23 ವರ್ಷದ ಯುವಕನಿಗೆ 20 ವರ್ಷ ಶಿಕ್ಷೆ | ಶಿವಮೊಗ್ಗ ಕೋರ್ಟ್‌ ತೀರ್ಪು | ಏನಿದು ಪ್ರಕರಣ

Additional District and Sessions Court, Shivamogga

23 ವರ್ಷದ ಯುವಕನಿಗೆ 20 ವರ್ಷ ಶಿಕ್ಷೆ | ಶಿವಮೊಗ್ಗ ಕೋರ್ಟ್‌ ತೀರ್ಪು | ಏನಿದು ಪ್ರಕರಣ
Additional District and Sessions Court, Shivamogga

SHIVAMOGGA | MALENADUTODAY NEWS | Jun 21, 2024  ಮಲೆನಾಡು ಟುಡೆ 

ಶಿವಮೊಗ್ಗ ಕೋರ್ಟ್‌ ಪೋಕ್ಸೋ ಕೇಸ್‌ ಆರೋಪಿಯೊಬ್ಬನಿಗೆ 20 ವರ್ಷ ಶಿಕ್ಷೆ ವಿಧಿಸಿದೆ. ಪ್ರಕರಣದ ವಿವರ ಹೀಗಿದೆ.  ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ 15 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಶಿಕಾರಿಪುರ ತಾಲ್ಲೂಕಿನ ನಿವಾಸಿ, 23 ವರ್ಷದ ಯುವಕನಿಗೆ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಗುರುವಾರ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹50,000 ದಂಡ ವಿಧಿಸಿದೆ 

2023ರಲ್ಲಿ ನಡೆದಿದ್ದ ಪ್ರಕರಣವಿದು. ಈ ಸಂಬಂಧ  ಬಾಲಕಿ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆಗಿನ ಶಿಕಾರಿಪುರ ಡಿವೈಎಸ್ಪಿ ಶಿವಾನಂದ ಎಸ್.ಮದರಖಂಡಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಆ ಬಳಿಕ ಕೋರ್ಟ್‌ ನಲ್ಲಿ ವಿಚಾರಣೆ ನಡೆದು ಇದೀಗ ತೀರ್ಪು ಹೊರಬಿದ್ದಿದೆ. ಆರೋಪಿಗೆ 20 ವರ್ಷ ಶಿಕ್ಷೆ ನೀಡಲಾಗಿದ್ದು, 50 ಸಾವಿರ ದಂಡ ಕೂಡ ವಿಧಿಸಲಾಗಿದೆ. ಈ ದಂಡ ಕಟ್ಟಲು ವಿಫಲನಾದಲ್ಲಿ ಆತನಿಗೆ ಮತ್ತೆ ನಾಲ್ಕು ತಿಂಗಳು ಹೆಚ್ಚುವರಿ ಶಿಕ್ಷೆಯಾಗಲಿದೆ. ಇನ್ನೂ ದಂಡದ ಮೊತ್ತದಲ್ಲಿ ನೊಂದ ಬಾಲಕಿಗೆ ₹45,000 ಹಾಗೂ ಸರ್ಕಾರದ ವತಿಯಿಂದ ಆಕೆಗೆ ₹7 ಲಕ್ಷ ಪರಿಹಾರ ನೀಡುವಂತೆ ಕೋರ್ಟ್‌ ಆದೇಶ ನೀಡಿದೆ. 

A Shivamogga court has sentenced a 23-year-old man to 20 years in prison and a fine of ₹50,000 for sexually assaulting a 15-year-old girl in Shikaripura in 2023. Shiralakoppa police station,