ಶಿವಮೊಗ್ಗದಲ್ಲಿ ಐದು ನದಿಗಳು ಹುಟ್ಟುವ ಅಗಸ್ತ್ಯ ಪರ್ವತ ಎಲ್ಲಿದೆ ಗೊತ್ತಾ? ಆಂಜನೇಯ ಸ್ವಾಮಿಯ ಕೈ ಬೆರಳಿನಿಂದ ತೀರ್ಥೋದ್ಭವವಾದ ಕಥೆ ಗೊತ್ತಾ?

ಶಿವಪಾರ್ವತಿಯರು ಸ್ಥಾಪಿಸಿದ ಕೊಳವನ್ನು ಅವರ ಆಜ್ಞೆಯಂತೆ, ಆಂಜನೇಯ ಸ್ವಾಮಿಯವರು ಬೆಟ್ಟವೊಂದನ್ನು ತಂದಿಟ್ಟು ಮುಚ್ಚುತ್ತಾರೆಂತೆ. ಆ ಸಂದರ್ಭದಲ್ಲಿ ಅವರ ಕೈ ಬೆರಳ ಮೂಲಕ ಐದು ಚಿಲುಮೆ ಹುಟ್ಟುತ್ತವೆಯಂತೆ .

ಶಿವಮೊಗ್ಗದಲ್ಲಿ ಐದು ನದಿಗಳು ಹುಟ್ಟುವ ಅಗಸ್ತ್ಯ ಪರ್ವತ ಎಲ್ಲಿದೆ ಗೊತ್ತಾ?  ಆಂಜನೇಯ ಸ್ವಾಮಿಯ ಕೈ ಬೆರಳಿನಿಂದ ತೀರ್ಥೋದ್ಭವವಾದ ಕಥೆ ಗೊತ್ತಾ?
ಶಿವಮೊಗ್ಗದಲ್ಲಿ ಐದು ನದಿಗಳು ಹುಟ್ಟುವ ಅಗಸ್ತ್ಯ ಪರ್ವತ ಎಲ್ಲಿದೆ ಗೊತ್ತಾ? ಆಂಜನೇಯ ಸ್ವಾಮಿಯ ಕೈ ಬೆರಳಿನಿಂದ ತೀರ್ಥೋದ್ಭವವಾದ ಕಥೆ ಗೊತ್ತಾ?

ಶಿವಮೊಗ್ಗ ಅಗಾಧ ನಿಗೂಢ ಸಂಗತಿಗಳ ಒಡಲು, ಇಲ್ಲಿಲ್ಲ ಎಂಬ ಸಂಗತಿಗಳೇ ಅಪರೂಪ.  ಮಳೆಯ ವೀಡು, ಕಾಳಿಂಗದ ತವರಾಗಿರುವ ಶಿವಮೊಗ್ಗದಲ್ಲಿ ಐದು ನದಿಗಳು ಹುಟ್ಟುವ ಒಂದು ವಿಶೇಷ ಸ್ಥಳವಿದೆ. ಅದನ್ನು ಅಗಸ್ತ್ಯ ಪರ್ವತ ಎಂದು ಕರೆಯಲಾಗುತ್ತಿತ್ತು. ಆ ಪರ್ವತದ ಪವಿತ್ರ ಸ್ಥಳದದ ಬಗ್ಗೆಒಂದಷ್ಟು ಮಾಹಿತಿ ನಿಮ್ಮ ಮುಂದಿಡುತ್ತಿದ್ದೇವೆ.

ಶಿವಮೊಗ್ಗ ಸಿಟಿಯಿಂದ 61 ಕಿಲೋಮೀಟರ್​ ದೂರದಲ್ಲಿ ಹುಂಚ ಎಂಬ ಐತಿಹಾಸಿಕ ಊರಿನ ಸಮೀಪ ಬಿಲ್ಲೇಶ್ವರ ಎಂಬ ಬೆಟ್ಟ ಸಿಗುತ್ತದೆ. ಈ ಬಿಲ್ಲೇಶ್ವರ ಬೆಟ್ಟದ ಸಮೀಪ ಬಿಲ್ಲೇಶ್ವರ ಎಂಬ ದೇವಾಲಯವಿದೆ. ಸಾಕ್ಷಾತ್ ಶ್ರೀರಾಮ, ತನ್ನ ಪತ್ನಿ ಸೀತಾಮಾತೆಯು ಕೇಳಿದ ನೀರನ್ನ ಕೇಳುವ ಸಲುವಾಗಿ ನೆಲಕ್ಕೆ ಬಿಲ್ಲು ಹೂಡಿದ್ದನಂತೆ. ಆ ಸಂದರ್ಭದಲ್ಲಿಯೇ ಹುಟ್ಟಿದ ನದಿಯನ್ನ ಶರಾವತಿ ಎನ್ನಲಾಗುತ್ತದೆ. ಅದರ ಮೂಲ ಸ್ಥಳವನ್ನು ಅಂಬುತೀರ್ಥ ಎನ್ನಲಾಗುತ್ತದೆ. ಇನ್ನೂ ರಾಮ ಶರವನ್ನು ಬಿಡುವ ಮೊದಲು ಪೂಜೆ ಮಾಡಿದ ಈಶ್ವರನನ್ನು ಬಿಲ್ಲೇಶ್ವರ ಎಂದೇ ಜನರು ಕರೆದುಕೊಂಡು ಬಂದಿದ್ದಾರೆ.

ಇದೊಂದು ಕಡೆಯಾದರೆ, ಬಿಲ್ಲೇಶ್ವರ ಬೆಟ್ಟವನ್ನು ಅಗಸ್ತ್ಯ ಪರ್ವತ ಎಂದೇ ಕರೆಯಲಾಗುತ್ತದೆ. ಇಲ್ಲಿ ಪ್ರಮುಖವಾಗಿ ಐದು ನದಿಗಳು ಉಗಮಗೊಳ್ಳುತ್ತದೆ. ಮುಖ್ಯವಾಗಿ ಶರ್ಮಣಾವತಿ ಹಾಗೂ ಹರಿದ್ರಾವತಿ  ಮತ್ತು ಶರ್ಮಣ್ಯಾವತಿ ನದಿಗಳು ಉಗಮಗೊಂಡು ಶರಾವತಿ ನದಿಯನ್ನು ಸೇರುತ್ತದೆ.  ಇನ್ನೊಂದು ಕಡೆ ಕುಮದ್ವತಿ ಹಾಗೂ ಕುಶಾವತಿ ನದಿಗಳು ಹುಟ್ಟಿ ಮುಂದೆ ಕ್ರಮವಾಗಿ ತುಂಗಭದ್ರಾ ಹಾಗೂ ತುಂಗಾ ನದಿಯನ್ನು ಸೇರುತ್ತದೆ. ರು ನದಿಗಳು ಇನ್ನೊಂದು ನದಿಯ ಮೂಲಕ ಅರಬ್ಬಿ ಸಮುದ್ರ ಸೇರಿದರೆ, ಎರಡು ನದಿಗಳು ತುಂಗಭದ್ರಾ ನದಿಯ ಮೂಲಕ ಕೃಷ್ಣೆಯ ಪಾಲಾಗಿ ಬಂಗಾಳಕೊಲ್ಲಿಯನ್ನು ಸೇರುತ್ತದೆ.

ತ್ರದುರ್ಗ ಅಸ್ಥಿ ಪಂಜರ ನೆನಪಿಸಿದ ಘಟನೆ | 15-20 ದಿನದ ನಂತರ ಲಾರಿಯಲ್ಲಿ ವ್ಯಕ್ತಿಯ ಶವ ಪತ್ತೆ! ಶಿವಮೊಗ್ಗ ವೀರಭದ್ರ ಟಾಕೀಸ್​ ಬಳಿ ಘಟನೆ

ಶಿವಪಾರ್ವತಿಯರು ಸ್ಥಾಪಿಸಿದ ಕೊಳವನ್ನು ಅವರ ಆಜ್ಞೆಯಂತೆ, ಆಂಜನೇಯ ಸ್ವಾಮಿಯವರು ಬೆಟ್ಟವೊಂದನ್ನು ತಂದಿಟ್ಟು ಮುಚ್ಚುತ್ತಾರೆಂತೆ. ಆ ಸಂದರ್ಭದಲ್ಲಿ ಅವರ ಕೈ ಬೆರಳ ಮೂಲಕ ಐದು ಚಿಲುಮೆ ಹುಟ್ಟುತ್ತವೆಯಂತೆ . ಅವುಗಳೇ ಐದು ನದಿಗಳಾಗಿ ಹರಿಯುತ್ತವೆ ಎಂಬ ನಂಬಿಕೆಯಿದೆ. ಬಿಲ್ಲೇಶ್ವರ ದೇವಾಲಯದ ಸಮೀಪ ಕುಮಧ್ವತಿ ಹಾಗೂ ಕುಶಾವತಿ ನದಿಗಳು ಸೇರಿ ಮುನ್ನುಗ್ಗುವ ತೀರ್ಥ ಕುಮದ್ವತಿ ತೀರ್ಥವಿದೆ.ಉಳಿದ ಮೂರು ನದಿಗಳು ದೇವಾಲಯದ ಹಿಂಬದಿಯ ಕೊಳದ ಮೂಲಕ ಹಾದು ಶರಾವತಿಯನ್ನು ಕೂಡಿಕೊಳ್ಳುತ್ತದೆ.

ಸ್ನೇಹಿತರೆ ಶಿವಮೊಗ್ಗದ ಅಪರೂಪದ ಸಂಗತಿಗಳನ್ನು ತಿಳಿಸುವ ಪ್ರಯತ್ನ ಇದಾಗಿದ್ದು, ಸರ್ಕಾರಿ ದಾಖಲೆಗಳು ಹಾಗೂ ಇತಿಹಾಸದ ಪುಸ್ತಕ ಮತ್ತು ಸ್ಥಳೀಯರ ಮಾತುಗಳ ಆಧಾರದಲ್ಲಿ ವರದಿ ಪ್ರಕಟವಾಗುತ್ತಿದೆ. ಇವುಗಳಿಗೆ ಸಂಬಂಧಿಸಿದ ವಿವರಗಳಿಗೆ ನೀವೂ ಬರೆಯಬಹುದು