ನಾಲ್ಕನೇ ಸಲ ಶಿವಮೊಗ್ಗ ಟೀಂನಿಂದ ಹಿಮಾಲಯದಲ್ಲಿ ಸಂಸ್ಕೃತ ಧ್ವಜಾರೋಹಣ ! ಏನಿದು?

Shimoga team hoists Sanskrit flag in Himalayas for the fourth time What is this?

ನಾಲ್ಕನೇ ಸಲ ಶಿವಮೊಗ್ಗ ಟೀಂನಿಂದ ಹಿಮಾಲಯದಲ್ಲಿ ಸಂಸ್ಕೃತ ಧ್ವಜಾರೋಹಣ ! ಏನಿದು?

KARNATAKA NEWS/ ONLINE / Malenadu today/ May 29, 2023 SHIVAMOGGA NEWS

ಶಿವಮೊಗ್ಗ (shivamogga news paper,)ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್‌ ಆಫ್ ಇಂಡಿಯಾ, ಗೀರ್ವಾಣಿ ಭಾರತಿ ಸಂಸ್ಕೃತ ಘಟಕ, ಶ್ರೀ ಆದಿಚುಂಚನಗಿರಿ ಮಠ, ಸಂಸ್ಕೃತ ಭಾರತಿ, ತರುಣೋದಯ ಘಟಕದಿಂದ ಹಿಮಾಲಯದ ಚಂದ್ರಕಾಣಿ ಪರ್ವತದ ತುದಿಯಲ್ಲಿ ಇತ್ತೀಚೆಗೆ 'ಬಾಲ್ಯದಿಂದಲೇ ಮಕ್ಕಳಿಗೆ ಸಂಸ್ಕೃತ ಕಲಿಸಿ' ಎನ್ನುವ ಸಂದೇಶ ಸಾರುವ ಸಂಸ್ಕೃತದ ಧ್ವಜಾರೋಹಣ ನಡೆಸಲಾಗಿದೆ. 

ಈ ಮೂಲಕ ನಾಲ್ಕು ಬಾರಿ ಸಂಸ್ಕೃತ ಧ್ವಜಾರೋಹಣ ಶಿವಮೊಗ್ಗ ಮಾಡಿದ ಕೀರ್ತಿ ನಗರಕ್ಕೆ ಸಂದಿದೆ. ಧ್ವಜಾರೋಹಣವನ್ನು ರಾಜಸ್ಥಾನದ ಚಿತ್ತೋಸ್‌ ಗಡದಲ್ಲಿರುವ ಸಂಸ್ಕೃತಾಶ್ರಮದ ಓಂ ಮುನಿಮಹಾರಾಜ ಸ್ವಾಮಿ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಅಧ್ಯಕ್ಷ ಟಿ.ವಿ.ನರಸಿಂಹ ಮೂರ್ತಿ, ಸಂಸ್ಕೃತ ಭಾರತಿ ವಿಭಾಗ ಸಂಯೋಜಕ ಗುರುಮೂರ್ತಿ, ಕೆ.ವಿ.ವಸಂತ ಕುಮಾರ್, ತರುಣೋದಯ ಘಟಕದ ಆ.ನಾ.ವಿಜಯೇಂದ್ರರಾವ್, ಆದಿತ್ಯ ಪ್ರಸಾದ್, ಧ್ವಜ ನಾಗರಾಜ್, ತಂಡದ ನಾಯಕ ಕೊಪ್ಪದ ಸುಭಾಷ್ ಪುರ್‌ ನೆರವೇರಿಸಿದರು. 

ನಾಲ್ಕು ಬಾರಿ ಸಂಸ್ಕೃತ ಧ್ವಜಾರೋಹಣದ ಕೀರ್ತಿ

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದಸಂಸ್ಕೃತ ಶಿಕ್ಷಕ, ಶಿಕ್ಷಕಿಯರು, ಸಂಸ್ಕೃತಾಭಿಮಾನಿಗಳು ಸೇರಿದಂತೆ 38 ಜನರು ಈ ದ್ವಜಾರೋಹಣದಲ್ಲಿದ್ದರು. ಇನ್ನೂ  ಓಂ ಮುನಿ ಮಹಾರಾಜ ಸ್ವಾಮೀಜಿ ಮಾತನಾಡಿ, ಬಾಲ್ಯದ ವಿದ್ಯಾಭ್ಯಾಸದಲ್ಲಿ ಮಕ್ಕಳಿಗೆ ಸಂಸ್ಕೃತ ಶಿಕ್ಷಣ ಅವಶ್ಯಕ. ಪಠ್ಯ ಪುಸ್ತಕದಲ್ಲಿನಮ್ಮ ದೇಶದ ಸಂಸ್ಕೃತಿಗಳನ್ನು ಪರಿಚಯಿಸುವಂತಹ ಕೆಲಸವಾಗಬೇಕು, ದೇಶದ ಸಂಸ್ಕೃತಿ ಅಡಕವಾಗಿದೆ. ಸಂಸ್ಕೃತ ಸಂಸ್ಕೃತದಲ್ಲಿ ಕೇವಲ ಭಾಷೆಯಲ್ಲ ಅದು ಜ್ಞಾನದ ಭಂಡಾರ, ಇದನ್ನು ಮಕ್ಕಳಿಗೆ ಕಲಿಸುವತ್ತ ಎಲ್ಲರೂ ಮುಂದಾಗಬೇಕೆಂದರು.

ಪ್ರಪಂಚದ ಹಲವು ರಾಷ್ಟ್ರಗಳು ಇಂದು ಮಕ್ಕಳಿಗೆ ಸಂಸ್ಕೃತ ಕಲಿಸಲು ಮುಂದಾಗುತ್ತಿವೆ. ಈ ಕೆಲಸ ನಮ್ಮ ದೇಶದಲ್ಲೂ ಆಗಬೇಕು. ಕೇವಲ ಮಠ ಮಂದಿರಗಳಲ್ಲಿ ಕಲಿಸಿದರೆ ಸಾಲದು, ಎಲ್ಲ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲೂ ಕಲಿಸುವ ಕೆಲಸವಾಗಬೇಕು ಎಂದರು 

ಪೂರ್ತಿ ಸುದ್ದಿ: ಸುಡುತ್ತಿದೆ ಬೇಸಿಗೆ , ವಾಹನಗಳ ಬಗ್ಗೆ ಇರಲಿ ಎಚ್ಚರ! ಪೆಟ್ರೋಲ್​ ಬಂಕ್​ನಲ್ಲಿ ಕಾರಿನ ಬ್ಯಾಟರಿ ಸ್ಫೋಟ! ಸ್ವಲ್ಪದರಲ್ಲಿ ತಪ್ಪಿತು ಬೆಂಕಿ ಅನಾಹುತ!