ಶಿವಮೊಗ್ಗ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲಾನ್​! ಜೆಪಿ ನಡ್ಢಾ, ಅಣ್ಣಾಮಲೈ ಬಿ.ಎಲ್​. ಸಂತೋಷ್​ ಸ್ಟ್ಯಾಟರ್ಜಿ!

BJP's master plan to win Shivamogga JP Nadda, Annamalai B.L. Santhosh strategy

ಶಿವಮೊಗ್ಗ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲಾನ್​! ಜೆಪಿ ನಡ್ಢಾ, ಅಣ್ಣಾಮಲೈ ಬಿ.ಎಲ್​. ಸಂತೋಷ್​  ಸ್ಟ್ಯಾಟರ್ಜಿ!

KARNATAKA NEWS/ ONLINE / Malenadu today/ Apr 25, 2023 GOOGLE NEWS


ಶಿವಮೊಗ್ಗ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ  ನಾಳೆ ಶಿವಮೊಗ್ಗಕ್ಕೆ ಬರಲಿದ್ದಾರೆ. 

ಶಿವಮೊಗ್ಗದಲ್ಲಿ  ವಿಧಾನಸಭಾ ಚುನಾವಣೆಯ (Karnataka Election) ಪ್ರಚಾರ  ಕಳೆಗಟ್ಟುತ್ತಿದ್ದು ಒಂದು ಕಡೆ ಬಿಜೆಪಿ ಅಣ್ಣಾಮಲೈರನ್ನ ಶಿವಮೊಗ್ಗಕ್ಕೆ ಕರೆಸಿದೆ. ಇನ್ನೊಂದು ಕಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಬರುತ್ತಿದ್ದಾರೆ. 



ಓದಿ / ಡಿಪ್ಲೋಮೋ ಕೋರ್ಸ್​ಗೆ ಅರ್ಜಿ ಆಹ್ವಾನ/ ತರಬೇತಿ ಬಳಿಕ 100 %  ಉದ್ಯೋಗಾವಕಾಶ/ ವಿವರ ಇಲ್ಲಿದೆ 

ಸೊರಬಕ್ಕೆ ಜೆಪಿ ನಡ್ಡಾ



ನಾಳೆ ಅಂದರೆ, 27 ತಾರೀಖು  ಮಧ್ಯಾಹ್ನ 1 ಗಂಟೆಗೆ ಸೊರಬ ಪಟ್ಟಣಕ್ಕೆ ಜೆಪಿ ನಡ್ಡಾ ಆಗಮಿಸಲಿದ್ದಾರೆ. 

ಈ ಸಂಬಂಧ ಮಾತನಾಡಿರುವ  ಉತ್ತರಾಖಂಡದ ಬಿಜೆಪಿ ವಕ್ತಾರ ಖಜಾನ್ ದಾಸ್ ರಾಜ್ಯದ ಎಲ್ಲ 224 ಕ್ಷೇತ್ರಗಳಿಗೂ ಹಲವರನ್ನು ಪ್ರವಾಸಿ ಪ್ರಭಾರಿಗಳಾಗಿ ಪಕ್ಷ ನಿಯುಕ್ತಿ ಮಾಡಿದೆ. 

ಈ ನಿಟ್ಟಿನಲ್ಲಿ  ರಾಮಾಯಣದಲ್ಲಿ ಲಂಕೆಗೆ ಸೇತುವ ನಿರ್ಮಿಸಿದಂತೆ, ರಾಜ್ಯದಲ್ಲಿ ಪಕ್ಷ ಜಯ ಸಾಧಿಸಲು ಅಳಿಲು ಸೇವೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.  

ಇನ್ನೂ ಇದೇ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ  ಕುಮಾರ್ ಬಂಗಾರಪ್ಪ  ಅಭಿವೃದ್ಧಿಗಳನ್ನು ಮೆಚ್ಚಿ ಜನತೆ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದಿದ್ಧಾರೆ. 



ಓದಿ / ಡಿಪ್ಲೋಮೋ ಕೋರ್ಸ್​ಗೆ ಅರ್ಜಿ ಆಹ್ವಾನ/ ತರಬೇತಿ ಬಳಿಕ 100 %  ಉದ್ಯೋಗಾವಕಾಶ/ ವಿವರ ಇಲ್ಲಿದೆ 



ಶಿವಮೊಗ್ಗಕ್ಕೆ ಅಣ್ಣಾಮಲೈ

ಇನ್ನೂ ಶಿವಮೊಗ್ಗ ನಗರ ಕ್ಷೇತ್ರವನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡಿರುವ ಬಿಜೆಪಿ, ನಿವೃತ್ತ ಸಿಂಘಂ ಅಧಿಕಾರಿ ಅಣ್ಣಾಮಲೈರನ್ನ ಕರೆಸಿಕೊಳ್ತಿದೆ. 

ನಾಳೆ ಶಿವಮೊಗ್ಗ ನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಈ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದೆ. 

ತಮಿಳು ಮತದಾರರನ್ನು ಸೆಳೆಯಲು ಅಣ್ಣಾಮಲೈ ಆಗಮಿಸುತ್ತಿದ್ದು, ನಾಳೆ  ಕುವೆಂಪು ರಂಗಮಂದಿರದ ಹಿಂಭಾಗ, ಹಮ್ಮಿಕೊಳ್ಳಲಾಗಿರುವ ತಮಿಳು  ಸಮುದಾಯದ ಸಮಾವೇಶದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. 

ಬಳಿಕ  ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಯುವ ಸಮಾವೇಶ, ಪ್ರಬುದ್ಧರ ಚಿಂತನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 

ಓದಿ / ಶಿವಮೊಗ್ಗದ ರಸ್ತೆಗಳಲ್ಲಿ ಯುವಕನ ಬೈಕ್​ ಸ್ಟಂಟ್/  ಸೈಲೆಂಟ್ ಆಗಿ  ಪುಂಡರಿಗೆ ವಾರ್ನಿಂಗ್​ ಕೊಟ್ಟ ಪೊಲೀಸ್ 





ಬಿಎಲ್​ ಸಂತೋಷ್ ಆಗಮನ 

ಜೆಪಿ ನಡ್ಡಾ ಹಾಗೂ ಅಣ್ಣಾಮಲೈರ ಜೊತೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್​ ಸಂತೋಷ್​ ಸಹ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. 

ಇದೇ ಭಾನುವಾರ ಏಪ್ರಿಲ್ 30 ರಂದು ಶಿವಮೊಗ್ಗಕ್ಕೆ ಬಿಎಲ್​ ಸಂತೋಷ್​ ಆಗಮಿಸಲಿದ್ದು, 40 ಕ್ಕೂ ಹೆಚ್ಚು ಸಮುದಾಯದ ಮುಖಂಡರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. 




ಓದಿ / ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ 



ಇದಕ್ಕಾಗಿ ಬಿಜೆಪಿ ಸಾಮರಸ್ಯ ಸಮಾವೇಶವನ್ನು ಹಮ್ಮಿಕೊಂಡಿದ್ದು, ನಿರಂತರ ಕಾರ್ಯಕ್ರಮ ಹಾಗೂ 

ಇತರೇ ರಾಜ್ಯಗಳ ಮುಖಂಡರನ್ನು ನಿಗದಿತ ಕ್ಷೇತ್ರಗಳಲ್ಲಿ ಬೀಡು ಬಿಟ್ಟಿಸಿರುವ ಬಿಜೆಪಿ  ಚುನಾವಣೆ ಗೆಲ್ಲಲು ಮಾಸ್ಟರ್  ಪ್ಲಾನ್ ಮಾಡುತ್ತಿದೆ. 








Malenadutoday.com Social media