ಬೇಲ್​ ಸಿಕ್ಕರೂ ಜೈಲಿನಿಂದ ಹೊರಬರುತ್ತಿಲ್ಲ ಆರೋಪಿಗಳು! ಹಬ್ಬ ಮುಗಿಲಿ...ಹಬ್ಬ ಮುಗಿಲಿ ಅನ್ನುತ್ತಿರುವುದೇಕೆ ಗೊತ್ತಾ? JP ಬರೆಯುತ್ತಾರೆ

There is information that the accused in jail are not coming out on bail due to fear of strict measures by the police department during the festivals,ಹಬ್ಬಗಳ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಕಠಿಣ ಕ್ರಮಗಳಿಗೆ ಹೆದರಿ ಜೈಲಿನಲ್ಲಿರುವ ಆರೋಪಿಗಳು ಜಾಮೀನಿನ ಮೇಲೆ ಹೊರಕ್ಕೆ ಬರುತ್ತಿಲ್ಲ ಎಂಬ ಮಾಹಿತಿಯಿದೆ

ಬೇಲ್​ ಸಿಕ್ಕರೂ ಜೈಲಿನಿಂದ ಹೊರಬರುತ್ತಿಲ್ಲ ಆರೋಪಿಗಳು! ಹಬ್ಬ ಮುಗಿಲಿ...ಹಬ್ಬ ಮುಗಿಲಿ ಅನ್ನುತ್ತಿರುವುದೇಕೆ ಗೊತ್ತಾ?  JP ಬರೆಯುತ್ತಾರೆ

KARNATAKA NEWS/ ONLINE / Malenadu today/ Sep 19, 2023 SHIVAMOGGA NEWS



ಜಾಮೀನು ಮಂಜೂರಾದ್ರೂ. ಜೈಲಿನಿಂದ ಹೊರಬರಲು ಹಿಂದೇಟು ಹಾಕುತ್ತಿರುವುದೇಕೆ ಕ್ರಿಮಿನಲ್ ಗಳು.ಗಣಪತಿ ಹಬ್ಬ ಮುಗಿಲಿ ಅನ್ನುತ್ತಿರುವುದೇಕೆ ಪಾಪಿ ಪ್ರಪಂಚ?

ಯಾವುದೇ ವ್ಯಕ್ತಿ ಪ್ರಕರಣದಲ್ಲಿ ಜೈಲು ಸೇರಿದರೇ ಮೊದಲು ಆತ ಮಾಡುವುದೇ ವಕೀಲರನ್ನು ಹಿಡಿದು ಜಾಮೀನು ಪಡೆಯುವ ಕೆಲಸ. ಜಾಮೀನು ಮಂಜೂರಿಗಾಗಿ ಒಳ್ಳೆಯ ವಕೀಲರನ್ನ ಸಂಪರ್ಕಿಸುತ್ತಾರೆ. ಕೇಳಿದಷ್ಟು ಹಣಕೊಟ್ಟು, ಜೈಲಿನಿಂದ ಹೊರಬರುವುದನ್ನೆ ಎದುರು ನೋಡುತ್ತಿರುತ್ತಾರೆ. 

ಆದ್ರೆ ಸದ್ಯದ ಪರಿಸ್ಥಿತಿ ವಿಭಿನ್ನವಾಗಿದೆ. ಜೈಲಿನಲ್ಲಿರುವವ ಕ್ರಿಮಿನಲ್ ಆರೋಪಿಗಳು ಜೈಲಿನಿಂದ ಹೊರ ಬರೋದಕ್ಕೆ ಮುಂದಾಗ್ತಿಲ್ಲ. ಜಾಮೀನು ಸಿಕ್ಕರೂ, ಶ್ಯೂರಿಟಿ ಪಡೆಯದೇ ಇನ್ನಷ್ಟು ದಿನ ಜೈಲಿನಲ್ಲಿಯೇ ಕಳೆಯಲು ಮುಂದಾಗಿದ್ದಾರೆ.. ಈ ಬೆಳವಣಿಗೆಗೆ  ಕಾರಣವೇನು  ಗೊತ್ತಾ ….ಗಣೇಶ ಹಬ್ಬ.

ಹೌದು ಗಣೇಶ ಹಬ್ಬದ ಸಂದರ್ಭದಲ್ಲಿ ಪೊಲೀಸರು, ಸಮಾಜದ ಶಾಂತಿ ನೆಮ್ಮದಿಗೆ ತೊಂದರೆ ಕೊಡುವವರ ಮೇಲೆ ಮೊದಲ ಕಣ್ಣು ನೆಟ್ಟಿರುತ್ತದೆ. ಹಬ್ಬ ಹಾಗೂ ಪ್ರಮುಖ ಗಣಪತಿಗಳ ಮೆರವಣಿಗೆ ವೇಳೆಯಲ್ಲಿ ಈಗಾಗಲೇ ಕಾನೂನಿನ ದೃಷ್ಟಿಯಲ್ಲಿ ಜೈಲುಪಾಲಾಗಿರುವವರನ್ನು ಪಾಲ್ಗೊಳ್ಳದಂತೆ ಪೊಲೀಸರ ಮುನ್ನೆಚ್ಚರಿಕೆ ವಹಿಸುತ್ತಾರೆ. ಇದಕ್ಕಾಗಿಯೇ ರೌಡಿ ಪರೇಡ್ ಮಾಡುತ್ತಾರೆ. ಶಿವಮೊಗ್ಗದಲ್ಲಿಯು ಎಸ್​ಪಿ ಮಿಥುನ್ ಕುಮಾರ್ ರೌಡಿ ಪರೇಡ್ ನಡೆಸಿದ್ದರಷ್ಟೆ ಅಲ್ಲದೆ, ರೌಡಿ ಶೀಟರ್​ಗಳ ಮನೆ ಬಾಗಿಲಿಗೆ ತೆರಳಿ ತಲುಪಿಸಬೇಕಾದ ವಾರ್ನಿಂಗ್​ ಮೆಸೇಜ್​ನ್ನ ತಲುಪಿಸಿದ್ದರು.. 

ಪೊಲೀಸ್ ಇಲಾಖೆ ನೀಡುವ ಇಂತಹ ಶಾಕ್​ಗಳಿಂದಲೇ ಜೈಲಿನಿಂದ ಆರೋಪಿಗಳು ಹೊರಕ್ಕೆ ಬರಲು ಇಷ್ಟಪಡುತ್ತಿಲ್ಲ. ಕುಟುಂಬಸ್ಥರು ಹೇಳಿದರೂ ಇರಲಿ ಸ್ವಲ್ಪದಿನ ಹಬ್ಬ ಮುಗಿಯಲಿ ಎಂದು ಕಾರಣ ಹೇಳುತ್ತಿದ್ದಾರೆ. ರಾಜ್ಯದ ಬಹುತೇಕ ಜೈಲುಗಳಲ್ಲಿ ಇದೇ ಸನ್ನಿವೇಶ ಸೃಷ್ಟಿಯಾಗಿರುವುದು ವಿಶೇಷ . 

ಸಾಮಾನ್ಯವಾಗಿ ಹಬ್ಬಗಳ ಸಂದರ್ಭದಲ್ಲಿ  ಜೈಲಿನಿಂದ ಹೊರಬಂದ ಕ್ರಿಮಿನಲ್ ಗಳಿಗೆ ವಾರ್ನಿಂಗ್ ನೀಡುವುದು, ಆತ ನಟೋರಿಯಸ್ ಆಗಿದ್ರೆ  ಗಡಿಪಾರು ಮಾಡೋದು ಸಣ್ಣ ಪುಟ್ಟ ಕೇಸ್ ಹಾಕಿ ಮತ್ತೆ ಜೈಲಿಗೆ ಕಳಿಸೋದು ಕಾಮನ್. 

ಈ ಕಾರಣಕ್ಕೆ ಹೆದರುವ ಆರೋಪಿಗಳು ತಮಗೆ ಜಾಮೀನು ಸಿಗೋದೇ ಬೇಡಪ್ಪ. ಗಣಪತಿ ಹಬ್ಬ ಮುಗಿದ ಮೇಲೆ ನೋಡೋಣ ಎಂಬ ಭಾವನೆಯಲ್ಲಿದ್ದಾರೆ. ಹಬ್ಬದ ಸಂದರ್ಭದಲ್ಲಿ ಹೊರಗೆ ಹೋದ್ರು ಮತ್ತೆ ಪೊಲೀಸ್ರು ಯಾವುದಾದ್ರು ಒಂದು ಕೇಸ್ ಹಾಕಿ ಜೈಲಿಗೆ ಕಳಿಸುತ್ತಾರೆ. ಹೀಗಾಗಿ ಹಬ್ಬದ ವಾತಾವರಣ ತಿಳಿಯಾದ ಮೇಲೆ ಜಾಮೀನು ಪಡೆದರೆ ಆಯ್ತು ಎಂದು  ತಣ್ಣಗೆ ಜೈಲಿನಲ್ಲಿಯೇ  ಸೆಟಲ್ ಆಗಿದ್ದಾರೆ.

ಈ ವಿಚಾರವನ್ನೆ ಇನ್ನೊಂದು ದೃಷ್ಟಿಯಲ್ಲಿ ಗಮನಿಸಿದರೆ, ಗಣಪತಿ ಹಬ್ಬದ ನಂತ್ರ ಬಹಳಷ್ಟು ಕ್ರಿಮಿನಲ್ ಗಳು ಜೈಲಿನಿಂದ ಹೊರಬರುವವರಿದ್ದಾರೆ. ಅದರಲ್ಲಿ ಗಾಂಜಾ ಪೆಡ್ಲರ್ ಗಳು ಕಳ್ಳತನ ದರೋಡೆ ಪ್ರಕರಣದ ಆರೋಪ ಎದುರಿಸುತ್ತಿರುವ ರೌಡಿಗಳು ಇದ್ದಾರೆ. 

ಇವರೆಲ್ಲರೂ ಒಂದೇ ಬಾರಿ ರಿಲೀಸ್ ಆದ್ರೆ...ಮತ್ತೆ ಕ್ರೈಂ ಗಳು ಹೆಚ್ಚಾಗುವ  ಸಾಧ್ಯತೆಗಳಿವೆ. ಶಿವಮೊಗ್ಗದಲ್ಲಿಯು ಈ ಸನ್ನಿವೇಶವಿದ್ದು, ಪೊಲೀಸ್ ಇಲಾಖೆ ಹಬ್ಬಗಳು ಮುಗಿದ ಮೇಲೆ ಗಮನಹರಿಸಿಬೇಕಿದೆ. 


ಇನ್ನಷ್ಟು ಸುದ್ದಿಗಳು