karnataka assembly election 2023/ ಮಹಿಳಾ ಮತದಾರರೇ ಹೆಚ್ಚಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಅತೀ ಹೆಚ್ಚು ಯುವ ಮತದಾರರನ್ನು ಹೊಂದಿರುವ ಕ್ಷೇತ್ರ ಯಾವುದು ಗೊತ್ತಾ? ಚುನಾವಣೆಯ ಇಂಟರ್​ಸ್ಟಿಂಗ್​ ವಿಷಯಗಳು

Do you know which constituency has the highest number of young voters in Shivamogga district, which has the highest number of women voters? Intersting issues of elections

karnataka assembly election 2023/ ಮಹಿಳಾ ಮತದಾರರೇ ಹೆಚ್ಚಿರುವ  ಶಿವಮೊಗ್ಗ ಜಿಲ್ಲೆಯಲ್ಲಿ ಅತೀ ಹೆಚ್ಚು ಯುವ ಮತದಾರರನ್ನು ಹೊಂದಿರುವ ಕ್ಷೇತ್ರ ಯಾವುದು ಗೊತ್ತಾ?  ಚುನಾವಣೆಯ ಇಂಟರ್​ಸ್ಟಿಂಗ್​ ವಿಷಯಗಳು
karnataka assembly election 2023/ ಮಹಿಳಾ ಮತದಾರರೇ ಹೆಚ್ಚಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಅತೀ ಹೆಚ್ಚು ಯುವ ಮತದಾರರನ್ನು ಹೊಂದಿರುವ ಕ್ಷೇತ್ರ ಯಾವುದು ಗೊತ್ತಾ? ಚುನಾವಣೆಯ ಇಂಟರ್​ಸ್ಟಿಂಗ್​ ವಿಷಯಗಳು

shivamogga/ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು,  (karnataka assembly election 2023) ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮತದಾರರ ವಿವರವನ್ನು ಜಿಲ್ಲಾಡಳಿತ ನೀಡಿದೆ. ಈ ಅಂಕಿ ಅಂಶಗಳಲ್ಲಿ ಸಾಕಷ್ಟು ಕುತೂಹಲ ಹಾಗೂ ವಿಶೇಷತೆಗಳನ್ನು ಒಳಗೊಂಡಿದೆ. ಅದರ ಬಗ್ಗೆ ಗಮನಹರಿಸೋದಾದರೆ, ಮಹಿಳಾ ಮತದಾರರೇ ಹೆಚ್ಚಿರುವ  ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ  ಯುವ ಮತದಾರರೇ ನಿರ್ಣಾಯಕರಾಗಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ 4166 ಯುವ ಮತದಾರರಿದ್ದಾರೆ. ಕಳೆದ ಬಾರಿ ಇದೇ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಶೋಕ್ ನಾಯ್ಕ್ 69,326 ಮತಗಳನ್ನು ಪಡೆದಿದ್ದರು. ಇವರ ಎದುರಾಳಿ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್ಯ ನಾಯಕ್ 65,549 ಮತಗಳಿಂದ ಪರಾಭವಗೊಂಡಿದ್ರು. ಈ ಬಾರಿ ಮೊದಲ ಬಾರಿಗೆ ಮತಲಾಯಿಸುವ ಯುವ ಮತದಾರರ ಸಂಖ್ಯೆ ಈ ಕಡಿಮೆ ಅಂತರವನ್ನು ಫಿಲ್ ಮಾಡುವ ನಿರ್ಣಾಯಕ ಶಕ್ತಿ ಹೊಂದಿದೆ. ಈ ಯುವ ಮತದಾರರರು ಯಾರಿಗೆ ಮತ ಚಲಾಯಿಸುತ್ತಾರೋ ಎಂಬುದು ಸದ್ಯದ ಕುತೂಹಲವಾಗಿದೆ.

ಭದ್ರಾವತಿ ವಿಧಾನಸಭಾ ಕ್ಷೇತ್ರ

ಭದ್ರಾವತಿ ಕ್ಷೇತ್ರದಲ್ಲಿ 3695 ಯುವ ಮತದಾರರಿದ್ದು, 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಗೆದ್ದಿದ್ದ ಬಿ.ಕೆ ಸಂಗಮೇಶ್ 75,722 ಮತಗಳನ್ನು ಪಡೆದು ಗೆಲುವು ಸಾಧಿಸಿದ್ರೆ, ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಎಂ.ಜೆ ಅಪ್ಪಾಜಿ 64,155 ಮತಗಳನ್ನು ಪಡೆದು ಸೋಲು ಕಂಡಿದ್ದರು. ಇಲ್ಲೂ ಕೂಡ ಯುವ ಮತದಾರರು ಯಾವ ಪಕ್ಷದ ಪರ ಒಲವು ಹೊಂದಿದ್ದಾರೋ ಎಂಬುದು ಚಿದಂಬರ ರಹಸ್ಯವಾಗಿದೆ.

ಬಿಎಸ್​ವೈ ಮನೆಗೆ ಕಲ್ಲು/ ಬಂಧಿತ ಮೂವರು ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ರಿಲೀಸ್

ಶಿವಮೊಗ್ಗ ನಗರ ಕ್ಷೇತ್ರ

ಶಿವಮೊಗ್ಗ ನಗರ ಕ್ಷೇತ್ರದಲ್ಲಿ 3871 ಯುವ ಮತದಾರರಿದ್ದಾರೆ. ನಗರದ ಕಾಲೇಜಿನಲ್ಲಾದ ಹಿಜಾಬ್, ಬುರ್ಖಾ ವಿವಾದಗಳು ಯುವ ಮನಸ್ಸುಗಳ ಮೇಲೆ ಬೇರೆಯದ್ದೇ ರೀತಿಯಲ್ಲಿ ಪ್ರಭಾವ ಬೀರಿದೆ. ಈ ಮತಗಳು ಯಾರ ಪರ ಒಲವು ಹೊಂದಿವೆ ಎಂಬುದು ಗುಪ್ತಗಾಮಿನಿಯಾಗಿದೆ. ಕಳೆದ 2018 ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಕೆ.ಎಸ್ ಈಶ್ವರಪ್ಪ ನವರು  104027 ಮತಗಳನ್ನು ಪಡೆದರೆ, ಎದುರಾಳಿ ಕಾಂಗ್ರೆಸ್ ನ ಅಭ್ಯರ್ಥಿ ಕೆ.ಬಿ ಪ್ರಸನ್ನ ಕುಮಾರ್ 57,920 ಮತಗಳನ್ನು ಪಡೆದು ಪರಾಭವಗೊಂಡಿದ್ದರು.

BREAKING NEWS/ ಶಿವಮೊಗ್ಗ ಜಿಲ್ಲಾ ಪಂಚಾಯತ್​ಗೆ ನೂತನ ಸಿಇಒ/ ಯಾರಿವರು?

ಶಿಕಾರಿಪುರ ವಿಧಾನಸಭಾ ಕ್ಷೇತ್ರ

ಶಿಕಾರಿಪುರ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಯುವ ಮತದಾರರನ್ನು ಹೊಂದಿರುವ ಕ್ಷೇತ್ರವಾಗಿ ಹೊರಹೊಮ್ಮಿದೆ. 5063 ಯುವ ಮತದಾರರನ್ನು ಹೊಂದಿರುವ ಕ್ಷೇತದಲ್ಲಿ ಈ ಯುವ ಮನಸ್ಸುಗಳು ಯಾವ ಪಕ್ಷದ ಪರ ಒಲವಿದೆ ಎಂಬುದು ನಿಘೂಡವಾಗಿದೆ .ಯಡಿಯೂರಪ್ಪನವರಿಗೆ ರಾಜಕೀಯ ನೆಲೆ ಕಲ್ಪಿಸಿಕೊಟ್ಟ ಕ್ಷೇತ್ರದಲ್ಲಿ ಯುವ ಮತದಾರರ ಮತಗಳು ಕೂಡ ಈ ಬಾರಿ ನಿರ್ಣಾಯಕವಾಗಿದೆ.ಕಳೆದ ಬಾರಿ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ 86,983 ಮತಗಳನ್ನು ಪಡೆದು ಗೆಲುವು ಸಾಧಿಸಿದ್ರೆ, ಎದುರಾಳಿ ಕಾಂಗ್ರೆಸ್  ನ ಗೋಣಿ ಮಾಲತೇಶ್ 52,586 ಮತಗಳನ್ನುಪಡೆದು ಪರಾಭವಗೊಂಡಿದ್ದರು.

ಸೊರಬ ವಿಧಾನಸಭಾ ಕ್ಷೇತ್ರ

ಸೊರಬ ವಿಧಾನಸಭಾ ಕ್ಷೇತ್ರದಲ್ಲಿ 3814 ಯುವ ಮತದಾರರಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಸ್. ಕುಮಾರ ಬಂಗಾರಪ್ಪ 72,091 ಮತಗಳನ್ನು ಪಡೆದು ಗೆಲುವು ಸಾಧಿಸಿದ್ರು. ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಮಧು ಬಂಗಾರಪ್ಪ 58,805 ಮತಗಳನ್ನು ಪಡೆದರೆ  ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ರಾಜು ಎಂ ತಲ್ಲೂರು 21,721 ಮತಗಳನ್ನು ಪಡೆದಿದ್ದರು. ಕ್ಷೇತ್ರದಲ್ಲಿ ಈಗ ಚಿತ್ರಣ ಬದಲಾಗಿದೆ.ಯುವ ಮತದಾರರು ಇಲ್ಲಿ ನಿರ್ಣಾಯಕವಾಗಿ ಕಾಣುವುದಿಲ್ಲವಾದರೂ, ಗೆಲ್ಲುವ ಅಭ್ಯರ್ಥಿಗೆ ಮೈಲೇಜ್ ನೀಡುವಲ್ಲಿ ಪ್ರಮುಖ ಪಾತ್ರವಹಿಸಬಲ್ಲರು.

ಸಾಗರ ವಿಧಾನಸಭಾ ಕ್ಷೇತ್ರ

ಪ್ರಜ್ಞಾವಂತ ಮತದಾರರ ಕ್ಷೇತ್ರ ಸಾಗರದಲ್ಲಿ ಅತೀ ಕಡಿಮೆ ಯುವ ಮತದಾರರಿದ್ದಾರೆ. ಕ್ಷೇತ್ರದಲ್ಲಿ 3046 ಯುವ ಮತದಾರರಿದ್ದಾರೆ. ಇಲ್ಲಿ ಕೂಡ ಕಾಂಗ್ರೆಸ್ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು, ವಾತಾವರಣ ಹೊಸ ಬದಲಾವಣೆಯನ್ನು ಬಯಸಿದೆ. ಇದಕ್ಕೆ ಯುವಮತದಾರರು ಕೂಡ ನಿರ್ಣಾಯಕವಾಗಬಲ್ಲರು. ಏನೇ ಆಗಲಿ ಈ ಬಾರಿ ಯುವಮನಸ್ಸುಗಳನ್ನು ಗೆಲ್ಲುವವನೇ ನಿಜವಾದ ಒಡೆಯ ಎಂಬಂತ ವಾತಾವರಣ ಎಲ್ಲಾ ಕ್ಷೇತ್ರಗಳಲ್ಲೂ ನಿರ್ಮಾಣವಾಗಿದೆ.

ಶಿವಮೊಗ್ಗ ಜಿಲ್ಲೆ ಏಳು ವಿಧಾನಸಭಾ ಕ್ಷೇತ್ರಗಳ ಅಂಕಿಅಂಶ

ವಿಧಾನಸಭಾ ಕ್ಷೇತ್ರ    ಪುರುಷರು ಮಹಿಳೆಯರು ಉಳಿದವರು   ಒಟ್ಟು      ಯುವ ಮತದಾರರು 
ಶಿವಮೊಗ್ಗ ಗ್ರಾಮಾಂತರ 104640 105768      04  210412  4166
ಭದ್ರಾವತಿ    102236 107971 05   210212  3695
ಶಿವಮೊಗ್ಗ 125943 131729  13  257685 3871
ತೀರ್ಥಹಳ್ಳಿ  92141 94453 00 186594  3818
ಶಿಕಾರಿಪುರ 99129 98311 03  197443 5063
ಸೊರಬ 97674 95910 00 193584  3814
ಸಾಗರ 100317 102432 01 202750 3046

ಒಟ್ಟು ಪುರುಷರ ಸಂಖ್ಯೆ 7,22080
ಒಟ್ಟು ಮಹಿಳೆಯರ ಸಂಖ್ಯೆ 7,36,574
ಉಳಿದವರ ಸಂಖ್ಯೆ   26
ಜಿಲ್ಲೆಯ ಒಟ್ಟು ಮತದಾರರ ಸಂಖ್ಯೆ 14,58,680
ಜಿಲ್ಲೆಯ ಯುವ ಮತದಾರರ ಸಂಖ್ಯೆ 27,473
80 ವರ್ಷ ಮೇಲ್ವಟ್ಟ ಮತದಾರರ ಸಂಖ್ಯೆ 28,680

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

MALENADUTODAY.COM/ SHIVAMOGGA / KARNATAKA WEB NEWS

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023, shivamogga,shivamogga accident,road ,shivamogga news,shivamogga,shivamogga airport,kannada news live,kannada news,shivamogga airport inauguration,shivamogga latest news,pm modi in shivamogga,latest kannada news,shivamogga mp,live news,shivamogga today news,shivamogga airport​,kannada live news,karnataka latest news,kannada latest news,pm modi inaugurate shivamogga airport,shivamogga new airport,latest news,karnataka news,breaking news,shivamogga news todaykarnataka assembly election,karnataka assembly election 2023,karnataka election 2023,karnataka election,karnataka elections,karnataka vidhan sabha election 2023,karnatak karnataka election 2023,karnataka assembly election 2023,karnataka assembly elections 2023,karnataka elections 2023,karnataka vidhan sabha election 2023,karnataka election news,karnataka polls 2023,karnataka election,2023 assembly election,karnataka assembly election,karnataka elections,karnataka election 2023 opinion poll,assembly election 2023,karnataka assembly elections,karnataka election date,karnataka election 2018,karnataka opinion poll 2023