ಶಿವಮೊಗ್ಗ ಕೋರ್ಟ್‌ನಿಂದ ಮತ್ತೊಂದು ಮಹತ್ವ ತೀರ್ಪು | ಈ ಮೂವರಿಗೆ ಜೀವಾವಧಿ ಶಿಕ್ಷೆ | ಏನಿದು ಪ್ರಕರಣ

Shimoga court gives another verdict

ಶಿವಮೊಗ್ಗ ಕೋರ್ಟ್‌ನಿಂದ ಮತ್ತೊಂದು ಮಹತ್ವ ತೀರ್ಪು | ಈ ಮೂವರಿಗೆ ಜೀವಾವಧಿ ಶಿಕ್ಷೆ | ಏನಿದು ಪ್ರಕರಣ
Shimoga court gives another verdict

SHIVAMOGGA | MALENADUTODAY NEWS | Jul 4, 2024  ಮಲೆನಾಡು ಟುಡೆ    

2020 rರಲ್ಲಿ ನಡೆದಿದ್ದ ಕೊಲೆಯೊಂದರ ಸಂಬಂಧ ಮೂವರು ಆರೋಪಿಗಳಿಗೆ ಶಿವಮೊಗ್ಗ ಕೋರ್ಟ್‌ ಜೀವಾವಧಿ ಶಿಕ್ಷೆ ನೀಡಿದೆ. ಪ್ರಕರಣದ ವಿವರ ಹೀಗಿದೆ. 

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ

ದಿನಾಂಕಃ 27-07-2020 ರಂದು ರಾತ್ರಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ  ಘಟನೆ ನಡೆದಿತ್ತು.  ಹೊಳಲೂರು ಗ್ರಾಮದ ವಾಸಿಗಳಾದ ರಿಯಾಸ್, ಮುನಿರಾಜು ಮತ್ತು ಅರುಣ  ಅದೇ ಗ್ರಾಮದ ವಾಸಿ ಮಲ್ಲೇಶಪ್ಪ, 39  ವರ್ಷ ರವರಿಗೆ ಚುಚ್ಚಿ , ಕುತ್ತಿಗೆ ಕೊಯ್ದು ಸಾಯಿಸಿದ್ದರು. ಈ ಸಂಬಂಧ ಮೃತನ ಸಹೋದರ ಕಂಪ್ಲೆಂಟ್‌ ಕೊಟ್ಟಿದ್ದ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ  302  ಸಹಿತ 34 ಅಡಿ ಕೇಸ್‌ ಆಗಿತ್ತು.  

ಶಿವಮೊಗ್ಗ ಕೋರ್ಟ್‌ 

ಆ ಬಳಿಕ ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಸಂಜೀವ್ ಕುಮಾರ್ ಟಿ, ಪಿಐ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ  ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ರು. 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು.  ಸರ್ಕಾರದ ಪರವಾಗಿ  ಮಮತಾ, ಬಿ. ಎಸ್ ಸರ್ಕಾರಿ ಅಭಿಯೋಜಕರವರು, ವಾದ ಮಂಡಿಸಿದ್ದರು. 

ಜೀವಾವಧಿ ಶಿಕ್ಷೆ

ಇದೀಗ ಪ್ರಕರಣದ ವಿಚಾರಣೆ ಮುಗಿದಿದ್ದು ನ್ಯಾಯಾಧೀಶರಾದ  ಮರುಳ ಸಿದ್ಧಾರಾಧ್ಯ ಹೆಚ್. ಜೆ. ರವರು ತೀರ್ಪು ನೀಡಿದ್ದಾರೆ. 1)  ರಿಯಾಸ್, 22 ವರ್ಷ, ಹೊಳಲೂರು ಗ್ರಾಮ ಶಿವಮೊಗ್ಗ, 2) ಮುನಿರಾಜು, 33 ವರ್ಷ, ಹೊಳಲೂರು ಗ್ರಾಮ ಶಿವಮೊಗ್ಗ, ಮತ್ತು 3) ಅರುಣ, 20 ವರ್ಷ,  ಹೊಳಲೂರು ಗ್ರಾಮ ಶಿವಮೊಗ್ಗ, ಇವರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ 20,000/- ದಂಡ, ದಂಡ ಕಟ್ಟಲು ವಿಫಲರಾದಲ್ಲಿ 6 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.