ಬಡವರ ಮನೆಯ ಬ್ಯಾಂಕ್​ ಬೀಗ ಒಡೆಸಿದ್ದ ಡಿಸಿ ಡಾ.ಆರ್​.ಸೆಲ್ವಮಣಿ !ಮಲೆನಾಡು ಮೆಚ್ಚಿದ ಅಧಿಕಾರಿ ಬಗೆಗಿನ ಕುತೂಹಲಕಾರಿ ಸಂಗತಿ

DC Dr R Selvamani breaks bank lock of poor's house

ಬಡವರ ಮನೆಯ ಬ್ಯಾಂಕ್​ ಬೀಗ ಒಡೆಸಿದ್ದ ಡಿಸಿ ಡಾ.ಆರ್​.ಸೆಲ್ವಮಣಿ !ಮಲೆನಾಡು ಮೆಚ್ಚಿದ ಅಧಿಕಾರಿ ಬಗೆಗಿನ ಕುತೂಹಲಕಾರಿ ಸಂಗತಿ
DC Dr R Selvamani breaks bank lock of poor's house

Shivamogga | Feb 8, 2024 |  ಲೇಖನ : ಕೆ.ಪಿ.ಶ್ರೀಪಾಲ್​ ರವರಿಂದ 

ಜನ ಸ್ನೇಹಿ,  ಬಡವರ ಪರ  ಅಸಾಯಕರ ಪರ ಸಹಾನುಭೂತಿ ಹೊಂದಿದ್ದ  ಕ್ರಿಯಾಶೀಲ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಯವರು,  ಅವರು ಶಿವಮೊಗ್ಗಕ್ಕೆ  ಬರುವಾಗ ಶಿವಮೊಗ್ಗ ನಗರ ಕೋಮು ದಳ್ಳುರಿಗೆ ಒಳಗಾಗಿತ್ತು,  ಸದಾ ಕೂಲಾಗಿ ಇರುವ ಮನೋಸ್ಥಿತಿಯ ಅಧಿಕಾರಿಯಾದ ಇವರು ಎಲ್ಲವನ್ನೂ  ಅತ್ಯಂತ ಚಾಣಕ್ಷ್ಯವಾಗಿಯೇ ಎದುರಿಸಿದರು,   ನಾವುಗಳು  ಆ ಸಂದರ್ಭದಲ್ಲಿ ನಡೆಸಿದ  ಎಲ್ಲಾ ಸೌಹಾರ್ದ ಕಾರ್ಯಕ್ರಮಗಳಿಗೆ  ಸಂಪೂರ್ಣ ಸಹಕಾರ ನೀಡಿದರು,  ನಾವು ನಮ್ಮೂರಿಗೆ ಅಕೇಶಿಯ ಬೇಡ ಒಕ್ಕೂಟದಿಂದ  ಮತ್ತೆ ಅಕೇಶಿಯ ಮಲೆನಾಡಿನಲ್ಲಿ  ನೆಡಬಾರದು  ಎಂದು  ಮನವಿ ನೀಡಿದ ತಕ್ಷಣ MPM MDಯು ಆಗಿದ್ದ ಅವರು ಅಕೇಶಿಯವನ್ನು ಮತ್ತೆ  ಎಲ್ಲಿಯು ನೆಡದಂತೆ  ಅಧಿಕಾರಿಗಳಿಗೆ ಆದೇಶ ಮಾಡಿದರು  ಆ ಆದೇಶದ ಫಲವಾಗಿ ಕಳೆದೆರೆಡು ವರ್ಷದಲ್ಲಿ  ಮಲೆನಾಡಿನಲ್ಲಿ   ಅಕೇಶಿಯ ಎಲ್ಲೂ  ನಡಲಿಲ್ಲ.   ಯಾರೆ  ಪೋನ್ ಮಾಡಿದರು  ಟೆಲ್ ಮೀ ಎನ್ನುತ್ತಿದ್ದ  ಇವರು ಮಾತನಾಡುವವನ ಸಮಸ್ಯೆಯನ್ನು ಗಂಭೀರವಾಗಿ ಆಲಿಸಿ ಬಗೆ ಹರಿಯಬಹುದಾದ ಸಮಸ್ಯೆ ಗಳಿದ್ದರೆ  ಅಲ್ಲಿಯೇ  ಪರಿಹಾರ  ಸೂಚಿಸುತ್ತಿದ್ದರು.  ಕಚೇರಿಗೆ ಯಾರೆ ಬಂದರು ಅವರೊಂದಿಗೆ ಮಾತನಾಡದೆ ಕಳಿಸುತ್ತಿರಲಿಲ್ಲ

ಒಂದು ಸಲ ಹೀಗಾಯ್ತು

ಒಮ್ಮೆ  ಬೆಳಲಕಟ್ಟೆಯ ಒಂದು ಬಡ ಕುಟುಂಬದಲ್ಲಿ  ಗಂಡ ಆತ್ಮಹತ್ಯೆಗೆ ಶರಣಾಗಿದ್ದ ಆತನ ಸಾಲ ಹೊರೆ ಕುಟುಂಬದ ಮೇಲಿತ್ತು  ಬ್ಯಾಂಕ್ ನವರು  ಬಂದು ಮನೆಯನ್ನು  ಹಾರಜುಮಾಡುವ ಸಲುವಾಗಿ ಮನೆಗೆ  ಬೀಗ ಹಾಕಿ  ವಯೋವೃದ್ದ  ತಾಯಿ ಮತ್ತು  ಹೆಂಡತಿ ಮಕ್ಕಳನ್ನು  ಹೊರಹಾಕಿದ್ದರು,  ಅಸಾಯಕರಾದ ಆ ಕುಟುಂಬ  ಬಸ್ ನಿಲ್ದಾಣದಲ್ಲಿ ಮಲಗುವ ಪರಿಸ್ಥಿತಿ ಬಂದಿತ್ತು,  ಗಂಡನ  ಆತ್ಮಹತ್ಯೆ ಪರಿಹಾರದ ಹಣವು ಇನ್ನು  ಬಂದಿರಲಿಲ್ಲ   ಈ ಕುಟುಂಬವನ್ನು ಡಾ.ಸೆಲ್ವಮಣಿಯವರ ಮುಂದೆ  ಕರೆದುಕೊಂಡು ಹೋದಾಗ  ಮಾಹಿತಿ ಪಡೆದ ಅವರು ಬರಬೇಕಾಗಿರುವ  ರೈತರ ಆತ್ಮಹತ್ಯೆ ಪರಿಹಾರದ ಹಣ ಬೇಗ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು 

ತಮ್ಮ ಮುಂದೆ ಇದ್ದ  ಆ ಅಸಾಯಕ ಕುಟುಂಬಕ್ಕೆ  ಬ್ಯಾಂಕ್ ನವರು ಹಾಕಿರುವ ಬೀಗ ಒಡೆದು ಒಳ ಹೋಗಿ  ಹೆದರಬೇಡಿ ನಾನಿದ್ದೇನೆ ಎಂದು ದೈರ್ಯ ಹೇಳಿದರು  ಈ ಮಾತುಗಳು ಅವರಿಗೆ  ಮರು ಜೀವವನ್ನೆ ನೀಡಿತು  ಆ ಕುಟುಂಬ  ಬೀಗ ಮುರಿದ ಮನೆಯೊಳಗೆ ಹೋಗುತ್ತಿದ್ದಂತೆ  ಬ್ಯಾಂಕ್ ನವರೆ  ರಾಜಿಗೆ ಬಂದರು ಕೊನೆಗೆ  ಊರಿನವರೆಲ್ಲಾ ಸೇರಿ  ಒಂದಿಷ್ಟು ಹಣ ಸಂಗ್ರಹಿಸಿ ಸಾಲ ಪಾವತಿಸಿದರು. ಈ ರೀತಿಯ ಸ್ಪಂದನಿಯಾ ಮನೋಭಾವ,ನಿಷ್ಠುರವಾಗಿದ್ದ ಇವರು ಅಪ್ಪಟ ಪ್ರಾಮಾಣಿಕ ಜೊತೆಗೆ ಅತ್ಯಂತ ಸರಳ  ವ್ಯಕ್ತಿ,  ಇವರು  ರಾಯಚೂರು ಜಿಲ್ಲೆಯಲ್ಲಿ ಪ್ರೋಬೆಷನರಿ ಅಧಿಕಾರಿಯಾಗಿ  A C ಆಗಿದ್ದು  ಅಲ್ಲಿಯ ಜನರ ಬಡತನ, ನೀರಾವರಿ ಸಮಸ್ಯೆ ಗಳ ಬಗ್ಗೆ  ಹೇಳುವ ಇವರು ಆಗ ನನಗೆ ಆ ಜನರಿಗೆ ಸಹಾಯಮಾಡುವಷ್ಟು ಅಧಿಕಾರವಿರಲಿಲ್ಲ ಪಾಪ  ಅಮಾಯಕ ಜನರು  ಅಂತವರಿಗೆ ಸೇವೆ ಮಾಡುವ ಅವಕಾಶ ಸಿಗಬೇಕು ಎನ್ನುವ ಅವರ ಮನೋಭಾವವೇ ತಿಳಿಸುತ್ತೆ ಈ ಅಧಿಕಾರಿ ಒಬ್ಬ  ಮಾನವಾತವಾದಿಯೆಂದು,  

kp sripal

ಶಿವಮೊಗ್ಗ ವಿಮಾನ ನಿಲ್ದಾಣ

ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ವೇಗವಾಗಿ ನಡೆಯಲು ಇವರೆ ಕಾರಣಿಭೂತರು, ಹಾಗೆಯೆ  ಅರ್ದಂಬರ್ದ ಆಗಿದ್ದ ಸ್ಮಾರ್ಟ್ ಸಿಟಿ ಕೆಲಸಕ್ಕೂ ಇವರು ಬಂದ ಮೇಲೆಯೇ ವೇಗ ಸಿಕ್ಕಿದ್ದು ಬಡ ಕುಟುಂಬದಿಂದ ಬಂದ ಡಾ.ಸೆಲ್ವಮಣಿ  ಮೊದಲು IFS ಮಾಡಿ ನಂತರ IAS ಮಾಡಿದವರು ಇವರು A G  ಸ್ಟುಡೆಂಟ್ ಅಗಿದ್ದರಿಂದ ಕೃಷಿ ಬಗ್ಗೆ  ಬೆಳೆಗಳಿಗೆ ಬರುವ ರೋಗಗಳ ಬಗ್ಗೆ  ಅಪಾರ ಜ್ಞಾನಹೊಂದಿದ್ದರು ಹಾಗೆಯೆ  ಪರಿಸರದ ಬಗ್ಗೆ  ಅಪಾರ ಕಾಳಜಿ  ಹೊಂದಿದ್ದವರು. ಇಂತಹ ಅಧಿಕಾರಿಗಳನ್ನು ಸರ್ಕಾರಗಳು  ಕಾರಕೂನರ ರೀತಿ  ನಡೆಸಿಕೊಳ್ಳದೆ  ಹಿಂದುಳಿದ ಜಿಲ್ಲೆಗಳಿಗೆ ಜಿಲ್ಲಾಧಿಕಾರಿಗಳಾಗಿ ಮುಂದುವರೆಸಿದರೆ  ಬಡವರು ಅಸಾಯಕರಿಗೆ ಸಹಕಾರಿಯು ಆಗುತ್ತೆ  ಸರ್ಕಾರಕ್ಕು ಒಳ್ಳೆಯ ಹೆಸರು ಬರುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ ಇನಷ್ಟು ಕಾಲ ಇವರು ಇರಬೇಕಿತ್ತು.

kp sripal