ಆಕ್ಸಿಡೆಂಟ್​ನಲ್ಲಿ ಭದ್ರಾವತಿ ಯುವಕನ ಮೆದುಳು ನಿಷ್ಕ್ರೀಯ! ಅಂಗಾಂಗ ಚೆನ್ನೈ, ಬೆಂಗಳೂರು , ಮಂಗಳೂರು ಆಸ್ಪತ್ರೆ ರವಾನೆ!

Bhadravathi youth's brain paralysed in accident The organs were sent to hospitals in Chennai, Bengaluru and Mangaluru.

ಆಕ್ಸಿಡೆಂಟ್​ನಲ್ಲಿ ಭದ್ರಾವತಿ ಯುವಕನ ಮೆದುಳು ನಿಷ್ಕ್ರೀಯ!   ಅಂಗಾಂಗ ಚೆನ್ನೈ, ಬೆಂಗಳೂರು , ಮಂಗಳೂರು ಆಸ್ಪತ್ರೆ ರವಾನೆ!

KARNATAKA NEWS/ ONLINE / Malenadu today/ Apr 25, 2023 GOOGLE NEWS


ಶಿವಮೊಗ್ಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಯುವಕನೊಬ್ಬನ ಅಂಗಾಂಗವನ್ನು ದಾನ ಮಾಡಲಾಗಿದ್ದು, ಭದ್ರಾವತಿ ನಿವಾಸಿಯಿಂದಾಗಿ ಹಲವರಿಗೆ ಜೀವದಾನ ಸಿಕ್ಕಿದೆ. 



ಓದಿ / ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ 



ಏನಾಗಿತ್ತು? 

ಕಳೆದ ವಾರದ  ಶನಿವಾರದಂದು  ಚೆನ್ನಗಿರಿಯಲ್ಲಿ ಅಪಘಾತವೊಂದು ಸಂಭವಿಸಿತ್ತು. ಘಟನೆಯಲ್ಲಿ ಭದ್ರಾವತಿಯ 21 ವರ್ಷದ ಉಲ್ಲಾಸ್ ಎಂಬವರು ತೀವ್ರವಾಗಿ ಗಾಯಗೊಂಡಿದ್ದರು

ಅವರನ್ನು  ಉಡುಪಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಾಗಿತ್ತು. ಆದರೆ  ಉಲ್ಲಾಸ್  ಚಿಕಿತ್ಸೆಗೆ ಸ್ಪಂದಿಸದೇ ಅವರ ಮೆದುಳು ನಿಷ್ಕ್ರೀಯಗೊಂಡಿತ್ತು.



ಓದಿ / ಶಿವಮೊಗ್ಗದ ರಸ್ತೆಗಳಲ್ಲಿ ಯುವಕನ ಬೈಕ್​ ಸ್ಟಂಟ್/  ಸೈಲೆಂಟ್ ಆಗಿ  ಪುಂಡರಿಗೆ ವಾರ್ನಿಂಗ್​ ಕೊಟ್ಟ ಪೊಲೀಸ್ 



ಅಂಗಾಂಗ ದಾನಕ್ಕೆ ನಿರ್ಧರಿಸಿದ ಕುಟುಂಬ

ಮೆದುಳು ನಿಷ್ಕ್ರೀಯ ಗೊಂಡಿದ್ದರಿಂದ ಉಲ್ಲಾಸ್​ರ  ಕುಟುಂಬಸ್ಥರು,  ಆತನ ಅಂಗಾಂಗ ದಾನಕ್ಕೆ ನಿರ್ಧರಿಸಿದ್ದಾರೆ. 

ಜೀರೋ ಟ್ರಾಫಿಕ್​ನಲ್ಲಿ ಅಂಗಾಂಗ ರವಾನೆ 

ಮಾನವ ಅಂಗಾಂಗ ಕಸಿ ಕಾಯ್ದೆ 1994ರ ಅನುಸಾರ ಉಲ್ಲಾಸ್ ಅವರನ್ನು ಎರಡು ಬಾರಿ ಪರಿಶೀಲಿಸಿ, ಅಧಿಕೃತವಾಗಿ ಪರಿಣಿತ ವೈದ್ಯರ ತಂಡವು ರೋಗಿಯ ಮೆದುಳು ನಿಷ್ಕ್ರೀಯಗೊಂಡಿದೆ ಎಂದು ಘೋಷಿಸಿದ್ದಾರೆ. 

ಬಳಿಕ ಕುಟುಂಬಸ್ಥರ ಅನುಮತಿ ಪಡೆದು, ಉಲ್ಲಾಸ್​ರವರ ಹೃದಯ, ಶ್ವಾಸಕೋಶಗಳು, ಮೂತ್ರಪಿಂಡಗಳು, ಯಕೃತ್ತು ಮತ್ತು ಎರಡು ಕಾರ್ನಿಯಾ ಗಳು ಒಟ್ಟು 7 ಮಂದಿ ರೋಗಿಗಳ ಜೀವ ಉಳಿಸಲು ಬಳಸಿಕೊಳ್ಳಲಾಗಿದೆ. 



ಓದಿ / ಡಿಪ್ಲೋಮೋ ಕೋರ್ಸ್​ಗೆ ಅರ್ಜಿ ಆಹ್ವಾನ/ ತರಬೇತಿ ಬಳಿಕ 100 %  ಉದ್ಯೋಗಾವಕಾಶ/ ವಿವರ ಇಲ್ಲಿದೆ 



ಶ್ವಾಸಕೋಶಗಳನ್ನು ಚೆನ್ನೈನ ಅಪೊಲೊ ಆಸ್ಪತ್ರೆಗೆ , ಯಕೃತ್‌ನ್ನು ಬೆಂಗಳೂರಿನ ಅಸ್ಟರ್ ಸಿಎಂಐ ಆಸ್ಪತ್ರೆಗೆ ಹಾಗೂ  ಒಂದು ಮೂತ್ರಪಿಂಡವನ್ನು ಮಂಗಳೂರಿನ ಎ. ಜೆ. ಆಸ್ಪತ್ರೆಗೆ ರವಾನಿಸಲಾಗಿದೆ. 

ನಂತರ  ಎರಡು ಕಾರ್ನಿಯಾಗಳು ಹಾಗೂ ಒಂದು ಮೂತ್ರಪಿಂಡ ವನ್ನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿರುವ ನೋಂದಾಯಿತ ರೋಗಿಗಳಿಗೆ ನೀಡಿ ಜೀವದಾನ ಮಾಡಲಾಗಿದೆ. 

ಅಂಗಾಂಗ ರವಾನೆಗೆ  ಉಡುಪಿ ಮತ್ತು ದಕ್ಷಿಣ ಕನ್ನಡ ಪೊಲೀಸ್ ಇಲಾಖೆಯು ನೆರವಾಗಿದ್ದು ಆ್ಯಂಬುಲೆನ್ಸ್​ ಸಾಗಾಟಕ್ಕೆ ಗ್ರೀನ್ ಕಾರಿಡಾರ್​ ಒದಗಿಸಿದ್ದರು. 






Malenadutoday.com Social media