ಮಹಾರಾಜರು ಮನೆಗೆ ಊಟಕ್ಕೆ ಬರುತ್ತಾರೆ | ಶಿವಮೊಗ್ಗದಲ್ಲಿ ಮಾಜಿ ಸಿಎಂ ಬಿಎಸ್ವೈ ಮಾತು!
Former CM BS Yediyurappa informed about the arrival of Mysore Maharaja ಮೈಸೂರು ಮಹಾರಾಜರ ಆಗಮನದ ಬಗ್ಗೆ ಮಾಹಿತಿ ನೀಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ
KARNATAKA NEWS/ ONLINE / Malenadu today/ Nov 3, 2023 SHIVAMOGGA NEWS
SHIVAMOGGA | ವಿಐಎಸ್ಎಲ್ನ ಶತಮಾನೋತ್ಸವ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಶಿವಮೊಗ್ಗಕ್ಕೆ ಆಗಮಿಸಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನಾಳಿನ ಕಾರ್ಯಕ್ರಮದ ಬಗ್ಗೆ ಒಂದಷ್ಟು ವಿಶೇಷ ಮಾಹಿತಿ ನೀಡಿದ್ದಾರೆ.
ನಾಳೆ ಭದ್ರಾವತಿ ವಿಐಎಸ್ ಎಲ್ ಶತಮಾನೋತ್ಸವ ನಡೆಯಲಿದೆ. ಇದಕ್ಕಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದೇನೆ. ಕಾರ್ಯಕ್ರಮಕ್ಕೆ ಸುತ್ತೂರು ಶ್ರೀಗಳು, ಮೈಸೂರು ಮಹಾರಾಜರು ಆಗಮಿಸುತ್ತಾರೆ.ಮೈಸೂರು ಮಹಾರಾಜರು ನಮ್ಮ ಮನೆಗೆ ಊಟಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದರು.
READ : ಹಾಲಿ ಸಿಎಂ ಮತ್ತು ಮಾಜಿ ಸಿಎಂ! ದಿಗ್ಗಜರ ಸಮ್ಮಿಲನಕ್ಕೆ ಸಾಕ್ಷಿಯಾಗಲಿದೆ ಭದ್ರಾವತಿ ವಿಐಎಸ್ಎಲ್!
ಇನ್ನೂ ಇದೇ ವೇಳೆ ಬರ ಅಧ್ಯಯನ ಪ್ರವಾಸ ಆರಂಭವಾಗಿದೆ. ಎಂದ ಅವರು, ನಾನು ವಿಐಎಸ್ ಎಲ್ ಕಾರ್ಯಕ್ರಮವಿದ್ದ ಕಾರಣ ಹೋಗಿಲ್ಲ ಎಂದರು, 2 ದಿನಗಳ ನಂತರ ಪ್ರವಾಸಕ್ಕೆ ಸೇರಿಕೊಳ್ಳುತ್ತೇನೆ ಎಂದಿದ್ದಾರೆ. ಇದರ ನಡುವೆ ಕೆ.ಎಸ್.ಈಶ್ವರಪ್ಪನವರು ದೆಹಲಿಗೆ ಹೋಗಿರುವ ವಿಚಾರದಲ್ಲಿ ಅಂತಹ ವಿಶೇಷತೆ ಏನಿಲ್ಲ ಎಂದ ಬಿಎಸ್ವೈ ಸಭೆಗೆ ಕರೆದಿದ್ದಕ್ಕೆ ಹೋಗಿದ್ದಾರಷ್ಟೆ ಎಂದರು.