karnataka assembly election 2023/ ನೀತಿ ಸಂಹಿತೆ ಜಾರಿಯಲ್ಲಿದೆ/ ಈ ಐದು ಅಂಶಗಳು ಎಲ್ಲರೂ ತಿಳಿದುಕೊಳ್ಳಲೇಬೇಕು!? ಚೂರು ತಪ್ಪಾದ್ರೂ ಬೀಳುತ್ತೆ ಕೇಸ್​

Karnataka Assembly Election 2023/ Code of Conduct is in place/ These five points are something everyone should know!? / karnataka assembly election 2023/ code of condect/ shivamogga live update news, breaking malenadutoday

karnataka assembly election 2023/   ನೀತಿ ಸಂಹಿತೆ ಜಾರಿಯಲ್ಲಿದೆ/ ಈ ಐದು ಅಂಶಗಳು ಎಲ್ಲರೂ ತಿಳಿದುಕೊಳ್ಳಲೇಬೇಕು!? ಚೂರು ತಪ್ಪಾದ್ರೂ  ಬೀಳುತ್ತೆ ಕೇಸ್​
karnataka assembly election 2023/ ನೀತಿ ಸಂಹಿತೆ ಜಾರಿಯಲ್ಲಿದೆ/ ಈ ಐದು ಅಂಶಗಳು ಎಲ್ಲರೂ ತಿಳಿದುಕೊಳ್ಳಲೇಬೇಕು!? ಚೂರು ತಪ್ಪಾದ್ರೂ ಬೀಳುತ್ತೆ ಕೇಸ್​

ಕರ್ನಾಟಕ ವಿಧಾನಸಭಾ ಚುನಾವಣೆಗೆ (karnataka assembly election 2023) ದಿನಾಂಕ ನಿಕ್ಕಿಯಾಗಿದೆ. ಅದರ ಬೆನ್ನಲ್ಲೆ ಚುನಾವಣಾ ನೀತಿ ಸಂಹಿತಿಯು ಜಾರಿಯಾಗಿದ್ದು, ಹಲವರಿಗೆ ಈ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಚುನಾವಣಾ ನೀತಿ ಸಂಹಿತೆಯಲ್ಲಿ ಏನು ಮಾಡಬಾರದು ಎಂಬುದರ ಪ್ರಮುಖ ಅಂಶಗಳನ್ನು ಇಲ್ಲಿ ನೀಡುತ್ತಿದ್ದೇವೆ!

50 ಸಾವಿರ ರೂಪಾಯಿಗಿಂತಲೂ ಹೆಚ್ಚು ಹಣ ಒಯ್ಯುವಂತಿಲ್ಲ

ನೀತಿ ಸಂಹಿತೆಯಲ್ಲಿ ಎಲ್ಲರ ಕಣ್ಣುಕುಕ್ಕುವುದು ಹಣ ಮಾತ್ರ. ಚುನಾವಣಾ ಅಧಿಕಾರಿಗಳು ಈಗಾಗಲೇ ಕೋಟಿಗಟ್ಲೇ ಕ್ಯಾಶ್ ಸೀಜ್​ ಮಾಡಲು ಆರಂಭಿಸಿದ್ದಾರೆ. ಚುನಾವಣೆ ಮುಗಿಯುವ ಹೊತ್ತಿಗೆ ಈ ಮೊತ್ತೆ  ನೂರು ಕೋಟಿ ಮೇಲೆ ದಾಟುವ ಸಾಧ್ಯತೆ ಇದೆ. ಆದರೆ ಕೆಲವರು ಮಾಹಿತಿ ಇಲ್ಲದೇ ಕ್ಯಾಶ್ ಹಿಡಿದುಕೊಂಡು ಹೊರಗೆಡೆ ಬಂದಿರುತ್ತಾರೆ. ಉದಾಹರಣೆಗೆ ತರಿಕೆರೆಯಲ್ಲಿ ದೇವರ ಹುಂಡಿಗೆ ಹಾಕಲು ಹಣ ತಂದವರು ಸೀಜ್ ಆಗಿದ್ದಾರೆ. ಇನ್ನೊಂದೆಡೆ ಪ್ರವಾಸಕ್ಕೆ ಅಂತಾ ಒಂದು ಲಕ್ಷ ಹಿಡಿದುಕೊಂಡು ಬಂದವರು ಜಪ್ತಿ ಮಾಡಿಸಿಕೊಂಡಿದ್ದಾರೆ. ಇಂತಹ ಸಂದರ್ಭಗಳು ಎದುರಾಗಬಾರದೆಂದರೆ ಮುಖ್ಯವಾಗಿ 50 ಸಾವಿರ ರೂಪಾಯಿಗಿಂತಲು ಹೆಚ್ಚು ಹಣವನ್ನು ಕ್ಯಾಶ್ ರೂಪದಲ್ಲಿ ಇಟ್ಟುಕೊಂಡಿರಬಾರದು ಎಂಬುದು ಗೊತ್ತಿರಬೇಕು. ಚುನಾವಣಾ ನೀತಿ ಸಂಹಿತೆಯಲ್ಲಿ ಈ ನಿಯಮವಿದೆ.

 

ದಾಖಲೆಗಳಿಲ್ಲ ವಸ್ತುಗಳ ಸಾಗಾಟ ನಿರ್ಬಂಧ 

ಇನ್ನೂ ಶಿವಮೊಗ್ಗದಂತಹ ಊರುಗಳಲ್ಲಿ ಟ್ಯಾಕ್ಸ್​ ಬಚಾವ್ ಮಾಡಲು ಬಿಲ್​ಗಳಿಲ್ಲದೇ ವ್ಯಾಪಾರಸ್ಥರು ಲಾರಿಗಟ್ಲೇ ಐಟಂಗಳನ್ನು ಸಾಗಿಸುತ್ತಿರುತ್ತಾರೆ. ಅಂತಹ ವೆಹಿಕಲ್​ಗಳು ಸಿಕ್ಕಿಬಿದ್ದರೂ ಅವುಗಳು ಜಪ್ತಿಯಾಗುವುದು ಗ್ಯಾರಂಟಿ. ಈಗಾಗಲೇ ಶಿವಮೊಗ್ಗ ಪೊಲೀಸರು, ಅಕ್ಕಿ, ಕುಕ್ಕರ್, ದೋಸೆ ತವಾ, ಇತ್ಯಾದಿಗಳನ್ನ ಲೋಡ್​ಗಟ್ಲೇ ಸೀಜ್ ಮಾಡಿ ದಾಖಲೆ ಕೇಳಿದ್ದಾರೆ. ಹಾಗಾಗಿ ಯಾವುದೇ ಸಾಧನ, ಸಾಮಗ್ರಿಗಳನ್ನು ಸೂಕ್ತ ದಾಖಲೆಗಳಿಲ್ಲದೆ ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿಡುವುದು ಅಥವಾ ಸಾಗಾಟ ಮಾಡಬಾರದು. 

ಕರೆನ್ಸಿ , ಪೆಟ್ರೋಲ್ ಹಾಕಿಸಿದ್ರೂ ಅಪರಾಧ/ ಆ್ಯಂಬುಲೆನ್ಸ್ ಮೇಲೂ ಇರುತ್ತೆ ಕಣ್ಣು 

 ಪ್ರಜಾಪ್ರತಿನಿಧಿ ಕಾಯ್ದೆ 1951 ಅಡಿಯಲ್ಲಿ ಮತದಾರರ ಬೈಕ್​ಗಳಿಗೆ ಪೆಟ್ರೋಲ್​ ಹಾಕಿಸುವುದು, ವಾಹನಗಳಿಗೆ ಡಿಸೇಲ್​ ಹಾಕಿಸುವುದು, ಕರೆನ್ಸಿ ಹಾಕಿಸುವುದು, ಗಿಫ್ಟ್ ವೋಚರ್ ನೀಡುವುದು, ಟೋಕನ್ ನೀಡುವುದು , ಡ್ರಿಂಕ್ಸ್​ ವ್ಯವಸ್ಥೆ ಮಾಡುವುದು ಸೇರಿದಂತೆ ವಿವಿಧ ರೀತಿಯಲ್ಲಿ ಆಮಿಷವೊಡ್ಡುವುದು ಸಹ ಅಪರಾಧವಾಗುತ್ತದೆ. ಹಾಗೊಂದು ವೇಳೆ ಈ ಅಪರಾಧ ಸಾಬೀತಾದಾರೆ, ಶಿಕ್ಷೆ ಅನುಭವಿಸಬೇಕಾಗುತ್ತದೆ. ಇನ್ನೂ ಚುನಾವಣೆ ಸಂದರ್ಭದಲ್ಲಿ ಆ್ಯಂಬುಲೆನ್ಸ್​ ನಲ್ಲಿ ಹಣ ಸಾಗಿಸಲಾಗುತ್ತದೆ ಎಂಬುದು ಜನರಿಗೂ ಗೊತ್ತಿರುವ ಅನುಮಾನ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಟಿಎಂಗೆ ಹಣ ಸಾಗಿಸುವ ವ್ಯಾನ್​ ನಿಂದ ಹಿಡಿದು ಆ್ಯಂಬುಲೆನ್ಸ್​ಗಳ ಮೇಲೂ ಕಣ್ಣಿಟ್ಟಿರುತ್ತಾರೆ. 

ಮದುವೆಗೆ ಪರ್ಮಿಷನ್ ಬೇಕಾ ? ಬೇಡವಾ?/ ಬಾಡೂಟಕ್ಕೆ ಕ್ರಿಮಿನಲ್ ಕೇಸು

ನೀತಿ ಸಂಹಿತೆಯ ನಡುವೆ ಯಾರದ್ದೋ ಮದುವೆಯನ್ನು ತೋರಿಸಿ ಅಲ್ಲಿ ಔತಣ ಕೂಟದ ವ್ಯವಸ್ತೆ ಮಾಡುವುದು ರಾಜಕಾರಣಿಗಳಿಗೂ ಗೊತ್ತಿರುವ ಕಲೆಯಾದರೂ, ಇದು ಚುನಾವಣಾ ಆಯೋಗಕ್ಕೂ ತಿಳಿದ ವಿಚಾರ. ಈ ಕಾರಣ ನೀತಿ ಸಂಹಿತೆ ವೇಳೆ  ಮದುವೆ ಸೇರಿದಂತೆ ವಿವಿಧ ಸಮಾರಂಭಗಳ ಮೇಲೆ ಆಯೋಗದ ಅಧಿಕಾರಿಗಳು ಕಣ್ಣಿಟ್ಟಿರುತ್ತಾರೆ. ಖಾಸಗಿ ಸಮಾರಂಭಕ್ಕೆ ಅನುಮತಿ ಪಡೆಯುವ ಅಗತ್ಯವಿಲ್ಲವಾದರೂ, ಅಲ್ಲಿ ಪ್ರಚಾರ, ಪ್ರಕಟಣೆ, ಪ್ರೇರಪಣೆ ಇತ್ಯಾದಿ ಕೆಲಸಗಳು ಆಗಬಾರದು. ಇನ್ನೂ ಬಾಡೂಟವನ್ನು ಕೈಗೊಂಡರೆ ಅದರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಆರ್​.ಸೆಲ್ವಮಣಿ ಈಗಾಗಲೇ ತಿಳಿಸಿದ್ದಾರೆ. 

ಸಭೆ, ಸಮಾವೇಶ, ಮೆರವಣಿಗೆಗೆ ಬೇಕು ಪರ್ಮಿಶನ್/ ಜಾತ್ರೆಗೂ ಇದೆ ಕಂಡೀಷನ್​

ವೈಯಕ್ತಿಕವಲ್ಲದ ಯಾವುದೇ ಸಭೆ, ಸಮಾವೇಶ ಮತ್ತು ಮೆರವಣಿಗೆಯನ್ನು ಆಯೋಜಿಸಬೇಕಿದ್ದರೂ ಅದಕ್ಕೆ ಸಂಬಂಧಿಸಿದಂತೆ ಅನುಮತಿ ಪಡೆಯಬೇಕು ಎನ್ನುತ್ತದೆ ನೀತಿ ಸಂಹಿತೆ. ಇನ್ನೂ ಧಾರ್ಮಿಕ ಜಾತ್ರೆಗಳಿಗೆ ಯಾವುದೇ ಅಡ್ಡಿ ಆತಂಕವಿಲ್ಲವಾದರೂ, ಅಲ್ಲಿನ ಖರ್ಚು ವೆಚ್ಚ ಪ್ರಚಾರ, ಪ್ಲೆಕ್ಸ್​, ಬಂಟಿಂಗ್ಸ್​ ಇತ್ಯಾದಿಗಳ ಮೇಲೆ ಆಯೋಗದ ಕಣ್ಣಿರುತ್ತದೆ. ಇನ್ನೂ ಧಾರ್ಮಿಕ ಕಾರ್ಯಕ್ರಮಗಳಿಗೂ ಆಯೋಗದ ಅನುಮತಿ ಪಡೆಯುವುದು ಸೂಕ್ತ.  ಹೋಟೆಲ್‌, ಕಲ್ಯಾಣ ಮಂಟಪ, ಟೂರಿಸ್ಟ್‌ ಏಜೆಂಟ್‌ಗಳಿಂದ ಹೊರಗಿನಿಂದ ಬಂದು ಹೋಗುವವರ ಮಾಹಿತಿಯನ್ನು ಆಯೋಗದ ಸಿಬ್ಬಂದಿಗಳು ಕಲೆಹಾಕುತ್ತಿರುತ್ತಾರೆ. ಅಲ್ಲದೆ  ಚಿನ್ನಾಭರಣ, ವಾಣಿಜ್ಯ ಮಳಿಗೆಗಳಲ್ಲಿ ನಿತ್ಯ ನಡೆಯುವ ವ್ಯವಹಾರ, ಗೋದಾಮುಗಳ ಮೇಲೆ ನಿಗಾ ವಹಿಸಿರುತ್ತಾರೆ. 

Read/ ಸೊರಬದಲ್ಲಿ ಸಹೋದರರ ವಾಕ್ಸಮರ/ ಡೂಪ್ಲಿಕೇಟ್ ಸಿಂಗರ್​ ಅಂದ್ರು ಮಧು ಬಂಗಾರಪ್ಪ/ ಚೆಕ್ ಬೌನ್ಸ್  ಕೇಸ್​ನಲ್ಲಿ ಅಂದರ್ ಆಗ್ತಾರೆ ಅಂದ್ರು ಕುಮಾರ್ ಬಂಗಾರಪ್ಪ 



read/ ELECTION 2023 / ಶಿವಮೊಗ್ಗದಲ್ಲಿ 1.40 ಕೋಟಿ ಕ್ಯಾಶ್​, ತರಿಕೆರೆಯಲ್ಲಿ 6 ಕೋಟಿ ಚಿನ್ನ ಸೀಜ್​/ ಧರ್ಮಸ್ಥಳ ದೇವರ ದುಡ್ಡು ಜಪ್ತಿ

 

Read/ ಒಂಬತ್ತು ದಿನ ಕಾಡಿದ ಪುಂಡಾನೆ ಒಂಬತ್ತೇ ನಿಮಿಷದಲ್ಲಿ ಸೆರೆಯಾಗಿದ್ದು ಹೇಗೆ ಗೊತ್ತಾ.? ಸಕ್ರೆಬೈಲಿನ ಬಿಡಾರಕ್ಕೆ ಸ್ಥಳಾಂತರವಾಗಬೇಕಿದ್ದ ಕಾಡಾನೆ ನಾಗರಹೊಳೆ ಕಾಡಿಗೆ ಶಿಫ್ಟ್ ಆಗಿದ್ದು ಯಾಕೆ? ಜೆಪಿ ಬರೆಯುತ್ತಾರೆ.

 

Read/ BREAKING NEWS/ ತೀರ್ಥಹಳ್ಳಿ ಪೇಟೆಗೆ ಬರ್ತಿದ್ದ ಕಾಡಾನೆ ಸರೆ? ಸಿಕ್ಕಿದ್ದೇಗೆ ಗೊತ್ತಾ

 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

 

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

 

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

 

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 




HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNewsshivamoggaChikkamagaluru   karnataka assembly election 2023,karnataka election 2023,karnataka assembly elections 2023,karnataka assembly election,karnataka elections 2023,2023 assembly election,karnataka assembly elections,karnataka vidhan sabha election 2023,karnataka polls 2023,karnataka election news,assembly election 2023,karnataka election,karnataka elections,karnataka assembly election date,assembly elections 2023,karnataka assembly election 2023 pollingcode of conduct,model code of conduct,code of conduct meaning,code of conduct training,code of ethics,code of conduct and ethics for employees,model code of conduct pdf,eci and model code of conduct,model code of conduct upsc,model code of conduct rstv,model code of conduct 2019,model code of conduct by veer,what is model code of conduct,model code of conduct in hindi,free code of conduct,fa code of conduct,code of conduct video