ಶೆಟ್ಟಿಹಳ್ಳಿ ಕಾಡಿನಲ್ಲಿ ನಡೆದಿತ್ತು ಹೋರಿ ಹಬ್ಬದ ಹೀರೋವಿನ ಎನ್​ಕೌಂಟರ್​ ! 3 ಜಿಲ್ಲೆಗಳ ಜನರ ಆಕ್ರೋಶ ಅವತ್ತು ತಣ್ಣಗಾಗಿದ್ದು ಹೇಗೆ ಗೊತ್ತಾ? JP FLASHBACK

The encounter of a hero of HORI HABBA took place in the Shettihalli forest! Do you know how the anger of the people of three districts cooled down that day? JP FLASHBACK

ಶೆಟ್ಟಿಹಳ್ಳಿ ಕಾಡಿನಲ್ಲಿ ನಡೆದಿತ್ತು ಹೋರಿ ಹಬ್ಬದ ಹೀರೋವಿನ  ಎನ್​ಕೌಂಟರ್​ !  3 ಜಿಲ್ಲೆಗಳ ಜನರ ಆಕ್ರೋಶ ಅವತ್ತು ತಣ್ಣಗಾಗಿದ್ದು ಹೇಗೆ ಗೊತ್ತಾ? JP FLASHBACK

KARNATAKA NEWS/ ONLINE / Malenadu today/ May 28, 2023 SHIVAMOGGA NEWS

JP STORY/ ಆತ ರಾಜ್ಯ ಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡರೆ ಪ್ರಶಸ್ತಿ ಮುಡಿಗೇರಿಸಿಕೊಂಡ ಅಂತಾನೇ ಲೆಕ್. ಆತ ಗೆದ್ದ ಪ್ರಶಸ್ತಿಗಳು..,ಗಳಿಸಿದ ಅಭಿಮಾನಿಗಳ ಸಂಖ್ಯೆಗೆ ಲೆಕ್ಕಾನೇ ಇರಲಿಲ್ಲ. ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಆತ ಪಾಲ್ಗೊಂಡಿದ್ಧಾನೆ  ಅಂದ್ರೆ ಯಾವ ಸ್ಟಾರ್ ನಟರಿಗೂ ಸೇರದಷ್ಟು ಅಭಿಮಾನಿಗಳು ಅಲ್ಲಿ ಜಮಾಯಿಸುತ್ತಿದ್ರು. ಶಿಲ್ಡಿ ರವಿ ಅಂತಾ ಕೇಕೇ ಹಾಕಿತ್ತಿದ್ರು. ಕೇವಲ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅಷ್ಟೊಂದು ಮಂದಿಯ ಮನಗೆದ್ದಿದ್ದ ಆತ 2015 ರಲ್ಲಿ ಅರಣ್ಯ ಇಲಾಖೆಯಲ್ಲಿ ನಡೆದ  ಎನ್​ಕೌಂಟರ್​ ನಲ್ಲಿ ಬಲಿಯಾಗಿದ್ದ. ಅವತ್ತಿಗೆ ಅದು ಇಡೀ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾದ ವಷಿಯವಾಗಿತ್ತು. ಅಲ್ಲದೆ  ಅಂದು ಅರಣ್ಯ ಇಲಾಖೆ ಅಧಿಕಾರಿಗಳು ಗುಂಡಿನ ದಾಳಿ ನಡೆಸುವ ಅಗತ್ಯವಾದ್ರೂ ಇತ್ತಾ ಎಂಬ ಪ್ರಶ್ನೆ ಇಂದಿಗೂ ಜೀವಂತವಾಗಿದೆ.. ಇದರ ಕಂಪ್ಲೀಟ್ ವರದಿಯೇ ಇವತ್ತಿನ ಜೆಪಿ ಫ್ಲ್ಯಾಶ್​ ಬ್ಯಾಕ್​! 

ಪೊಲೀಸ್ರು ನಡೆಸುವ ಎನ್ಕೌಂಟರಿಗೂ, ಪಾರೆಸ್ಟ್ ನವರು ನಡೆಸೋ ಎನ್ಕೌಂಟರಿಗೂ ಏನು ವ್ಯತ್ಯಾಸ ಗೊತ್ತಾ..,ಪೊಲಿಸ್ರೂ ಒಬ್ಬ ಸಮಾಜಘಾತುಕನನ್ನು ಎನ್​ಕೌಂಟರ್​ ಮಾಡಬೇಕಾದ್ರೆ ಅಂತಹ ನಟೋರಿಯಸ್ ವ್ಯಕ್ತಿ ವಿರುದ್ಧ ಸಾಕಷ್ಟು ಕ್ರೈಂ ಫೈಲ್ ಗಳು ಬಿಲ್ಡ್ ಅಪ್ ಆಗಿರಬೇಕಾಗುತ್ತೆ. ಆತ ಸೋಸೈಟಿಗೆ ತುಂಬಾ ತಲೆನೋವಾಗಿದ್ರೆ, ವಾಂಟೆಡ್.. ಡೆಡ್ ಆರ್ ಅಲೈವ್ ಅನ್ನುವುದು ನಿಕ್ಕಿಯಾದ ಮೇಲೆ ಆತನನ್ನ  ಪೊಲೀಸ್ ಇಲಾಖೆ ಬುಲ್ಲೆಟ್​ನಿಂದ ಉಡಾಯಿಸುತ್ತಾರೆ. ಹಾಗೆ ಸುಮ್ಮನೆ ಗುಂಡು ಹಾರಿಸುವುದು ಕೂಡ ಇಲಾಖೆಯಲ್ಲಿ ತಮಾಷೆಯ ವಿಷಯವಲ್ಲ ಏಕೆಂದರೆ, ಒಂದ ಎನ್​ಕೌಂಟರ್​ ಆದರೆ,  ಡಿಪಾರ್ಟ್ ಮೆಂಟ್ ಎನ್ಕೈರಿ ಇಂದ ಹಿಡಿದು ಹ್ಯೂಮನ್ ರೈಟ್ಸ್ ವರೆಗೂ ಪೊಲೀಸರು ವಿಚಾರಣೆ ಎದುರಿಸಬೇಕಾಗುತ್ತೆ. ಹೀಗಾಗಿ ಪೊಲೀಸ್ರು ಎನ್​ಕೌಂಟರ್​ ಸಹವಾಸವೇ ಬೇಡ ಅಂತಾ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿಯೋ ಪ್ರಯತ್ನ ಮಾಡುತ್ತಾರೆ ಪೊಲೀಸರು. 

ಅರಣ್ಯ ಇಲಾಖೆಯಲ್ಲಿಯು ನಡೆಯುತ್ತದೆ ಎನ್​ಕೌಂಟರ್

ಆದ್ರೆ ನಮ್ಮ ಅರಣ್ಯ ಇಲಾಖೆ ಅಧಿಕಾರಿಗಳು ನಡೆಸುವ ಎನ್​ಕೌಂಟರ್​ ಗೆ ಯಾರು ಲೆಕ್ಕ ಕೇಳೋ ಹಾಗಿಲ್ಲ. ,ಇವರಿಗೆ ಸರ್ಕಾರದ ಯಾವ ತನಿಖೆ..,ಹ್ಯೂಮನ್ ರೈಟ್ಸ್ ಗಳು ಅಪ್ಲೆ ಆಗೋದಿಲ್ಲ.ಅಪ್ಲೇ ಆಗೋದೇ ಆಗಿದ್ರೆ ಇಷ್ಟರಲ್ಲಿ ಎಷ್ಟೊಂದು ಪ್ರಕರಣಗಳು ತನಿಖೆಗೆ ಒಳಪಟ್ಟಿರಬೇಕಿತ್ತು. ಶಿವಮೊಗ್ಗದಲ್ಲಿಯು ಇಂತಹ ಫಾರೆಸ್ಟ್​  ಎನ್​ಕೌಂಟರ್​ ಗಳಿಗೆ ನಾಲ್ಕೈದು ಹೆಣಗಳು ಉರುಳಿದ ಇತಿಹಾಸವಿದೆ. 

ಅರಣ್ಯ ಕಾನೂನು ಕಠಿಣ

ಪಾರೆಸ್ಟ್ ಆಕ್ಟ್ ಪ್ರಕಾರ ವೈಲ್ಡ್ ಲೈಫ್ ಪಾರೆಸ್ಟ್ ನಲ್ಲಾಗಲಿ ಅಥವಾ ನ್ಯಾಷನಲ್ ಪಾರ್ಕ್ ನಲ್ಲಾಗಲಿ ಅಥವಾ ನಾಲ್ಕೈದು ಗಿಡಗಳಿರೋ ಮೈನರ್ ಪಾರೆಸ್ಟೇ ಆಗಿರ್ಲಿ. ಅಲ್ಲಿ ಅಕ್ರಮವಾಗಿ ಒಳಪ್ರವೇಶಿಸಿದ ಯಾರೇ ಆದರೂ ಆತ ಕಠಿಣ ಶಿಕ್ಷೆಗೆ ಗುರಿಯಾಗುತ್ತಾನೆ.ಶೆ ಡ್ಯುಲ್ ಒನ್ ಎನಿಮಲ್ ಗಳನ್ನು ಕೊಂದರೇ, ಕನಿಷ್ಟ  10 ಮಂದಿಯನ್ನು ಕೊಲೆ ಮಾಡಿದ ಆರೋಪಿಗಾಗುವಷ್ಟು ದೊಡ್ಡಮಟ್ಟದ ಶಿಕ್ಷೆ ಕಾನೂನಿನಲ್ಲಿದೆ. ಒಂದು ಕಾಡಿನಲ್ಲಿ ಒಬ್ಬ ವ್ಯಕ್ತಿ ಬೀಡಿ ಬೆಂಕಿ ಪೊಟ್ಟಣ ತೆಗೊಂಡು ಹೋದ್ರು. ಆತನ ಮೇಲೆ ಕೇಸು ಹಾಕುವ ಅಧಿಕಾರ ಅರಣ್ಯ ಇಲಾಖೆ ಅಧಿಕಾರಿಗಳಿಗಿದೆ. ಇನ್ನು ಮರಗಳ್ಳತನ ಮಾಡಿದ್ರೆ ಮುಗಿದೇ ಹೋಯ್ತು.. ಮರಗಳ್ಳರ ಎದೆಗೆ ಗುಂಡಿಟ್ಟು ಬಲಿ ಹಾಕೋ ಅಧಿಕಾರ  ಕೂಡ ಇದೇ ಇಲಾಖೆಗೆ  ಕಾನೂನು ನೀಡಿದೆ. ಇಂತಹ ಕಠಿಣ ಕಾನೂನಿನ ಅವಕಾಶದ ಅಡಿಯಲ್ಲಿ ಅರಣ್ಯ ಇಲಾಖೆ ಒಂದು ಎನ್​ಕೌಂಟರ್​ ನಡೆಸಿತ್ತು. ಆ ಎನ್​ಕೌಂಟರ್​ ನಡೆದಿದ್ದು 07-09-2015 ರಲ್ಲಿ. ಸ್ಥಳ:  ಶಿವಮೊಗ್ಗ ತಾಲೂಕಿನ ಶೆಟ್ಟಿಹಳ್ಳಿ ಅಭಯಾರಣ್ಯದ ಸಿರಿಗೆರೆ ರೇಂಜ್. ಅವತ್ತು  26 ವರ್ಷದ ಯುವಕ ರವಿ ನಾಯಕ್ , ಅರಣ್ಯ ಇಲಾಖೆಯ ಗುಂಡಿಗೆ ಎದೆಕೊಟ್ಟು ಶಾಶ್ವತವಾಗಿ ಮಲಗಿದ್ದ. 

ಏನಾಗಿತ್ತು ಅಂದು!

ಅಂದು ಸಿರಿಗೆರೆ ರೇಂಜ್ ನ ಕುರುಂಬಳ್ಳಿ ಗೇಟ್ ಬಳಿ ಮರಗಳ್ಳರು ಬೃಹತ್ ಮರಗಳನ್ನು ಕಡಿದು ಹಾಕಿದ್ರು ಆದರೆ  ಕಡಿದ ದಿನವೇ ಮರಗಳ್ಳರು ಮರಗಳನ್ನು ಸಾಗಿಸಲಿಲ್ಲ. ಅಷ್ಟೊತ್ತಿಗೆ  ಸಿರಿಗೆರೆ ಪಾರೆಸ್ಟ್ ನ ಅಧಿಕಾರಿ ಸಿಬ್ಬಂದಿಗಳಿಗೆ ಮರಗಳ್ಳತನದ ವಿಚಾರ ಗೊತ್ತಾಗಿತ್ತು. ಹಾಗಾಗಿ ಕಡಿದ ಮರಗಳನ್ನ ಹೊತ್ತೊಯ್ಯಲು ಬಂದೇ ಬರುತ್ತಾರೆ  ಎಂಬುದನ್ನ ಅರಿತ ಸಿಬ್ಬಂದಿ, ಮರಗಳ್ಳರಿಗಾಗಿ ಹೊಂಚು ಹಾಕಿ ಕಾಯುತ್ತಿದ್ರು. ಅಂದು ರಾತ್ರಿ  ಮರಗಳ್ಳರು,ನಿಗದಿತ ಸ್ಥಳಕ್ಕೆ ಬರುತ್ತಾರೆಂಬ ಖಚಿತ ಮಾಹಿತಿ ಸಿರಿಗೆರೆ ರೇಂಜ್ ನ ಅಧಿಕಾರಿಗಳಿಗಿತ್ತು . ಹೀಗಾಗಿ ಫುಲ್ ಅಲರ್ಟ್ ಆದ ಅರಣ್ಯಾಧಿಕಾರಿಗಳು ಗನ್ ಸಮೇತ ಕುರ್ರಂಬಳ್ಳಿ ಗೇಟ್ ಬಳಿ ವಾಹನದಲ್ಲಿ ಹೊಂಚು ಹಾಕಿದ್ದಾರೆ. ಈ ಸಂದರ್ಭದಲ್ಲಿ ಅಂದುಕೊಂಡಂತೆ ಪೋರ್ಸ್ ವಾಹನದಲ್ಲಿ ಮರಗಳ್ಳರು ಬಂದಿದ್ದಾರೆ . ಕಡಿದಿದ್ದ ಮರಗಳನ್ನು ಸಾಗಿಸಲು ಅಣಿಯಾಗುತ್ತಿದ್ದಂತೆ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ. ಮರಗಳ್ಳರ ಮೇಲೆ ಗುಂಡು ಹಾರಿಸಿದ್ದಾರೆ.

ಕಾಡಿನಲ್ಲಿ ಅವತ್ತು ಸರ್ಕಾರಿ ಬಂದೂಕುಗಳ ಬುಲೆಟ್​ಗಳ ಅನಾಮತ್ತಾಗಿ ಹಾರಿದ್ದವು. ಸೆರೆಂಡರ್ ಆಗಿ ಅಂತಾ ಮರಗಳ್ಳರಿಗೆ ವಾರ್ನ್​ ಕೊಟ್ಟಿದ್ದರಾ? ಮರಗಳ್ಳರು ಹಲ್ಲೆ ಮಾಡಲು ಮುಂದಾಗಿದ್ದರಾ? ಸ್ಥಳದಲ್ಲಿ ನಡೆದಿದ್ದು ಏನು? ಅರ್ಥವಾಗುವ ಹೊತ್ತಿಗೆ ರವಿ ನಾಯ್ಕ್​ ಎಂಬಾತ ಗುಂಡಿಗೆ ಬಲಿಯಾಗಿದ್ದ!  ಹೀಗೊಂದು ಸುದ್ದಿ ಹರಡುತ್ತಲೇ ಹಾವೇರಿ , ಗದಗ, ಹಿರೇಕೆರೂರು,  ಬ್ಯಾಡಗಿ ಸುತ್ತಮುತ್ತಲಿನ ಊರಿನ ಜನರೆಲ್ಲರೂ ಆಯನೂರು ಸರ್ಕಾರಿ ಆಸ್ಪತ್ರೆಯತ್ತ ಜಮಾಯಿಸಿದ್ದರು. ಆಕ್ರಂಧನ ಮುಗಿಲು ಮುಟ್ಟಿತ್ತು. ಜನರ ಸಂತೆ ನೆರೆದಿದ್ದನ್ನ ನೋಡಿ ಸ್ವತಃ ಅಂದಿನ ಎಸ್​ಪಿ ರವಿ ಚನ್ನಣ್ಣವರ್​  ಆತಂಕಗೊಂಡು ಯಾರು ಈ ರವಿ ನಾಯ್ಕ್​ ಎಂದು ವಿಚಾರಿಸತೊಡಗಿದ್ದರು. 

ಪಂಟರ್ ಶಿಡ್ಲಿ ರವಿ

ಶಿಡ್ಲಿ ರವಿ ಅಂದ್ರೆ..ಶಿವಮೊಗ್ಗ ಹಾವೇರಿ ಸುತ್ತಮುತ್ತಲ ಜಿಲ್ಲೆಗಳಲ್ಲಿ ಹೋರಿ ಪೈಲ್ವಾನ್ ಎಂದೇ ಪ್ರಖ್ಯಾತಿ ಹೊಂದಿದ್ದ.ಈತನಿಗೆ ಪೇಸ್ಬುಕ್ ನಲ್ಲಿ ಸಾಕಷ್ಟು ಅಭಿಮಾನಿಗಳಿದ್ರು .  ರಾಜ್ಯದ ಯಾವುದೇ ಮೂಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡೆದರೂ, ಅಲ್ಲಿಗೆ ಹೋಗಿ ಪ್ರಶಸ್ತಿ ಗೆದ್ದು ಬರುತ್ತಿದ್ದ ರವಿ ನಾಯ್ಕ್​ . ಬೆದರಿದ ಹೋರಿಯನ್ನು ಹಿಡಿಯುವ ಈತನ ಗುಂಡಿಗೆ ಬಗ್ಗೆ ಸಾಕಷ್ಟು ವರ್ಣನೆಗಳು ಹೋರಿ ಹಬ್ಬದಲ್ಲಿ ಕೇಳಿಬರುತ್ತಿದ್ದವು.  ಹೋರಿ ಬೆದರಿಸುವ ಸ್ಪರ್ಧಾಳುಗಳಿಗೂ ಲಕ್ಷಾಂತರ ಮಂದಿ ಅಭಿಮಾನಿಗಳು ಇರುತ್ತಾರೆ. ಅವರೆಲ್ಲರೂ ಆ ಸಾಧಕನಿಗಾಗಿ ಕಂಬನಿ ಮಿಡಿಯುತ್ತಾರೆ ಅಂದು ಮೊದಲ ಸಲ ಗೊತ್ತಾಗಿತ್ತು.  

ಶಿಡ್ಲಿ ಅಂದರೆ ಉಡಾ

ಬಣಜಾರ ಭಾಷೆಯಲ್ಲಿ ಶಿಡ್ಲಿ ಅಂದ್ರೆ ಉಡಾ ಅಂತಾ..,ಬೆದರಿ ಓಡುವ ಹೋರಿಯನ್ನು ರವಿ ಕುತ್ತಿಗೆಗೆ ಕೈಹಾಕಿ ಕಟ್ಟಿಕೊಂಡರೆ ಅದು ಉಡದ ಹಿಡಿತ ಇದ್ದಂತೆ ..ಯಾವುದೇ ಕಾರಣಕ್ಕೂ ಗ್ರೀಪ್ ತಪ್ಪೋದಕ್ಕೆ ಸಾಧ್ಯನೇ ಇಲ್ಲ.ಹೋರಿಯ ಕೊಂಬನ್ನು ಬಗ್ಗಿಸಿ.,ಅದನ್ನು ನಿಲ್ಲಿಸಿಬಿಡುತ್ತಾನೆ ಈ ಭೂಪ..,ಹೀಗಾಗಿಯೇ ರವಿ- ಕಾಂತ ಜೋಡಿ ರಾಜ್ಯದ ಮೂಲೆ ಮೂಲೆಗಳಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. 

ಬಡತನ ಕೂಲಿಗೆ ನೂಕಿದ್ದೆ ತಪ್ಪಾಗಿ ಹೋಯ್ತಾ..

ಇಷ್ಟಕ್ಕೂ ಅಷ್ಟೊಂದು ಪ್ರಖ್ಯಾತಿ ಹೊಂದಿದ್ದ ರವಿ, ಮರಗಳ್ಳತನಕ್ಕೆ ಏಕೆ ಹೋಗಿದ್ದ. ಅವತ್ತು ಅನುಮಾನಕ್ಕೆ ದಾರಿಮಾಡಿಕೊಟ್ಟಿದ್ದ ಪ್ರಥಮ ಪ್ರಶ್ನೆ ಇದಾಗಿತ್ತು. ಆ ಸಂದರ್ಭದಲ್ಲಿ ಮಲೆನಾಡಲ್ಲಿ ಬರ ಎದುರಾಗಿತ್ತು.  ಮಳೆ ಬೆಳೆಯಿಲ್ಲದೆ ತತ್ತರಿಸಿ ಹೋಗಿದ್ದ ರವಿ ಕುಟುಂಬ..,ಆರ್ಥಿಕವಾಗಿ ಕುಗ್ಗಿಹೋಗಿತ್ತು. ಕೆಲಸವಿಲ್ಲದೆ ಮನೆಯಲ್ಲಿದ್ದ ರವಿ ಕೂಲಿ ಕೆಲಸಕ್ಕೆ ಹೋಗುವ ಸಿದ್ದತೆಯಲ್ಲಿದ್ದ. ಈ ಸಂದರ್ಭದಲ್ಲಿ, ಕಾಡಿನಲ್ಲಿ ಮರ ಕಡಿದು ಬಂದಿದ್ದ ಕಳ್ಳರು, ರವಿಯನ್ನ ಮರ ಸಾಗಿಸುವ ಕೂಲಿ ಕೆಲಸಕ್ಕೆ ಕರೆದಿದ್ಧಾರೆ. ಕೂಲಿಗೊಪ್ಪಿಕೊಂಡಿದ್ದ ರವಿ ನಾಯ್ಕ್​  07-09-2015 ರ  ರಾತ್ರಿ ಮರ ಸಾಗಿಸುವ ಕೆಲಸಕ್ಕೆ ಹೋಗಿದ್ದ ಅಷ್ಟೆ,. ಆನಂತರ ನಡೆದಿದ್ದು ಮೇಲೆ ಈಗಾಗಲೇ ಓದಿದ್ದೀರಿ.  

ಅರಣ್ಯ ಇಲಾಖೆ ಕಛೇರಿಗೆ ಮುತ್ತಿಗೆ ಪ್ರತಿಭಟನೆ

ಇಂತಹದ್ದೊಂದು ಎನ್​ಕೌಂಟರ್​ ನಡೆಯಿತು ಅಂತಾ ಗೊತ್ತಾಗುತ್ತಲ್ಲೇ  ಆಯನೂರು ಅರಣ್ಯ ಇಲಾಖೆ ಕಛೇರಿ ಎದುರು ದೊಡ್ಡ ಪ್ರತಿಭಟನೆ ಹೊರಬಿತ್ತು. ಕುಟುಂಬಕ್ಕೆ ನ್ಯಾಯಬೇಕು ಎಂದು ಹೋರಾಟ ಆರಂಭವಾಗಿ ದಿಕ್ಕಾರದ ಕೂಗು ಕೇಳಿಬಂತು.  

ದೌಡಾಯಿಸಿದ್ದರು ಐಜಿ!

ಆಯನೂರು ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳುವ ಎಲ್ಲಾ ಲಕ್ಷಣಗಳು ದಟ್ಟವಾಗಿತ್ತು. ಪರಿಸ್ಥಿತಿ ಕಂಟ್ರೋಲ್ ಮಾಡುವುದು ಪೊಲೀಸರಿಗೆ ಸುಲಭದ ಮಾರ್ಗವಾಗಿರಲಿಲ್ಲ. ಎಸ್​ ಪಿ  ರವಿ ಚನ್ನಣ್ಣವರ್​ ತಮ್ಮೆಲ್ಲಾ ಅನುಭವ ಬಳಸಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಂಡಿದ್ದರು. ಆದರೆ ಜನರ ಆಕ್ರೋಶ ತಣ್ಣಗಾಗಿಸಲು ಅವರಿಗೂ ಕಷ್ಟವಾಗಿತ್ತು. ಕಾರಣ ಸಾವಿನ ಆಕ್ರೋಶ ಬಹಳಷ್ಟು ಮಡುಗಟ್ಟಿತ್ತು.ಅಷ್ಟೊತ್ತಿಗೆ ಸ್ಥಳಕ್ಕೆ ಐಜಿಯವರು ಬಂದು, ಗ್ರಾಮಸ್ಥರ ಜೊತೆಗೆ ಮಾತುಕತೆ ನಿಂತರು, ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಮೇಲಾಧಿಕಾರಿಗಳ ಸಮಾಧಾನದ ಮಾತುಗಳು ಪ್ರತಿಭಟನೆಯನ್ನು ಹಿಂಪಡೆಯುವಂತೆ ಮಾಡಿತ್ತು. 

ಅರಣ್ಯ ಇಲಾಖೆಯ ಕಣ್ಣಾಮುಚ್ಚಾಲೆ!

ಅವತ್ತು ಪೊಲೀಸರು ಇಲ್ಲದಿದ್ದರೇ ಪರಿಸ್ಥಿತಿ ಏನಾಗುತ್ತಿತ್ತೊ ಗೊತ್ತಿಲ್ಲ. ಆದರೆ ಅವತ್ತು ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸರನ್ನ ಹೊರಗಿಟ್ಟು ತಮ್ಮ ತಮ್ಮಲ್ಲೆ ಸಭೆ ನಡೆಸಿದ್ದರು. ಎನ್​ಕೌಂಟರ್​ ಗೆ ಕಾರಣವಾಗಿದ್ದ ಸಿಬ್ಬಂದಿ ಅವತ್ತಿಗೆ ಅಲ್ಲಿಂದ ಕಾಣೆಯಾಗಿದ್ದರು. ಕಚೇರಿ ಮಧ್ಯಾಹ್ನವೇ ಭೀಗ ಹಾಕಿಸಿಕೊಂಡಿತ್ತು.  ಆನಂತರ ಪೊಲೀಸರ ಜೊತೆಗೆ ಅರಣ್ಯ ಅಧಿಕಾರಿಗಳು ಮಾತುಕತೆಗೆ ಮುಂದಾಗಿದ್ದರು. ಘಟನೆ ನಡೆದು, ಜನರ ಆಕ್ರೋಶ ಬುಗಿಲೆದ್ದು, ಕೊನೆಗೆ ಪೊಲೀಸರು ಹರಸಾಹಸ ಪಟ್ಟು ಶಾಂತಿ ಸುವ್ಯವಸ್ಥೆ ಕಾಪಾಡಿದ ಬಳಿಕ ಕ್ಲ್ಯೈಮಾಕ್ಸ್​ನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಜರಾಗಿದ್ದರು. 

ಇದಿಷ್ಟು ಅವತ್ತು ನಡೆದಿದ್ದ ಸನ್ನಿವೇಶ ಓದುಗರೆ, ಅವತ್ತು ನಡೆದ ಎನ್​ಕೌಂಟರ್ ಸರಿಯೇ? ಅಥವಾ ತಪ್ಪೆ ಎಂಬುದು ಇವತ್ತಿಗೂ ಆಗಾಗ ಚರ್ಚೆಯಾಗುತ್ತಿರುತ್ತದೆ. ಅಂದಿನ ಘಟನೆಯಲ್ಲಿ ತಾಳ್ಮೆ ಕಳೆದುಕೊಳ್ಳದ ಪೊಲೀಸರಿಗೆ ಶ್ಲಾಘನೆ ವ್ಯಕ್ತವಾಗಿತ್ತು. ಅರಣ್ಯ ಇಲಾಖೆ ಜನರ ದೃಷ್ಟಿಯಲ್ಲಿ ಅಪರಾಧಿ ಸ್ಥಾನದಲ್ಲಿತ್ತು. ಜನರು ಹೋರಿ ಹಬ್ಬದ ಹೀರೋ ರವಿಗಾಗಿ ಕಣ್ಣೀರಾಗಿದ್ದರು.