ಆ ಎರಡು ಸದ್ದುಗಳ ಬೆನ್ನು ಹತ್ತಿದ ತನಿಖಾಧಿಕಾರಿಗಳಿಗೆ ಸ್ಟೋಟದ ಕಾರಣ ಸಿಕ್ತಾ…ಸಿಕ್ಕಿದೆ..ಹೇಗಂತಿರಾ?

Hunsodu Shivamogga explosion aftermath

ಆ ಎರಡು ಸದ್ದುಗಳ ಬೆನ್ನು ಹತ್ತಿದ ತನಿಖಾಧಿಕಾರಿಗಳಿಗೆ ಸ್ಟೋಟದ ಕಾರಣ ಸಿಕ್ತಾ…ಸಿಕ್ಕಿದೆ..ಹೇಗಂತಿರಾ?
Hunsodu Shivamogga explosion aftermath
ಆ ಎರಡು ಸದ್ದುಗಳ ಬೆನ್ನು ಹತ್ತಿದ ತನಿಖಾಧಿಕಾರಿಗಳಿಗೆ ಸ್ಟೋಟದ ಕಾರಣ ಸಿಕ್ತಾ…ಸಿಕ್ಕಿದೆ..ಹೇಗಂತಿರಾ?

ಭಾರಿ ಸ್ಪೋಟದ ಮೊದಲು ಸಣ್ಣ ಸದ್ದು..
ಎರಡು ಸದ್ದುಗಳ ಆಯಾಮದಲ್ಲಿ ಚುರುಕುಗೊಂಡ ಚನಿಖೆ.

ಶಿವಮೊಗ್ಗ  ಜಿಲ್ಲೆಯ ಹುಣಸೋಡು ಎಸ್.ಎಸ್ ಕ್ರಷರ್ ನಲ್ಲಿ ಸಂಭಿಸಿದ ಸ್ಪೋಟದ ತನಿಖೆ ಚುರುಕುಗೊಂಡಿದೆ.ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿರುವ ತಜ್ಞರ ತಂಡ ಕೊನೆಗೂ ಸ್ಪೋಟಕ್ಕೆ ಕಾರಣವಾಗಿರವ ಅಂಶಗಳ ಎಳೆಗಳನ್ನುಪತ್ತೆ ಮಾಡುವ ತಾರ್ಕಿಕ ಘಟ್ಟದಲ್ಲಿದೆ.ಘಟನಾ ಸ್ಥಳದಲ್ಲಿ ಜೀವಂತ ಡಿಟೋನೇಟರ್ ಮತ್ತು ಅಮೋನಿಯಮ್ ನೈಟ್ರೆಟ್ ಜೆಲ್ ಪತ್ತೆಯಾಗಿದೆ.ಹೀಗಾಗಿ ಸ್ಪೋಟದ ತೀವೃತೆಯನ್ನು ಅಮೋನಿಯಂ ನೈಟ್ರೇಟ್ ಜೆಲ್,ಜಿಲೆಟಿನ್ ಸ್ಟಿಕ್,ಡಿಟೋನೇಟರ್ ಗಳು ಹೆಚ್ಚಿಸಿದೆ.ಅಲ್ಲದೆ ತಜ್ಞರ ತಂಡ ಸ್ಥಳೀಯರ ಮಾಹಿತಿ ಆದಾರಲ್ಲಿ ಕೂಡ ತನಿಖೆಗೆ ಚುರುಕು ಮುಟ್ಟಿಸಿದೆ.ಸ್ಥಳದಲ್ಲಿ ದೊರೆತ ಸ್ಪೋಟದ ವಸ್ತುಗಳು,ಘಟನಾ ಸ್ಥಳದ ಚಿತ್ರಣ,ಸ್ಥಳೀಯರ ಹೇಳಿಕೆಯ ಆದಾರದಲ್ಲಿ ತನಿಖೆ ಕೈಗೊಂಡಿದ್ದಾರೆ.ಸ್ಥಳೀಯರು ಹೇಳುವ ಪ್ರಕಾರ ದೊಡ್ಡ ಸ್ಪೋಟ ದ ಶಬ್ದಕ್ಕೂ ಒಂದು ನಿಮಿಷ ಮೊದಲು ಸಣ್ಷ ಸ್ಫೋಟದ ಸದ್ದು ಕೇಳಿಬಂದಿತ್ತು. ಇದರ ಎಳೆಯಲ್ಲಿ ತನಿಖೆ ಕೈಗೊಂಡ ಅಧಿಕಾರಿಗಳು ಎರಡು ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ. Hunsodu Shivamogga explosion aftermath

ಲಾರಿ ರಿವರ್ಸ್ ತೆಗೆಯುವಾಗ ವಿದ್ಯುತ್ ಸ್ಪರ್ಷ ಶಂಕೆ!
ತಂತಿ ತಗುಲಿ ಸ್ಪೋಟ ಸಂಭವಿಸಿರುವ ಸಾಧ್ಯತೆ?

ಹುಣಸೋಡು ಕಲ್ಲು ಕ್ವಾರಿ ಸ್ಫೋಟಕ್ಕೆ ಸ್ಪೋಟಕ ಸಾಗಿಸುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯ ಕಾರಣವಿರಬಹುದು ಎಂದು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.ಮೊನ್ನೆ ರಾತ್ರಿ 10.20ರ ವೇಳೆಗೆ ಎಸ್.ಎಸ್ ಕ್ರಷರ್ ಕ್ವಾರಿಗೆ ಬಂದಿದ್ದ ಲಾರಿಯನ್ನು ನಿಲುಗಡೆಗೊಳಿಸುವ ಸಂದರ್ಭದಲ್ಲಿ ಹಿಂದೆ ಚಲಿಸಿದ್ದು ಆಗ ಆಕಸ್ಮಿಕವಾಗಿ ಲಾರಿ ಅಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ.ಪರಿಣಾಮ ಆ ಕಂಬ ಮುರಿದು ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ಒಂದಕ್ಕೊಂದು ತಗುಲಿ ಶಾರ್ಟ್ ಸರ್ಕ್ಯೂಟ್ ಆಗಿ ಅಣತಿ ದೂರದಲ್ಲಿದ್ದ ಟ್ರಾನ್ಸ್ ಫಾರ್ಮರ್ ಸ್ಪೋಟ ಗೊಂಡಿದೆ..
ಆಗ ವಿದ್ಯುತ್ ತಂತಿ ಸ್ಪೋಟಕವಿದ್ದ ವಾಹನದ ಮೇಲೆ ಬಿದ್ದ ಪರಿಣಾಮವಾಗಿ ಸ್ಪೋಟ ಸಂಭವಿಸಿರಬಹುದು ಎಂದು ಮೂಲಗಳು ತಿಳಿಸಿವೆ.

ಸ್ಪೋಟಕ ವಾಹನದಿಂದ ಮತ್ತೊಂದು ವಾಹನಕ್ಕೆ ಸಾಗಿಸುವಾಗ ನಿರ್ಲಕ್ಷ್ಯ
ಅಮೋನಿಯಂ ನೈಟ್ರೇಟ್ ಮೇಲೆ ಒತ್ತಡ ಬಿದ್ದಿರುವ ಶಂಕ.

ಸ್ಪೋಟಕ ತುಂಬಿದ ಲಾರಿಯಲ್ಲಿದ್ದ ಜಿಲೆಟಿನ್ ಅಮೋನಿಯಂ ನೈಟ್ರೇಟ್ ಡಿಟೋನೇಟರ್ ನ್ನು ಬೊಲೊರೋ ವಾಹನಕ್ಕೆ ಸಾಗಿಸುವಾಗ ಕಾರ್ಮಿಕಲು ನಿರ್ಲಕ್ಷ್ಯ ತಾಳಿರಬಹುದು.ಅಲ್ಲಿದ್ದ ಕಾರ್ಮಿಕರು ಅಮೋನಿಯಂ ನೈಟ್ರೇಟ್ ಇರುವ ಬ್ಯಾಗನ್ನು ಎತ್ತಿ ಇಡುವ ಬದಲು ಬೊಲೋರೋ ಗೆ ಎತ್ತಿ ಹಾಕಿದರೆ..ಇದರಿಂದ ಒತ್ತಡವಾಗಿ ಅದು ಸ್ಪೋಟಗೊಂಡಿರಬಹುದು.ಇದರಿಂದ ಸಣ್ಣ ಸದ್ದು ಕೇಳಿದೆ.ಬೊಲೊರೋ ವಾಹನ ಸ್ಪೋಟ ಗೊಂಡ ನಂತರ ಅದರ ಬೆಂಕಿ ಕೆನ್ನಾಲಿಗೆ ಸ್ಪೋಟಕ ತುಂಬಿದ ಲಾರಿಗೆ ತಗುಲಿ ಅದು ದೊಡ್ಡ ಮಟ್ಟದಲ್ಲಿ ಸ್ಪೋಟಗೊಂಡಿರಬಹುದಾದ ಸಾದ್ಯತೆಗಳು ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.

ಕ್ವಾರಿ ಸ್ಪೋಟದ ಸ್ಥಳದಲ್ಲಿದ್ದ ಸ್ಪೋಟಕಗಳು ಪುಲ್ಬಾಮ ಧಾಳಿಗೆ ಉಗ್ರರು ಬಳಸಿದ್ದ ಸ್ಫೋಟಕಕ್ಕಿಂತ ಹತ್ತು ಪಟ್ಟು ಹೆಚ್ಚಳವಾಗಿತ್ತು ಎಂಬ ಆತಂಕದ ಸಂಗತಿ ಕೂಡ ಬಹಿರಂಗಗೊಂಡಿದೆ.ಸ್ಪೋಟಗೊಂಡ ವಾಹನದಲ್ಲಿ ಸುಮಾರು ಮೂರು ಸಾವಿರ ಕೆ.ಜಿ. ಜಿಲೆಟಿನ್ ಮತ್ತು ಡಿಟೋನೇಟರ್ ಅಮೋನಿಯಂ ನೈಟ್ರೇಟ್ ಜೆಲ್ ಗಳಿತ್ತು. ಪುಲ್ವಾಮ ಧಾಳಿ ವೇಳೆ ಮುನ್ನೂರು ಕೆ.ಜಿ. ಸ್ಪೋಟಕವನ್ನು ಉಗ್ರರು ಬಳಸಿದ್ದರು.ಭಾರೀ ಪ್ರಮಾಣದ ಸ್ಪೋಟಕದ ವಾಹನ ಸ್ಪೋಟಿಸಿದ್ದರಿಂದಲೇ ಭಾರೀ ಪ್ರಮಾಣದ ಸ್ಪೋಟದ ಸದ್ದು ಘಟನಾ ಸ್ಥಳದಿಂದ 130 ಕಿ.ಮಿ. ದೂರದವರೆಗೆ ಕೇಳಿಬರಲು ಕಾರಣವಾಯಿತು.