ಕುಡಿದ ನಶೆಯಲ್ಲಿ ಮಾಡಿದ ಅಪರಾಧ ಸಾಬೀತು | ಶಿಕಾರಿಪುರದ ಇಬ್ಬರು ಯುವಕರಿಗೆ ಜೀವಾವಧಿ ಶಿಕ್ಷೆ | ಏನಿದು ಪ್ರಕರಣ?

Malenadu Today

KARNATAKA NEWS/ ONLINE / Malenadu today/ Oct 11, 2023 SHIVAMOGGA NEWS

ಕುಡಿದ ನಶೆಯಲ್ಲಿ ಕೊಲೆ ಮಾಡಿದ್ದ ಆರೋಪಿಗಳಿಬ್ಬರಿಗೆ ಶಿವಮೊಗ್ಗ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.    ದಿನಾಂಕಃ 01-01-2021  ರಂದು ರಾತ್ರಿ ಶಿಕಾರಿಪುರ ಟೌನ್ ನಿವಾಸಿಯಾದ ಇಬ್ಬರು ಯುವಕರು,  ಮಧ್ಯಪಾನ ಮಾಡಿಕೊಂಡು ಆಶ್ರಯ ಬಡಾವಣೆಯ  ಅಂಗಡಿಯೊಂದರ ಹತ್ತಿರ ಕೂಗಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಯುವಕನೊಬ್ಬ ಬಂದಿದ್ದಾನೆ. 

ಆತನನ್ನು ನೋಡುತ್ತಲೇ ಆತನೊಂದಿಗೆ ಕಿರಿಕ್ ತೆಗೆದು ಜಗಳವಾಡಿದ್ದ ಇಬ್ಬರು ಯುವಕರು ಆತನ ಎದೆಗೆ ಚುಚ್ಚಿ ಕೊಲೆ ಮಾಡಿದ್ದರು. ಈ ಸಂಬಂಧ  ಶಿಕಾರಿಪುರ ಟೌನ್ ಪೊಲೀಸ್ ಸ್ಟೇಷನ್​ನಲ್ಲಿ  302, 504 ಸಹಿತ 34 ಐಪಿಸಿ, ಮತ್ತು ಕಲಂ 3(1) (r), 3(1)(s), 3(2)(va) SC & ST ಅಡಿಯಲ್ಲಿ ಕೇಸ್ ದಾಖಲಾಗಿತ್ತು. 

 

ಪ್ರಕರಣದ ತನಿಖಾಧಿಕಾರಿ ಶಿವಾನಂದ ಮದರಖಂಡಿ, ಡಿವೈಎಸ್.ಪಿ, ಶಿಕಾರಿಪುರ ಉಪ ವಿಭಾಗ ರವರು ಪ್ರಕರಣ ಸಂಬಂಧ  ಆರೋಪಿತರ ವಿರುದ್ಧ  ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ರು. ಈ ಕೇಸ್ ಸಂಬಂಧ  ಪುಷ್ಪ,  ಸರ್ಕಾರಿ ಅಭಿಯೋಜಕರವರು ಪ್ರಕರಣದ ವಾದ ಮಂಡಿಸಿದ್ದರು. 

ಇದೀಗ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ಮುಗಿದು ಮಾನ್ಯ ನ್ಯಾಯಧೀಶರಾದ  ಬಿ.ಆರ್ ಪಲ್ಲವಿ ತೀರ್ಪು ನೀಡಿದ್ದಾರೆ. ಕೊಲೆ ಮಾಡಿದ ಆರೋಪಿಗಳ ವಿರುದ್ಧದ ಆರೋಪ ಸಾಬೀತಾಗಿದ್ದು, ಇಬ್ಬರಿಗೂ  ಜೀವಾವಧಿ ಶಿಕ್ಷೆ ಮತ್ತು ತಲಾ 1,00,000/-  ರೂ ದಂಡ ವಿಧಿಸಿ ಆದೇಶ ನೀಡಿದ್ದಾರೆ. 


ಇನ್ನಷ್ಟು ಸುದ್ದಿಗಳು 

  1. ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

  2. FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

  3. ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?


 

Share This Article