ನಡು ರೋಡಲ್ಲಿ ಪೊಲೀಸರಿಗೆ ಕೊಲೆ ಬೆದರಿಕೆ! ಎಸ್.ಪಿ. ಮಿಥುನ್ ಕುಮಾರ್ ಸ್ಟ್ರೈಟ್ ವಾರ್ನಿಂಗ್!?
Police receive death threats in the middle of the road! S.P. Mithun Kumar's straight warning!?
Shivamogga | Feb 1, 2024 | ಶಿವಮೊಗ್ಗದ ವೀರಭದ್ರೇಶ್ವರ ಸರ್ಕಲ್ ಸಮೀಪ ಪೊಲೀಸ್ ಸಿಬ್ಬಂದಿಗಳ ಮೇಲೆ ರೌಡಿಶೀಟರ್ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಎಸ್ಪಿ ಮಿಥುನ್ ಕುಮಾರ್ ಮಾತನಾಡಿದ್ದಾರೆ. ಸಮವಸ್ತ್ರದಲ್ಲಿ ಡ್ಯೂಟಿ ಮಾಡುತ್ತಿರುವಾಗ ರೌಡಿಶೀಟರ್ ಕೊಲೆ ಬೆದರಿಕೆ ಹಾಕಿದ ಪ್ರಕರಣದ ಸಂಬಂಧ ಇವತ್ತು ಮಾಧ್ಯಮಗಳು ಎಸ್ ಪಿ ಮಿಥುನ್ ಕುಮಾರ್ ರವರ ಪ್ರತಿಕ್ರಿಯೆ ಕೇಳಲು ತೆರಳಿದ್ದರು..
ಎಸ್.ಪಿ.ಮಿಥುನ್ ಕುಮಾರ್
ಮಾಧ್ಯಮಗಳೊಂದಿಗೆ ತಮ್ಮ ಪ್ರತಿಕ್ರಿಯೆ ನೀಡುತ್ತಾ ಮಾತನಾಡಿದ ಎಸ್.ಪಿ.ಮಿಥುನ್ ಕುಮಾರ್ 30 ನೇ ತಾರೀಖು ಈ ಘಟನೆ ನಡೆದಿದೆ. ಸ್ಟಾಪ್ ಹಾಗೂ ಆಫಿಸರ್ಸ್ ಇರುವಾಗ ಇಬ್ಬರು ಬಂದು ಈ ರೀತಿಯ ಕೃತ್ಯವೆಸಗಿದ್ದಾರೆ. ಬಿ.ಹೆಚ್.ರೋಡ್ನಲ್ಲಿ ಘಟನೆ ನಡೆದಿದ್ದು, ಪೊಲೀಸರ ಕರ್ತವ್ಯಕ್ಕೂ ಅಡ್ಡಿಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಪೊಲೀಸರು ಡ್ಯೂಟಿ ಮಾಡುವಾಗ ಈ ರೀತಿಯಲ್ಲಿ ಅಡ್ಡಿ ಮಾಡುವುದು ಕಾನೂನು ರೀತಿಯಲ್ಲಿ ಉಲ್ಲಂಘನೆಯಾಗುತ್ತದೆ. ಪೊಲೀಸರ ಬಗ್ಗೆ ವಿಚಾರಗಳಿದ್ದರೇ ಮೇಲಾಧಿಕಾರಿಗಳ ಬಳಿ ಹೇಳಬಹುದಾಗಿದೆ. ಆದರೆ ಅದನ್ನ ಬಿಟ್ಟು ನಡುರಸ್ತೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಬರುವುದು ಕಾನೂನು ಉಲ್ಲಂಘನೆಯಾಗಿದೆ. ಸದ್ಯ ಪ್ರಕರಣದಲ್ಲಿರುವ ಆರೋಪಿಗಳು ರೌಡಿ ಶೀಟರ್ಸ್ ಆಗಿದ್ದು ಅವರ ವಿರುದ್ಧ ಎಫ್ಐಆರ್ ಆಗಿದ್ದು, ಅವರನ್ನ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ipc 1860 (u/s-504,506,189,342,353,149) ಅಡಿಯಲ್ಲಿ ಕೇಸ್ ದಾಖಲಾಗಿದ್ದು, ಆರೋಪಿಗಳನ್ನ ಸದ್ಯ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದಿರುವ ಎಸ್ಪಿ ಮಿಥುನ್ ಕುಮಾರ್ ಇಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಯಾವ ಸೆಕ್ಷನ್ಗಳು ಏನು ಹೇಳುತ್ತವೆ.?
ಐಪಿಸಿಯ ಸೆಕ್ಷನ್ 504: ಶಾಂತಿ ಭಂಗ ಮಾಡುವ ಪ್ರಚೋದನೆಯ ರೂಪದಲ್ಲಿ ಉದ್ಧೇಶಪೂರ್ವಕವಾಗಿ ಅವಮಾನ ಮಾಡುವ ಅಪರಾಧಕ್ಕೆ ಸಂಬಂಧಿಸಿದ ಸೆಕ್ಷನ್ ಇದಾಗಿದ್ದು ಈ ಅಪರಾಧಕ್ಕೆ ಶಿಕ್ಷೆಯು ಎರಡು ವರ್ಷಗಳವರೆಗೆ ಜೈಲು ಶಿಕ್ಷೆ, ಅಥವಾ ದಂಡ ಅಥವಾ ಎರಡನ್ನೂ ಒಳಗೊಂಡಿರುತ್ತದೆ.
ಐಪಿಸಿಯ ಸೆಕ್ಷನ್ 506 : ಕ್ರಿಮಿನಲ್ ಬೆದರಿಕೆಯನ್ನ ಈ ಸೆಕ್ಷನ್ ಅರ್ಥೈಸುತ್ತದೆ.. ಈ ಅಪರಾಧಕ್ಕೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ, ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.
ಐಪಿಸಿಯ ಸೆಕ್ಷನ್ 189 ಪಬ್ಲಿಕ್ ಸರ್ವೆಂಟ್ ಒಬ್ಬರಿಗೆ ಬೆದರಿಕೆ ಹಾಗೂ ಗಾಯಗೊಳಿಸುವ ಅಪರಾಧದೊಂದಿಗೆ ಈ ಸೆಕ್ಷನ್ ಅನ್ವಯವಾಗಿದೆ. ಈ ಅಪರಾಧಕ್ಕೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ, ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.
ಐಪಿಸಿಯ ಸೆಕ್ಷನ್ 342 ಅಕ್ರಮ ಬಂಧನದ ಬಗ್ಗೆ ತಿಳಿಸುತ್ತದೆ.. ಈ ಅಪರಾಧಕ್ಕೆ ಶಿಕ್ಷೆಯು ಒಂದು ವರ್ಷದವರೆಗೆ ಜೈಲು ಶಿಕ್ಷೆ, ಅಥವಾ ದಂಡ ಅಥವಾ ಎರಡನ್ನೂ ಒಳಗೊಂಡಿರುತ್ತದೆ.
ಐಪಿಸಿಯ ಸೆಕ್ಷನ್ 353 ಪಬ್ಲಿಕ್ ಸರ್ವೆಂಟ್ ರನ್ನು ತನ್ನ ಕರ್ತವ್ಯವನ್ನು ನಿರ್ವಹಿಸದಂತೆ ತಡೆಯಲು ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ ಮಾಡಿದ ಬಗ್ಗೆ ಈ ಸೆಕ್ಷನ್ ಅನ್ವಯವಾಗುತ್ತದೆ. ಈ ಅಪರಾಧಕ್ಕೆ ಶಿಕ್ಷೆಯು ಎರಡು ವರ್ಷಗಳವರೆಗೆ ಜೈಲು ಶಿಕ್ಷೆ, ಅಥವಾ ದಂಡ ಅಥವಾ ಎರಡನ್ನೂ ಒಳಗೊಂಡಿರುತ್ತದೆ.
ಐಪಿಸಿಯ ಸೆಕ್ಷನ್149 ಈ ಸೆಕ್ಷನ್ ಕಾನೂನುಬಾಹಿರವಾಗಿ ಜಮಾವಣೆಗೊಳ್ಳುವ ವಿಚಾರಕ್ಕೆ ಸಂಬಂಧಿಸಿದೆ. ಈ ಅಪರಾಧಕ್ಕೆ ಶಿಕ್ಷೆಯು ಆರು ತಿಂಗಳವರೆಗೆ ಜೈಲು ಶಿಕ್ಷೆ, ಅಥವಾ ದಂಡ ಅಥವಾ ಎರಡನ್ನೂ ಒಳಗೊಂಡಿರುತ್ತದೆ.