ಬೈಕ್ ಓಡಿಸಿದ ಮಗ, ಅಮ್ಮನಿಗೆ ಶಿವಮೊಗ್ಗ ಕೋರ್ಟ್​ನಿಂದ 30 ಸಾವಿರ ರೂಪಾಯಿ ದಂಡ

The Shimoga Court fined 30,000 to the mother of her minor son for letting him drive his bike

ಬೈಕ್ ಓಡಿಸಿದ ಮಗ, ಅಮ್ಮನಿಗೆ ಶಿವಮೊಗ್ಗ ಕೋರ್ಟ್​ನಿಂದ 30 ಸಾವಿರ ರೂಪಾಯಿ ದಂಡ
The Shimoga Court fined 30,000 to the mother of her minor son for letting him drive his bike

Shivamogga | Feb 8, 2024 | The Shimoga Court ಅಪ್ರಾಪ್ತ ಬಾಲಕನೊಬ್ಬನಿಗೆ ಬೈಕ್​ ಚಲಾಯಿಸಲು ಕೊಟ್ಟ ಕಾರಣಕ್ಕೆ ವಾಹನ ಮಾಲೀಕರಿಗೆ 30 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.  3ನೇ ಎ.ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

ಶಿವಮೊಗ್ಗ ಕೋರ್ಟ್ 

ದಿನಾಂಕಃ 30-01-2024 ರಂದು ನವೀನ್ ಕುಮಾರ್ ಮಠಪತಿ, ಪಿಎಸ್ಐ, ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆ ರವರು ಶಿವಮೊಗ್ಗ ನಗರದ ಎಸ್ ಪಿ.ಎಂ.ರಸ್ತೆಯ ಕೋಟೆ ಆಂಜನೇಯನ ದೇವಾಲಯದ ಹತ್ತಿರ ವಾಹನ ತಪಾಸಣೆ ಮಾಡುತ್ತಿದ್ದರು.

ಈ ವೇಳೆ  17 ವರ್ಷದ ಅಪ್ರಾಪ್ತ ವಯ್ಯಸ್ಸಿನ ಬಾಲಕನೊಬ್ಬ  ಮೊಪೆಡ್ ಅನ್ನು ಚಾಲನೆ ಮಾಡಿಕೊಂಡು ಬಂದಿದ್ದಾನೆ. ಇದನ್ನ ಗಮನಿಸಿದ ಪಿಎಸ್​ಐ ಅಪ್ರಾಪ್ತ ವಯ್ಯಸ್ಸಿನ ಬಾಲಕನಿಗೆ ವಾಹನವನ್ನು ಚಾಲನೆ ಮಾಡಲು ಅವಕಾಶ ನೀಡಿದ ವಾಹನದ ಮಾಲೀಕರಾದ ಅವರ ತಾಯಿ ವಿರುದ್ಧ ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣವನ್ನು ದಾಖಲಿಸಿದ್ದರು. 

ಪ್ರಕರಣ ಸಂಬಂಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಿದ್ದರು. ಘನ 3ನೇ ಎ.ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯ ಶಿವಮೊಗ್ಗದ ಮಾನ್ಯ ನ್ಯಾಯಾಧೀಶರು ಮೊಪೆಡ್ ವಾಹನದ ಮಾಲೀಕರಿಗೆ ರೂ 30,000/- ದಂಡ ವಿಧಿಸಿದ್ದಾರೆ.