ಸೈಬರ್ ಕ್ರೈಂ ನಲ್ಲಿ ಶಿವಮೊಗ್ಗ ಸಿಇಎನ್ ಸ್ಟೇಷನ್ ಪೊಲೀಸರ ಸೆಂಚುರಿ! ಕಳವಾದ 100 ಮೊಬೈಲ್ ಪತ್ತೆ? ಇಲ್ಲಿದೆ ನಿಮಗೆ ಅಗತ್ಯವಿರುವ ಮಾಹಿತಿ
Century of Shimoga CEN station police in cybercrime! Found 100 stolen mobiles? Here is the information you need
Shivamogga Apr 2, 2024 Shimoga CEN station police ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸರು ಕಳೆದು ಹೋದ ನೂರು ಮೊಬೈಲ್‌ಗಳನ್ನು ಜಪ್ತು ಮಾಡಿ ಅವುಗಳ ಮಾಲೀಕರಿಗೆ ವಾಪಸ್ ನೀಡಿದ್ದಾರೆ. ಸಿಇಎನ್ ಠಾಣೆಯ ಈ ಸೆಂಚುರಿ ಮೊಬೈಲ್ ಜಪ್ತು ಶಿವಮೊಗ್ಗ ಪೊಲೀಸ್ ಇಲಾಖೆಯಲ್ಲಿ ವಿಶೇಷ ಸಾಧನೆಯಾಗಿ ಗಮನ ಸೆಳೆದಿದೆ.
ಕಳವಾಗಿದ್ದ 12.10 ಲಕ್ಷ ರೂ., ಮೌಲ್ಯದ ಒಟ್ಟು 100 ಮೊಬೈಲ್ ಗಳನ್ನು ಪತ್ತೆ ಹಚ್ಚಿದ್ದು, ಮಾಲೀಕರಿಗೆ ಹಿಂದಿರುಗಿಸಲಾಗಿದೆ. ಮೊಬೈಲ್ ಕಳ್ಳತನ ತಪ್ಪಿಸಲು ಹಾಗೂ ಕಳವಾದ ಮೊಬೈಲ್ ಪತ್ತೆಗಾಗಿ ಕೇಂದ್ರ ಸರ್ಕಾರ ಸಿಇಐಆರ್ ಪೋರ್ಟಲ್ ಜಾರಿಗೆ ತರಲಾಗಿತ್ತು. ಈ ಪೋರ್ಟಲ್ ಜಾರಿಯಾದ ಬಳಿಕ ಮೊಬೈಲ್‌ಗಳನ್ನ ಪತ್ತೆ ಮಾಡುವುದು ಸುಲಭವಾಗುತ್ತಿದೆ. ಇನ್ನೂ ಈವರೆಗೆ
ಈ ಪೋರ್ಟಲ್ ಮೂಲಕ ಶಿವಮೊಗ್ಗದಲ್ಲಿ 500ಕ್ಕೂ ಹೆಚ್ಚಿನ ಮೊಬೈಲ್‌ಗಳನ್ನು ಪತ್ತೆಹಚ್ಚಲಾಗಿದೆ ಎಂದು ಎಸ್‌ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಕಳವಾದ ಮೊಬೈಲ್ ಪತ್ತೆ ಹಚ್ಚುವುದು ಹೇಗೆ? ಏನು ಮಾಡಬೇಕು?
ಈ ಮೊದಲೆಲ್ಲಾ ಮೊಬೈಲ್ ಕಳವಾದರೆ ಅದಕ್ಕೆ ಪೊಲೀಸ್ ಸ್ಟೇಷನ್ಗೆ ಹೋಗಿ ಕಂಪ್ಲೆಂಟ್ ನೀಡಬೇಕಿತ್ತು. ಈಗ ceir ಪೋರ್ಟ್‌ಲ್ ಬಂದ ಮೇಲೆ ಜನರು ಇದರಲ್ಲಿ ಇ ಲಾಸ್ಟ್ ಅಪ್ಲಿಕೇಶನ್ ಮೂಲಕ ತಮ್ಮ ಮೊಬೈಲ್ ಕಳುವಾಗಿರುವ ಬಗ್ಗೆ ಮಾಹಿತಿ ನೀಡಿದರೆ ಸಾಕು, ಮೊಬೈಲ್‌ಗೆ ಸಂಬಂಧಿಸಿದ ಐಎಂಎ ನಂಬರ್ ಸೇರಿದಂತೆ ಅಪ್ಲಿಕೇಶನ್ ಕೇಳುವ ಅಗತ್ಯ ವಿವರ ನೀಡಿದರೆ ಮೊಬೈಲ್ ಲಾಕ್ ಆಗುತ್ತದೆ. ಅಲ್ಲದೆ ದೂರು ದಾಖಲಾದ 24 ಗಂಟೆಯೊಳಗೆ ಕಳೆದುಹೋದ ಮೊಬೈಲ್ ಬ್ಲಾಕ್ ಆಗುತ್ತದೆ. ಇದರಿಂದ ಮೊಬೈಲ್ ದುರ್ಬಳಕೆಯಾಗುವುದಿಲ್ಲ. ಮೇಲಾಗಿ ಇಂತಹ ಮೊಬೈಲ್‌ನ್ನ ಬೇರೆಯವರು ಬಳಸಲು ಆರಂಭಿಸಿದರೆ, ಅದರ ಪೂರ್ಣ ಮಾಹಿತಿ ಪೊಲೀಸರಿಗೆ ಲಭ್ಯವಾಗುತ್ತದೆ. ಪರಿಣಾಮವಾಗಿ ಮೊಬೈಲ್ ಪತ್ತೆಯಾಗುತ್ತದೆ.
TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ! ಯಾವಾಗ ಬೇಕೋ ಆಗಲೇ ಸುದ್ದಿ ಓದಿ, ಲಿಂಕ್ ಕ್ಲಿಕ್ ಮಾಡಿ
https://whatsapp.com/channel/0029Va9I91s3LdQVrdq7yl1h
ಇದನ್ನು ಓದಿ : ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲೀಗ ಮಧು ಬಂಗಾರಪ್ಪನವರೇ ಸುಪ್ರೀಂ! ಶೀಘ್ರದಲ್ಲಿಯೇ ಇನ್ನೊಂದು ಬದಲಾವಣೆ! ಏನದು ರಾಜಕಾರಣ