ಸೀಗೆಹಟ್ಟಿ ಯುವಕನಿಗೆ ಅನ್ಯಕೋಮಿನ ಗುಂಪಿನಿಂದ ಹಲ್ಲೆ ಪ್ರಕರಣ | ಶಾಸಕ ಎಸ್‌ಎನ್‌ ಚನ್ನಬಸಪ್ಪ FB ಪೋಸ್ಟ್‌

MLA S.N. Channabasappa has brought attention to an assault on a young man in Shivamogga by a group of young men from another community on Facebook

ಸೀಗೆಹಟ್ಟಿ ಯುವಕನಿಗೆ ಅನ್ಯಕೋಮಿನ ಗುಂಪಿನಿಂದ ಹಲ್ಲೆ ಪ್ರಕರಣ | ಶಾಸಕ ಎಸ್‌ಎನ್‌ ಚನ್ನಬಸಪ್ಪ FB ಪೋಸ್ಟ್‌
MLA S.N. Channabasappa , Shivamogga , Facebook

SHIVAMOGGA | MALENADUTODAY NEWS | Jun 3, 2024  ಮಲೆನಾಡು ಟುಡೆʼ

ಶಿವಮೊಗದಲ್ಲಿ ಅನ್ಯಕೋಮಿನ ಯುವಕರಿಂದ ಹಲ್ಲೆಗೊಳಗಾದ ಯುವಕನೊಬ್ಬನ ಬಗ್ಗೆ ಸ್ವತಃ ಶಾಸಕ ಎಸ್‌ಎನ್‌ ಚನ್ನಬಸಪ್ಪ ಧ್ವನಿ ಎತ್ತಿದ್ದು, ಈ ಬಗ್ಗೆ ತಮ್ಮದೆ ಫೇಸ್‌ಬುಕ್‌ ಪುಟದಲ್ಲಿ ಬರಹವೊಂದನ್ನ ಪೋಸ್ಟ್‌ ಮಾಡಿದ್ದು ಗೃಹಸಚಿವರನ್ನ ನಮೂದು ಮಾಡಿ ಗಮನವಹಿಸುವಂತೆ ಆಗ್ರಹಿಸಿದ್ದಾರೆ. 

ಏನಿದೆ ಚನ್ನಬಸಪ್ಪರವರ ಪೋಸ್ಟ್‌ ನಲ್ಲಿ 

ಇನ್ನಾದರೂ ಇತ್ತ ಗಮನಹರಿಸುವಿರಾ ಮಾನ್ಯ ಗೃಹ ಸಚಿವರೇ…!

ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ, ಮುಸ್ಲಿಂ ಪುಂಡರು ಬಾಲ ಬಿಚ್ಚುವುದು ಎಂದಿನಂತೆ ಮುಂದುವರೆದಿದ್ದು ಇದಕ್ಕೆ ಮತ್ತೊಂದು ಸಾಕ್ಷಿ ಎಂಬಂತಿದೆ ಶಿವಮೊಗ್ಗದ ಘಟನೆ.

ಕಾಂಗ್ರೆಸ್‌ ಮತ್ತು ಮುಸ್ಲಿಂರ (ಡಿ.ಕೆ.ಬ್ರದರ್ಸ್) ನಡುವಿನ ಸೌಹಾರ್ದಕ್ಕೆ, ಶಿವಮೊಗ್ಗದ ಮತ್ತೋರ್ವ ಹಿಂದೂ ಯುವಕ ಹಲ್ಲೆಗೊಳಗಾಗಿರುವುದು ಅತ್ಯಂತ ಖಂಡನೀಯ ಸಂಗತಿ. ಮಾನ್ಯ ಗೃಹ ಸಚಿವರಾದ ಪರಮೇಶ್ವರ್ ಅವರೇ ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪುಂಡರ ಮಿತಿ ಮೀರಿದ ಹಾವಳಿ ನಡೆಯುತ್ತಿದೆ. ಇನ್ನಾದರೂ ಶಿವಮೊಗ್ಗದ ಕಡೆ ಸ್ವಲ್ಪ ಗಮನ ಹರಿಸಿ.!  ʼ

ನಿನ್ನೆ ಸಂಜೆ ಇಲಿಯಾಸ್ ನಗರದಲ್ಲಿ ತನ್ನ ಸಹೋದ್ಯೋಗಿಯ ಜೊತೆ  ಕೆಲಸದಲ್ಲಿದ್ದಾಗ  ಮುಸ್ಲಿಂ ಪುಂಡರಿಂದ ಮಾರಣಾಂತಿಕ ಹಲ್ಲೆಗೊಳಗಾಗಿರುವ ಶಿವಮೊಗ್ಗ ನಗರದ ಸೀಗೆಹಟ್ಟಿಯ ನಿವಾಸಿ ಹಿಂದೂ ಯುವಕ ನಂದನ್ ಅವರನ್ನ ಭೇಟಿ ಮಾಡಿ, ಆರೋಗ್ಯ ವಿಚಾರಿಸಿ, ಯುವಕನಿಗೆ ಹಾಗೂ ಅವನ ಪೋಷಕರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಯಿತು.

ಸದ್ಯ ಚನ್ನಬಸಪ್ಪರವರ ಈ ಎಫ್‌ಬಿ ಪೋಸ್ಟ್‌ ಎಲ್ಲೆಡೆ ಹರಿದಾಡುತ್ತಿದ್ದು, ಶಿವಮೊಗ್ಗ ಪೊಲೀಸ್‌ ಇಲಾಖೆ, ಕಾನೂನು ವ್ಯವಸ್ಥೆ ಮತ್ತು ಪೋಸ್ಟ್‌ನ ಬಗ್ಗೆಯೇ ಹಲವು ರೀತಿಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. 

MLA S.N. Channabasappa has brought attention to an assault on a young man in Shivamogga by a group of young men from another community. He posted on Facebook, urging the Home Minister to take note of the incident. Channabasappa criticized the Congress government