ಒಂದೇ ಸಾಕ್ಷಿ | ಹೊಸನಗರ ಕೇಸ್‌ನಲ್ಲಿ ಭಟ್ಕಳ ನಿವಾಸಿಗೆ ಸಾಗರ ಕೋರ್ಟ್‌ನಲ್ಲಿ ಐದು ವರ್ಷ ಶಿಕ್ಷೆ | ಹುಡುಗರೇ ಹುಷಾರ್!

A resident of Bhatkal has been sentenced to five years in Sagar Court. Shimoga District Sagar Taluk, Hosnagar Taluk

ಒಂದೇ ಸಾಕ್ಷಿ | ಹೊಸನಗರ ಕೇಸ್‌ನಲ್ಲಿ ಭಟ್ಕಳ ನಿವಾಸಿಗೆ ಸಾಗರ ಕೋರ್ಟ್‌ನಲ್ಲಿ ಐದು ವರ್ಷ ಶಿಕ್ಷೆ | ಹುಡುಗರೇ ಹುಷಾರ್!
Sagar Court. Shimoga District Sagar Taluk, Hosnagar Taluk, Bhatkal

SHIVAMOGGA | MALENADUTODAY NEWS | Apr 30, 2024    ‌ 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಕೋರ್ಟ್‌ ಪ್ರಕರಣವೊಂದರಲ್ಲಿ ಆರೋಪಿಗೆ ಐದು ವರ್ಷಗಳ ಕಾಲ ಶಿಕ್ಷೆ ನೀಡಿ ತೀರ್ಪು ನೀಡಿದೆ. ಮದುವೆಯಾಗಲು ನಿರಾಕರಿಸಿದ್ದಕ್ಕೆ ಮಾನಸಿಕ ಕಿರುಕುಳ ನೀಡಿ ಯುವತಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ಇದಾಗಿದೆ. ಈ ಕೇಸ್‌ನಲ್ಲಿ ಭಟ್ಕಳ ತಾಲ್ಲೂಕಿನ ಮಾರುಕೇರಿ ಗ್ರಾಮದ ಓಂಕಾರ್ ಎಸ್. ಎಂಬಾತನಿಗೆ ಇಲ್ಲಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಐದು ವರ್ಷ ಜೈಲು ಶಿಕ್ಷೆ ಹಾಗೂ ₹7,000 ದಂಡ ವಿಧಿಸಿದೆ.

ಏನಿದು ಪ್ರಕರಣ 

ಶಿವಮೊಗ್ಗ ಜಿಲ್ಲೆ  ಹೊಸನಗರ ತಾಲ್ಲೂಕಿನ ಸಂತ್ರಸ್ತ ಯುವತಿ ಅಪರಾಧಿ ಓಂಕಾರ್‌ಗೆ ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದ. ಆಕೆಯ ನಂಬರ್‌ ಪಡೆದ ಒಂಕಾರ್‌, ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ, ಮದುವೆಯಾಗು’ ಎಂದು ಪೀಡಿಸುತ್ತಿದ್ದ. ಅಲ್ಲದೆ ಇದೇ ಕಾರಣಕ್ಕೆ  2021ರ ಮಾರ್ಚ್ 12 ರಂದು ಶ್ರೇಯಾ ಓದುತ್ತಿದ್ದ ಕಾಲೇಜಿಗೆ ಬಂದಿದ್ದ ಓಂಕಾರ್, ಆಕೆಯ ಕೈ ಹಿಡಿದು ಎಳೆದಾಡಿ ಮದುವೆಯಾಗುವಂತೆ ಒತ್ತಾಯಿಸಿದ್ದಲ್ಲದೆ. ಆಕೆಗೆ ವಿಷಯವನ್ನು ನಿನ್ನ ಅಪ್ಪ ಅಮ್ಮನಿಗೆ ತಿಳಿಸುತ್ತೇನೆ ಎಂದು ಬೆದರಿಕೆ ಹಾಕಿದ್ದನಂತೆ. ಈ ಹಿನ್ನೆಲೆಯಲ್ಲಿ ಹೆದರಿದ  ಶ್ರೇಯಾ ಕಳೆನಾಶಕ ಕುಡಿದು ಆತ್ಮಹತ್ಯೆಗೆ ಮಾಡಿಕೊಂಡಿದ್ದರು. 2021ರ ಮಾರ್ಚ್ 19 ರಂದು ಯುವತಿ  ಸಾವನ್ನಪ್ಪಿದ್ದಳು. ಇನ್ನೂ ಸಾಯುವುದಕ್ಕೂ ಮೊದಲು ವಿಷ ಕುಡಿಯಲು ಓಂಕಾರ್ ನೀಡಿದ ಕಿರುಕುಳ ಕಾರಣ ಎಂದು ಮರಣೋತ್ತರ ಹೇಳಿಕೆ ನೀಡಿದ್ದಳು. ಈ ಸಂಬಂಧ ಪೊಲೀಸರು ತನಿಖೆ ನಡೆಸಿ ಚಾರ್ಜ್‌ ಶೀಟ್‌ ಸಲ್ಲಿಸಿದ್ದರು. ಇದೀಗ  ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪ್ರಭಾವತಿ ಜಿ. ಅವರು ಪ್ರಕರಣದ ತೀರ್ಪು ನೀಡಿದ್ದಾರೆ.