ಪೆಟ್ರೋಲ್​ ಬಂಕ್​ನಲ್ಲಿ ಕಾರಿಗೆ ಬೆಂಕಿ! ಹಿಂಬದಿಯಿಂದ ಬಂದು ಬೈಕ್​ಗೆ ಡಿಕ್ಕಿ! ಬಿಜೆಪಿ ಸಭೆಯಲ್ಲಿ ಸಿದ್ದರಾಮಯ್ಯ ಫೋಟೋ! ದಿನದ ಟಾಪ್ ಸುದ್ದಿಗಳು!

This Article Written by / Malenadu Today / ಮೇ 28, 2023

KARNATAKA NEWS/ ONLINE / Malenadu today/ May 29, 2023 SHIVAMOGGA NEWS

ಭದ್ರಾವತಿ/ ಬೈಕ್​ನಲ್ಲಿ ಹೋಗುತ್ತಿದ್ದ ಇಬ್ಬರಿಗೆ ಕಾರೊಂದು ಡಿಕ್ಕಿ ಹೊಡೆದು ಸ್ಪೀಡಾಗಿ ಮುಂದಕ್ಕೆ ಹೋದ ಘಟನೆಯೊಂದರ ವಿಡಿಯೋ ಇದೀಗ ಹೊರಬಿದ್ದಿದೆ. ಮಾಧ್ಯಮವೊಂದಕ್ಕೆ ಲಭ್ಯವಾದ ವಿಡಿಯೋದಲ್ಲಿ ಕಾಣುತ್ತಿರುವ ದೃಶ್ಯ ಭದ್ರಾವತಿಯದ್ದು ಎಂದು ಹೇಳಲಾಗಿದೆ. 

Malenadu Today Shivamogga

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ : ಹಿಂದಿನಿಂದ ಬಂದು ಡಿಕ್ಕಿ ಹೊಡೆಯುತ್ತಾರೆ ಹುಷಾರ್! ಭದ್ರಾವತಿ ರಸ್ತೆಯಲ್ಲಿ ಸ್ವಲ್ಪದರಲ್ಲಿಯೇ ಉಳಿತು ಜೀವ! ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ!

ಸುದ್ದಿ 2: 

ಶಿವಮೊಗ್ಗ / KSRTC/ Shivamogga banglore bus/ ನಿರೀಕ್ಷೆಯಂತೆಯೇ ಶಿವಮೊಗ್ಗಕ್ಕೂ ಕೆಎಸ್​ಆರ್​ಸಿ ರಸ್ತೆಗಿಳಿಸಿರುವ ಇ-ಬಸ್ಸುಗಳ (e bus) ಸೇವೆ ಲಭ್ಯವಾಗಿದೆ.  ನೂತನ ಹವಾ ನಿಯಂತ್ರಿತ ಇ-ಬಸ್ಸುಗಳ  ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ಕಾರ್ಯಾಚರಣೆ ಆರಂಭಗೊಂಡಿದೆ. 

ಒಟ್ಟಾರೆ  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಸುಸರ್ಜಿತವಾದ ನೂತನ ಹವಾ ನಿಯಂತ್ರಿತ 10 ಇ-ಬಸ್ಸುಗಳನ್ನು ಶಿವಮೊಗ್ಗ ವಿಭಾಗಕ್ಕೆ ಹಂಚಿಕೆ ಮಾಡಲಾಗಿದೆ. ದಿನಾಂಕ:27.05.2023ರಂದು ಅಂದರೆ ಇವತ್ತು ಒಂದು ಇ-ಬಸ್​ ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ತನ್ನ ಪ್ರಯಾಣವನ್ನು ಆರಂಭಿಸಿದೆ.  ಉಳಿದ 9 ಬಸ್​ಗಳ ಪ್ರಯಾಣವನ್ನು ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ (ksrtc shivamogga to bangalore) ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Malenadu Today Shivamogga

ಪೂರ್ತಿ ವಿವರ ಇಲ್ಲಿದೆ ಕ್ಲಿಕ್ ಮಾಡಿ : shivamogga to bangalore bus booking/ ಶಿವಮೊಗ್ಗ -ಬೆಂಗಳೂರು ನಡುವೆ KSRTC E-Bus ಓಡಾಟ ಆರಂಭ! ಟಿಕೆಟ್ ಎಷ್ಟು? ಬುಕ್ಕಿಂಗ್ ಹೇಗೆ ಓದಿ!

ಜೆಪಿ ಸ್ಟೋರಿ!  JP STORY/ ಆತ ರಾಜ್ಯ ಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡರೆ ಪ್ರಶಸ್ತಿ ಮುಡಿಗೇರಿಸಿಕೊಂಡ ಅಂತಾನೇ ಲೆಕ್. ಆತ ಗೆದ್ದ ಪ್ರಶಸ್ತಿಗಳು..,ಗಳಿಸಿದ ಅಭಿಮಾನಿಗಳ ಸಂಖ್ಯೆಗೆ ಲೆಕ್ಕಾನೇ ಇರಲಿಲ್ಲ. ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಆತ ಪಾಲ್ಗೊಂಡಿದ್ಧಾನೆ  ಅಂದ್ರೆ ಯಾವ ಸ್ಟಾರ್ ನಟರಿಗೂ ಸೇರದಷ್ಟು ಅಭಿಮಾನಿಗಳು ಅಲ್ಲಿ ಜಮಾಯಿಸುತ್ತಿದ್ರು. ಶಿಲ್ಡಿ ರವಿ ಅಂತಾ ಕೇಕೇ ಹಾಕಿತ್ತಿದ್ರು. ಕೇವಲ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅಷ್ಟೊಂದು ಮಂದಿಯ ಮನಗೆದ್ದಿದ್ದ ಆತ 2015 ರಲ್ಲಿ ಅರಣ್ಯ ಇಲಾಖೆಯಲ್ಲಿ ನಡೆದ  ಎನ್​ಕೌಂಟರ್​ ನಲ್ಲಿ ಬಲಿಯಾಗಿದ್ದ. ಅವತ್ತಿಗೆ ಅದು ಇಡೀ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾದ ವಷಿಯವಾಗಿತ್ತು. ಅಲ್ಲದೆ  ಅಂದು ಅರಣ್ಯ ಇಲಾಖೆ ಅಧಿಕಾರಿಗಳು ಗುಂಡಿನ ದಾಳಿ ನಡೆಸುವ ಅಗತ್ಯವಾದ್ರೂ ಇತ್ತಾ ಎಂಬ ಪ್ರಶ್ನೆ ಇಂದಿಗೂ ಜೀವಂತವಾಗಿದೆ.. ಇದರ ಕಂಪ್ಲೀಟ್ ವರದಿಯೇ ಇವತ್ತಿನ ಜೆಪಿ ಫ್ಲ್ಯಾಶ್​ ಬ್ಯಾಕ್​! 

Malenadu Today Shivamogga

ಇದರ ಪೂರ್ತಿ ಸ್ಟೋರಿ ಇಲ್ಲಿದೆ ಕ್ಲಿಕ್ ಮಾಡಿ ಓದಿ: ಶೆಟ್ಟಿಹಳ್ಳಿ ಕಾಡಿನಲ್ಲಿ ನಡೆದಿತ್ತು ಹೋರಿ ಹಬ್ಬದ ಹೀರೋವಿನ ಎನ್​ಕೌಂಟರ್​ ! 3 ಜಿಲ್ಲೆಗಳ ಜನರ ಆಕ್ರೋಶ ಅವತ್ತು ತಣ್ಣಗಾಗಿದ್ದು ಹೇಗೆ ಗೊತ್ತಾ? JP FLASHBACK

ಶಿವಮೊಗ್ಗ/ ಕೇಂದ್ರ ಕಾರಾಗೃಹ – Malenadu Today- Malnad news live/  ಕೇಂದ್ರ ಕಾರಾಗೃಹದ ಮೇಲೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಅಧಿಕಾರಿಗಳು ದಿಢೀರ್ ರೇಡ್ ನಡೆಸಿದ್ಧಾರೆ.ನೂತನ ಪೊಲೀಸ್ ಮಹಾನಿರ್ದೇಶಕರ ಸೂಚನೆಯಂತೆ ಈ ರೇಡ್ ನಡೆದಿದೆ ಎನ್ನಲಾಗುತ್ತಿದೆ. ಇನ್ನು ಪೊಲೀಸರ ದಿಢೀರ್ ದಾಳಿ ವೇಳೆ ಯಾವುದೇ ನಿಷೇಧಿತ ವಸ್ತುಗಳು ಪತ್ತೆಯಾಗಿಲ್ಲ ಎಂಬ ಮಾಹಿತಿಯಿದೆ. 

ಪ್ರೊಬೇಷನರಿ ಐಪಿಎಸ್​ ಅಧಿಕಾರಿ ಹಾಗೂ ಡಿವೈಎಸ್​ಪಿ ಬಾಲರಾಜ್ ಸೇರಿದಂತೆ 10 ಕ್ಕೂ ಹೆಚ್ಚು ಅಧಿಕಾರಿಗಳು  ಮತ್ತು 50 ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರಾಗೃಹ ಪರಿಶೀಲನೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು, ಮಧ್ಯಾಹ್ನ 12 ಗಂಟೆ ಸುಮಾರಿಗೆ ಜೈಲ್ ರೇಡ್ ಆರಂಭಿಸಿದ ಪೊಲೀಸರು, ಸುಮಾರು 2 ಗಂಟೆಗೂ ಅಧಿಕ ಕಾಲ ಪರಿಶೀಲನೆ ನಡೆಸಿದ್ದಾರೆ. 

ಪೂರ್ತಿ ಸುದ್ದಿ : ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ರೇಡ್! ಶ್ವಾನದಳದೊಂದಿಗೆ 2 ಗಂಟೆಗಳ ಕಾಲ ಶೋಧ! ಕಾರಣವೇನು!?

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಎಸ್​.ಎನ್ ಚೆನ್ನಬಸಪ್ಪ ರವರ ನೂತನ ಶಾಸಕರ ಕಚೇರಿ ಉದ್ಘಾಟನೆಯಲ್ಲಿ ಹಾಕಲಾಗಿದ್ದ ವೇದಿಕೆಯ ಫ್ಲೆಕ್ಸ್ ಕುತೂಹಲಕ್ಕೆ ಕಾರಣವಾಗಿತ್ತು. ಬಿಜೆಪಿ ಮುಖಂಡರು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರಗಳ ಜೊತೆಯಲ್ಲಿ ಸಿಎಂ ಸಿದ್ದರಾಮಯ್ಯರವರ ಭಾವಚಿತ್ರ ಸಭಿಕರ ಗಮನ ಸೆಳೆದಿದೆ. 

Malenadu Today Shivamogga

ಇಂದು ಬೆಳಿಗ್ಗೆ  ಗಣಪತಿ ಹೋಮ ಮಾಡುವ ಮೂಲಕ ಶಾಸಕರ ಕಚೇರಿಯನ್ನು ಅಧಿಕೃತವಾಗಿ ಉದ್ಘಾಟನೆ ಮಾಡಲಾಗಿದೆ. ಈ ವೇಳೇ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕರಾದ ಜಿನರಾಜ್ ಜೈನ್ ಅವರು,  ಕೆ.ಎಸ್ ಈಶ್ವರಪ್ಪನವರು, ಭಾನುಪ್ರಕಾಶ್  ಡಿ.ಎಸ್ ಅರುಣ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಹಿಂದಿದ್ದ ಫ್ಲೆಕ್ಸ್ ಕುತೂಹಲ ಮೂಡಿಸಿತು. 

ಪೂರ್ತಿ ಸುದ್ದಿ: ನೂತನ ಶಾಸಕರ ಕಚೇರಿ ಉದ್ಧಾಟನೆ! ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ನಾಯಕರ ನಡುವಿನ ಸಿದ್ದರಾಮಯ್ಯ ಫೋಟೋ!

ಬೀರೂರು/ ಪೆಟ್ರೋಲ್ ಹಾಕಿಸಲು ಬಂದ ವೇಳೆ ಕಾರೊಂದರ ಬ್ಯಾಟರಿ ಬಸ್ಟ್ ಆಗಿ ಬೆಂಕಿ ಹೊತ್ತಿಕೊಂಡ ಘಟನೆ ಚಿಕ್ಕಮಗಳೂರು  ಜಿಲ್ಲೆಯ ಬೀರೂರಲ್ಲಿ ನಡೆದಿದೆ. 

ನಡೆದಿದ್ದೇನು?

ಇಲ್ಲಿನ ಪೆಟ್ರೋಲ್​ ಬಂಕ್​ ಬಳಿಯಲ್ಲಿ ಇವತ್ತು ಮಧ್ಯಾಹ್ನ ಈ ಘಟನೆ ಸಂಭವಿಸಿದೆ. ಆಲ್ದೂರಿನಿಂದ ಬೀರೂರಿಗೆ ಕುಟುಂಬವೊಂದು ಕಾರಿನಲ್ಲಿ ಬಂದಿತ್ತು. ಪೆಟ್ರೋಲ್​ ಹಾಕಿಸುವ ಸಲುವಾಗಿ, ಚಾಲಕ ಕಾರನ್ನು ಬಂಕ್​ಗೆ ಕೊಂಡೊಯ್ದಿದ್ದಾನೆ. ಈ ವೇಳೆ ಕಾರಿನಲ್ಲಿದ್ದ ಬ್ಯಾಟರಿ ಬಸ್ಟ್ ಆಗಿ ಬೆಂಕಿ ಹೊತ್ತಿಕೊಂಡಿದೆ.

ಪೂರ್ತಿ ಸುದ್ದಿ: ಸುಡುತ್ತಿದೆ ಬೇಸಿಗೆ , ವಾಹನಗಳ ಬಗ್ಗೆ ಇರಲಿ ಎಚ್ಚರ! ಪೆಟ್ರೋಲ್​ ಬಂಕ್​ನಲ್ಲಿ ಕಾರಿನ ಬ್ಯಾಟರಿ ಸ್ಫೋಟ! ಸ್ವಲ್ಪದರಲ್ಲಿ ತಪ್ಪಿತು ಬೆಂಕಿ ಅನಾಹುತ!

#ShimogaNews,#ShivamoggaNews,SHIVAMOGGA

ಮುಂದಿನ ಸುದ್ದಿ ಒದಿ

Leave a Comment