ಅಡಿಕೆ ಬೆಳೆಗೆ ಪ್ರೋತ್ಸಾಹ ಕೊಡಬಾರದು: ಗೃಹಸಚಿವ ಆರಗ ಜ್ಞಾನೇಂದ್ರ ಸದನದಲ್ಲಿ ಹೀಗ್ಯಾಕೆ ಹೇಳಿದ್ರು/ ವಿರೋಧಕ್ಕೆ ಗುರಿಯಾಯ್ತೇ ಹೇಳಿಕೆ

Malenadu Today

ಅಡಿಕೆ ಬೆಳೆಗೆ ಪ್ರೋತ್ಸಾಹ ಕೊಡಬಾರದು ಎಂದು ಗೃಹಸಚಿವರು ಆರಗ ಜ್ಞಾನೇಂದ್ರರವರು ಸದನಲ್ಲಿ ಹೇಳಿದ್ದಾರೆ. ಸದ್ಯ ಅವರ ಮಾತು ಮಿಶ್ರ ಅಭಿಪ್ರಾಯಕ್ಕೆ ಕಾರಣವಾಗಿದೆ. 

ಇದನ್ನು ಸಹ ಓದಿ : ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ಮೂರು ಆಕ್ಸಿಡೆಂಟ್​/ ಬಸ್​ಗಳ ಡಿಕ್ಕಿ/ ಬೈಕ್​ ಆಕ್ಸಿಡೆಂಟ್/ ಓರ್ವನ ಸಾವು

ಉದ್ಯೋಗ ಖಾತ್ರಿಯಲ್ಲಿ ಅಡಿಕೆ ಬೇಕು

ಸಭಾಕಲಾಪದಲ್ಲಿ ಹೆಚ್​ಡಿ ರೇವಣ್ಣ ತಮ್ಮದು ಸ್ವಂತ 50 ಎಕೆರೆ ಅಡಿಕೆ ಬೆಳೆ ಇದೆ, ಸದ್ಯ ಬೆಳೆಗೆ ಕಾಯಿಲೆಗೆ ಬಂದಿಲ್ಲ, ಆದರೆ ಅಡಿಕೆ ರೇಟು ಕುಗ್ಗಿ ಹೋಗಿದೆ. ಇದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಜಿ ಸಿಎಂ ರವರು ಮನವಿ ಮಾಡಿದ್ಧಾರೆ. ಆದರೆ ಬೆಲೆ ಕುಸಿತ ನಿಂತಿಲ್ಲ ಎಂದು ಪರೋಕ್ಷವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಉದ್ಯೊಗ ಖಾತ್ರಿಯಲ್ಲಿ ಅಡಿಕೆ ನೆಡುವುದನ್ನ ಯಾಕೆ ತೆಗೆದುಹಾಕಿದ್ರಿ, ದಯಮಾಡಿ ಅದನ್ನು ಸೇರಿಸಿ ಇಂಟರಸ್ಟ್ ಇದ್ದವರು ಬೆಳಯುತ್ತಾರೆ ಎಂದಿದ್ದಾರೆ.

ಸರಣಿ ಸುದ್ದಿ : DYSP ಬಾಲ್​ರಾಜ್​ಗೆ ಸಿಕ್ತು ಕೇಂದ್ರ ಮಂತ್ರಿ ಪದಕ/ ಅತ್ಯುನ್ನತ ಪ್ರಶಸ್ತಿ ಸಿಗಲು ಕಾರಣವಾದ ಕೇಸ್​ ಯಾವುದು ಗೊತ್ತಾ? ಇಲ್ಲಿದೆ ಪ್ರಕರಣ ರೋಚಕ ತನಿಖೆಯ ಸರಣಿ

ಅಡಿಕೆಗೆ ಭವಿಷ್ಯವಿಲ್ಲ/ ಪ್ರೋತ್ಸಾಹ ಕೊಡಬಾರದು

ಈ ವೇಳೆ ಮಧ್ಯಪ್ರವೇಶದ ಮಾಡಿದ ಗೃಹಸಚಿವ ಆರಗ ಜ್ಞಾನೇಂದ್ರರವರು ತೀರ್ಥಹಳ್ಳಿ, ಸಾಗರ , ಹೊಸನಗರ ತಾಲ್ಲೂಕಿನವರು ನಾವು ಸಾಂಪ್ರಾದಾಯಿಕ ಅಡಿಕೆ ಬೆಳೆಗಾರರು, ಆದರೆ ಈಗ ಪರಿಸ್ಥಿತಿ ಹಾಗಿಲ್ಲ, ಅಡಿಕೆ ಬೆಳೆಯದ ಪ್ರದೇಶಗಳಲ್ಲಿಯು ಅಡಿಕೆಯನ್ನು ಬೆಳೆಯಲಾಗುತ್ತಿದೆ. ಆಂಧ್ರ ಪ್ರದೇಶ ಒಂದರಲ್ಲಿಯೇ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. 

ಸಾಗರ ಸುದ್ದಿ :  Exclusive / ಸಾಗರ ಟೌನ್​ನಲ್ಲಿ ನಡೆದ ಭೀಕರ ಲಾರಿ ಅಪಘಾತ ಸಂಭವಿಸಿದ್ದೇಗೆ ನೋಡಿ ಸಿ.ಸಿ.ಟಿವಿ ವಿಡಿಯೋದಲ್ಲಿ!

ಅಡಿಕೆ ಭವಿಷ್ಯ ಬಹಳ ದಿನವಿಲ್ಲ, ಹಾಗಾಗಿ ಇದಕ್ಕೆ ಪ್ರೋತ್ಸಾಹ ಕೊಡಬಾರದು, ಇವತ್ತು ಕೇಂದ್ರ ಸರ್ಕಾರ ಅಡಿಕೆಗೆ ಹನಿನಿರಾವರಿ ತೆಗೆದುಹಾಕಿದೆ, ಮಲೆನಾಡಿನಲ್ಲಿ ಕೆಲವು ಕಡೆ ಅವಕಾಶ ಮಾಡಿಕೊಡಲಾಗಿದೆ. ಅಡಿಕೆ ಜಾಸ್ತಿ ಬೆಳೆಯುವುದರಲ್ಲಿ ಅರ್ಥವೇ ಇಲ್ಲ, ನಮ್ಮ ಭವಿಷ್ಯಕ್ಕೆ ಇದು ಮಾರಕವಾಗುತ್ತದೆ. ‘

ಅಡಿಕೆ ಬೆಳೆದು ಬಾಯಿಗೆ ಮಣ್ಣುಹಾಕಿಕೊಳ್ಳುವಂತಹ ಪರಿಸ್ತಿತಿ ಬರುತ್ತದೆ

ಇದನ್ನು ಸಹ ಓದಿ :ಚಿರತೆ ಇದೆ ಎಂದಿದಕ್ಕೆ ಸಾಯುವ ಹಾಗೆ ಹೊಡೆದ ಪರಿಯಸ್ಥರು/ ಇದೆಂತದ್ರಿ ಅನ್ಯಾಯ? ವಿವರ ಇಲ್ಲಿದೆ

ಸಾಲ ಮಾಡಿ ಡ್ಯಾಂ ಕಟ್ಟಿದ್ದೇವು, ನೀರಾವರಿ ವ್ಯವಸ್ಥೆ ಮಾಡಿ,  ಯತೇಚ್ಛವಾಗಿ ಆಹಾರ ಬೆಳೆಯನ್ನು ಬೆಳೆಯಲು ಅನುವುಮಾಡಿಕೊಂಡು ಈಗ ಬೇಕಾದಷ್ಟು ಅಡಿಕೆ ಬೆಳೆಯುತ್ತಿದ್ದೇವೆ, ರೈತರಿಗೆ ಇದನ್ನ ನಾವು ಹೇಳಲು ಸಾಧ್ಯವಾಗುವುದಿಲ್ಲ. ಆದರೆ ಈ ರೀತಿ ಪ್ರೋತ್ಸಾಹ ಕೊಡುವುದು ಅನಗತ್ಯವಾದುದು ಎಂಬುದು ನನ್ನ ಅನಿಸಿಕೆ. 

ಕವಿನಮನ ಕುವೆಂಪು ರವರ ಸಾಹಿತ್ಯಕ್ಕೆ ಪ್ರೇರಣೆ ನೀಡಿದ ಕವಿಶೈಲದ ಬಂಡೆಯ ಮೇಲೆ ಏಕಾಂಗಿಯಾಗಿ ಕೂರಲು ಯಾರಿಂದಲೂ ಸಾಧ್ಯವಿಲ್ಲ..ಅಂದು ಗೈಡ್ ಮಾನಪ್ಪ ಹೊರಹಾಕಿದ ಸತ್ಯವೇನು ಗೊತ್ತಾ? ಈ ಸ್ಟೋರಿ ಮಾನಪ್ಪರಿಗೆ ಅರ್ಪಣೆ JP Exclusive

ಇನ್ನೂ ಐದತ್ತು ವರ್ಷದಲ್ಲಿ ಅಡಿಕೆ ರೈತರಿಗೆ ಮಾರಕವಾಗುತ್ತದೆ, ಒಂದು ವರ್ಷದಲ್ಲಿ ಒಂದು ಕೋಟಿ ಅಡಿಕೆಗೆ ಗಿಡಗಳು ನರ್ಸರಿಗಳಲ್ಲಿ ಖಾಲಿಯಾಗುತ್ತದೆ. ನಾವೆಲ್ಲಾ ಸಾಂಪ್ರದಾಯಿಕ ಅಡಿಕೆ ಬೆಳೆಗಾರರು, ಹಾಗಂತ ನೀವು ಅಡಿಕೆ ಬೆಳೆಯುತ್ತೀರಿ ಎಂದು ನಮಗೆ ಹೊಟ್ಟೆ ಕಿಚ್ಚಿಲ್ಲ ಎಂದರು. ತೆಂಗು, ಆಲುಗಡ್ಡೆ ಬೆಳಯುತ್ತಾ ಸಮೃದ್ಧವಾಗಿದ್ದಿರಿ, ಆದರೆ ಅಡಿಕೆ ಬೆಳೆದು ಬಾಯಿಗೆ ಮಣ್ಣು ಹಾಕಿಕೊಳ್ಳುವಂತಹ ಪರಿಸ್ಥಿತಿ ಬರುತ್ತದೆ. 

ಅಡಿಕೆಗೆ ಬೆಲೆ ಬಂದಿರುವುದೇ ಶಾಪವಾಗಿದೆ

ಇದನ್ನು ಸಹ ಓದಿ : ಕುವೆಂಪುರವರ ಸಾಹಿತ್ಯಕ್ಕೆ ಪ್ರೇರಣೆ ನೀಡಿದ ಕವಿಶೈಲದ ಬಂಡೆ ಮೇಲೆ ಹಾಡು ಹಾಡಿದ್ದೀರಾ!? ಕವಿನಮನದ ಹಳೆ ನೆನಪಿನ ವಿಡಿಯೋ ನೋಡಿ

ಇನ್ನೂ ಈ ವೇಳೆ ಮಾತನಾಡಿದ ಸ್ಕೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿಯವರು ರೈತರಿಗೆ ಯಾವುದು ಸರಿ ಎನಿಸುತ್ತದೆಯೋ ಅದನ್ನೆ ಬೆಳೆಯುತ್ತಾರೆ, ಅದನ್ನ ತಪ್ಪು ಎನ್ನಲಾಗುವುದಿಲ್ಲ, ಆದರೆ ಕೃಷಿಕರು ಒಂದೇ ಬೆಳೆಯನ್ನು ಬೆಳಯುವತ್ತ ಗಮನ ಹರಿಸಬಾರದು ಎಂದು ಸಲಹೆ ನೀಡಿದರು. 

ಇನ್ನೂ ತಮ್ಮ ಮಾತು ಮುಂದುವರಿಸಿದ ಗೃಹಸಚಿವರು ನಿರ್ದಿಷ್ಟವಾಗಿ ಇಂತಹ ಬೆಳೆಯನ್ನು ಬೆಳೆಯುತ್ತೇವೆ ಎಂದು, ವರ್ಲ್ಡ್​ ಬ್ಯಾಂಕ್ ನಿಂದ ಸಾಲ ತಂದಿದ್ದೇವೆ, ಆದರೆ ಹಾಗೆ ಬೆಳೆಯುತ್ತಿಲ್ಲ. ಇದನ್ನ ರೈತರಿಗೆ ಹೇಳಲಾಗುವುದಿಲ್ಲ. ಮೀಟಿಂಗ್​ನಲ್ಲಿ ಯಾರೋ ಇದನ್ನ ಪ್ರಸ್ತಾಪಿಸಿದಾಗ ಏನೂ ಲಾಭ ಮಾತ್ರ  ನೀವೇ ತಿನ್ನಬೇಕಾ, ನಾವ್ ತಿನ್ನಬಾರದಾ ಎಂದು ಇದ್ದ ರೈತರೆಲ್ಲಾ ಮೈಮೇಲೆ ಬಂದರು. ಹಾಗಾಗಿ ನಾವು ನಿಯಂತ್ರಣ ಹೇರುವುದು ಸರಿಯಾಗುವುದಿಲ್ಲ. ಅಡಿಕೆಗೆ ಬೆಲೆ ಬಂದಿರುವುದೇ ಅದಕ್ಕೆ ಶಾಪವಾಗಿದೆ ಎಂದರು. 

ಅಡಿಕೆ ರೇಟು ಕಡಿಮೆಯಾಗುವುದಿಲ್ಲ

ಇದನ್ನು ಸಹ ಓದಿ : ಕುಪ್ಪಳಿಯಲ್ಲಿ ನೋಡಲೇಬೇಕಾದ ಪ್ರಮುಖ ಸ್ಥಳಗಳು ಯಾವುವು ಗೊತ್ತಾ? ಕವಿನಮನ ಭಾಗ 1

ಇನ್ನೂ ಪ್ರತಿಕ್ರಿಯಿಸಿದ ಚಿತ್ರದುರ್ಗ, ಹಾಸನ, ತುಮಕೂರು, ದಾವಣಗೆರೆ ನೋಡಿದರೆ, ನಾವು ಮಲೆನಾಡಿನವರು ಲೆಕ್ಕಕ್ಕೆ ಇಲ್ಲದಂತಾಗಿದೆ. ಅಡಿಕೆ ತಿಂದರೆ ಹಾನಿ ಇಲ್ಲ. ಆದರೆ, ಅಗತ್ಯಕ್ಕಿಂತ ಹೆಚ್ಚು ಬೆಳೆದರೇ ಏನೇನು ದುಷ್ಪರಿಣಾಮ ಆಗಬಹುದು ಎಂಬುದು ಯೋಚಿಸಬೇಕು ಎಂದರು. ಈ ವೇಳೆ ಅನ್ನದಾನಿಯವರು ನೀವು ಅಡಿಕೆ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿ ಎಂದರು, ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್​ ರವರು, ನಿಮ್ಮ ಸಕ್ಕರೆ ಕಾರ್ಖಾನೆ ಏನಾಯ್ತು, ಸರ್ಕಾರ ಇದುವರೆಗೂ ಏಷ್ಟು ಕೋಟಿ ಕೊಟ್ಟಿದ್ದಾರೆ. ನೂರಾರು ಕೋಟಿ ಕೊಟ್ಟರೂ ನಿಮ್ಮ ಸಕ್ಕರೆ ಕಾರ್ಖಾನೆ ನಡೆಯುವುದಿಲ್ಲ ಪರಿಸ್ಥಿತಿ ಸಮಸ್ಯೆ ದೊಡ್ಡದಿದೆ ಎಂದರು. 
ಆಕ್ಸಿಡೆಂಟ್ ನ್ಯೂಸ್​ : ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ಮೂರು ಆಕ್ಸಿಡೆಂಟ್​/ ಬಸ್​ಗಳ ಡಿಕ್ಕಿ/ ಬೈಕ್​ ಆಕ್ಸಿಡೆಂಟ್/ ಓರ್ವನ ಸಾವು

ಇನ್ನೂ ಈ ವೇಳೆ ಧ್ವನಿಗೂಡಿಸಿದ ಮತ್ತೊಬ್ಬ ಶಾಸಕರು, ಅಡಿಕೆ ರೇಟು ಯಾವುದೇ ಕಾರಣಕ್ಕೂ ಕಡಿಮೆಯಾಗುವುದಿಲ್ಲ, ಅಡಿಕೆ ತಿನ್ನುವವವರ ಸಂಖ್ಯೆ ಜಾಸ್ತಿಯಾಗುತ್ತಿದೆ, ಕರ್ನಾಟಕವಷ್ಟೆ ಅಲ್ಲದೆ ತಮಿಳುನಾಡು ಹಾಗೂ ಇತರೇ ರಾಜ್ಯಗಳಲ್ಲಿಯು ಅಡಿಕೆ ತಿನ್ನುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಹೀಗಾಗಿ ಆತಂಕದ ಅವಶ್ಯತಕತೆ ಇಲ್ಲ ಎಂದರು. ಇನ್ನೂ ಆರಗ ಜ್ಞಾನೇಂದ್ರರವರ ಮಾತು ಕೆಲವೆಡೆ ವಿರೋಧಕ್ಕೆ ಕಾರಣವಾದರೆ, ಇನ್ನೂ ಕೆಲವರ ಬಾಯಲ್ಲಿ ಮಲೆನಾಡಿಗರ ಪರವಾದ ಧ್ವನಿ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ

ಸಾಗರ ತಾಲ್ಲೂಕಿನಲ್ಲಿ ಭೀಕರ ಅಪಘಾತ/ ಓರ್ವ ವಿದ್ಯಾರ್ಥಿನಿಯ ಸ್ಥಿತಿ ಗಂಭೀರ/ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Share This Article