ಮಲೆನಾಡಿನಲ್ಲಿ ಡಾ.ಬ್ರೋ | ಡಿವಿಎಸ್​ ಪಾನಿಪೂರಿ, ಮೀನಾಕ್ಷಿ ಭವನ ದೋಸೆ ತಿಂದ FOOD LOVER!

Popular YouTubers like Food Lover and Da Bro and many others are visiting Malnad

ಮಲೆನಾಡಿನಲ್ಲಿ  ಡಾ.ಬ್ರೋ |  ಡಿವಿಎಸ್​ ಪಾನಿಪೂರಿ, ಮೀನಾಕ್ಷಿ ಭವನ ದೋಸೆ ತಿಂದ FOOD LOVER!

SHIVAMOGGA|  Dec 9, 2023 | ಶಿವಮೊಗ್ಗ ಜಿಲ್ಲೆ ಹಾಗೂ ತೀರ್ಥಹಳ್ಳಿ ತಾಲ್ಲೂಕುಗೆ ಇತ್ತೀಚೆಗೆ ಬಹಳಷ್ಟು ಮಂದಿ ಸೆಲೆಬ್ರಿಟಿಗಳು ಆಗಮಿಸುತ್ತಿದ್ದಾರೆ. ಇತ್ತೀಚೆಗಷ್ಟೆ ತೀರ್ಥಹಳ್ಳಿಗೆ ಪಂಡಿತ್ ರವಿಶಂಕರ್​ ರವರು ಆಗಮಿಸಿದ್ದರು. ಅಲ್ಲಿನ ಶ್ರೀರಾಮಕೊಂಡಕ್ಕೆ ತೆರಳಿ ಕೆಲಹೊತ್ತು ವಿರಮಿಸಿದ್ದರು. 

READ : ತೀರ್ಥಹಳ್ಳಿಯಲ್ಲಿ ಆರ್ಟ್ ಆಫ್​​ ಲೀವಿಂಗ್​ ನ ರವಿಶಂಕರ್ ಗುರೂಜಿ!

ಇನ್ನೂ ಕೆಲದಿನಗಳ ಹಿಂದೆ ನಟಿ ಪೂಜಾ ಗಾಂಧಿ ತಮ್ಮ ಪತಿಯ ಜೊತೆಗೆ ಕವಿಮನ ಕವಿಶೈಲಕ್ಕೆ ಬಂದು ಕೆಲಹೊತ್ತು ಕಾಲಕಳೆದು ಫೋಟೋ ತೆಗೆಸಿಕೊಂಡಿದ್ದರು. ಇದು ಸಹ ವೈರಲ್​ ಆಗಿತ್ತು. 

READ :  ಪತಿಯೊಂದಿಗೆ ಕುಪ್ಪಳ್ಳಿಗೆ ಬಂದ ನಟಿ ಪೂಜಾ ಗಾಂಧಿ | ಫೋಟೋಗಳು ವೈರಲ್

ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ  ಸಖತ್ ಹಿಟ್ ಆಗಿರುವ ವ್ಯಕ್ತಿಗಳು ಶಿವಮೊಗ್ಗಕ್ಕೆ ಭೇಟಿ ನೀಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗದ ಡಿವಿಎಸ್​ ಶಿಕ್ಷಣ ಸಂಸ್ಥೆಯ ಬಳಿ ಇರುವ ಪಾನಿಪುರಿ ಅಂಗಡಿ ಹಾಗೂ ಮೀನಾಕ್ಷಿ ಭವನದ ಇಡ್ಲಿವಡೆ , ದೋಸೆಯನ್ನು ಸವಿದು #foodlovers tv kripal amanna ತಮ್ಮ ಯೂಟ್ಯೂಬ್​ನಲ್ಲಿ  ಸವಿರುಚಿಯನ್ನು ವಿವರಿಸುತ್ತಿದ್ದಾರೆ. 

ಇದರ ಬೆನ್ನಲ್ಲೆ  ಶಿವಮೊಗ್ಗದ ತೀರ್ಥಹಳ್ಳಿಗೆ  ಪ್ರಸಿದ್ಧ ಯೂಟ್ಯೂಬರ್ ಗಳಾದ ಡಾ, ಬ್ರೋ ಪ್ಲೇಯಿಂಗ್ ಪಾಸ್ಪೋರ್ಟ್, ಗ್ಲೋಬಲ್ ಕನ್ನಡಿಗ ರವರು ಭೇಟಿಕೊಟ್ಟಿದ್ದಾರೆ. ಅದರ ಫೋಟೋಗಳು ಸಹ ವೈರಲ್ ಆಗಿದೆ.