ಬಡವರ ಬದುಕಿಗೂ ನಿರ್ಲಕ್ಷ್ಯ! ಸಾವಿಗೂ ನಿರ್ಲಕ್ಷ್ಯವೇ? ಶಿವಮೊಗ್ಗದಲ್ಲಿ ಮೂವರ ಆತ್ಮಹತ್ಯೆಯ ಹೊಣೆ ಯಾರು?

ಶಿವಮೊಗ್ಗದ ಅಣ್ಣಾನಗರದಲ್ಲಿ ವಾಸಿಸುತ್ತಿದ್ದ ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಸಾವನ್ನಪ್ಪಿದ್ದಾರೆ. ಹಾಗೂ ಹೀಗೂ ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದವರನ್ನು ಕಾಡಿದ್ದು ಬಡತನ ಹಾಗು ನಿರ್ಲಕ್ಷ್ಯ. 

Shivmogga : ಶಿವಮೊಗ್ಗದಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ! ಕಾರಣವೇನು?

ಮಿಳಘಟ್ಟದಲ್ಲಿ ಕೂಲಿ ಮಾಡಿಕೊಂಡು ಜೀವನ ಮಾಡುತ್ತಿದ್ದ ಪರಂದಯ್ಯ ಹಾಗೂ ದಾನಮ್ಮ ಮತ್ತು ಮಂಜುನಾಥ್ ಎಂಬವರು ಸಾವನ್ನಪ್ಪಿದ್ದಾರೆ. ಅಕ್ಷರಶಃ ನಿರ್ಗತಿಕರಂತೆ  ಬದುಕಿದ್ದ ಕುಟುಂಬಕ್ಕೆ ಸಿಗಬೇಕಾಗಿದ್ದ ಯಾವೊಂದು ಸೌಲಭ್ಯಗಳು ಸಿಕ್ಕಿಲ್ಲ. 

GST : ಉದ್ಯಮಿಗಳೇ ನಿಮ್ಮ ದಾಖಲೆಗಳ ಬಗ್ಗೆ ಇರಲಿ ಎಚ್ಚರ: ನಿಮ್ಮ ರೆಕಾರ್ಡ್ಸ್​ನಲ್ಲಿ ಬೇರೆಯವರು ಜಿಎಸ್​ಟಿ ಪಡೆದುಕೊಳ್ತಾರೆ

ಈ ಕುಟುಂಬದವರಿಗೆ ಕನಿಷ್ಟ ಮನೆ ಬಾಡಿಗೆಯು ಸಹ ಕೊಡಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಜುನಾಥ್​ಗೆ ಪಾರ್ಶುವಾಯು ಹೊಡೆದಿತ್ತು. ಅದರಲ್ಲಿಯೇ ಅಲ್ಲಿ ಇಲ್ಲಿ ಚೂರು ಪಾರು ಕೂಲಿ ಮಾಡುತ್ತಿದ್ದ. ಪರಂದಯ್ಯನಿಗೆ ಕಣ್ಣಿನ ಸಮಸ್ಯೆಯಿತ್ತು. ಕೆಲಸಕ್ಕೆ ಹೋಗಲು ಆಗುತ್ತಿರಲಿಲ್ಲ. ಪತ್ನಿಯೊಬ್ಬಳೇ ಹಗಲು ರಾತ್ರಿ ಕೆಲಸಕ್ಕೆ ಹೋಗಿ ಕೂಲಿ ಮಾಡುತ್ತಿದ್ದರಂತೆ. ರೇಷನ್​ ಕಾರ್ಡ್​ಗೆ ಅರ್ಜಿ ಹಾಕಿದ್ದರಂತೆ. ಆದರೆ ರೇಷನ್​ ಕಾರ್ಡ್​ ಕೂಡ ಕುಟುಂಬಸ್ಥರಿಗೆ ಸಿಕ್ಕಿಲ್ಲವಂತೆ. ಆಧಾರ್ ಕಾರ್ಡ್​, ರೇಷನ್​ ಕಾರ್ಡ್​ ಹೀಗೆ ಬದುಕಿನ ಗುರುತಿಗೆ ಬೇಕಿದ್ದ ಯಾವೊಂದು ಆಧಾರವೂ ಈ ಕುಟುಂಬಕ್ಕೆ ಇರಲಿಲ್ಲ. ಇತ್ತೀಚೆಗೆ ರೇಷನ್​ ಕಾರ್ಡ್​ಗಾಗಿ ವಾರದ ಹಿಂದೆ ಪರಿಚಯಿಸ್ತರಿಗೆ ಫೋಟೋ ಕೊಟ್ಟಿದ್ಧಾರೆ. ಇದಾಗಿ ವಾರ ಕಳೆಯುವಷ್ಟರಲ್ಲಿ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ. 

MESCOM : ಶಿವಮೊಗ್ಗ ನಾಗರಿಕರ ಗಮನಕ್ಕೆ: ಫ್ಯೂಸ್​​ ಕೀಳಲು ಬರುವ ಮೆಸ್ಕಾಂ ಸಿಬ್ಬಂದಿ ಕೈಯಲ್ಲಿ ಕರೆಂಟ್ ಬಿಲ್​ ಕಟ್ಟಬೇಡಿ

ಬಡ ಕುಟುಂಬವೊಂದಕ್ಕೆ ಸಿಗಬೇಕಿದ್ದ ಸರ್ಕಾರಿ ಸವಲತ್ತುಗಳು ಈ ಕುಟುಂಬಕ್ಕೆ ಸಿಕ್ಕಿರಲಿಲ್ಲ. ಅಡುಗೆ ಮಾಡಲು ಸಹ ಏನೂ ಇಲ್ಲದೆ, ಬಳಲಿದ್ದ ಕುಟುಂಬದ ಸಾವು ಕೂಡ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ಏಕೆಂದರೆ ನಿನ್ನೆ ಅಕ್ಕಪಕ್ಕದವರು ನೋಡಿ, ಹೀಗಾಗಿದೆ ಎಂದು ಆ್ಯಂಬುಲೆನ್ಸ್​ಗೆ ಬೆಳಗ್ಗೆ ಕರೆಮಾಡಿದರೆ, ಮಧ್ಯಾಹ್ನ ಆ್ಯಂಬುಲೆನ್ಸ್ ಬಂದಿದೆ. ಅಲ್ಲಿಯುವರೆಗೂ ಬದುಕಿದ್ದ ಮಂಜುನಾಥ್​ ನರಳಾಡುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನೂ , ಮೃತದೇಹ ನೀಡುವುದರಲ್ಲಿಯು ತಡವಾಗಿದೆ ಎಂದು ದೂರಿದ್ದಾರೆ. ವ್ಯವಸ್ಥೆಯ ನಿರ್ಲಕ್ಷ್ಯದಡಿಯಲ್ಲಿ ಬಡವರು ಬದುಕುವುದು ಹೇಗೆ ಎಂದು ಅಕ್ಕಪಕ್ಕದವರು ಪ್ರಶ್ನಿಸಿದ್ಧಾರೆ. ಆದರೆ ಇದಕ್ಕೆ ಉತ್ತರ ಕೊಡುವವರು ಮಾತ್ರ ಯಾರು ಇಲ್ಲದಂತಾಗಿದೆ. 

thirthahalli | ಪೊಲೀಸರ ಹುಡುಕಾಟದ ನಡುವೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ಬಂದು ಹೋಗಿದ್ದನಾ ಸ್ಯಾಂಟ್ರೋ ರವಿ!?

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Malenadu Today

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು