ಹಾಲಿ ಸಿಎಂ ಮತ್ತು ಮಾಜಿ ಸಿಎಂ! ದಿಗ್ಗಜರ ಸಮ್ಮಿಲನಕ್ಕೆ ಸಾಕ್ಷಿಯಾಗಲಿದೆ ಭದ್ರಾವತಿ ವಿಐಎಸ್ಎಲ್!
ವಿಐಎಸ್ಎಲ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಿಎಸ್ವೈ ಪಾಲ್ಗೊಳ್ಳಲಿದ್ದಾರೆ Siddaramaiah, BSY will participate in VISL program

KARNATAKA NEWS/ ONLINE / Malenadu today/ Nov 3, 2023 SHIVAMOGGA NEWS
SHIVAMOGGA | ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಶತಮಾನೋತ್ಸವದ ಕಾರ್ಯಕ್ರಮ ಮತ್ತೊಮ್ಮೆ ರಾಜಕಾರಣ ದಿಗ್ಗಜರ ಸಮ್ಮಿಲನಕ್ಕೆ ಸಾಕ್ಷಿಯಾಗಲಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಸಿಎಂ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ. ಒಂದೇ ವೇದಿಕೆಯಲ್ಲಿ ಇಬ್ಬರು ನಾಯಕರು ಕಾರ್ಖಾನೆಯ ಬಗ್ಗೆ ಮಾತನಾಡಲಿದ್ದಾರೆ.
ಈ ಹಿಂದೆ ಬಿಎಸ್ವೈ ಸನ್ಮಾನ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಇದೀಗ ಮತ್ತೊಮ್ಮೆ ಅಂತಹ ಸನ್ನಿವೇಶಕ್ಕೆ ವೇದಿಕೆ ಸಾಕ್ಷಿಯಾಗಲಿದೆ. ಶಿವಮೊಗ್ಗದಲ್ಲಿ ಈ ಬಗ್ಗೆ ಮಾತನಾಡಿದ ಚಿತ್ರನಟ ಹಾಗೂ ಶತಮಾನೋತ್ಸವ ಸಮಿತಿ ಅಧ್ಯಕ್ಷ ದೊಡ್ಡಣ್ಣ ಭದ್ರಾವತಿಯಲ್ಲಿ ವಿಐಎಸ್ ಎಲ್ ಶತಮಾನೋತ್ಸವ ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ, ಕಾರ್ಯಕ್ರಮ ನೇತೃತ್ವವನ್ನು ಸಿನಿಮಾದವರು ವಹಿಸಿದ್ದಾರೆ ಅಂದ ಮೇಲೆ ಅದ್ದೂರಿಯಾಗಿ ಇರುತ್ತದೆ ಎಂದರು.
READ : ಸಿಗಂದೂರು ಸೇತುವೆ ಪೂರ್ಣಗೊಳ್ಳುವುದು ಯಾವಾಗ? ಸಂಸದ ಬಿ.ವೈ.ರಾಘವೇಂದ್ರ ನೀಡಿದ್ರು ಅಪ್ಡೇಟ್ಸ್ !
ಅಲ್ಲದೆ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು, ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಾರೆ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ಆಗಮಿಸುತ್ತಾರೆ ಎಂದ ಅವರು, ಇದು ಕೇವಲ ಕಾರ್ಯಕ್ರಮಕ್ಕೆ ಸೀಮಿತವಲ್ಲ.
ಕಾರ್ಖಾನೆ ಪುನಶ್ಚೇತನಗೊಳಿಸಲು ಪ್ರಯತ್ನ ನಡೆಸುತ್ತೇವೆ. ವಿಐಎಸ್ ಎಲ್ ಗೆ ಗಣಿ ನೀಡುವ ಬಗ್ಗೆ ಸಿಎಂ ಜೊತೆ ಚರ್ಚಿಸುತ್ತೇವೆ ಮತ್ತು ವಿಐಎಸ್ ಎಲ್ ಗೆ ಬಂಡವಾಳ ಹೂಡಿಕೆ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರಕಾರಕ್ಕೆ ನಿಯೋಗ ಹೋಗ್ತೇವೆ ಎಂದರು