KARNATAKA NEWS/ ONLINE / Malenadu today/ Apr 26, 2023 GOOGLE NEWS
ಶಿವಮೊಗ್ಗ/ ಅಪರೂಪದ ಬೆಳವಣಿಗೆಯೊಂದರಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹ (shivamogga central jail) ನ ವಿಚಾರಣಾದೀನ ಕೈದಿಯೊಬ್ಬ ಭದ್ರಾವತಿಯ ಪೊಲೀಸ್ ಸ್ಟೇಷನ್ವೊಂದಕ್ಕೆ ಬಂದು, ತನಗಾದ ಅನ್ಯಾಯದ ವಿರುದ್ಧ ದೂರು ಕೊಟ್ಟಿದ್ಧಾನೆ. ವಿಶೇಷ ಪ್ರಕರಣದಲ್ಲಿ ಪೋಕ್ಸೋ ಕೋರ್ಟ್ನ ಜಡ್ಜ್ ನೀಡಿದ ಆದೇಶದಡಿಯಲ್ಲಿ ಈತ ದೂರು ನೀಡಿದ್ದಾನೆ.
ಓದಿ / ಶಿವಮೊಗ್ಗದಲ್ಲಿ ಬಸ್ ಹತ್ತಿದ ಎಸ್ಪಿ ಮಿಥುನ್ ಕುಮಾರ್, ಡಿಸಿ ಡಾ.ಆರ್ ಸೆಲ್ವಮಣಿ! ವಿವರ ಇಲ್ಲಿದೆ
ಏನಿದು ಕೇಸ್
ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾದೀನ ಕೈದಿಯೊಬ್ಬ ಫೋಕ್ಸೋ ಕೇಸ್ ಎದುರಿಸುತ್ತಿದ್ದಾನೆ. ಈತ ಒಬ್ಬ ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದನಂತೆ. ಆಕೆಯು ಪ್ರೀತಿಸುತ್ತಿದ್ದಳಂತೆ ಈ ಮಧ್ಯೆ ಹುಡುಗಿ ಓಡಿ ಹೋಗೋಣ ಎಂದ್ದಿದ್ದಾಳೆ. ಈಕೆಯ ಮಾತನ್ನ ನಿರಾಕರಿಸಿದ್ದ ಕೈದಿ, ಆಕೆಯ ತಾಯಿಗೆ ಫೋನ್ ಮಾಡಿದ್ದ
ನಿಮ್ಮ ಮಗಳನ್ನು ಮದುವೆ ಮಾಡಿಕೊಡಿ
ಅಪ್ತಾಪ್ತೆಯ ತಾಯಿಗೆ ಕರೆಮಾಡಿದ್ದ ಕೈದಿ, ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆ, ಮದುವೆ ಮಾಡಿಕೊಡಿ ಎಂದು ಕೇಳಿದ್ದಾನೆ. ಆಕೆಯ ತಾಯಿ ಸ್ವಲ್ಪ ಟೈಂ ಕೇಳಿದ್ದಾಳೆ. ನಂತರ ಕೈದಿಯ ಪ್ರಸ್ತಾಪವನ್ನ ನಿರಾಕರಿಸಿದ್ದಾರೆ.
ಓದಿ / ಶಿವಮೊಗ್ಗದ ರಸ್ತೆಗಳಲ್ಲಿ ಯುವಕನ ಬೈಕ್ ಸ್ಟಂಟ್/ ಸೈಲೆಂಟ್ ಆಗಿ ಪುಂಡರಿಗೆ ವಾರ್ನಿಂಗ್ ಕೊಟ್ಟ ಪೊಲೀಸ್
ಹಲ್ಲೆ ಹಾಗೂ ಬೆದರಿಕೆ
ಈ ಮಧ್ಯೆ ಅಪ್ತಾಪ್ತೆಯ ಅಂಕಲ್ ಎಂದು ಹೇಳಿಕೊಂಡು ಒಬ್ಬಾತ ಕೈದಿಗೆ ಕರೆಮಾಡಿದ್ದಾರೆ. ಮಾತನಾಡಬೇಕು ಬಾ ಎಂದು ಕರೆದಿದ್ಧಾರೆ. ಇದಕ್ಕೆ ಆತ ಒಪ್ಪದೆ ಇದ್ದಾಗ ಅಪ್ರಾಪ್ತೆಯ ಮೂಲಕ ಕರೆಮಾಡಿಸಿ ನಿರ್ದಿಷ್ಟ ಜಾಗವೊಂದಕ್ಕೆ ಕರೆಸಿಕೊಂಡಿದ್ದಾರೆ.
ಕರೆಗೆ ಓಗೊಟ್ಟು ಸ್ಥಳಕ್ಕೆ ತೆರಳಿದ್ದ ಕೈದಿ ಹಾಗೂ ಆತನ ತಾಯಿ ಮೇಲೆ ಪೊಲೀಸ್ ಎಂದು ಹೇಳಿಕೊಂಡು ಇಬ್ಬರು ಹಲ್ಲೆ ಮಾಡಿದ್ದಾರೆ. ಈ ವೇಳೆ ಅಪ್ತಾಪ್ತೆ ಹಾಗೂ ಆತನ ತಾಯಿಯು ಇದ್ದರು ಎಂದು ಕೈದಿ ದೂರಿನಲ್ಲಿ ತಿಳಿಸಿದ್ಧಾನೆ.
ಓದಿ / ಡಿಪ್ಲೋಮೋ ಕೋರ್ಸ್ಗೆ ಅರ್ಜಿ ಆಹ್ವಾನ/ ತರಬೇತಿ ಬಳಿಕ 100 % ಉದ್ಯೋಗಾವಕಾಶ/ ವಿವರ ಇಲ್ಲಿದೆ
ಹುಡುಗಿಯಿಂದ ರೇಪ್ ಕೇಸ್ ಹಾಕಿಸುತ್ತೇವೆ. 8 ಲಕ್ಷ ರೂಪಾಯಿ ತಂದು ಕೊಡಬೇಕು ಇಲ್ಲವಾದರೆ ಬಿಡೋದಿಲ್ಲ ಎಂದು ಹಲ್ಲೆ ಮಾಡಿ ಅಂದು ಆರೋಪಿಗಳು ಹೋಗಿದ್ದಾರೆ. ಆನಂತರ ಸಂತ್ರಸ್ತ ಬಗ್ಗದೆ ಇದ್ದಾಗ, ಹುಡುಗಿಯಿಂದ ಸುಳ್ಳು ಕೇಸ್ ಹಾಕಿ ಅಂದರ್ ಮಾಡಿದ್ದಾರೆ ಎಂದು ಕೈದಿ ಆರೋಪಿಸಿದ್ದಾನೆ.
ಓದಿ / ಶಿವಮೊಗ್ಗದಲ್ಲಿ ಬಸ್ ಹತ್ತಿದ ಎಸ್ಪಿ ಮಿಥುನ್ ಕುಮಾರ್, ಡಿಸಿ ಡಾ.ಆರ್ ಸೆಲ್ವಮಣಿ! ವಿವರ ಇಲ್ಲಿದೆ
Malenadutoday.com Social media
