ವರದಶ್ರೀ ವಸತಿ ಗೃಹದಲ್ಲಿ ತಂದೆಯನ್ನ ಕೊಂದವನಿಗೆ ಜೀವಾವಧಿ ಶಿಕ್ಷೆ | ಸತ್ತಿದ್ದ ಆರೋಪಿ ಬದುಕಿ ಬಂದಿದ್ದೇಗೆ? | ಬೆಂಗಳೂರು ಕೇಸ್‌ , ಸಾಗರ ಕೋರ್ಟ್‌

Life imprisonment for killing father in Varadashree residential house Sagar Court, Shimoga District, Bangalore Koramangala Police Station, Jogfalls, Kasturi Rangan, Nagananda Kolar,

ವರದಶ್ರೀ ವಸತಿ ಗೃಹದಲ್ಲಿ ತಂದೆಯನ್ನ ಕೊಂದವನಿಗೆ ಜೀವಾವಧಿ ಶಿಕ್ಷೆ | ಸತ್ತಿದ್ದ ಆರೋಪಿ ಬದುಕಿ ಬಂದಿದ್ದೇಗೆ? | ಬೆಂಗಳೂರು ಕೇಸ್‌ , ಸಾಗರ ಕೋರ್ಟ್‌
Sagar Court, Shimoga District, Bangalore Koramangala Police Station, Jogfalls, Kasturi Rangan, Nagananda Kolar,

SHIVAMOGGA | MALENADUTODAY NEWS | Apr 27, 2024      

ಪ್ರಕರಣವೊಂದರಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ಕೋರ್ಟ್‌ ಮಹತ್ವದ ತೀರ್ಪೊಂದನ್ನ ನೀಡಿದೆ. ತಂದೆಯನ್ನ ಕೊಲೆ ಮಾಡಿದ ಮಗನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 

ಏನಿದು ಪ್ರಕರಣ?

ಸಾಗರ ತಾಲ್ಲೂಕು ಬಿ.ಎಚ್. ರಸ್ತೆಯ ವಸತಿ ಗೃಹದಲ್ಲಿ ನಡೆದಿದ್ದ ಕೊಲೆ ಪ್ರಕರಣ ಇದಾಗಿದೆ. ಬೆಂಗಳೂರಿನ ಕೋರಮಂಗಲ ಬಡಾವಣೆಯ ಎಂಜಿನಿಯರ್ ನಾಗಾನಂದ ಕೋಲಾರ ಎಂಬವರಿಗೆ ಪ್ರಕರಣದಲ್ಲಿ ಶಿಕ್ಷೆಯಾಗಿದೆ.  ಇಲ್ಲಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿದೆ. 

ವಸತಿಗೃಹದಲ್ಲಿ ನಡೆದಿತ್ತು ಕೊಲೆ

2013ರ ಅ.28ರಂದು ವರದಶ್ರೀ ವಸತಿ ಗೃಹದಲ್ಲಿ ಕೊಠಡಿಯೊಂದರಲ್ಲಿ ಕೊಲೆಯೊಂದು ನಡೆದಿತ್ತು. ಕಸ್ತೂರಿ ರಂಗನ್‌ ಎಂಬರನ್ನ ಕೊಲೆ ಮಾಡಲಾಗಿತ್ತು.ಈ ಪ್ರಕರಣದಲ್ಲಿ ಸ್ವಂತ ಮಗನೇ ತನ್ನ ತಂದೆಯನ್ನ ಕೊಲೆ ಮಾಡಿದ್ದ. ಇದಕ್ಕೆ ಕೌಟುಂಬಿಕ ಕಲಹ ಕಾರಣವಾಗಿತ್ತು. ಕೊಲೆ ಆರೋಪಿ ನಾಗಾನಂದ ಅಂತರ್ಜಾತಿ ವಿವಾಹವಾಗಿದ್ದ. ಇದೇ ಕಾರಣಕ್ಕೆ ಕುಟುಂಬದಲ್ಲಿ  ಗಲಾಟೆಯಾಗುತ್ತಿತ್ತು. ಪತ್ನಿ ಮಾಂಸಾಹಾರ ಸೇವಿಸುತ್ತಾಳೆ ಎಂಬ ಕಾರಣಕ್ಕೆ ತಂದೆ ಕಸ್ತೂರಿ ರಂಗನ್ ಹಾಗೂ ತಾಯಿ ರಮಾ ರಂಗನ್ ಮತ್ತು ನಾಗಾನಂದನ ಮಧ್ಯೆ ಗಲಾಟೆಯಾಗುತ್ತಿತ್ತು. 

ಕಿರಿಕಿರಿಯಿಂದ ಬೇಸತ್ತ  ನಾಗಾನಂದ, ಹೆತ್ತ ತಂದೆ ಮತ್ತು ತಾಯಿಯನ್ನು ಕೊಲೆ ಮಾಡಿ ಅವರೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಂಬಿಸಲು ಪ್ಲಾನ್‌ ಮಾಡಿಕೊಂಡಿದ್ದ, ಅದರ ಪ್ರಕಾರ ಅವರನ್ನ ಸಾಗರದ ವಸತಿಗೃಹಕ್ಕೆ ಕರೆಸಿಕೊಂಡು ತಂದೆಗೆ ಪೆಟ್ರೋಲ್ ಕುಡಿಸಿದ್ದ, ಆ ಬಳಿಕ ಅವರು ನರಳುತ್ತಿರುವುದನ್ನು ನೋಡಲಾಗದೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬಳಿಕ ತನ್ನ ತಾಯಿಯ ಕುತ್ತಿಗೆಗೆ ಇರಿದು ವಸತಿ ಗೃಹದಿಂದ ಎಸ್ಕೇಪ್‌ ಆಗಿದ್ದ, ಅಂದು ಅಲ್ಲಿನ ಸಿಬ್ಬಂದಿ ರಮಾರವರನ್ನ ಕಾಪಾಡಿದ್ದರು.

ಅಪರಿಚಿತ ಶವ ನಿಗೂಢ

ಇನ್ನೂ ಈ ನಡುವೆ ಪ್ರಕರಣವನ್ನು ಸಾಗರ ಪೊಲೀಸರು ತನಿಖೆ ನಡೆಸ್ತಿರುವಾಗಲೇ ಸಾಗರ ತಾಲ್ಲೂಕು ತಾಲ್ಲೂಕಿನ ಜೋಗ್ ಫಾಲ್ಸ್‌ನಲ್ಲಿ ಅನಾಮಧೇಯ ಶವ ಸಿಕ್ಕಿತ್ತು. ಆತನನ್ನ ವಸತಿಗೃಹದ ಕೊಲೆ ಪ್ರಕರಣದ ಆರೋಪಿ ನಾಗಾನಂದನ ಪತ್ನಿ ಇದು ತಮ್ಮ ಪತಿಯ ಮೃತದೇಹ ಎಂದು ಐಡೆಂಟಿಫೈ ಮಾಡಿದ್ದರು. ಅಲ್ಲದೆ ಮೃತದೇಹದ ಅಂತ್ಯಕ್ರಿಯೆ ನಡೆಸಿ ಅವರು ಬೆಂಗಳೂರಿಗೆ ವಾಪಸ್‌ ಆಗಿದ್ದರು. ಆದರೆ ಕೆಲವು ದಿನಗಳ ಅಂತರದಲ್ಲಿ ಬೆಂಗಳೂರು ಕೋರಮಂಗಲ ಠಾಣೆ ಪೊಲೀಸರು ಪ್ರಕರಣಕ್ಕೆ ಟ್ವಿಸ್ಟ್‌ ಕೊಟ್ಟಿದ್ದರು. ಇನ್ನೊಂದು ಪ್ರಕರಣದಲ್ಲಿ ನಾಗಾನಂದನನ್ನ ಅರೆಸ್ಟ್‌ ಮಾಡಿದ್ದ ಪೊಲೀಸರು, ಜೋಗ್‌ಪಾಲ್ಸ್‌ನಲ್ಲಿ ಸಿಕ್ಕ ಶವ ಆತನದ್ದಲ್ಲ, ಆತ ಜೀವಂತವಾಗಿದ್ದಾನೆ ಎಂದು ಸಾಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. 

ಸತ್ತವ ಬದುಕಿ ಬಂದ

ಸತ್ತು ಹೋಗಿದ್ದ ಎಂದು ಕ್ಲೋಸ್‌ ಆಗಿದ್ದ ಕೇಸ್‌ನಲ್ಲಿ ಸಾಗರ ಪೊಲೀಸರು ಕೋರಮಂಗಲ ಠಾಣೆಗೆ ಹೋಗಿ ಆರೋಪಿಯನ್ನ ವಶಕ್ಕೆ ಪಡೆದು  ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ವಿಚಿತ್ರ ಅಂದರೆ ತನ್ನ ಕುತ್ತಿಗೆಯನ್ನೆ ಕೊಯ್ದರು ಹೆತ್ತಕರಳು ಮಗನ ವಿರುದ್ಧ ಸಾಕ್ಷ್ಯ ಹೇಳಲಿಲ್ಲ. ಹಾಗಾಗಿ ತಾಯಿಯ ಕೊಲೆಯತ್ನದ ಕೇಸ್‌ ಕೋರ್ಟ್‌ನಲ್ಲಿ ಬಿದ್ದೋಯ್ತು.  

ಆದರೆ ತಂದೆ ಕೊಲೆ ಕೇಸ್‌ನಲ್ಲಿ 2015ರ ನವೆಂಬರ್‌ 18ರಂದು ಸಾಗರ ಕೋರ್ಟ್‌ನಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಯ್ತು. ಈ ತೀರ್ಪನ್ನ ಪ್ರಶ್ನಿಸಿದ ನಾಗಾನಂದ ಹೈಕೋರ್ಟ್‌ ಮೆಟ್ಟಿಲೇರಿದ್ದ. ಹೈಕೋರ್ಟ್‌ ಮರು ವಿಚಾರಣೆ ನಡೆಸುವಂತೆ ಸ್ಥಳೀಯ ಕೋರ್ಟ್‌ಗೆ ಮತ್ತೊಮ್ಮೆ ಸೂಚಿಸಿತ್ತು. ಇದೀಗ ಮರುವಿಚಾರಣೆಯು ಮುಗಿದು ಸಾಗರ ಕೋರ್ಟ್‌ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.