ಹಳ್ಳಿಮನೆಯ ಆಟಕ್ಕೆ ಸಿದ್ದವಾದ ಮಂಡಗದ್ದೆ , ಲಗೋರಿ ಟೂರ್ನಿಮೆಂಟ್​ಗೆ ಸಿದ್ದವಾಯ್ತು ವೇದಿಕೆ

ಜಗತ್ತಿನ ಫೇಮಸ್ ಆಟಗಳ ನಡುವೆ ಇತ್ತೀಚೆಗೆ ಸಾಂಪ್ರದಾಯಿಕ ಕ್ರೀಡೆಗಳು ಮತ್ತೆ ಸದ್ದು ಮಾಡುತ್ತಿವೆ. ಇದಕ್ಕೆ ಪೂರಕವಾಗಿ ಮಲೆನಾಡು(Malenadu)  ಶಿವಮೊಗ್ಗ   ಜಿಲ್ಲೆಯ ಮಂಡಗದ್ದೆಯಲ್ಲಿ (Mandagadde) ಇಂತಹದ್ದೊಂದು ಸಾಂಪ್ರದಾಯಿಕ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗ್ತಿದೆ. ಹಳ್ಳಿಮನೆಯ ಆಟವಾದ ಲಗೋರಿ ಟೂರ್ನಿಮೆಂಟ್ ಆಯೋಜಿಸಲಾಗಿದ್ದು, ಅದಕ್ಕಾಗಿ ವಿವಿಧ ಟೀಂಗಳನ್ನು ಆಹ್ವಾನಿಸಲಾಗಿದೆ. 

ಈ ಸಂಬಂಧ ಆಟದ ರೂಲ್ಸ್​ಗಳನ್ನು ನೀಡಲಾಗಿದ್ದು, ಆಟಕ್ಕೆ ಹೆಸರು ನೊಂದಾಯಿಸಲು ಸೀಮಿತ ತಂಡಗಳಿಗೆ ಅವಕಾಶವಿದ್ದು. ಡಿ 10 ರ ಒಳಗೆ ತಮ್ಮ ತಂಡದ ಹೆಸರು ನೊಂದಾಯಿಸಿಕೊಳ್ಳಿ. ಪ್ರವೇಶ ಶುಲ್ಕ 600/-.ಡಿಸೆಂಬರ್ 18 ರ ಭಾನುವಾರ ಮಂಡಗದ್ದೆ ಹೈಸ್ಕೂಲ್ ಕ್ರೀಡಾಂಗಣದಲ್ಲಿ ಪಂದ್ಯಾಟ ನಡೆಯಲಿದೆ. 

ಇದನ್ನು ಸಹ ಓದಿ : ಕೊಡಗಿನ ಹೋಮ್​ಸ್ಟೇ ನಲ್ಲಿ ವಾಸ್ತವ್ಯ ಹೂಡಿದ್ದ ಶಂಕಿತ ಶಾರೀಖ್​

“ಲಗೋರಿ” ಆಟದ ನಿಯಮಾವಳಿಗಳು

ಲಗೋರಿ 7 ಬಿಲ್ಲೆಗಳನ್ನು ಒಳಗೊಂಡಿರುತ್ತದೆ. ಒಂದು ತಂಡದಲ್ಲಿ 6 ಜನ ಆಟಗಾರರಿಗೆ ಮಾತ್ರ ಅವಕಾಶ .ಪ್ರತೀ ತಂಡಕ್ಕು 10 ನಿಮಿಷಗಳ 2 ಇನ್ನಿಂಗ್ಸ್ ಗಳಿರುತ್ತದೆ. ತಂಡದ 5 ಆಟಗಾರರಿಗೆ ಮಾತ್ರ ಲಗೋರಿ ಬಿಲ್ಲೆಗೆ ಹೊಡಿಯುವ ಅವಕಾಶ. ಪ್ರತಿಯೊಬ್ಬರಿಗು 2 ಚಾನ್ಸ್ ಗಳು ಮಾತ್ರ. ಲಗೋರಿ ಬಿಲ್ಲೆಯನ್ನು ಸಂಪೂರ್ಣ ಕಟ್ಟಿದರೆ 7+2 = 9 ಅಂಕಗಳು ನೀಡಲಾಗುವುದು

ಲಗೋರಿ ಬಿಲ್ಲೆಗೆ ಬಡಿದು ನೆಲಕ್ಕಪ್ಪಳಿಸದೆ ಚೆಂಡು ನೇರವಾಗಿ ಎದುರಾಳಿ ತಂಡದ ಆಟಗಾರರ ಕೈ ಸೇರಿದರೆ. ಎದುರಾಳಿ ತಂಡಕ್ಕೆ 1 ಅಂಕ ಹಾಗೂ ಹೊಡೆದಂತ ಆಟಗಾರನ ಪುನಃ ಹೊಡೆಯುವ ಮುಕ್ತಾಯವಾಗುತ್ತದೆ.

ಲಗೋರಿ ಬಿಲ್ಲೆಗೆ ಬಿದ್ದು ನೆಲಕ್ಕಪ್ಪಳಿಸಿ ಬಿಲ್ಲೆಯನ್ನು ಬೀಳಿಸಿದ ಆಟಗಾರರಿಗೆ ಬಡಿದರೆ, ಎದುರಾಳಿ ತಂಡಕ್ಕೆ 1 ಅಂಕ ಹಾಗೂ ಆ ಆಟಗಾರನ ಪುನಃ ಹೊಡೆಯುವ ಅವಕಾಶ ಮುಕ್ತಾಯವಾಗುತ್ತದೆ. ಲಗೋರಿ ಕಟ್ಟುವ ಸಮಯದಿ, ಎದುರಾಳಿ ತಂಡದ ಏಟಿಗೆ ಬಲಿಯಾದಲ್ಲಿ, ಎದುರಾಳಿ ತಂಡಕ್ಕೆ 2 ಅಂಕಗಳನ್ನು ನೀಡಲಾಗುವುದು

ಲಗೋರಿ ಕಟ್ಟುವ ಸಮಯದಿ ಎದುರಾಳಿಯ ಪ್ರತಿ ಆಟಗಾರನ ಕೈಯಲ್ಲಿ ಕೇವಲ 5 ಸೆಕೆಂಡುಗಳ ಕಾಲವಕಾಶ, ಆ ಸಮಯದೊಳಗೆ ಸಹ ಆಟಗಾರನಿಗೆ ಬಾಲ್ ಪಾಸ್ ಮಾಡಬೇಕು. ಇಲ್ಲದೆ ಹೋದಲ್ಲಿ, ಲಗೋರಿ ಕಟ್ಟುತ್ತಿರುವ ತಂಡಕ್ಕೆ 1 ಅಂಕ. 60 ಗಜಗಳ ಸರ್ಕಲ್ ನ ಒಳಗೇ ಎಲ್ಲಾ ಆಟಗಾರರು ಆಟವಾಡಬೇಕು, ಬಾಲ್ ಗೆರೆದಾಟಿದರೆ ಮಾತ್ರವೇ ಎದುರಾಳಿ ತಂಡದ ಆಟಗಾರರು ಬಾಲ್ ತರಲು ಹೋಗಬಹುದು

ಮೂರುಜನ ತೀರ್ಪುಗಾರರಿದ್ದು. ಅವರ ತೀರ್ಮಾನ ಹಾಗೂ ಆಯೋಜಕರ ತೀರ್ಮಾನ ಅಂತಿಮವಾಗಿರುತ್ತದೆ. ಲಗೋರಿ ಬಿಲ್ಲೆ ಸಂಪೂರ್ಣ ಕಟ್ಟಿದ ನಂತರ ಲಗೋರಿ ಎಂದು ಕೂಗಿದರಷ್ಟೆ ಅದು ಸಿಂಧು. 2 ಇನ್ನಿಂಗ್ಸ್ ನ ಅಂಕಗಳನ್ನು ಒಗ್ಗೂಡಿಸಿ ತಂಡದ ಜಯವನ್ನು ನಿರ್ಧರಿಸಲಾಗುವುದು. ಪಂದ್ಯ ಟೈ ಆದಲ್ಲಿ. 10 ನಿಮಿಷಗಳ 1 ಇನ್ನಿಂಗ್ಸ್ ಮರು ಆಟವಾಡಿಸಲಾಗುವುದು

ಹಾಗೂ ಮತ್ತೆ ಟೈ ಆದಲ್ಲಿ. 6 ಜನ ಆಟಗಾರರಿಗು ಲಗೋರಿ ಬಿಲ್ಲೆಗೆ ಹೊಡೆಯುವ ಒಂದೊಂದು ಅವಕಾಶ ಕಲ್ಪಸಿ ಕೊಡಲಾಗುವುದು. ಯಾವ ತಂಡದ ಆಟಗಾರರು ಅತಿ ಹೆಚ್ಚು ಬಾರಿ ಲಗೋರಿ ಬಿಲ್ಲೆಗೆ ಚೆಂಡನ್ನು ತಾಗಿಸುತ್ತಾರೊ. ಆ ತಂಡಕ್ಕೆ ಜಯ ಘೋಷಿಸಲಾಗುವುದು. ಯಾವ ತಂಡಕ್ಕು ರಿ ಎಂಟ್ರಿ ಇರುವುದಿಲ್ಲ ಒಂದು ತಂಡದಲ್ಲಿ ಒಮ್ಮೆ ಆಡಿದ ಆಟಗಾರ ಇನ್ನೊಂದು ತಂಡದಲ್ಲಿ ಆಡುವಂತಿಲ್ಲ

ಎಲ್ಲಾ Knockout ಪಂದ್ಯಗಳಗಿರುತ್ತದೆ. ಸೀಮಿತ ತಂಡಗಳಿಗೆ ಅವಕಾಶವಿದ್ದು. ಡಿ 10 ರ ಒಳಗೆ ತಮ್ಮ ತಂಡದ ಹೆಸರು ನೊಂದಾಯಿಸಿಕೊಳ್ಳಿ. ಪ್ರವೇಶ ಶುಲ್ಕ 600/-.ಡಿಸೆಂಬರ್ 18 ರ ಭಾನುವಾರ ಮಂಡಗದ್ದೆ ಹೈಸ್ಕೂಲ್ ಕ್ರೀಡಾಂಗಣದಲ್ಲಿ ಪಂದ್ಯಾಟ ನಡೆಯಲಿದೆ. 

ಇದನ್ನು ಸಹ ಓದಿ : ಹಂದಿ ಅಣ್ಣಿ ಹತ್ಯೆಯ ಪ್ರಮುಖ ಆರೋಪಿ ಕಾಡಾ ಕಾರ್ತಿಗೆ ಆರು ತಿಂಗಳು ಶಿಕ್ಷೆ/ 2 ಸಾವಿರ ರೂಪಾಯಿ ದಂಡ

ಹೆಚ್ಚಿನ ಮಾಹಿತಿಗಾಗಿ:

ಜಗನ್ನಾಥ್: 9731144497

ರಾಘವೇಂದ್ರ: 8971148141

ಅಭಿಜಿತ್: 8867937419

ಪ್ರವೀಣ್ ಪಾಣಿ: 9591604998

ಪ್ರವೀಣ್ ಮಂಡಗದ್ದೆ: 9483023451

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

Malenadu Today

Leave a Comment