ಶಿವಮೊಗ್ಗದಲ್ಲಿ ಮರಳು ಮಾಫಿಯದ ಮೇಲೆ ನಿಯಂತ್ರಣಕ್ಕೆ ಪಾತಕ ಲೋಕ ಸ್ಕೆಚ್..ಹಂದಿ ಅಣ್ಣಿ ಕೊಲೆ ನಂತರ ಶಿವಮೊಗ್ಗದ ಕ್ರೈಂ ಲೋಕದಲ್ಲಿ ನಡೆಯುತ್ತಿರೋದು ಏನು? JP ಬರೆಯುತ್ತಾರೆ

A sketch of the criminal world to control the sand mafia in Shimoga.. What is happening in the crime world of Shivamogga after the murder of handi Anni? JP writes

ಶಿವಮೊಗ್ಗದಲ್ಲಿ ಮರಳು ಮಾಫಿಯದ ಮೇಲೆ ನಿಯಂತ್ರಣಕ್ಕೆ ಪಾತಕ ಲೋಕ ಸ್ಕೆಚ್..ಹಂದಿ ಅಣ್ಣಿ ಕೊಲೆ ನಂತರ ಶಿವಮೊಗ್ಗದ ಕ್ರೈಂ ಲೋಕದಲ್ಲಿ ನಡೆಯುತ್ತಿರೋದು ಏನು? JP ಬರೆಯುತ್ತಾರೆ
ಶಿವಮೊಗ್ಗದಲ್ಲಿ ಮರಳು ಮಾಫಿಯದ ಮೇಲೆ ನಿಯಂತ್ರಣಕ್ಕೆ ಪಾತಕ ಲೋಕ ಸ್ಕೆಚ್..ಹಂದಿ ಅಣ್ಣಿ ಕೊಲೆ ನಂತರ ಶಿವಮೊಗ್ಗದ ಕ್ರೈಂ ಲೋಕದಲ್ಲಿ ನಡೆಯುತ್ತಿರೋದು ಏನು? JP ಬರೆಯುತ್ತಾರೆ

ಹಂದಿ ಅಣ್ಣಿ ನಂತ್ರ ಹೆಬ್ಬೆಟ್ಟು ಮಂಜನಿಗೆ ಇಲ್ಲದಂತಾಗಿದೆ ವಾರಸುದಾರ

ಶಿವಮೊಗ್ಗದಲ್ಲಿ ರೌಡಿಗಳ ಪಾತಕ ಲೋಕದಲ್ಲಿ ಸದ್ದಿಲ್ಲದೆ ಗ್ಯಾಂಗ್ ಗಳು ದ್ವೇಷ ಪ್ರತಿಕಾರಕ್ಕೆ ಮಚ್ಚು ಮಸೆಯುತ್ತಿದೆ..ಅವನನ್ನು ಎತ್ತಬೇಕು..ಇವನನ್ನು ಎತ್ತಬೇಕು ಎಂದು ಬ್ಯಾಟ್ಸ್ ಮನ್ ಗಳನ್ನು ರೆಡಿಮಾಡಿಕೊಳ್ಳುತ್ತಿರೋ ವಾಸನೆ ಮಲೆನಾಡು ಟುಡೆಗೆ ಲಭಿಸಿದೆ.

ಹೌದು ಹಂದಿ ಅಣ್ಣಿಯ ಕೊಲೆ ನಂತ್ರ ಶಿವಮೊಗ್ಗ ತಣ್ಣಗಿದೆ ಎಂದುಕೊಂಡಿದ್ರೆ ಅದು ಸುಳ್ಳು ಅನ್ನುತ್ತೆ ಪಾತಕ ಲೋಕ. ಶಿವಮೊಗ್ಗದಲ್ಲಿ ರೌಡಿಗಳ ದ್ವೇಷ ಪ್ರತಿಕಾರದ ಭಾಗವಾಗಿ ನೆತ್ತರು ಹರಿಯುವುದು ನಿಂತಿಲ್ಲ. ಹಂದಿ ಅಣಿಯ ಕೊಲೆಗೆ ಪ್ರತಿಕಾರಕ್ಕೆ ಶಪಥ ಮಾಡಿ ಹಗೆ ತೀರಿಸಿಕೊಳ್ಳಲು ತೆರೆಹಿಂದೆಯೇ ತಂತ್ರ ಹೂಡಿದ್ದಾನೆ ಹೆಬ್ಬಟ್ಟು ಮಂಜ.

ಸಾರ್ವಜನಿಕರ ಗಮನಕ್ಕೆ: ನಾಳೆ ಶಿವಮೊಗ್ಗದ ಈ ಪ್ರಮುಖ ಭಾಗಗಳಲ್ಲಿ ಕರೆಂಟ್ ಇರೋದಿಲ್ಲ

ಮರಳು ಮಾಫಿಯ ನಿಯಂತ್ರಿಸುತ್ತಿದ್ದ ಹಂದಿ ಅಣ್ಣಿ

ಕೊಲೆಯಾದ ಹಂದಿ ಅಣ್ಣಿ, ಈ ಹಿಂದೆ ಜೈಲಿನಿಂದ ರಿಲೀಸ್ ಆದ ನಂತ್ರ ದಬ್ಬಣಗದ್ದೆ ಮರಳೂರು ಕ್ವಾರಿಗಳಲ್ಲಿ ಪರೋಕ್ಷವಾಗಿ ಶೇರ್ ಹೊಂದಿದ್ದ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಮರಳು ಮಾಫಿಯ ನಿಯಂತ್ರಿಸುತ್ತಿದ್ದ ಹೆಬ್ಬಟ್ಟು ಮಂಜನ ಹಣಕಾಸಿನ ವಹಿವಾಟನ್ನು ಹಂದಿ ಅಣ್ಣಿಯೇ ನೋಡಿಕೊಳ್ಳುತ್ತಿದ್ದ. ಆದ್ರೆ ಬಂಕ್ ಬಾಲು ಕೊಲೆಗೆ ಹಂದಿ ಅಣ್ಣಿ  ಸಹಕಾರ ನೀಡಿದ್ದಾನೆಂದು ಮಚ್ಚು ಮಸೆಯುತ್ತಿದ್ದ ಬಂಕ್ ಬಾಲು ಶಿಷ್ಯ ಕಾಡಾ ಕಾರ್ತಿಕ್ ಹಂದಿ ಅಣ್ಣಿಯನ್ನು ಸ್ಕೆಚ್ ಹಾಕಿ ಕೊಂದಿದ್ದಾನೆ. ನೆಚ್ಚಿನ ಶಿಷ್ಯ ನನ್ನು ಕಳೆದುಕೊಂಡಿರುವ ಹೆಬ್ಬೆಟ್ಟು ಮಂಜ ಈಗ ಶಿವಮೊಗ್ಗದ ಮೇಲಿನ ಹಿಡಿತಕ್ಕಾಗಿ ಪರಿತಪಿಸುವಂತಾಗಿದೆ.

ಸಾಗರ ಟೌನ್​ನಲ್ಲಿ ನಡೆದ ಹಲ್ಲೆ ಯತ್ನ ಕೇಸ್​ ಬಗ್ಗೆ ಸಮೀರ್ ಸಹೋದರಿ ಹೇಳಿದ್ದೇನು? ವಿಡಿಯೋ ವರದಿ

ಬಂಕ್ ಬಾಲು ಕೊಲೆ ಮಾಡಿದ ಆರೋಪಿಗಳೆಲ್ಲಾ ಜೈಲಿನಿಂದ ರೀಲೀಸ್ ಆದ್ರೂ, ಶಿವಮೊಗ್ಗದಲ್ಲಿ ಕಾಣಿಸಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಹೆಬ್ಬೆಟ್ಟು ಮಂಜನಿಗೆ ಈಗ ನಂಬಿಗಸ್ತನಂತಿರುವುದು ಚಿಕ್ಕಲ್ ರಮೇಶ ಮಾತ್ರ. ಆದ್ರೆ ಜೈಲಿನಿಂದ ರಿಲೀಸ್ ಆಗಿರೋ ಚಿಕ್ಕಲ್ ರಮೇಶ್ ತಾನಾಯ್ತು ತನ್ನ ಕೆಲಸ ವಾಯ್ತು ಎಂದುಕೊಂಡು ಹೊಸ ಬದುಕು ಕಟ್ಟಿಕೊಳ್ಳಲು ಅಣಿಯಾಗಿದ್ದಾನೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲಾ ಮರಳು ಕ್ವಾರಿಗಳು ತೆರೆಯುತ್ತಿದ್ದಂತೆ ಅದನ್ನು ತನ್ನ ಮೂಗಿನ ನೇರಕ್ಕೆ ನಿಯಂತ್ರಿಸಲು ಹೆಬ್ಬೆಟ್ಟು ಮಂಜನಿಗೆ ಚಿಕ್ಕಲ್ ಆತನ ಸಹಚರರು ಅನಿವಾರ್ಯವಾಗಿದ್ದಾರೆ.  ಆದರೆ ಎದುರಾಳಿ ಗ್ಯಾಂಗ್ ಹೆಬ್ಬೆಟ್ಟು ಮಂಜನ ಆ ಖಡಕ್ ಶಿಷ್ಯನನ್ನು  ಸ್ಕೆಚ್ ಹಾಕಿ ಮುಗಿಸಲು ಹೊಂಚುಹಾಕುತ್ತಿದೆ ಎನ್ನುತ್ತಿವೆ ಮೂಲಗಳು.

ಸಾಗರ ಟೌನ್​ನಲ್ಲಿ ನಡೆದ ಹಲ್ಲೆ ಯತ್ನ ಕೇಸ್​ ಬಗ್ಗೆ ಸಮೀರ್ ಸಹೋದರಿ ಹೇಳಿದ್ದೇನು? ವಿಡಿಯೋ ವರದಿ

ಸ್ಕೆಚ್​...ಸ್ಕೆಚ್​..ಸ್ಕೆಚ್​

ರೌಡಿ ಹಂದಿ ಅಣ್ಣಿ ಕೊಲೆಗೆ ಪ್ರತಿಕಾರ ತೀರಿಸಿಕೊಳ್ಳಲು ಹೆಬ್ಬೆಟ್ಟು ಮಂಜ ಶಿವಮೊಗ್ಗದಲ್ಲಿಯೇ ಸ್ಕೆಚ್ ಹಾಕಿದ್ದ.  ಹೆಬ್ಬೆಟ್ಟು ಮಂಜ ಶಿವಮೊಗ್ಗದ ಎದುರಾಳಿ ರೌಡಿಯನ್ನು ಎತ್ತಲು ಬೆಂಗಳೂರಿನಿಂದ ಹುಡುಗರನ್ನು ಕಳಿಸಿದ್ದ.ಆತನ ವಿರುದ್ಧ  ಬ್ಯಾಟಿಂಗ್ ಆಡಲು ಬಿಟ್ಟಿದ್ದ. ಹತ್ತು ಹಲವು ದಿನ ಕಾರಿನಲ್ಲಿ ಸುತ್ತಾಡಿದ ಆ ಗ್ಯಾಂಗ್ ಗೆ ಏನು ಮಾಡಲು ಸಾಧ್ಯವಾಗ್ಲಿಲ್ಲ. ಅಲ್ಲದೆ ಹೆಬ್ಬಿಟ್ಟಿನ ತಂತ್ರ ಆ ರೌಡಿಗೆ ಗೊತ್ತಾಗಿ ಸ್ಕೆಚ್ ಫೇಲ್ಯೂರ್ ಆಗಿತ್ತು. ಇದಾದ ನಂತ್ರ ಅದೇ ಎದುರಾಳಿ ರೌಡಿ ಗ್ಯಾಂಗ್ ಈಗ ಹೆಬ್ಬೆಟ್ಟು ಮಂಜನ ನೆಚ್ಚಿನ ಶಿಷ್ಯ ನಿಗೆ ಸ್ಕೆಚ್ ಹಾಕಿದೆ.

ಸಾಗರ ಟೌನ್​ನಲ್ಲಿ ಹಲ್ಲೆಗೆ ಯತ್ನ ಕೇಸ್​/ ಆರೋಪಿಗಳ ಬಂಧನ/ ಶಾಸಕ ಹರತಾಳು ಹಾಲಪ್ಪ ಹೇಳಿದ್ದೇನು? ಇಲ್ಲಿದೆ ವಿಡಿಯೋ ವರದಿ

ಹೆಬ್ಬೆಟ್ಟುಗೆ ಠಕ್ಕರ್ ಕೊಡಲು ಆ ಗ್ಯಾಂಗ್ ಕೂಡ ಹವಣಿಸುತ್ತಿದೆ. ಇದೊಂದು ರೀತಿಯಲ್ಲಿ ಶೀತಲ ಸಮರದಂತೆ ಮಾರ್ಪಟ್ಟಿದ್ದು, ಬೂದಿ ಮುಚ್ಚಿದ ಕೆಂಡದಂತಿದೆ. ಈಗಾಗಲೇ ಶಿವಮೊಗ್ಗದ ಪ್ರೆಂಟ್ ಲೈನ್ ರೌಡಿಗಳೆಲ್ಲಾ ಆರ್ಥಿಕವಾಗಿ ಗಟ್ಟಿಯಾಗಿದ್ದು, ವೈಟ್ ಕಾಲರ್ ಗಳಾಗಿ ಗುರ್ತಿಸಿಕೊಳ್ಳಲು ಮುಂದಾಗಿದ್ದಾರೆ. ರೌಡಿಗಳ ಪೆರಡ್ ಗೂ ಕೂಡ ಬರದೆ ಮನೆಯಲ್ಲಿಯೇ ಆರಾಮಾಗಿರುತ್ತಾರೆ.

ಇದು ಒಂದೆಡೆಯಾದ್ರೆ ಮತ್ತೊಂದೆಡೆ ಮಾರ್ಕೇಟ್ ಲೋಕಿ ತನ್ನ ಸಹೋದರ ಮಾರ್ಕೇಟ್ ಗೋವಿಂದ್ ನ ಕೊಲೆಗೆ ಪ್ರತಿಕಾರ ತೀರಿಸಿಕೊಳ್ಳಲು ಜೈಲಿನಿಂದಲೇ ಸ್ಕೆಚ್ ರೂಪಿಸಿದ್ದಾನೆ ಎನ್ನಲಾಗಿದೆ. ಖರಾಬ್ ಶಿವು ಆತನ ಡೆಡ್ಲಿ ಟಾರ್ಗೇಟ್ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವಾದ್ರೂ, ಖರಾಬ್ ಶಿವು ಕೂಡ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿದ್ದಾನೆ. ಈ ಹಿಂದೆ ಎಸ್ಪಿ ಅಭಿನವ್ ಖರೆ ಕಾರ್ಪೋರೇಟರ್ ಸತೀಶ್, ಮಾರ್ಕೇಟ್ ಗಿರಿ ಹಂದಿ ಅಣ್ಣಿ ಹಾಗು ಖರಾಬ್ ಶಿವುಗೆ ಥ್ರೆಟ್ ಇರೋ ಬಗ್ಗೆ ಖುದ್ದು ಮಾಹಿತಿ ನೀಡಿ ಎಚ್ಚರಿಕೆಯಿಂದ ಇರುವಂತೆ ಹೇಳಿದ್ರು.

ಸದ್ಯ ಅಂದರ್​ ವರ್ಲ್ಡ್​ನ ಅಂತರಾಳದಲ್ಲಿ ಸ್ಕೆಚ್​ಗಳು ಇನ್ನಷ್ಟು ಸಾಣೆ ಹಿಡಿಸಿಕೊಳ್ತಿವೆ. ಅದಕ್ಕಿಂತಲೂ ಹೆಚ್ಚಾಗಿ ಶಿವಮೊಗ್ಗದ ಮರಳು ಮಾಫಿಯದ ಮೇಲೆ ಕಂಟ್ರೋಲ್​ ತೆಗೆದುಕೊಳ್ಳಲು ಈ ಸ್ಕೆಚ್​ ಕಸರತ್ತುಗಳು ಒಳಗೊಳಗೆ ನಡೆಯುತ್ತಿವೆ. ಪೊಲೀಸ್ ಇಲಾಖೆಯು ಸಹ ಈ ರೌಡಿ ಚಟುವಟಿಕೆಗಳ ರೆಕ್ಕೆಪುಕ್ಕ ಕತ್ತರಿಸಲು ತನ್ನದೆ ಆದ ಶೈಲಿಯಲ್ಲಿ ಕೆಲಸ ಮಾಡುತ್ತಿದೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com