KARNATAKA NEWS/ ONLINE / Malenadu today/ Nov 9, 2023 SHIVAMOGGA NEWS
Shivamogga | ಶಿವಮೊಗ್ಗ ಜಿಲ್ಲೆ ಸಕ್ರೆಬೈಲ್ ಆನೆ ಬಿಡಾರದ ಆನೆಗಳು ಕಾಡಾನೆಗಳನ್ನು ಖೆಡ್ಡಾಕ್ಕೆ ಬೀಳಿಸುವ ಕಾರ್ಯಾಚರಣೆಗೆ ಆಗಾಗ ತೆರಳುತ್ತಿರುತ್ತವೆ. ಸದ್ಯ ಚಿಕ್ಕಮಗಳೂರಿನ ಕಾಡಾನೆಯನ್ನು ಹಿಡಿಯಲು ಸೋಮಣ್ಣ, ಆಲೆ ಹಾಗೂ ಬಹದ್ದೂರ್ ಆಗನೆಗಳು ತೆರಳಿವೆ . ಜೊತೆಯಲ್ಲಿ ಕಾಡಾನೆ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಡಾ.ವಿನಯ್ ಕೂಡ ಸ್ಥಳದಲ್ಲಿದ್ದು ಕಾರ್ಯಾಚರಣೆಯನ್ನ ಆರಂಭಿಸಿದ್ದಾರೆ.
READ : ಹೊಳೆಹೊನ್ನೂರು ಸಮೀಪ ಪಲ್ಟಿಯಾಗಿ ಗದ್ದೆಗೆ ಉರುಳಿದ ಖಾಸಗಿ ಬಸ್!
ಚಿಕ್ಕಮಗಳೂರು ವಲಯ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಚಿಕ್ಕಮಗಳೂರು ನಗರದಿಂದ ಮತ್ತಾವರ ಗ್ರಾಮದ ಬಳಿ ಒಂಟಿ ಸಲಗ ಬೀಡುಬಿಟ್ಟಿದೆ. ಆನೆ ಹಿಂಡಿನಿಂದ ಪ್ರತ್ಯೇಕವಾಗಿರುವ ಈ ಆನೆಯು ಈಗಾಗಲೇ ಇಬ್ಬರ ಜೀವಕ್ಕೆ ಮುಳುವಾಗಿದ್ದು, ಕಾಡಾನೆಯನ್ನು ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ.
READ : ಬಾನುಮತಿ ಆನೆ ಬಾಲ ಕಟ್ ಮಾಡಿದ್ದು ಯಾರು? ಸತ್ಯ ಹೊರಬಿತ್ತು! ಏನಿದು ರಿಪೋರ್ಟ್!
ಇನ್ನೂ ಸಕ್ರೆಬೈಲ್ ಬಿಡಾರದ ಆನೆಗಳ ಜೊತೆಯಲ್ಲಿ ದುಬಾರೆ ಆನೆ ಬಿಡಾರದ ನಾಲ್ಕು ಆನೆಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಿವೆ. ಎರಡು ತಂಡಗಳಾಗಿ ಕಾರ್ಯಾಚರಣೆ ನಡೆಯಲಿದೆ.