ಮಲೆನಾಡಿಗರಿಗೆ ಆರಗ ಜ್ಞಾನೇಂದ್ರರವರು ವಿಶ್ವಾಸ ದ್ರೋಹ ಮಾಡಿದ್ದಾರೆ

Araga Jnanendra, a fourth-time MLA from Theerthahalli constituency and the current home minister, has worked to demoralise the farmers of Malnad.

ಮಲೆನಾಡಿಗರಿಗೆ ಆರಗ ಜ್ಞಾನೇಂದ್ರರವರು ವಿಶ್ವಾಸ ದ್ರೋಹ ಮಾಡಿದ್ದಾರೆ

ಮಲೆನಾಡಿನ ಓದುಗರೆ, ಮಲೆನಾಡು ಟುಡೆಯ ಉದ್ದೇಶವೇ ಮಲೆನಾಡಿನ ಜನಮನದ ಜೀವನಾಡಿಯಾಗುವುದು. ಈ ಹಿನ್ನೆಲೆಯಲ್ಲಿ ಮಲೆನಾಡು ಟುಡೆ, ಹೊಸದೊಂದು ಪ್ರಯೋಗವನ್ನ ಆರಂಭಿಸಿದೆ. ಮಲೆನಾಡಿನ ವಸ್ತುಸ್ಥಿತಿ ಹಾಗು ವಸ್ತುವಿಷಯಗಳ ಕುರಿತಾಗಿ ಅಭಿಪ್ರಾಯದ ಅಂಕಣದ ಕಾಲಂನ್ನು ಟುಡೆಯ ಡಿಜಿಟಲ್ ಮೀಡಿಯಾದಲ್ಲಿ ಆರಂಭಿಸಲಾಗಿದೆ.ಜಿಲ್ಲೆ ವಿವಿಧ ಗಣ್ಯರು ಈ ಕಾಲಂನಲ್ಲಿ ಅವರ ಅಭಿಪ್ರಾಯಗಳನ್ನು ನಮೂದಿಸಲಿದ್ದಾರೆ. ಅಂಕಣವನ್ನು ಅದನ್ನು ಬರೆದವರ ಹೆಸರಿನ ಜೊತೆ ಯಥಾವತ್ತು ರೂಪದಲ್ಲಿ ವರದಿ ಮಾಡುತ್ತಿದ್ದೇವೆ. 

ಮಲೆನಾಡಿಗರಿಗೆ ಆರಗ ಜ್ಞಾನೇಂದ್ರರವರು ವಿಶ್ವಾಸ ದ್ರೋಹ ಮಾಡಿದ್ದಾರೆ 

ತೀರ್ಥಹಳ್ಳಿ  ಕ್ಷೇತ್ರಕ್ಕೆ  ನಾಲ್ಕನೇ ಬಾರಿ ಶಾಸಕರಾಗಿ  ಹಾಲಿ  ಗೃಹ ಮಂತ್ರಿಯಾದ  ಆರಗ ಜ್ಞಾನೇಂದ್ರರವರು  ಮಲೆನಾಡಿನ ರೈತರ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಮಾಡಿದ್ದಾರೆ. ತಮ್ಮ ಜವಬ್ದಾರಿಯುತ ಸ್ಥಾನದ ಹೊಣೆಗಾರಿಕೆಯನ್ನು ಮರೆತಂತೆ ಇದೆ.

BREAKING NEWS/ ನಸುಕಿನಲ್ಲಿ ತೀರ್ಥಹಳ್ಳಿ ಪೇಟೆಗೆ ಬಂದ ಕಾಡಾನೆ

ನಮ್ಮ ಮಲೆನಾಡಿಗರ ಸಾಂಪ್ರದಾಯಿಕ ಬೆಳೆ ಅಡಿಕೆಗೆ 1990 ನಂತರದಲ್ಲಿನ   ಬೆಲೆ ಎರಿಕೆಯಿಂದ  ಅಡಿಕೆ ಬೆಳೆಗಾರರಿಗೆ  ಗೌರವ ತಂದುಕೊಟ್ಟಿದ್ದು,  ನಮ್ಮಗಳ ಆರ್ಥಿಕ ಭದ್ರತೆಯನ್ನು ಸಹ ಹೆಚ್ಚಿಸಿ  ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಟ್ಟಿದೆ,   ಹಳೆಮನೆಗಳನ್ನು ಕೆಡವಿ ಹೊಸಮನೆಗಳನ್ನು  ನಿರ್ಮಿಸುವಂತೆ ಮಾಡಿದೆ,  ಮಕ್ಕಳ ಮದುವೆಯನ್ನು   ಸಂಭ್ರಮದಿಂದ  ಮಾಡುವಂತೆ ಮಾಡಿದೆ,  ಮನೆ ಮನೆಗೂ  ಬೈಕು- ಕಾರುಗಳು  ಬರುವಂತೆ ಮಾಡಿದೆ ಅಷ್ಟೇ ಅಲ್ಲಾ  ಮಲೆನಾಡು ಭಾಗದ ಕೃಷಿ ಕೂಲಿಕಾರರ ಬದುಕನ್ನು  ಸುದಾರಿಸಿದೆ  ಕನಿಷ್ಟ ಸಂಬಳದಿಂದ ಒಂದು ಹಂತದ ಗೌರವಯುತ ಸಂಬಳ ಪಡೆಯುವ ಹಂತಕ್ಕೆ ತಂದಿದೆ. ಒಟ್ಟಿನಲ್ಲಿ  ಒಂದು ರೀತಿಯಲ್ಲಿ ಮಲೆನಾಡನ್ನು ಅಡಿಕೆ ಶ್ರೀಮಂತಗೊಳಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಮಲೆನಾಡು ಟುಡೆ. ಕಾಂನ  FACEBOOK ಫೇಜ್​ ಇಲ್ಲಿದೆ ಬೆಂಬಲಿಸಿ :MalenaduToday.com

ನಮ್ಮ ಬದುಕು ರೂಪಿಸಿದ ಅಡಿಕೆ   ಹಲವು ಸಮಸ್ಯೆಗಳನ್ನು ತನ್ನೊಂದಿಗೆ ಇಟ್ಟುಕೊಂಡಿದೆ,   ಮಳೆಗಾಲದಲ್ಲಿ  ನಿರಂತರವಾಗಿ ಬಾದಿಸುವ ಕೊಳೆರೋಗ,  ದಶಕಗಳಿಂದ ಇರುವ  ಹಳದಿ ರೋಗ, ಹಿಂಡಿಮುಂಡೆ ರೋಗ  ಬಾರಿ ನಷ್ಟವನ್ನೆ ಉಂಟು ಮಾಡಿದ್ದು  ಈ ರೋಗಗಳಿಂದ ಹಲವೆಡೆ ತೋಟಗಳು  ಸಂಪೂರ್ಣ ನಾಶವಾಗಿದ್ದರೆ  ಹಲವೆಡೆ  ಬೆಸಿಗೆಯಲ್ಲಿನ ನೀರಿನ ಕೋರತೆಯಿಂದ ತೋಟಗಳು ನಾಶವಾಗಿದ್ದನ್ನು ಸಹ ನೋಡಿದ್ದೇವೆ  ಕಳೆದ ಮೂರು ನಾಲ್ಕು ವರ್ಷದಿಂದ ಉತ್ತಮ ಮಳೆ ಆಗುತ್ತಿರುವುದರಿಂದ  ನೀರಿನ ಸಮಸ್ಯೆ  ಇಲ್ಲವಾಗಿದೆ ಆದರೆ  ಈ ವರ್ಷ ಕಾಣಿಸಿಕೊಂಡ ಎಲೆ ಚುಕ್ಕಿ ರೋಗ   ಹಲವೆಡೆ  ಅಡಿಕೆ ತೋಟವನ್ನು  ಸರ್ವನಾಶ ಮಾಡಿದೆ. 

ಮಲೆನಾಡು ಟುಡೆ.ಕಾಂ TWITTER ಪೇಜ್ ಇದು ಕ್ಲಿಕ್ ಮಾಡಿ Malenadutoday

ಅತ್ಯಂತ ಹೆಚ್ವು ಮಳೆ ಮತ್ತು ಶೀತಕ್ಕೆ  ಈ ರೋಗ ಬಂದಿದೆ  ಎನ್ನಲಾಗುತ್ತಿದೆ,  ಇದೊಂದು ಪಂಗಸ್  ಎಂತಲು ಹೇಳಲಾಗುತ್ತಿದೆ  ಆದರೆ ಇದಕ್ಕೆ ಇದುವರೆವಿಗೂ  ಸೂಕ್ತ ಜೌಷದಿಯನ್ನು ಕಂಡು ಹಿಡಿದಿಲ್ಲ.  ಈ ಬಗ್ಗೆ  ನಡೆದ ಹೋರಾಟಗಳಿಂದ ಎಚ್ಚೆತ್ತ ಸರ್ಕಾರ  ಈ ಎಲೆ ಚುಕ್ಕಿ ರೋಗಕ್ಕ  ಜೌಷದಿ ಕಂಡು ಹಿಂಡಿಯಲು ಸಂಶೋದಕರ  ತಂಡವನ್ನು  ನೇಮಿಸಿದೆ ಆದರೆ ಈ ತಂಡ  ಇನ್ನೂ  ನಮ್ಮ ರೈತರ ತೋಟಗಳಿಗೆ ಬೇಟಿ ನೀಡಿಲ್ಲ,   ಬಿಸಿಲು  ಆರಂಭವಾಗಿದ್ದರಿಂದ   ರೋಗ ನಿಯಂತ್ರಣಕ್ಕೆ  ಬರಬಹುದೆಂಬ  ವಿಶ್ವಾಸದಲ್ಲಿ ರೈತರು ಇದ್ದಾರೆಯೇ ಹೊರತು  ಸರ್ಕಾರ ಇದಕ್ಕೊಂದು  ಶಾಶ್ವತ ಪರಿಹಾರ ಕಂಡುಕೊಡುತ್ತೆ  ಎಂಬ ವಿಶ್ವಾಸ ಕಳೆದುಕೊಂಡಿದ್ದಾರೆ.

ಮಲೆನಾಡು ಟುಡೆ. ಕಾಂ  INSTAGRAM ಪೇಜ್​ ಫಾಲೋ ಮಾಡಿ :  malenadutoday

ಮಲೆನಾಡಿಗರ, ಅದರಲ್ಲು ಅಡಿಕೆ ಬೆಳೆಗಾರರ ಎಲ್ಲಾ ಸಮಸ್ಯೆ  ನೀಗಿಸಲಿದ್ದೇವೆ  ಎಂದು ಆಶ್ವಾಸನೆ ಕೊಟ್ಟಿದ್ದ  ಆರಗ ಜ್ಞಾನೇಂದ್ರರವರಿಂದ ಹಿಡಿದು ಅಮಿತ್ ಶಾ ವರೆಗಿ  ಡಬ್ಬಲ್ ಇಂಜಿನ ಸರ್ಕಾರದ ಗೃಹ ಮಂತ್ರಿಗಳ ಆಡಳಿತದಲ್ಲೆ  ಭೂತಾನ ದೇಶದ  ಅಡಿಕೆ 17 ಲಕ್ಷ ಟನ್  ಸುಂಕ ರಹಿತವಾಗಿ ಅಮಾದು ಆಯಿತು,   ಮತ್ತು  ಇನ್ನಷ್ಟು ಅಡಿಕೆ ಅಮಾದು ಆಗುವ ಸಂಭವವಿದೆ ಇದರ ಮೂಲ ಉದ್ದೇಶ ಮತ್ತು  ಮೊನ್ನೆಯ ಆರಗ ಜ್ಞಾನೆಂದ್ರರವರು ಅಡಿಕೆ ಕುರಿತು  ಅಸೆಂಬ್ಲಿಯಲ್ಲಿ  "ಮುಂದೆ ಅಡಿಕೆಗೆ ಭವಿಷ್ಯವಿಲ್ಲ ಮುಂದೆ  ಅಡಿಕೆಗೆ ಹೆಚ್ಚಿನ ಮಾನ್ಯತೆ ನೀಡಬಾರದು,  ಪ್ರೋತ್ಸಹಿಸಬಾರದು " ಎಂಬುವುದಕ್ಕು ಬಹಳಷ್ಟು ಸಾಮ್ಯತೆ ಇದೆ.    ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬಾರದು ಎಂಬ ಗಾದೆಯನ್ನು  ನಾವು ಇಂತಹ ರಾಜಕರಣಿಗಳಿಗೆ  ಬರುವ ಚುನಾವಣೆಯಲ್ಲಿ  ಅರ್ಥೈಸಿ  ತೋರಿಸಬೇಕಾಗಿದೆ. 

ಅಡಿಕೆ ಬೆಳೆ  ನಿಯಂತ್ರಣದಲ್ಲಿ  ಇರಬೇಕು ಇದಕ್ಕೆ  ಜಡಿವಾಣ  ಹೇರಬೇಕು ಎಂಬುವ  ಪರಿಜ್ಞಾನ ಅಥವಾ ಜ್ಣಾನೋದಯ ಇವರಿಗೆ ಇಷ್ಟೊಂದು ತಡವಾಗಿ ಅಯಿತೆ,  ಡ್ಯಾಂಗಳನ್ನು ಕಟ್ಟಿ  ನಮ್ಮ  ಮಲೆನಾಡಿಗರ  ಬದುಕನ್ನು   ಮುಳುಗಿಸಿ  ಬಯಲು ಸೀಮೆಗೆ  ನೀರು ಹರಿಸಿದಾಗ  ಸರ್ಕಾರದ ನಿಯಮವಳಿ ಪ್ರಕಾರ ಅದು ಆಹಾರ ಬೆಳೆಗಳನ್ನು  ಬೆಳೆಯಲು ಮತ್ತು  ಕುಡಿಯುವ ನೀರಿಗಾಗಿ ಇತ್ತು   ಅಲ್ಲಿಯ ರೈತರಿಗೆ  ಆಹಾರದ ಬೆಳೆಗಳನ್ನು ಬೆಳೆಯಲು ಉತ್ತೇಜಿಸಬೇಕಿತ್ತು,   ಅವರು  ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ನೀಡಿ ಪ್ರೋತ್ಸಾಹ ನೀಡಿದ್ದರೆ,   ಕಬ್ಬುಗಳು ಬೆಳೆಯುವಲ್ಲಿ   ಕಬ್ಬಿಗೆ  ಉತ್ತಮ ಬೆಲೆ ನೀಡಿದ್ದರೆ  ಸಕ್ಕರೆ  ಕಾರ್ಖಾನೆಗಳನ್ನು ಅಭಿವೃದ್ದಿ ಪಡಿಸಿದ್ದರೆ  ಮುಚ್ಚಿಹೋದ  ಹಲವಾರು  ಸಕ್ಕರೆ  ಕಾರ್ಖಾನೆಗಳನ್ನು   ಪುನರ್ ಚೇತನ ಗೊಳಿಸಿದ್ದರೆ  ಮಲೆನಾಡಿಗರ ಸಂಪ್ರದಾಯಿಕ ಬೆಳೆಯಾಗಿದ್ದ ಅಡಿಕೆ ಬಯಲು ಸೀಮೆಯಲ್ಲಿ  ಬೆಳೆಯುವ ಬೆಳೆ ಆಗುತ್ತಿರಲಿಲ್ಲ.

ಆರಗ ಜ್ಞಾನೇಂದ್ರರವರು ಹೇಳಿದ್ದೇನು? ಅಡಿಕೆ ಬೆಳೆಗೆ ಪ್ರೋತ್ಸಾಹ ಕೊಡಬಾರದು: ಗೃಹಸಚಿವ ಆರಗ ಜ್ಞಾನೇಂದ್ರ ಸದನದಲ್ಲಿ ಹೀಗ್ಯಾಕೆ ಹೇಳಿದ್ರು/ ವಿರೋಧಕ್ಕೆ ಗುರಿಯಾಯ್ತೇ ಹೇಳಿಕೆ

ಅಡಿಕೆ  ಬಯಲು ಸೀಮೆಯ ಜನರ ಬದುಕನ್ನು  ಹಸನಗೊಳಿಸಿದೆ   ಅವರು  ಅಡಿಕೆ ಬೆಳೆದಿದ್ದು ತಪ್ಪು ಎಂದು ಹೇಳುತ್ತಿಲ್ಲ,  ಅವರು ಬೆಳೆದ ಆಹಾರಿಕ ಬೆಳೆಗೆ, ಕಬ್ಬಿಗೆ  ಸರಿಯಾದ ಮಾರುಕಟ್ಟೆ ಒದಗಿಸದ ಸರ್ಕಾರದ ಹೊಣೆಗೆಡಿ ತನವೇ ಅವರು  ಅಡಿಕೆ ಬೆಳೆಯನ್ನು ಬೆಳೆಯುವ ಅನಿವಾರ್ಯ ಪರಿಸ್ಥಿತಿಗೆ  ತಂದಿತು,  ಈಗ  ಈಡಿ ದೇಶದಲ್ಲಿಯೇ ನಾವು ಅತಿ ಹೆಚ್ವು ಅಡಿಕೆ ಬೆಳೆಯುತ್ತೇವೆ,  ರಪ್ತುಮಾಡುವಷ್ಟು ಪ್ರಮಾಣದ ಅಡಿಕೆ ನಮ್ಮಲ್ಲಿಯೇ ಇದ್ದರು ಸಹ  ಯಾವ ಕಾರಣಕ್ಕಾಗಿ  ಭೂತಾನ ದೇಶದಿಂದ  ಅಡಿಕೆ ಅಮಾದು ಮಾಡಿಕೊಳ್ಳುತ್ತಿರುವರು? 

ಇದನ್ನು ಸಹ ಓದಿ : ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ಮೂರು ಆಕ್ಸಿಡೆಂಟ್​/ ಬಸ್​ಗಳ ಡಿಕ್ಕಿ/ ಬೈಕ್​ ಆಕ್ಸಿಡೆಂಟ್/ ಓರ್ವನ ಸಾವು

ನಮ್ಮಲ್ಲಿ  ಭವಿಷ್ಯವೆ ಇಲ್ಲವೆಂಬ ಬೆಳೆಯನ್ನು  ವಿದೇಶದಿಂದ ಯಾವಕಾರಷಣಕ್ಕಾಗಿ  ಲಕ್ಷಾಂತರ ಟನ್ ಅಡಿಕೆಗಳನ್ನು ಸುಂಕರಹಿತವಾಗಿ  ಅಮದು ಮಾಡಿಕೊಳ್ಳುತ್ತಿರುವಿರಿ?   ವಿದೇಶಿ ಅಡಿಕೆ  ಇಲ್ಲಿ ಭವಿಷ್ಯ ರೂಪಿಸಿ ಕೊಡುವ ಮತ್ತು  ನಮ್ಮ ಅಡಿಕೆಗೆ ಭವಿಷ್ಯವಿಲ್ಲದ  ನಿಮ್ಮ ಸರ್ಕಾರದಲ್ಲಿ  ಸ್ವತಹ ಅಡಿಕೆ ಬೆಳೆಗಾರರಾದ  ಮತ್ತು ಪ್ರಭಾವಿ ಹುದ್ದೆಯ  ಗೃಹ  ಮಂತ್ರಿಯಾಗಿರುವ ನೀವು  ನಿಮ್ಮ ಪಕ್ಷದ  ಡಬ್ಬಲ್ ಇಂಜಿನ್  ಸರ್ಕಾರದಲ್ಲಿ  ಅಡಿಕೆಗೆ ಭವಿಷ್ಯವೆ ಇಲ್ಲಾ ಅಂದ ಮೇಲೆ  ಒಂದು ನಿಮ್ಮ ಪಕ್ಷಕ್ಕೆ  ಮತ್ತು  ಮಂತ್ರಿಗಿರಿಗೆ ರಾಜಿನಾಮೆ ಕೊಡಿ ಇಲ್ಲಾ   ಭವಿಷ್ಯವಿಲ್ಲದ ಅಡಿಕೆ ಬೆಳೆ ಬೆಳೆದಿರುವ ನೀವು ನಿಮ್ಮ ಅಡಿಕೆ ತೋಟವನ್ನು    ನಾಶಪಡಿಸಿ    ಅಡಿಕೆಗೆ  ಬೆಲೆ  ಇಲ್ಲಾ  ಎಂದು  ಸಾಬೀತು ಪಡಿಸಲು  ನೀವು ಮೊದಲು ಬೆರೆ ಬೆಳೆಯನ್ನು  ಬೆಳೆದು  ತೋರಿಸಿ.   

ಸರಣಿ ಸುದ್ದಿ : DYSP ಬಾಲ್​ರಾಜ್​ಗೆ ಸಿಕ್ತು ಕೇಂದ್ರ ಮಂತ್ರಿ ಪದಕ/ ಅತ್ಯುನ್ನತ ಪ್ರಶಸ್ತಿ ಸಿಗಲು ಕಾರಣವಾದ ಕೇಸ್​ ಯಾವುದು ಗೊತ್ತಾ? ಇಲ್ಲಿದೆ ಪ್ರಕರಣ ರೋಚಕ ತನಿಖೆಯ ಸರಣಿ

ಮೊದಲೆ ಸಂಕಷ್ಟದಲ್ಲಿದ್ದ ರೈತರಿಗೆ  ಆತ್ಮಸ್ಥೈರ್ಯ ತುಂಬಾ ಬೇಕಾದ ಜವಬ್ದಾರಿಯುತ ವ್ಯಕ್ರಿಯಾದ ನಿಮ್ಮ ಹೇಳಿಕೆ ಖಂಡನೀಯ,  ನಮ್ಮ ಮಲೆನಾಡಿಗರಿಗೆ ಏಕಾಎಕಿ ಅಡಿಕೆ ಬೆಳೆ  ಬಿಟ್ಟು ಬೆರೆ ಬೆಳೆಯಲು ತೋಟ ನಿರ್ಮಿಸಿದ ಜಾಗದಲ್ಲಿ ಸಾಧವೇ, ಲಕ್ಷಾಂತರ ಜನರು ಅಡಿಕೆ ಬೆಳೆಯನ್ನು ಬೆಳೆದು ಬದುಕು ಸಾಗಿಸುತ್ತಿದ್ದಾರೆ  ಈ  ಬೆಳೆಯ ಮಾರುಕಟ್ಟೆ ನಂಬಿಕೊಂಡು ಸಹ ಲಕ್ಷಾಂತರ  ಜನ ದಲ್ಲಾಳಿಗಳು ಮಾರಾಟಗಾರರು ಹಾಗೂ ಈ ಅಡಿಕೆ ಕೃಷಿಯ ಕೂಲಿಯಿಂದ ಜೀವನ ನಿರ್ವಹಿಸುವ ಲಕ್ಷಾಂತರ ಜನ ಕೂಲಿ ಕಾರ್ಮಿಕರು ಎಲ್ಲಿ  ಹೋಗಬೇಕು  ಗೃಹ ಮಂತ್ರಿಗಳೆ ?.  

  ----  ಕೆ‌.ಪಿ.ಶ್ರೀಪಾಲ.

            ವಕೀಲರು

              ಶಿವಮೊಗ್ಗ.

ಸಾಗರ ಸುದ್ದಿ :  Exclusive / ಸಾಗರ ಟೌನ್​ನಲ್ಲಿ ನಡೆದ ಭೀಕರ ಲಾರಿ ಅಪಘಾತ ಸಂಭವಿಸಿದ್ದೇಗೆ ನೋಡಿ ಸಿ.ಸಿ.ಟಿವಿ ವಿಡಿಯೋದಲ್ಲಿ!

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ