ಕವಾಸಕಿ ಬೈಕ್​ನ್ನ ಆಲ್ಟರ್​ ಮಾಡಿ RX 100 ಮಾಡಿದ್ದ ಯುವಕ! ಬಿತ್ತು ಕೇಸ್​! ಕೋರ್ಟ್​ನಿಂದ 16,500 ಫೈನ್!

SHIVAMOGGA  |  Dec 14, 2023  |  ಹಳೆಯ ಆರ್​ಎಕ್ಸ್​ ಗಾಡಿಗಳನ್ನು ಸಾಮಾನ್ಯವಾಗಿ ಯಾರು ಸೇಲ್ ಮಾಡೋದಿಲ್ಲ. ಹಾಗೊಂದು ವೇಳೆ ಸೇಲ್  ಮಾಡಿದರೂ ಅದರ ರೇಟ್​ ಸಿಕ್ಕಾಪಟ್ಟೆ ಇರುತ್ತದೆ. ಅಷ್ಟರಮಟ್ಟಿಗೆ ಆರ್​ಎಕ್ಸ್​ನ ಆಯ್ದ ಬೈಕ್​ಗಳು ಡಿಮ್ಯಾಂಡ್​ನಲ್ಲಿವೆ.

ಕವಾಸಕಿ ಬಜಾಜ್​ ಆರ್​ಎಕ್ಸ್ 100

ಆದರೆ ಇಲ್ಲೊಬ್ಬ ಆರ್​ಎಕ್ಸ್ 100 ಖರೀದಿ ಮಾಡುವ ಬದಲು ತನ್ನ ಬಜಾಜ್ ಕವಾಸಾಕಿ ಬೈಕ್​ನ್ನೇ ಆಲ್ಟರ್ ಮಾಡಿಸಿಕೊಂಡು ಓಡಾಡುತ್ತಿದ್ದ. ಈತನ ಬೈಕ್​ ಚಿತ್ರ ವಿಚಿತ್ರ ಬದಲಾವಣೆ ಹಾಗೂ ದೂಮ್​ ಮಚಾಲೆ ಸೌಂಡ್​ ಕೇಳಿದ ಪೊಲೀಸರು ಈತನ ವಿರುದ್ದ ಫೈನ್​ ಮೀಟರ್ ನಲ್ಲಿ ರಸೀದಿ ಹರಿಲಿಲ್ಲ. ಬದಲಾಗಿ ಕೇಸ್ ಹಾಕಿ ಕೋರ್ಟ್​ ಮೆಟ್ಟಿಲೇರಿಸಿದ್ದಾರೆ. 

​​ 

ಹೌದು,  ಬಜಾಜ್ ಕವಾಸಕಿ ಬೈಕನ್ನ ಯಮಹ ಆರ್ ಎಕ್ಸ್-100 ರೀತಿ ಕಾಣುವ ಹಾಗೆ ಸಂಪೂರ್ಣ ಮಾರ್ಪಾಡು (Alteration) ಮಾಡಿಸಿ,  ಕರ್ಕಶ ಶಬ್ದವನ್ನುಂಟು ಮಾಡುವ ಹಾರ್ನ್ ಅನ್ನು ಅಳವಡಿಸಿಕೊಂಡು ವಾಹನವನ್ನು ಚಲಾಯಿಸುತ್ತಿದ್ದಾನೆಂದು 

ಸಾರ್ವಜನಿಕರು ಪೊಲೀಸರಿಗೆ ದೂರಿದ್ದರು.. 

READ  : ಶಿವಮೊಗ್ಗಕ್ಕೆ ಅನುಕೂಲ | ಬೀರೂರು ಜಂಕ್ಷನ್​ನಲ್ಲಿ ನಿಲ್ಲುತ್ತಾ ಬೆಂಗಳೂರು-ಧಾರವಾಡ ನಡುವಿನ ವಂದೇ ಭಾರತ್ ರೈಲು ?

ಪೂರ್ವ ಸಂಚಾರ ಪೊಲೀಸ್ ಠಾಣೆ 

ಈ ಸಂಬಂಧ  ನವೀನ್ ಕುಮಾರ್ ಮಠಪತಿ, ಪಿಎಸ್ಐ ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಠಾಣೆ ರವರು ಆಲ್ಟರ್​ ಬೈಕ್​ನ ಜಾತಕ  ಹುಡುಕಿ ಆ ದ್ವಿಚಕ್ರ ವಾಹನದ ಸವಾರನ ರಾಶಿಗೆ ಇಳಿದಿದ್ದಾರೆ. 

19 ವರ್ಷದ  ಆರ್, ಎಂ ,ಎಲ್ ನಗರ ನಿವಾಸಿಯ ಜೊತೆಗೆ ಆತನ ಬೈಕ್‌ ಅನ್ನು ಪತ್ತೆ ಹಚ್ಚಿ ಪೊಲೀಸ್ ಠಾಣೆಗೆ ಕರೆತಂದು ಆತನ ವಿರುದ್ಧ ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಠಾಣೆ ಯಲ್ಲಿ ಐಎಂವಿ ಕಾಯ್ದೆಯಡಿಯಲ್ಲಿ  ಲಘು ಪ್ರಕರಣವನ್ನು ದಾಖಲಿಸಿದ್ದಾರೆ.. 

ಈ ಸಂಬಂಧ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಿದ್ದು,   3ನೇ ಎ.ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯ ಶಿವಮೊಗ್ಗದ ಮಾನ್ಯ ನ್ಯಾಯಾಧೀಶರು ಆರೋಪಿತನಿಗೆ  ರೂ 16,500/- ರೂ ದಂಡ ವಿಧಿಸಿ ಆದೇಶಿಸಿರುತ್ತಾರೆ.


 

Leave a Comment