ಕೇಸ್ ನಂಬರ್ 0038/2024 | ಜಯಮ್ಮನನ್ನ ಕೊಂದು ಕೆರೆಗೆ ಕಲ್ಲು ಕಟ್ಟಿ ಎಸೆದವರು ಯಾರು ಗೊತ್ತಾ? ಮಯೂರ ಹತ್ಯಾ ಪ್ರಕರಣ ಏನಿದು?
Case No. 0038/2024 | Do you know who killed Jayamma and threw a stone into the lake? What is the Mayura murder case?
Shivamogga Apr 1, 2024 ಕೊಲೆ ಮಾಡಿ ತಪ್ಪಿಸಿಕೊಳ್ಳುವುದು ಕಷ್ಟಸಾಧ್ಯ. ಹಾಗಿದ್ರೂ ಕ್ರೈಂ ನಡೆಯುತ್ತಲೇ ಇರುತ್ತದೆ. ಹೇಗೋ ತಪ್ಪಿಸಿಕೊಳ್ಳುತ್ತೇವೆ ಎಂದು ಮಾಸ್ಟರ್ ಪ್ಲಾನ್ ಮಾಡುತ್ತಲೇ ಇರುತ್ತಾರೆ. ಅಪರಾಧ ಜಗತ್ತಿನಲ್ಲಿ ಇತ್ಯರ್ಥವಾಗದ ಪ್ರಕರಣಗಳು ಇಲ್ಲವೆಂದಲ್ಲ. ಅಂತಹ ಕೇಸ್‌ಗಳು ನಿಗೂಢವಾಗಿರುತ್ತವೆ ಮತ್ತು ಅಚ್ಚರಿ ಮೂಡಿಸುತ್ತದೆ. ಅಂತಹದ್ದೊಂದು ಕೇಸ್ ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಪೊಲೀಸ್ ಸ್ಟೇಷನ್ ಲಿಮಿಟ್ಸ್ ನಲ್ಲಿ ನಡೆದಿತ್ತು. ಅಪರಿಚಿತ ಶವದ ಪತ್ತೆಯೊಂದಿಗೆ ಆರಂಭವಾದ ಪ್ರಕರಣ, ಬೇಲಿ ಕಂಬದಿಂದಾಗಿ ನಿಗೂಢ ಕೊಲೆಯಾಗಿ ಮಾರ್ಪಾಡಾಗಿತ್ತು. ಆ ಬಳಿಕ ಇದೀಗ ಅಪ್ರಾಪ್ತನು ಸೇರಿ ಇಬ್ಬರ ಅರೆಸ್ಟ್
ಆಗುವುದರೊಂದಿಗೆ ಕೇಸ್ ಇವತ್ತಿನ ಮಲೆನಾಡು ಟುಡೆ ಕ್ರೈಂ ವರದಿಯಾಗಿದೆ.
ಕೇಸ್ ನಂಬರ್ 0038/2024/
ಅವತ್ತು ದಿನಾಂಕ: 18-03-2024 ರಂದು ಮಧ್ಯಾಹ್ನ ರಿಪ್ಪನ್ ಪೇಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಗೆ ಬರುವ ಹುಂಚಾ ಗ್ರಾಮದ ಮುತ್ತಿನ ಕೆರೆಯ ನೀರಿನಲಿ ಮಹಿಳೆಯ ಶವವೊಂದು ತೇಲುತ್ತಿತ್ತು. ಅದನ್ನ ಕಂಡ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ರು. ಸ್ಥಳಕ್ಕೆ ಬಂದು ಹೆಣವನ್ನ ಹೊರಕ್ಕೆ ತೆಗೆದ ಪೊಲೀಸರಿಗೆ ಒಂದು ವಿಷಯ ಸ್ಪಷ್ಟವಾಗಿತ್ತು. ಇದೊಂದು ಕೊಲೆ ಕೇಸ್! ಎನ್‌ಕ್ವೈರಿಯ ಹಾದಿಯನ್ನ ತುಂಬಾ ದೂರಕ್ಕೆ ತೆಗೆದುಕೊಂಡು ಹೋಗುವ ಪ್ರಕರಣ ಅನ್ನೋದು ಪೊಲೀಸರ ಮೈಂಡ್‌ಗೆ ಬಂದ್ಬಿಟ್ಟಿತ್ತು.
ಸ್ನೇಹಿತರೇ, ಆಜುಮಾಸು 60 ವರ್ಷದ ಮಹಿಳೆಯೊಬ್ಬಳನ್ನ ಬೇಲಿ ಕಂಬಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ಬಿಗಿದು ಮುತ್ತಿನ ಕೆರೆಗೆ ಎಸೆದಿದ್ದರು. ಆದರೆ ಆಕೆ ಯಾರು? ಅವಳ ಪೂರ್ವಪರ ಏನು? ಕೊಲೆಯಾಗಿದ್ದು ಯಾಕೆ? ಮಾಡಿದ್ಯಾರು? ಪೊಲೀಸರಿಗೆ ಯಾವ ಕ್ಲೂನು ಇರಲಿಲ್ಲ. ಇಂತಹ ಸಂದರ್ಭದಲ್ಲಿ ಪೊಲೀಸರು ವಹಿಸೋದು ತಾಳ್ಮೆ.. ಹೌದು. ಕ್ರೈಂ ಸೀನ್‌ಗಳಲ್ಲಿ ತಾಳ್ಮೆಯೇ ಎಷ್ಟೊ ಸಲ ಕ್ಲೂಗಳನ್ನ ತಂದುಕೊಡುತ್ತೆ.
ಕೇಸ್ ನಂಬರ್ 0038 ರಲ್ಲಿಯು ಹಾಗೆ ಆಗಿತ್ತು ಐಪಿಸಿ 201, 302 ಅಡಿ ಕೇಸ್ ದಾಖಲಿಸಿದ್ದ ಪೊಲೀಸರು ಪ್ರಕಟಣೆಯನ್ನ ಹೊರಡಿಸಿದ್ರು. ಅಪರಿಚಿತ ಶವದ ಗುರುತು ಪತ್ತೆಗೆ ಮನವಿ ಮಾಡಿದ್ರು. ಕಾಣೆಯಾದವರ ಬಗ್ಗೆ ದಾಖಲಾದ ಕಂಪ್ಲೆಂಟ್‌ಗಳ ವಿವವರಗಳಲ್ಲಿ ಮೃತದೇಹದ ಗುರುತಿನ ಹೋಲಿಕೆ ಚೆಕ್ ಮಾಡಿದ್ದರು. ಹೀಗೆ 2 ದಿನ ಕಳೆದಿತ್ತು. ಇತ್ತ ಲೋಕಲ್‌ನಲ್ಲಿ ಹೆಂಗೋ ಏನೋ ಯಾರು ಮಾಡಿದ್ದೋ ಇದು ಅಂತಾ ಚರ್ಚೆಯಾಗ್ತಿದ್ರೆ ಅತ್ತ ಪೊಲೀಸರು ಸೈಲೆಂಟ್ ಆಗಿದ್ದರು.. ಇದನ್ನ ನೋಡಿ ಕೊಲೆಗಾರನೂ ತಾನು ಗೆದ್ದೆ ಎಂದು ಆರಾಮಾಗಿದ್ದನೋ ಏನೋ?
ಇಷ್ಟರ ನಡುವೆ ಮೃತದೇಹದ ಗುರುತು ಹುಡುಕಿಕೊಂಡು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ನೆರೆ ಜಿಲ್ಲೆ ದಾವಣಗೆರೆ ತಾಲ್ಲೂಕು ಹೊನ್ನಾಳಿಯಿಂದ ಒಬ್ಬರು ಬಂದಿದ್ದರು. ಶವಗಾರದಲ್ಲಿರೋ ಬಾಡಿ ನೋಡಿ ಸಾರ್ ಇವರು ನಮ್ಮ ಅತ್ತೆ ಜಯಮ್ಮ, ವಯಸ್ಸು 62 ಎಂದು ಸತ್ತವರ ಪರಿಚಯ ಮಾಡಿದ್ದರು..
ಬಾಡಿ ಐಡೆಂಟಿಫೈ ಆದ ಬೆನ್ನಲ್ಲೆ ಶವವನ್ನು ಸಂಬಂಧಿಕರ ಸುಪರ್ಧಿಗೆ ಕೊಟ್ಟು ಅಂತ್ಯಕ್ರಿಯೆಗೆ ಅವಕಾಶ ಮಾಡಿಕೊಟ್ಟ ಪೊಲೀಸರು, ಹೊನ್ನಾಳಿಗೂ ರಿಪ್ಪನ್ ಪೇಟೆ ಸಮೀಪದ ಹುಂಚಾ ಗ್ರಾಮಕ್ಕೂ ಇರುವ ಮಿಸ್ಸಿಂಗ್ ಲಿಂಕ್ ಹುಡುಕಲು ಆರಂಭಿಸಿದ್ದರು. ಸಾಧ್ಯತೆಗಳನ್ನ ಪರಿಶೀಲಿಸಲು ಆರಂಭಿಸಿದ ಪೊಲೀಸರಿಗೆ ಮೊದಲು ಸಿಗೋದು ಫೋನ್ ಕಾಲ್ ರೆಕಾರ್ಡ್‌ಗಳು. ಅದರ ಅನ್ವಯ ಜಯಮ್ಮರಿಗೆ ಹೋಗಿ ಬಂದ ಕರೆಗಳನ್ನು ಪರಿಶೀಲಿಸಿದ್ದಾರೆ. ಅವರು ಕೆಲಸ ಮಾಡುವ ಸ್ಥಳಗಳಲ್ಲಿ ವಿಚಾರಿಸಿದ್ದಾರೆ. ಅವರೊಂದಿಗೆ ವಹಿವಾಟು ಮಾಡಿದ್ದವರನ್ನ ಎನ್‌ಕ್ವೈರಿ ಮಾಡಿದ್ದಾರೆ. ಅಂತಿಮವಾಗಿ ಅಪ್ರಾಪ್ತನೊಬ್ಬನ ಜೊತೆ ಮಯೂರ ಎಂಬಾತನನ್ನ ರಿಪ್ಪನ್ ಪೇಟೆ ಪೊಲೀಸ್ ಸ್ಟೇಷನ್‌ಗೆ ಎಳೆತಂದು ಟೆಲ್ ದಿ ಟ್ರುತ್ ಎಂದಿದ್ದಾರೆ.
ಮಾರ್ಚ್ 18 ಬಾಡಿ ಪತ್ತೆಯಾಗಿತ್ತು, 20 ಕ್ಕೆ ಮೃತದೇಹದ ಗುರುತು ಸಿಕ್ಕಿತ್ತು, ಆಲ್ ಮೋಸ್ಟ್ ಮಾರ್ಚ್ 31 ಕ್ಕೆ ಆರೋಪಿ ಪೊಲೀಸರ ಮುಂದಿದ್ದ. ಇಷ್ಟಕ್ಕೂ ಏನಾಯ್ತು ಹೇಗಾಯ್ತು ಎಂಬುದನ್ನ ನೋಡುತ್ತಾ ಹೋದರೆ, ಜಯಮ್ಮನ ಕೊಲೆ ಕೇಸ್‌ನ ಪ್ರಮುಖ ಆರೋಪಿ ಮಯೂರ. ಈತನ ಅತ್ತೆ ಶಿವಮೊಗ್ಗದ ಹೊಳಲೂರಿನಲ್ಲಿರೋ ಆಶ್ರಮದಲ್ಲಿ ಕೆಲಸ ಮಾಡ್ತಿದ್ದಾರೆ. ಅವರಿಗೆ ಈ ಜಯಮ್ಮ ಪರಿಚಯಸ್ಥರು. ಅತ್ತೆ ಮೂಲಕ ಜಯಮ್ಮರನ್ನ ಪರಿಚಯ ಮಾಡಿಕೊಂಡಿದ್ದ ಮಯೂರ, ಆಕೆಯ ಬಳಿ ಒಂದಿಷ್ಟು ಸಾಲ ಪಡೆದುಕೊಂಡಿದ್ದ.
ದುಡ್ಡು ಕಾಸಿನ ವಿಚಾರದಲ್ಲಿ ಶಿಸ್ತಿನಲ್ಲಿದ್ದ ಜಯಮ್ಮ, ಹೇಳಿದ ಟೈಂಗೆ ಕೊಟ್ಟ ಸಾಲ ವಾಪಸ್ ಕೇಳಿದ್ದಾಳೆ. ಮಯೂರನ ಹತ್ರ ದುಡ್ಡಿಲ್ಲದೇ ಕೈ ಎತ್ತುವ ಆಲೋಚನೆಯಲ್ಲಿದ್ದ. ಘಾಟಿ ಜಯಮ್ಮ ಅಷ್ಟು ಸುಲಭಕ್ಕೆ ಬಿಡುವವಳಾಗಿರಲಿಲ್ಲ. ಹೀಗಾಗಿ ಮಯೂರ ಅವಳನ್ನ ಮುಗಿಸಿದ್ರೆ ಸಾಲದ ತಾಪತ್ರಯ ತಪ್ಪುತ್ತೆ ಎಂದುಕೊಂಡು ಸ್ಕೆಚ್ ಹಾಕಿದ. ಅದಕ್ಕಾಗಿ ರಿಪ್ಪನ್‌ಪೇಟೆಯಲ್ಲಿ ಕಡಿಮೆ ರೇಟ್‌ಗೆ ಸೈಟ್ ಕೊಡಿಸುವುದಾಗಿ ಹೇಳಿ ಜಯಮ್ಮರನ್ನ ರಿಪ್ಪನ್ ಪೇಟೆಗೆ ಕರೆಸಿಕೊಂಡಿದ್ದ.
ಮಯೂರನ ಮಾತು ನಂಬಿ ರಿಪ್ಪನ್‌ಪೇಟೆಗೆ ಬಂದಿಳಿದ ಜಯಮ್ಮರಿಗೆ ತಮ್ಮ ಸಾವು ಎದುರಾಗಿತ್ತು ಎಂಬುದು ಗೊತ್ತಾಗಿರಲಿಲ್ಲ. ನಂಬಿಕೆ ಮೇಲೆ ಬಂದ ಅವಳನ್ನ ಆಪ್ತನ ಕಾರಿನಲ್ಲಿ ಕೂರಿಸಿಕೊಂಡ ಮಯೂರ, ಅಪ್ರಾಪ್ತನ ನೆರವಿನೊಂದಿಗೆ ಕಾರಲ್ಲೆ ಕೊಲೆ ಮಾಡಿದ್ದಾರೆ. ಕುತ್ತಿಗೆಗೆ ಹಗ್ಗ ಬಿಗಿದು ಜಯಮ್ಮರನ್ನ ಕೊಂದ ಮಯೂರ ರಾತ್ರಿಯಾಗುವವರೆಗೂ ಕಾದಿದ್ದಾನೆ. ಆನಂತರ ಜಯಮ್ಮರನ್ನ ಬೇಲಿ ಕಂಬಕ್ಕೆ ಕಟ್ಟಿ, ಪ್ಲಾಸ್ಟಿಕ್ ಹಗ್ಗದಲ್ಲಿ ಬಿಗಿದು ಹುಂಚಾದ ಮುತ್ತಿನ ಕೆರೆಗೆ ಎಸೆದು ಹೋಗಿದ್ದ.
ತನ್ನವರನ್ನ ಕಳೆದುಕೊಂಡಿದ್ದ ಜಯಮ್ಮ, ಮೊಮ್ಮಕ್ಕಳಿಗಾಗಿ ದುಡಿದಿದ್ದನ್ನ ಕೂಡಿಡ್ತಿದ್ದಳು. ಅವಳನ್ನ ಕೊಂದರೆ ಚಿನ್ನ ಸಿಗುತ್ತೆ, ಸಾಲದ ಕಿರಿಕಿರಿ ತಪ್ಪುತ್ತೆ ಅಂತಾ ಮಯೂರ ಆಕೆಯನ್ನ ಕೊಲೆ ಮಾಡಿದ್ದ. ಯಾರದ್ದೋ ದುರುದ್ದೇಶಕ್ಕೆ ಅಪ್ರಾಪ್ತನೊಬ್ಬ ಸಾಥ್ ಕೊಟ್ಟಿದ್ದ. ಸವಾಲಾಗಿದ್ದ ಕೇಸ್‌ನಲ್ಲಿ ಗೆದ್ದವರು ಮಾತ್ರ ರಿಪ್ಪನ್ ಪೇಟೆ ಪೊಲೀಸ್