ಮಂಗಳೂರಿನಿಂದ ಬೆಂಗಳೂರಿಗೆ ಶಂಕಿತ ಶಾರೀಖ್ ಶಿಫ್ಟ್​/ ಕಾರಣವೇನು ಓದಿ

ಶಾರಿಕ್‌ಗೆ ಮಂಗಳೂರಿನ ಫಾದರ್ ಮುಲ್ಲರ್ (FatherMuller Hospital) ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆ ರಾತ್ರಿಯೇ ಶಾರೀಖ್​ನನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗುತ್ತಿದೆ. Mangaluru Blast Case Accused Mohamed Shariq

ಮಂಗಳೂರಿನಿಂದ ಬೆಂಗಳೂರಿಗೆ ಶಂಕಿತ ಶಾರೀಖ್ ಶಿಫ್ಟ್​/ ಕಾರಣವೇನು ಓದಿ
Mangaluru Blast Case Accused Mohamed Shariq

Mangaluru Blast Case Accused Mohamed Shariq ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಶಂಕಿತ ಶಾರೀಖ್​ನನ್ನು ಮಂಗಳೂರಿನಿಂಧ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಆತನ ಕುರಿತು ಹಾಗೂ ಮಂಗಳೂರು ಬ್ಲಾಸ್ಟ್ ಪ್ರಕರಣದ ತನಿಖೆ ಎನ್​ಐಎ ನಡೆಸ್ತಿದೆ. ಸಾಮಾನ್ಯವಾಗಿ ಎನ್​ಐಎ ತನಿಖೆ ನಡೆಸ್ತಿರುವ ಕೇಸ್​ಗಳಲ್ಲಿ ಆರೋಪಿಗಳನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತದೆ. ಈ ಮೊದಲು ಶಂಕಿತ ಮಾಜ್, ಯಾಸಿನ್ ಹಾಗೂ ಹರ್ಷನ ಕೊಲೆ ಪ್ರಕರಣದ ಆರೋಪಿಗಳನ್ನು ಶಿವಮೊಗ್ಗ ಜೈಲಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. 

ಇದನ್ನು ಸಹ ಓದಿ : ಕೇಸ್​ ವಾಪಸ್​ತೆಗೆದುಕೊಳ್ಳುವಂತೆ ಬೆದರಿಕೆ/ ತಡರಾತ್ರಿ ಮನೆ ಬಾಗಿಲಿಗೆ ಬಂದು ಕಾರಿಗೆ ಬೆಂಕಿ ಹಚ್ಚಿದ್ರು/ ರಕ್ಷಣೆಯಿಲ್ಲ ಎಂದು ಕಣ್ಣಿರಿಟ್ಟ ಸಂತ್ರಸ್ತೆ

ಇದೀಗ ಶಾರೀಖ್​ನನ್ನು ಕೂಡ ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಿದೆ. ಮಂಗಳೂರು ಕುಕ್ಕರ್  ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಶಾರಿಕ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನು ಸಹ ಓದಿ : 15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್​ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ?

ಬಾಂಬ್ ಸ್ಫೋಟದಿಂದ ಗಾಯಗೊಂಡಿದ್ದ ಶಾರಿಕ್‌ಗೆ ಮಂಗಳೂರಿನ ಫಾದರ್ ಮುಲ್ಲರ್ (FatherMuller Hospital) ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆ ರಾತ್ರಿಯೇ ಶಾರೀಖ್​ನನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ವಿಕ್ಟೋರಿಯಾ (Victoria Hospital,) ಆಸ್ಪತ್ರೆಯ ಬರ್ನಿಂಗ್ ವಾರ್ಡ್​ನಲ್ಲಿ ಶಾರೀಖ್​ಗೆ ಚಿಕಿತ್ಸೆ ಮುಂದುವರಿದಿದೆ. 

ಇದನ್ನು ಸಹ ಓದಿ : ಶಿವಮೊಗ್ಗ ಪೊಲೀಸರಿಂದ ತತ್ತಕ್ಷಣದ ಕಾರ್ಯಾಚರಣೆ/ 20 ಚೆಕ್​ಪೋಸ್ಟ್​ನಲ್ಲಿ 46 ಕೇಸ್​/ ಏನಿದು? ವಿವರ ನೋಡಿ

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link