ಶಿವಮೊಗ್ಗಕ್ಕೆ ಬಂದಿದ್ದ ಬೆಂಗಳೂರಿಗರಿಬ್ಬರ ದರೋಡೆ! ರೈಲ್ವೆ ನಿಲ್ದಾಣದ ಸಮೀಪ ನಡೀತು ಘಟನೆ!

Shivamogga Mar 5, 2024  Bangaloreans robbed in Shimoga   ಶಿವಮೊಗ್ಗ ನಗರದಲ್ಲಿ ಸದ್ದಿಲ್ಲದೆ ದರೋಡೆ ಪ್ರಕರಣವೊಂದು ದಾಖಲಾಗಿದೆ. ಶಿವಮೊಗ್ಗ ಸಿಟಿ ಯ ಶೇಷಾದ್ರಿಪುರಂ ಬಳಿ ಇರುವ ರೈಲ್ವೆ ಓವರ್ ಬ್ರಿಡ್ಜ್​ ಬಳಿಯಲ್ಲಿ ಈ ಘಟನೆ ನಡೆದಿದ್ದು ಕೋಟೆ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದೆ. 

ಸೇತುವೆ ಕೆಳಗೆ ವಾಕಿಂಗ್ ಮಾಡುತ್ತಿದ್ದ ಮೂವರನ್ನು ಅಡ್ಡಗಟ್ಟಿ ದರೋಡೆ ಮಾಡಲಾಗಿದೆ.  ಬೈಕ್‌ನಲ್ಲಿ ಬಂದ ಅಪರಿಚಿತರು ಚಾಕು ತೋರಿಸಿ ಮೊಬೈಲ್, ನಗದು ದೋಚಿದ್ದಾರೆ. 

ಮಂಡಗದ್ದೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವ್ಯಕ್ತಿಯೊಬ್ಬರ ಸಂಬಂಧಿಕರ ಮದುವೆ ಆರತಕ್ಷತೆಗಾಗಿ ಬೆಂಗಳೂರಿನಿಂದ ಸ್ನೇಹಿತರಿಬ್ಬರು ಬಂದಿದ್ದರು. ಇವರನ್ನ ರೈಲ್ವೆ ಸ್ಟೇಷನ್​ಗೆ ಬಿಟ್ಟು ಬರಲು ಸ್ಥಳೀಯರು ಬಂದಿದ್ದರು. ಆದರೆ ಟ್ರೈನ್ ಬರುವುದಕ್ಕೆ ಇನ್ನೂ ಸಹ ಸಮಯ ಇದ್ದ ಕಾರಣಕ್ಕೆ ಮೂವರು ಸಹ ವಾಕ್ ಮಾಡಲು ತೆರಳಿದ್ದಾರೆ. 

ರೈಲ್ವೆ ಮೇಲ್ಸೇತುವೆ ಕೆಳಗೆ ವಾಕ್ ಮಾಡುತ್ತಿದ್ದಾಗ ಬೈಕ್​ನಲ್ಲಿ ಬಂದ ಮೂವರು ಮಾರಕಾಸ್ತ್ರ ತೋರಿಸಿ ಮೂವರನ್ನ ದರೋಡೆ ಮಾಡಿದ್ದಾರೆ. ಬೆಂಗಳೂರಿನ ಇಬ್ಬರು ಹಾಗೂ ಅವರ ಜೊತೆಗೆ ಬಂದಿದ್ದ ವ್ಯಕ್ತಿಯ 3 ಮೊಬೈಲ್. 5 ಸಾವಿರ ರೂ. ನಗದು, ಪರ್ಸ್ ನಲ್ಲಿದ್ದ ವಾಹನ ಪರವಾನಗಿ, ಎಟಿಎಂ. ಮೊದಲಾದ ದಾಖಲಾತಿ ದೋಚಿದ್ದಾರೆ. ಸದ್ಯ ಪ್ರಕರಣ ದಾಖಲಿಸಿರುವ ಕೋಟೆ ಪೊಲೀಸ್ ಸ್ಟೇಷನ್ ಪೊಲೀಸರು ಕೇಸ್ ದಾಖಲಿಸಿದ್ದಾರೆ. 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು