಗೆ ಓದಿರುವ ಕಿರಣ್ ಇಂದು ಕಾಳಿಂಗ ಸರ್ಪ ನಾಗರಹಾವುಕೆರೆಬಡಕ ಸೇರಿದಂತೆ ಹಲವು ಹಾವುಗಳ ಜೀವನ ಕ್ರಮವನ್ನು ಸವಿವರವಾಗಿ ಹೇಳಬಲ್ಲ.ಹಾವುಗಳ ಸಂತಾನೋತ್ಪತ್ತಿ ಅವುಗಳ ಜೀವನ ಶೈಲಿಯ ಬಗ್ಗೆ ತಿಳಿದುಕೊಳ್ಳುವ ಹುಮ್ಮಸ್ಸು ಆತನಲ್ಲಿ ಸದಾ ಹಸಿರಾಗಿಯೇ ಇದೆ. ಈತ ಅಪರೂಪದ ಹಾವುಗಳನ್ನು ಹಿಡಿದುರುವ ಹೆಗ್ಗಳಿಕೆ ಕೂಡ ಇದೆ

Snake kiran shivamogga ಬಿಳಿನಾಗರದಿಂದ ಕಚ್ಚಿಸಿಕೊಂಡಿದ್ದ ಸ್ನೇಕ್​ ಕಿರಣ್​

ನ್ಯೂ ಮಂಡ್ಲಿಯ ಪಂಪ್ ಹೌಸ್ ಬಳಿ ಕಂಡ ಬಿಳಿ ನಾಗರವೊಂದು ಕಾಣಿಸಿಕೊಂಡಿತ್ತು. ಅದು ಅಪರೂಪಕ್ಕೆ ಸಿಗುವ ನಾಗರ ಹಾವು ಆಕ್ರಮಣಕಾರಿಯಾಗಿತ್ತು. ಅಲ್ಲದೆ ತನ್ನ ಹಿಡಿಯಲು ಬಂದಿದ್ದ ಸ್ನೇಕ್​ಕಿರಣ್​ನನ್ನ ಕಚ್ಚಿತ್ತು.ತನ್ನ ಬೆರಳನ್ನ ಕಚ್ಚಿದ್ದರೂ, ಬಿಡದೇ ಹಾವನ್ನ ಹಿಡಿದು ಅರಣ್ಯ ಸಿಬ್ಬಂದಿ ಒಪ್ಪಿಸಿದ್ದ ಕಿರಣ್, ಅಷ್ಟರಲ್ಲಿ ವಿಷವೇರಿ ಕಿರಣ್ ಪರಿಸ್ಥಿತಿ ಹದಗೆಟ್ಟಿತ್ತು. ಆತನ ಮುಖ ಬಾತಿತ್ತು, ಸಾವಿರ ದೇವರ ಹರಕೆ, ಕೊನೆಗೂ ಬದುಕುಳಿದಿದ್ದ.

ಸರ್ಪಗಳಲ್ಲಿಯೇ ದೇವರ ಕಾಣುವ ಕಿರಣ್​

ಕಿರಣ್​ಗೆ ಹಾವುಗಳೆಂದರೆ ಪ್ರೀತಿಯಷ್ಟೆ ಅಲ್ಲದೆ, ದೈವ ಸ್ವರೂಪಿ, ಹಾವುಗಳನ್ನು ಹಿಡಿದು ಅದನ್ನು ಭಕ್ತಿ ಭಾವದಿಂದಲೇ ಅರಣ್ಯಕ್ಕೆ ಬಿಡುವ ಸ್ನೇಕ್​ ಕಿರಣ್​ ಪ್ರತಿಸಲುವೂ ದೇವರಿಗೆ ನಮಸ್ಕರಿಸಿಯೇ ಕಾರ್ಯಾಚರಣೆಗೆ ಇಳಿಯುತ್ತಾನೆ.ಹಿಡಿಯುವ ಮುನ್ನ ಹಾವಿಗೂ ನಮಸ್ಕರಿಸ್ತಾನೆ. ಹೀಗೆ ಕೋಟೆ ಮಾರಿಕಾಂಬಾ ದೇವಿಯ ವನದ ಬಳಿಯಲ್ಲಿ ಹಾವೊಂದನ್ನ ಹಿಡಿದಾಗ ಅಲ್ಲಿದ್ದವರ ಮೈಮಲೇ ಆವೇಷ ಬಂದಂತಾಗಿತ್ತು.ಇದನ್ನ ಕಂಡು, ಹಾವನ್ನು ಅಲ್ಲಿಯೇ ಬಿಡುತ್ತೇನೆ ಎಂದು ನಮಸ್ಕರಿಸಿ ಸುರಕ್ಷಿತ ಸ್ಥಳಕ್ಕೆ ಹಾವನ್ನು ಬಿಟ್ಟಿದ್ದರು ಸ್ನೇಕ್​ ಕಿರಣ್​.

Snake kiran shivamogga ಹಾವು ಹಿಡಿಯಲು ಮನೆಯವರ ವಿರೋಧ

ಶಿವಮೊಗ್ಗಕ್ಕೆ ಸ್ನೇಕ್​ ಕಿರಣ್​ ಅಂತಾನೇ ಫೇಮಸ್ ಆಗಿರುವ ಕಿರಣ್​ಗೆ ಮನೆಯಲ್ಲಿ ಹಾವು ಹಿಡಿಯಲು ವಿರೋಧವಿದೆ. ಬೇರೆ ಉದ್ಯೋಗವನ್ನು ನೋಡಿಕೊ ಎಂದು ಈಗಲು ಹೇಳುತ್ತಿರುತ್ತಾರೆ.ಹಾವು ಹಿಡಿಯುವುದರಿಂದ ಕಿರಣ್​ಗೆ ಸಿಗುವುದು ಪ್ರೀತಿಯ ಪುಡಿಗಾಸು, ಕೊಟ್ಟರೆ ಉಂಟು ಕೊಡದಿದ್ದರೇ ಇಲ್ಲ. ಕೇಳುವುದಂತೂ ಇಲ್ಲ ಕಿರಣ್​. ಆದರೆ, ಆತನಿಗೆ ಅಪಾಯ ಎದುರಾದಾಗೆಲ್ಲಾ, ಇಡೀ ಕುಟುಂಬ ಆತನನ್ನ ಉಳಿಸಿಕೊಳ್ಳಲು ಹೋರಾಡಿದೆ.ಈ ಕಾರಣಕ್ಕೆ ಆತನಿಗೆ ಮನೆಯಲ್ಲಿ ವಿರೋಧವಿದೆ. ಹಾಗಿದ್ರೂ ದೇವರಿದ್ದಾನೆ ಬಿಡಿ ಸರ್, ನನಗೇನು ಕೊಡಬೇಕು ಕೊಡ್ತಾನೆ ಬಿಡಿ ಸಾರ್, ಎಂದು ಸ್ಟಿಕ್ ಹಿಡಿದು ಹೊರಡುವ ಕಿರಣ್​ ಇಡೀ ಶಿವಮೊಗ್ಗಕ್ಕೆ ವಿಶೇಷ ವ್ಯಕ್ತಿ ಹಾಗೂ ವ್ಯಕ್ತಿತ್ವ. ಆತನ ನಂಬರ್​ : 9480023580