ಹಿಂದಿನಿಂದ ಬಂದು ಡಿಕ್ಕಿ ಹೊಡೆಯುತ್ತಾರೆ ಹುಷಾರ್! ಭದ್ರಾವತಿ ರಸ್ತೆಯಲ್ಲಿ ಸ್ವಲ್ಪದರಲ್ಲಿಯೇ ಉಳಿತು ಜೀವ! ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ!

scene of the accident on Bhadravathi Road was captured on a dashboard camera of a car.

ಹಿಂದಿನಿಂದ ಬಂದು ಡಿಕ್ಕಿ ಹೊಡೆಯುತ್ತಾರೆ  ಹುಷಾರ್! ಭದ್ರಾವತಿ ರಸ್ತೆಯಲ್ಲಿ ಸ್ವಲ್ಪದರಲ್ಲಿಯೇ ಉಳಿತು ಜೀವ! ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ!

KARNATAKA NEWS/ ONLINE / Malenadu today/ May 27, 2023 SHIVAMOGGA NEWS

ಭದ್ರಾವತಿ/ ಬೈಕ್​ನಲ್ಲಿ ಹೋಗುತ್ತಿದ್ದ ಇಬ್ಬರಿಗೆ ಕಾರೊಂದು ಡಿಕ್ಕಿ ಹೊಡೆದು ಸ್ಪೀಡಾಗಿ ಮುಂದಕ್ಕೆ ಹೋದ ಘಟನೆಯೊಂದರ ವಿಡಿಯೋ ಇದೀಗ ಹೊರಬಿದ್ದಿದೆ. ಮಾಧ್ಯಮವೊಂದಕ್ಕೆ ಲಭ್ಯವಾದ ವಿಡಿಯೋದಲ್ಲಿ ಕಾಣುತ್ತಿರುವ ದೃಶ್ಯ ಭದ್ರಾವತಿಯದ್ದು ಎಂದು ಹೇಳಲಾಗಿದೆ. 

ಇಷ್ಟಕ್ಕೂ ನಡೆದಿದ್ದೇನು? 

ಬೈಕ್​ನಲ್ಲಿ ಇಬ್ಬರು ಸವಾರರು ಹೋಗುತ್ತಿರುತ್ತದೆ. ಅವರ ಎಡಭಾಗದಲ್ಲಿ ಒಂದು ಒಮಿನಿ ಹೋಗುತ್ತಿರುತ್ತದೆ. ಇನ್ನೊಂದು ಭಾಗದಲ್ಲಿ ಕಾರೊಂದು ಓವರ್​ ಟೇಕ್ ಮಾಡಲು ಟ್ರೈ ಮಾಡುತ್ತಾನೆ. ಈ ವೇಳೆ ಬೈಕ್​ಗೆ ಡಿಕ್ಕಿ ಹೊಡೆದ ಕಾರು, ಅಲ್ಲಿಂದ ಎಸ್ಕೇಪ್ ಆಗುತ್ತದೆ. ಈ ಘಟನೆ ಹಿಂದೆ ಬರುತ್ತಿದ್ದ ಕಾರಿನ ಡ್ಯಾಶ್ ಬೋರ್ಡ್​ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. 

ಕೃಷ್ಣ ಮೂರ್ತಿ ಮತ್ತು ಸಂತೋಷ್‌ ಎಂಬವರು,  ಶಿವಮೊಗ್ಗದಿಂದ ತರೀಕೆರೆಗೆ ಬೈಕಿನಲ್ಲಿ ತೆರಳುತ್ತಿದ್ದರು. ಭದ್ರಾವತಿ ಬೈಪಾಸ್‌ ರಸ್ತೆಯ ಸಿದ್ಧಾಪುರದ ಬಳಿ ಈ ಘಟನೆ ಸಂಭವಿಸಿದೆ.ಘಟನೆಯಲ್ಲಿ ಬೈಕ್​ಗೆ ಡಿಕ್ಕಿ ಹೊಡೆದ ಬೆನ್ನಲ್ಲೆ ಐ10 ಕಾರು ಅಲ್ಲಿಂದ ಓವರ್ ಸ್ಪೀಡನಲ್ಲಿ ತೆರಳಿದೆ.  ಹಿಟ್‌ ಅಂಡ್‌ ರನ್‌ ಅಪಘಾತದ  ದೃಶ್ಯ ಬೈಕ್‌ ಹಿಂಬದಿಯಲ್ಲಿ ಬರುತ್ತಿದ್ದ ಮೈಸೂರು ಮೂಲದ ದೀಪಕ್​ ಎಂಬವರ ಕಾರಿನ ಡ್ಯಾಶ್‌ ಕ್ಯಾಮರಾದಲ್ಲಿ (dash cam) ಸೆರೆಯಾಗಿದೆ