ಯೂಟ್ಯೂಬ್‌ನಲ್ಲಿ ಬಂತು ಜ್ಯೋತಿಷ್ಯದ ಜಾಹಿರಾತು! ಕರೆಮಾಡಿ ಮಾತನಾಡಿದ ಮಹಿಳೆಗೆ 9 ಲಕ್ಷ ವಂಚನೆಯ ಶಾಕ್!‌ ಹೀಗೂ ಆಗುತ್ತೆ ಎಚ್ಚರ!

An FIR has been registered at Shimoga CEN Police Station in connection with fraud of Rs 9 lakh to a woman who called after seeing an ad for astrology on YouTube.

ಯೂಟ್ಯೂಬ್‌ನಲ್ಲಿ ಬಂತು ಜ್ಯೋತಿಷ್ಯದ ಜಾಹಿರಾತು! ಕರೆಮಾಡಿ ಮಾತನಾಡಿದ ಮಹಿಳೆಗೆ 9 ಲಕ್ಷ ವಂಚನೆಯ ಶಾಕ್!‌ ಹೀಗೂ ಆಗುತ್ತೆ ಎಚ್ಚರ!
Shimoga CEN Police Station

Shivamogga  Mar 28, 2024 Shimoga CEN Police Station   ಯೂಟ್ಯೂಬ್‌ನಲ್ಲಿ ಬಂದ ಭವಿಷ್ಯ ಹೇಳುವವನ ಜಾಹಿರಾತು ನಂಬಿ ಮಹಿಳೆಯೊಬ್ಬರು ಒಂಬತ್ತು ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಬಗ್ಗೆ ಶಿವಮೊಗ್ಗ ಸಿಇಎನ್‌ ಪೊಲೀಸ್‌ ಸ್ಟೇಷನ್‌ನಲ್ಲಿ ಕಂಪ್ಲೆಂಟ್‌ ದಾಖಲಾಗಿದ್ದು ಎಫ್‌ಐಆರ್‌ ಆಗಿದೆ. 

ಸಮಸ್ಯೆ ಯಾರಿಗಿರಲ್ಲ ಹೇಳಿ.. ಯಾರ ಬದುಕು ಸಹ ಹೂವಲ್ಲ, ಎಲ್ಲರಿಗೂ ಅವರದ್ದೇ ಆದ ಸಮಸ್ಯೆಯಿರುತ್ತದೆ. ಸಮಸ್ಯೆಗೆ ಪರಿಹಾರ ಹುಡುಕುತ್ತಾ ಹೋಗುವುದು ಮನುಷ್ಯರ ಗುಣ. ಆದರೆ ಈ ಸಂದರ್ಭದಲ್ಲಿ ಮತ್ತೇನೋ ಹೊಸ ಸಮಸ್ಯೆ ದುತ್ತೆಂದು ಬರುತ್ತದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.. 

ಮಹಿಳೆಯೊಬ್ಬರು ತಮ್ಮ ಬದುಕಿನ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದರು. ಅದೇ ವೇಳೆ ಯೂಟ್ಯೂಬ್‌ ವಿಡಿಯೋ ನೋಡುತ್ತಿದ್ದಾಗ ಜ್ಯೋತಿಷ್ಯದ ಜಾಹಿರಾತು ಒಂದು ಬಂದಿದೆ. ಅದರಲ್ಲಿದ್ದ ನಂಬರ್‌ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆತ ಇಲ್ಲದ ಸಮಸ್ಯೆ ಇದೆ ಎಂದು ಹೇಳಿ ಆಗಾಗ ಗೂಗಲ್‌ ಪೇ ಮಾಡಿಸಿಕೊಂಡಿದ್ದಾರೆ. ನಾನಾ ಕಾರಣ ಹೇಳಿ ಬರೋಬ್ಬರಿ  ಒಟ್ಟು 6,37,850/- ರೂಪಾಯಿ ಮಹಿಳೆಯಿಂದ ಕಿತ್ತಿದ್ದಾನೆ.. 

ಈ ವೇಳೆ ಮಹಿಳೆಗೆ ತಾನು ಮೋಸ ಹೋಗುತ್ತಿರುವ ಅನುಮಾನ ಮೂಡಿದೆ. ಅಷ್ಟೊತ್ತಿಗೆ ಮತ್ತೆ ಕರೆ ಮಾಡಿದ ಕಳ್ಳ ಜ್ಯೋತಿಷಿ ನನಗೆ ಆಕ್ಸಿಡೆಂಟ್ ಆಗಿತ್ತು ನಾನು ಕೋಮಾದಲ್ಲಿದ್ದೆ, ಈಗ ನಾನು ಚೇತರಿಸಿಕೊಂಡಿರುತ್ತೇನೆ, ನಾನು ನಿನಗೆ ಹಣವನ್ನು ಹೊಂದಿಸಲು ಆಗುವುದಿಲ್ಲ. ನಮ್ಮ ದೇವಸ್ಥಾನದ ನನಗಿಂತ ಮೇಲಿನ ವ್ಯಕ್ತಿಯ ನಂಬರ್ ಕೊಡುತ್ತೇನೆ, ಅವರಿಗೆ ಪೋನ್ ಮಾಡಿ ಅವರು ನಿಮ್ಮ ಹಣವನ್ನು ವಾಪಸ್ ಕೊಡುತ್ತಾರೆ, ನನ್ನ ಎಲ್ಲಾ ಜವಬ್ದಾರಿಯನ್ನು ಅವರಿಗೆ ವಹಿಸಿರುತ್ತೇನೆಂದು ತಿಳಿಸಿದ್ದಾನೆ. ಹಣ ಬರುತ್ತೆ ಎಂದು ಮಹಿಳೆ ಸಹ ಕೊಟ್ಟ ನಂಬರ್‌ ಗೆ ಕರೆ ಮಾಡಿದ್ದಾರೆ. ಆತ ನಿಮ್ಮ ಹಣವನ್ನು ನಾನು ಹೊಂದಿಸಿ ಕೊಡಬೇಕೆಂದರೆ ಸ್ವಲ್ಪ ಖರ್ಚಾಗುತ್ತದೆ ನೀವು ನನ್ನ ಮೊಬೈಲ್ ನಂಬರಿಗೆ ಹಣವನ್ನು ಹಾಕಿ ಎಂದು ತಿಳಿಸಿದ್ದಾನೆ. 

ಅದನ್ನ ನಂಬಿದ ಮಹಿಳೆ ಆತನ ಅಕೌಂಟ್‌ಗೂ ಹಣ ಹಾಕಿದ್ದಾರೆ. ಹೀಗೆ  ಒಟ್ಟು 9,44,850/- ರೂ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಬಳಿಕ ಮೋಸ ಹೋಗಿದ್ದು ಗೊತ್ತಾಗಿ ಪೊಲೀಸರ ಮೊರೆಹೋಗಿದ್ದಾರೆ. ಸದ್ಯ ಸಿಇಎನ್‌ ಪೊಲೀಸರು ಆರೋಪಿಗಳ ಬೆನ್ನು ಬಿದ್ದಿದ್ದಾರೆ.