ಹೊಳೆಹೊನ್ನೂರು ಸಮೀಪ ಪಲ್ಟಿಯಾಗಿ ಗದ್ದೆಗೆ ಉರುಳಿದ ಖಾಸಗಿ ಬಸ್!

A private bus overturned and fell into a field near Holehonur! ಹೊಳೆಹೊನ್ನೂರು ಸಮೀಪ ಪಲ್ಟಿಯಾಗಿ ಗದ್ದೆಗೆ ಉರುಳಿದ ಖಾಸಗಿ ಬಸ್!

ಹೊಳೆಹೊನ್ನೂರು ಸಮೀಪ ಪಲ್ಟಿಯಾಗಿ ಗದ್ದೆಗೆ ಉರುಳಿದ ಖಾಸಗಿ ಬಸ್!

KARNATAKA NEWS/ ONLINE / Malenadu today/ Nov 9, 2023 SHIVAMOGGA NEWS

holehonnuru |  ಶಿವಮೊಗ್ಗ ಹೊಳೆಹೊನ್ನೂರು ಸಮೀಪ ಖಾಸಗಿ ಬಸ್ ಪಲ್ಟಿಯಾಗಿ ಗದ್ದೆಗೆ ಉರುಳಿದೆ. ಇಲ್ಲಿನ ಅರತೊಳಲು-ಕಲ್ಲಿಹಾಲ್​ನ ನಡುವೆ ಈ ಘಟನೆ ನಡೆದಿದ್ದು, ಚಾಲಕ ನಿಯಂತ್ರಣ ತಪ್ಪಿ ಹೀಗಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.. 

READ : ಹರತಾಳು ಹಾಲಪ್ಪ, ಟಿ.ಡಿ. ಮೇಘರಾಜ್​ ಸೇರಿದಂತೆ 43 ಮಂದಿ ವಿರುದ್ದ ಎಫ್ಐಆರ್​ !

ಬಸ್​ನಲ್ಲಿ ಆರು ಜನ  ಪ್ರಯಾಣಿಕರಿದ್ದರು ಎಂದು ವರದಿಯೊಂದರಿಂದ ತಿಳಿದುಬಂದಿದ್ದು, ಘಟನೆಯಲ್ಲಿ ಯಾರಿಗೂ ಹೆಚ್ಚಿನ ಅಪಾಯವಾಗಿಲ್ಲ . ಇನ್ನೂ ಗಾಯಾಳುಗಳನ್ನ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗಿದೆ. 

ಇನ್ನೂ ಚಾಲಕ ಫೋನ್​ ನಲ್ಲಿ ಮಾತನಾಡಿಕೊಂಡು ಬಸ್​ ಚಲಾಯಿಸುತ್ತಿದ್ದ. ಇದೇ ವಿಚಾರ ಘಟನೆಗೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ. ಇನ್ನೂ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಸ್​ನ್ನ ಕ್ರೇನ್ ಬಳಸಿ ತೆರವುಗೊಳಿಸಿದ್ದಾರೆ.