ಪ್ಲಾನಿಂಗ್​ ಮಾಸ್ಟರ್​ ಮೈಂಡ್ ಬಚ್ಚಾನ ಎನ್​ಕೌಂಟರ್​ ಡ್ರಾಮಾ? ವಿಡಿಯೋ ನಕಲಿನಾ? ಯಾಕೆ ಗೊತ್ತಾ?

Planning mastermind Bachchan's encounter drama? Is the video fake? Do you know why?

ಪ್ಲಾನಿಂಗ್​ ಮಾಸ್ಟರ್​ ಮೈಂಡ್ ಬಚ್ಚಾನ ಎನ್​ಕೌಂಟರ್​ ಡ್ರಾಮಾ? ವಿಡಿಯೋ ನಕಲಿನಾ?  ಯಾಕೆ ಗೊತ್ತಾ?
Planning mastermind Bachchan's encounter drama? Is the video fake? Do you know why?

ಪ್ಲಾನಿಂಗ್​ ಮಾಸ್ಟರ್​ ಮೈಂಡ್ ಬಚ್ಚಾನ ಎನ್​ಕೌಂಟರ್​ ಡ್ರಾಮಾ? ರೌಡಿಶೀಟರ್​ಗೆ ಪೊಲೀಸರು ಹೊಡೆಯೋ ವಿಡಿಯೋ ನಕಲಿನಾ? ಶಿವಮೊಗ್ಗ ಜೈಲಲ್ಲಿ ನಡೆತಿರೋ ‘ದೃಶ್ಯ’ ವರದಿ ಬಗ್ಗೆ ಶಿವಮೊಗ್ಗ ಎಸ್​ಪಿ ತನಿಖೆ ನಡೆಸಲೇಬೇಕು ?

ಇದು ಮಲೆನಾಡು ಟುಡೇ ಎಕ್ಸ್​ಕ್ಲ್ಯೂಸಿವ್ ವರದಿ

ಇವತ್ತು ಶಿವಮೊಗ್ಗ ಜೈಲಿನಿಂದ ರೌಡಿಶೀಟರ್ ಬಚ್ಚಾನ ಹೊಸದೊಂದು ವಿಡಿಯೋ ಹೊರಬಿದ್ದಿದೆ.ವಿಡಿಯೋ ಹೊರಕ್ಕೆ ಬಂದಿದ್ದು ಹೇಗೆ? ಯಾರು ಶೂಟಿಂಗ್​ ಮಾಡಿದ್ದು?

ಅಸಲಿಗೆ ಅದು ಅಸಲಿಯೇ? ಅಥವಾ ನಕಲಿಯೇ?

ಶಿವಮೊಗ್ಗ ಜೈಲಿನಲ್ಲಿ ಪ್ಲಾನಿಂಗ್​ ಮಾಸ್ಟರ್​ ಮೈಂಡ್ ಬಚ್ಚನಾ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದು ನಿಜವೇನಾ?

ಅಥವಾ ಪೊಲೀಸರನ್ನೇ ಹಣಿಯುವ ಮತ್ತೊಂದು ಕುತಂತ್ರನಾ?

ಪೊಲೀಸ್​ ಅಧಿಕಾರಿಗಳು ಶಿವಮೊಗ್ಗ ಜೈಲಿನ ಸೆಲ್​ನ ಒಳಕ್ಕೆ ಹೋಗಿ, ಕಾರಾಗೃಹ ಸುಪರ್ಧಿಯಲ್ಲಿರುವ ಆರೋಪಿಯನ್ನು ವರ್ಕ್​​ ಮಾಡಲು ಸಾಧ್ಯವೇ?

ಹಾಗೊಂದು ವೇಳೆ ಬಚ್ಚಾ & ಗ್ಯಾಂಗ್​ನನ್ನ ವರ್ಕ್​ ಮಾಡಿದ್ದೇ ಆದಲ್ಲಿ, ಅದರ ವಿಡಿಯೋ ಮಾಡಿಕೊಳ್ಳುವಷ್ಟು ದಡ್ಡರೇ ಪೊಲೀಸ್​ ಅಧಿಕಾರಿಗಳು

ಕದ್ದು ಮುಚ್ಚಿ ಪೊಲೀಸ್​ ವರ್ಕ್​​ನ್ನ ಮೊಬೈಲ್​ನಲ್ಲಿ ಶೂಟಿಂಗ್​ ಮಾಡಿದ್ದಾದರೂ ಯಾರು?

ಎಸ್​ಪಿ ಲಕ್ಷ್ಮೀಪ್ರಸಾದ್ ಇದನ್ನ ತನಿಖೆ ನಡೆಸಲೇಬೇಕು?

ಹೌದು, ಯಾಕೆಂದರೆ, ಜೈಲಿನಲ್ಲಿ ಇರುವಾಗ ಆರೋಪಿಗಳ ಮೇಲೆ ಪೊಲೀಸ್ ಅಧಿಕಾರಿಗಳು ಲಾಠಿ ಬೀಸಿದ್ದೇ
ಆದರೆ, ಅದು ಅಕ್ಷಮ್ಯ ಅಪರಾಧ ಆಗುತ್ತದೆ.

ಅಂತಹ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ಆದರೆ & ಆದರೆ,

ಶಿವಮೊಗ್ಗ ಜೈಲಿನಿಂದ ಹೊರಬಿದ್ದಿರುವ ವಿಡಿಯೋ ನಕಲಿ ವಿಡಿಯೋ! ಅದೊಂದು ದೃಶ್ಯ ಸಿನಿಮಾ ಸ್ಟೈಲ್​ನಲ್ಲಿ ಸೃಷ್ಟಿಸಿರೋ ವಿಡಿಯೋ ಎಂದು ಶಿವಮೊಗ್ಗ ಜೈಲು ಅಧೀಕ್ಷಕ ಮಹೇಶ್ ಎ ಜಿಗಣಿ ಸ್ಪಷ್ಟವಾಗಿ ತಿಳಿಸಿದ್ದಾರೆ.

ಇದು ಮೊದಲನೇ ವಿಷಯ. ಇನ್ನೂ ವಿಡಿಯೋ ವಿಚಾರದಲ್ಲಿ ಇರುವ ಪಿನ್​ ಟು ಪಿನ್ ಪಾಯಿಂಟ್​ಗಳನ್ನ ನಿಮ್ಮ ಮುಂದೆ ಇಡುತ್ತೇವೆ.

ಅಸಲಿಗೆ ವಿಡಿಯೋ ಯಾವತ್ತಿನದ್ದು ಎನ್ನುವುದು ಇದುವರೆಗೂ ಸ್ಪಷ್ಟವಾಗಿಲ್ಲ.

ನಿನ್ನೆ, ಮೊನ್ನೆ, ಆಚೆ ಮೊನ್ನೆಯ ವಿಡಿಯೋ ಇದಾಗಿದ್ದರೇ, ಖಂಡಿತ ಇಂತಹ ದೃಶ್ಯ ಸಿಗೋ ಚಾನ್ಸೇ ಇಲ್ಲ. ಯಾಕೆಂದರೆ ಬಚ್ಚಾ ಹಾಗೂ ಆತನ ಸಹಚರರು ಇನ್ನೂ ಮೆಗ್ಗಾನ್​ ಆಸ್ಪತ್ರೆಯಲ್ಲಿದ್ದಾರೆ.

ಬಚ್ಚಾ ಹಾಗೂ ಆತನ ಸಹಚರರ ಮೇಲೆ ಜೈಲಿನ ಸೆಲ್​ನಲ್ಲಿ ಪೊಲೀಸರು ಲಾಠಿ ಬೀಸೋದಕ್ಕೆ ಸಾಧ್ಯವೇ ಇಲ್ಲ. ಯಾಕೆಂದರೆ,

ಬಚ್ಚಾ ವಿಚಾರಣಾಧೀನ ಕೈದಿ ಆತನ ಜವಾಬ್ದಾರಿ ಕಾರಾಗೃಹ ಸಿಬ್ಬಂದಿಯದ್ದಾಗಿರುತ್ತದೆ. ಕಾರಾಗೃಹ ಸಿಬ್ಬಂದಿ, ಯಾವ ಕಾರಣಕ್ಕೂ ಪೊಲೀಸರ ಹಸ್ತಕ್ಷೇಪಕ್ಕೆ ಅವಕಾಶ ನೀಡಲಾರರು.

ಕೋರ್ಟ್​ ಪರ್ಮಿಶನ್​ ಇದ್ದಲ್ಲಿ ಮಾತ್ರ, ಆರೋಪಿಯನ್ನು ವಿಚಾರಣೆ ನಡೆಸಬಹುದು ಪೊಲೀಸರು. ಇದರ ಹೊರತಾಗಿ ಇನ್ಯಾವ ಕ್ರಮಕ್ಕೂ ಕಾರಾಗೃಹದಲ್ಲಿ ಅನುಮತಿ ಸಿಗೋದಿಲ್ಲ.

ವಿತ್ ಔಟ್​ ಯೂನಿಫಾರಮ್​ ಪೊಲೀಸರೇ ಆಗಲಿ ಕಾರಾಗೃಹ ಇಲಾಖೆ ಸಿಬ್ಬಂದಿಯೇ ಆಗಲಿ ಸೆಲ್​ನ ಒಳಕ್ಕೆ ಹೋಗುವಂತಿಲ್ಲ.

ಹೊರಬಿದ್ದಿರೋ ವಿಡಿಯೋಗಳಲ್ಲಿ ಯೂನಿಫಾರಮ್​ ಇಲ್ಲದೇ ಇರುವ ವ್ಯಕ್ತಿಯೊಬ್ಬರು ಲಾಠಿಯಿಂದ ಬೀಸುತ್ತಿದ್ದಾರೆ.

ಸೆಲ್​ನಲ್ಲಿ ಯೂನಿಫಾರಮ್​ ಇಲ್ಲದೇ ಇರುವವರು ಎಂದರೇ ಅವರು ವಿಚಾರಣಾಧೀನ ಕೈದಿಗಳು ಅನ್ನುವುದರಲ್ಲಿ ಯಾವುದೆ ಅನುಮಾನ ಇಲ್ಲ.

ಜೈಲಿನಲ್ಲಿ ಇರುವ ಸಿಸಿ ಕ್ಯಾಮರಾಗಳು ಪೊಲೀಸರು ಹಾಗೂ ಕಾರಾಗೃಹ ಸಿಬ್ಬಂದಿ ಚಲನವಲನಗಳನ್ನ ರೆಕಾರ್ಡ್​ ಮಾಡಿರುತ್ತವೆ.

ಅಧಿಕೃತವಾಗಿ ನಡೆಯುವ ಈ ರೆಕಾರ್ಡಿಂಗ್​ಗಳನ್ನು ಕಣ್ತಪ್ಪಿಸಿ ಪೊಲೀಸರು ಬಚ್ಚನಾ ಮೇಲೆ ವರ್ಕ್​ಔಟ್ ಮಾಡಲು ಸಾಧ್ಯವಿದೆಯಾ ಅನ್ನೋದು ಡೌಟ್

ಇನ್ನೂ ವಿಡಿಯೋದಲ್ಲಿ ವರ್ಕ್​​ ಮಾಡಿದ್ದಾರೆ ಎನ್ನಲಾದ ಪೊಲೀಸ್​ ಅಧಿಕಾರಿಗಳು ಕಾರಾಗೃಹಕ್ಕೆ ದಾಳಿ ಮಾಡಿದ್ದು ಒಂದೇ ದಿನ, ಮತ್ತೆ ಅಲ್ಲಿಗೆ ಹೋಗಿಲ್ಲ. ಇದನ್ನ ಅದೀಕ್ಷಕರೇ ಸ್ಪಷ್ಟಪಡಿಸಿದ್ದಾರೆ.

ಹಾಗೆ, ರೇಡ್​ ನಡೆಸಿದ್ದ ದಿನವೂ ಸಹ ಬಚ್ಚಾನ ಸೆಲ್​ಗೆ ಹೋಗುವಾಗ ಇನ್​ಸ್ಪೆಕ್ಟರ್ ಗುರುರಾಜ್​ ಹಾಗೂ ತಂಡದ ಜೊತೆಯಲ್ಲಿ ಕಾರಾಗೃಹ ಸಿಬ್ಬಂದಿಯು ಇದ್ದರು. ಅದು ಸಹ ಡ್ಯೂಟಿ ಸಮವಸ್ತ್ರದೊಂದಿಗೆ.

ಈ ಸಂದರ್ಭದಲ್ಲಿಯೇ ಬಚ್ಚಾನ ಮೇಲೆ ಪೊಲೀಸರು ವರ್ಕ್​ ಮಾಡಿದ್ದರೇ, ಅದಕ್ಕೆ ಕಾರಾಗೃಹ ಸಿಬ್ಬಂದಿ ಅವಕಾಶ ನೇ ನೀಡುತ್ತಿರಲಿಲ್ಲ.

ಇನ್ನೂ ರೌಡಿಶೀಟರ್​ ಬಚ್ಚಾ , ಒಬ್ಬ ಮಾಸ್ಟರ್​ ಪ್ಲಾನಿಂಗ್​ ಮೈಂಡ್​, ಆತನದ್ದು ಬರೀ ಬೆದರಿಕೆ ಹಾಗೂ ಕುತಂತ್ರದ ಆಟ.

ಈ ಸಲ ಸೈಬರ್​ ಕ್ರೈಂ ಇನ್​ಸ್ಪೆಕ್ಟರ್​ ಗುರುರಾಜ್​ರನ್ನ ಟಾರ್ಗೆಟ್ ಮಾಡುವ ಕಾರಣಕ್ಕೆ ತನ್ನ ಸಹಚರರ ಜೊತೆ ಸೇರಿ ವಿಡಿಯೋ ಮಾಡಿದ್ದಾನೆ.

ಇಂತಹ ಹಲವು ವಿಡಿಯೋಗಳ ಸಂಗ್ರಹವೇ ಬಚ್ಚಾನ ಬಳಿ ಇದೆ ಎನ್ನಲಾಗುತ್ತಿದೆ. ಒಂದೊಂದೆ ವಿಡಿಯೋಗಳು ಬೇರೆ ಬೇರೆ ರೂಪದಲ್ಲಿ ಬಿಡುಗಡೆಯಾಗುತ್ತಿದೆ.

ಸದ್ಯ ರಿಲೀಸ್​ ಆಗಿರೋ ವಿಡಿಯೋ ಆತನದ್ದೆ ಸೃಷ್ಟಿ ಅನ್ನೋದು ಬಹುತೇಕ ಗೊತ್ತಾಗುತ್ತಿದೆ.

ಪರಪ್ಪನ ಅಗ್ರಹಾರದಲ್ಲೂ ಇದನ್ನೆ ಮಾಡಿಕೊಂಡು ಅಧಿಕಾರಿಗಳನ್ನು ಭೀತಿಯಲ್ಲಿ ಇರಿಸಿದ್ದ.

ಅದೇ ಆಟವನ್ನು ಶಿವಮೊಗ್ಗ ಜೈಲಿನಲ್ಲಿಯು ಆಡುತ್ತಿದ್ದಾನೆ. ಆದರೆ ಶಿವಮೊಗ್ಗ ಪೊಲೀಸರು ಇದಕ್ಕೆ ಸೊಪ್ಪು ಹಾಕುವ ಲಕ್ಷಣ ತೋರುತ್ತಿಲ್ಲ.

ಈ ಕಾರಣಕ್ಕೆ ಸಾಲು ಸಾಲು ವಿಡಿಯೋ ಸ್ಟೋರಿಗಳು ಸೃಷ್ಟಿಯಾಗುತ್ತಿವೆ. ಇಲ್ಲಿ ದಡ್ಡರು ಯಾರು ಆಗುತ್ತಿರೋದು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ

ಆದರೆ, ಬಚ್ಚಾನ ಕೈಗೆ ಪೊಲೀಸರ ಲಾಠಿ ಹಾಗೂ ಮತ್ತೆ ಮೊಬೈಲ್​ ಹೇಗೆ ಸಿಕ್ಕಿತ್ತು ಅನ್ನೋದಷ್ಟೆ ಸದ್ಯದ ಪ್ರಶ್ನೆ. ಈ ಬಗ್ಗೆ ಕಾರಾಗೃಹ ಅಧೀಕ್ಷಕರೇ ಗಮನ ಹರಿಸಬೇಕು.

ಜವಾಬ್ದಾರಿಯುತ ಸ್ಥಾನದಲ್ಲಿರುವ ಮಹೇಶ್ ಎ ಜಿಗಣಿ ತುಸು ಜಾಸ್ತಿಯೇ ಗಮನ ಕೇಂದ್ರಿಕರಿಸಬೇಕಿದೆ.

ಶಿವಮೊಗ್ಗ ಎಸ್​ಪಿ ಲಕ್ಷ್ಮೀಪ್ರಸಾದ್​ರವರು ವಿಡಿಯೋ ಸ್ಟೋರಿಯನ್ನು ಗಂಭೀರವಾಗಿ ಪರಿಗಣಿಸಿ, ಕಾರಣೀಕರ್ತರ ವಿರುದ್ದ ಕ್ರಮ ಕೈಗೊಳ್ಳಬೇಕಿದೆ.

ವರದಿ : ಬಾಬು

ಪ್ರತಿಷ್ಠಿತ ಕಾಲೇಜುಗಳ ಪಿಯುಸಿ ವಿದ್ಯಾರ್ಥಿನಿಯರನ್ನ ಬಳಸಿಕೊಂಡು ಹೈಟೆಕ್​ ವೇಶ್ಯಾವಾಟಿಕೆ! ಸಿಸಿ ಕ್ಯಾಮರಾ ಇಟ್ಟುಕೊಂಡು ಹೇಗೆ ಬ್ಲ್ಯಾಕ್​ ಮೇಲ್​ ಮಾಡ್ತಿದ್ರು ಗೊತ್ತಾ? ‘ಕ್ಲಾಸ್​ ಬಂಕ್​ ’ ಮಾಡುವ ಮಕ್ಕಳ ಬಗೆಗಿನ ಮಾಹಿತಿಯಿಂದ ಏನೇನೆಲ್ಲಾ ಆಯ್ತು ನೀವೇ ಓದಿ