ನೂತನ ಶಾಸಕರ ಕಚೇರಿ ಉದ್ಧಾಟನೆ! ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ನಾಯಕರ ನಡುವಿನ ಸಿದ್ದರಾಮಯ್ಯ ಫೋಟೋ!

New MLA's office inaugurated Siddaramaiah's photo between BJP leaders

ನೂತನ ಶಾಸಕರ ಕಚೇರಿ ಉದ್ಧಾಟನೆ! ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ನಾಯಕರ ನಡುವಿನ ಸಿದ್ದರಾಮಯ್ಯ ಫೋಟೋ!

KARNATAKA NEWS/ ONLINE / Malenadu today/ May 28, 2023 SHIVAMOGGA NEWS

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಎಸ್​.ಎನ್ ಚೆನ್ನಬಸಪ್ಪ ರವರ ನೂತನ ಶಾಸಕರ ಕಚೇರಿ ಉದ್ಘಾಟನೆಯಲ್ಲಿ ಹಾಕಲಾಗಿದ್ದ ವೇದಿಕೆಯ ಫ್ಲೆಕ್ಸ್ ಕುತೂಹಲಕ್ಕೆ ಕಾರಣವಾಗಿತ್ತು. ಬಿಜೆಪಿ ಮುಖಂಡರು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರಗಳ ಜೊತೆಯಲ್ಲಿ ಸಿಎಂ ಸಿದ್ದರಾಮಯ್ಯರವರ ಭಾವಚಿತ್ರ ಸಭಿಕರ ಗಮನ ಸೆಳೆದಿದೆ. 

ಇಂದು ಬೆಳಿಗ್ಗೆ  ಗಣಪತಿ ಹೋಮ ಮಾಡುವ ಮೂಲಕ ಶಾಸಕರ ಕಚೇರಿಯನ್ನು ಅಧಿಕೃತವಾಗಿ ಉದ್ಘಾಟನೆ ಮಾಡಲಾಗಿದೆ. ಈ ವೇಳೇ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕರಾದ ಜಿನರಾಜ್ ಜೈನ್ ಅವರು,  ಕೆ.ಎಸ್ ಈಶ್ವರಪ್ಪನವರು, ಭಾನುಪ್ರಕಾಶ್  ಡಿ.ಎಸ್ ಅರುಣ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಹಿಂದಿದ್ದ ಫ್ಲೆಕ್ಸ್ ಕುತೂಹಲ ಮೂಡಿಸಿತು. 

ಈ ಹಿಂದೆ ಸಿದ್ದರಾಮಯ್ಯರವರನ್ನ ಟೀಕಿಸಿ,ವಿವಾದಕ್ಕೆ ಒಳಗಾಗಿದ್ದರು ಚನ್ನಬಸಪ್ಪನವರು. ಇದೀಗ ಅವರ ಶಾಸಕರ ಕಚೇರಿ ಉದ್ಘಾಟನೆ ಫ್ಲೆಕ್ಸ್​ನಲ್ಲಿ ಸಿಎಂ ಸಿದ್ದರಾಮಯ್ಯರವರ ಫೋಟೋ ಬಿಜೆಪಿ ನಾಯಕರ ನಡುವೆ ರಾರಾಜಿಸುತ್ತಿದೆ. ಪ್ರೋಟೋಕಾಲ್​ ಪ್ರಕಾರ, ಪ್ರಧಾನಿ ಹಾಗೂ ಮುಖ್ಯಮಂತ್ರಿಯವರ ಫೋಟೋಗಳನ್ನ ಫ್ಲೆಕ್ಸ್​ನಲ್ಲಿ ಹಾಕಲಾಗಿದೆ ಎನ್ನಲಾಗುತ್ತಿದೆಯಾದರೂ , ಬಿಜೆಪಿಯ ನಾಯಕರೇ ತುಂಬಿದ್ದ ಸಭೆಯಲ್ಲಿ ಸಿದ್ದರಾಮಯ್ಯರ ಭಾವಚಿತ್ರ ಚರ್ಚೆಗೂ ಅವಕಾಶಕೊಟ್ಟಿತ್ತು. 

ಕುಲಪತಿಗಳ ಮಗಳ ಜನ್ಮದಿನದ ಸಂತೋಷ ಕೂಟಕ್ಕೆ ವಿಶ್ವವಿದ್ಯಾಲಯದಿಂದಲೇ ಸುತ್ತೋಲೆ! ಕುವೆಂಪು ವಿವಿಯಲ್ಲಿಗ ಜೋರು ಚರ್ಚೆ!

Kuvempu University/ ಯಾವುದೇ ರಾಜಕಾರಣಿ ಆಗಿರಲಿ ಸರ್ಕಾರಿ ಉನ್ನತ ಅಧಿಕಾರಿಯೇ ಆಗಿರಲಿ ತಮ್ಮ ಖಾಸಗಿ ಕಾರ್ಯಕ್ರಮಗಳಿಗೆ ಖಾಸಗಿಯಾಗಿಯೇ ಆಹ್ವಾನ ನೀಡುತ್ತಾರೆಯೇ ಹೊರತು. ಸರ್ಕಾರದ ಲೆಟರ್ ಹೆಡ್ ನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ.

ಆದರೆ ಸದ್ಯ ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ವೀರಭದ್ರಪ್ಪರವರು ತಮ್ಮ ಮಗಳ ಹುಟ್ಟು ಹಬ್ಬಕ್ಕೆ ಸರ್ಕಾರದ ಲೆಟರ್ ಹೆಡ್ ನಲ್ಲಿ ಸುತ್ತೋಲೆ ಹೊರಡಿಸಿ ಆಹ್ವಾನ ನೀಡಿದ್ದಾರೆ ಎಂಬ ವಿಚಾರ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಅಲ್ಲದೆ ಪ್ರಕಟಗೊಂಡಿರುವ ಲೆಟರ್ ಎಲ್ಲೆಡೆ ವೈರಲ್ ಆಗುತ್ತಿದ್ದು, ಪರ ವಿರೋಧಗಳ ಮಾತು ಕೇಳಿಬರುತ್ತಿದೆ. ಅಲ್ಲದೆ ಈ  ಮೂಲಕ ಕುಲಪತಿಯವರು ಎಡವಟ್ಟು ಮಾಡಿದ್ದಾರೆ ಎಂಬ ದೂರು ಕೇಳಿಬಂದಿದೆ. 

ಕುವೆಂಪು ವಿಶ್ವವಿದ್ಯಾನಿಲಯದ ಲೋಗೋ ಇರುವ ಸರ್ಕಾರಿ ಲೆಟರ್ ನಲ್ಲಿ ಸುತ್ತೋಲೆ ಹೊರಡಿಸಿರುವ ಅವರು ಎಲ್ಲಾ ನೌಕರ ಸಿಬ್ಬಂದಿಗಳು ತಮ್ಮ ಮನೆಯ ಖಾಸಗಿ ಸಮಾರಂಭಕ್ಕೆ ಖುದ್ದಾಗಿ ಹಾಜರಾಗುವಂತೆ ತಿಳಿಸಿದ್ಧಾರೆ. ಇದು ಫರ್ಮಾನು ಹೊರಡಿಸಿದ ರೀತಿಯಲ್ಲಿದೆ ಎಂಬ ಟೀಕೆ ವ್ಯಕ್ತವಾಗಿದೆ. 

ಪತ್ರದ ಒಕ್ಕಣೆ ಈ ರೀತಿ ಇದೆ. ನನ್ನ ಮಗಳ ಜನ್ಮ ದಿನದ ಪ್ರಯುಕ್ತ ದಿನಾಂಕ 28-05-23 ರ ಮದ್ಯಾಹ್ನ 12.30 ಕ್ಕೆವಿಶ್ವನಿದ್ಯಾನಿಲಯದ ಆವರಣದಲ್ಲಿರವ ಕುಲಪತಿಗಳ ಗೃಹದಲ್ಲಿ ಸಂತೋಷ ಕೂಟವನ್ನು ಏರ್ಪಡಿಸಿದೆ. ವಿಶ್ವವಿದ್ಯಾನಿಲಯದ ಎಲ್ಲಾ ಅಧ್ಯಾಪಕರು ಅದ್ಯಾಪೇಕತರ ನೌಕರರು ಅತಿಥಿ ಉಪನ್ಯಾಸಕರು ಏಜೆನ್ಸಿ ನೌಕರರುತಪ್ಪದೆ ಹಾಜರಾಗಬೇಕೆಂದು ಕೋರಲಾಗಿದೆ. 

ಇದನ್ನ ವೈಯಕ್ತಿಕ ಆಹ್ವಾನವೆಂದು ಭಾವಿಸಿ ಎಲ್ಲರೂ ಸಂತೋಷ ಕೂಟದಲ್ಲಿ ಭಾಗವಹಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದ ಎಲ್ಲಾ ವಿಭಾಗಗಳ ಮುಖ್ಯಸ್ಥರಿಗೂ ಸುತ್ತೋಲೆ ಹೊರಡಿಸಿದ್ದಾರೆ. ಇದನ್ನು ತುಘಲಕ್ ದರ್ಬಾರ್ ಅನ್ನದೇ ವಿಧಿಯಿಲ್ಲ ಎನ್ನುವಂತೆ,  ಕುವೆಂಪು ವಿವಿಯಲ್ಲಿ ಗುಸುಗುಸು ಚರ್ಚೆಗಳು ಆರಂಭವಾಗಿದೆ.